For Quick Alerts
ALLOW NOTIFICATIONS  
For Daily Alerts

ಸ್ವಲ್ಪ ಕೇಳಿ, ಕೂದಲು ಉದುರುತ್ತಿದೆ ಎಂದು ಚಿಂತಿಸಬೇಡಿ

By Arshad
|

ಒತ್ತಡದ ಜೀವನಶೈಲಿ, ಆಹಾರಕ್ರಮ ಕಲ್ಮಶಯುಕ್ತ ನೀರು...ಇವೆಲ್ಲವೂ ಕೇವಲ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಿರುವುದಲ್ಲದೆ ಸೌಂದರ್ಯವನ್ನು ನೀಡುವಂತಹ ಕೂದಲಿನ ಮೇಲೂ ಭಾರೀ ಪರಿಣಾಮವನ್ನುಂಟು ಮಾಡಿದೆ. ಕೂದಲಿನ ಪ್ರಮುಖ ಸಮಸ್ಯೆಗಳಲ್ಲಿ ಒಂದೆಂದರೆ ಅದು ಕೂದಲು ಉದುರುವುದು. ಇಂದಿನ ದಿನಗಳಲ್ಲಿ ಪುರುಷರು ಹಾಗೂ ಮಹಿಳೆಯರಲ್ಲಿ ಸಾಮಾನ್ಯವಾಗಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಆದರೆ ಕೂದಲು ಉದುರುವ ರೇಸ್‌ನಲ್ಲಿ ಮಹಿಳೆಯರಿಗಿಂತ ಮುಂದೆ ಪುರುಷರೇ ಇದ್ದಾರೆ.

ಹಿಂದಿನ ದಿನಗಳಲ್ಲಿ ವಯಸ್ಸಾಗುತ್ತಿದ್ದಂತೆ ಕೂದಲು ಉದುರುತ್ತಿತ್ತು. ಆದರೆ ಇಂದು ಹಾಗಲ್ಲ, ಹದಿಹರೆಯದವರ ಕೂದಲು ಉದುರಲು ಆರಂಭವಾಗಿದ್ದು, ಇದು ದಿನೇ ದಿನೇ ಹೆಚ್ಚುತ್ತಿದೆ. ರಾಸಾಯನಿಕ ವಸ್ತುಗಳ ಬಳಕೆ, ಒತ್ತಡ ಮತ್ತು ಮಾಲಿನ್ಯವನ್ನು ಇದಕ್ಕೆ ದೂಷಿಸಬಹುದು. ಈ ಕಾರಣಗಳು ಮಾತ್ರವಲ್ಲದೆ ಕ್ರಮಬದ್ಧವಲ್ಲದ ಆಹಾರಕ್ರಮ, ಕಲವು ಔಷಧಿಗಳು, ವಿಟಮಿನ್ ಮತ್ತು ಖನಿಜಾಂಶ ಕೊರತೆಯಿಂದ ಕೂದಲು ಉದುರುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ಪುರುಷರಲ್ಲಿ ಹಾರ್ಮೋನು ಬದಲಾವಣೆಯಿಂದಾಗಿ ತಲೆ ಬೋಳಾಗುವುದನ್ನು ವೈಜ್ಞಾನಿಕವಾಗಿ `ಆಲೋಪಿಸಿಯಾ' ಎಂದು ಕರೆಯುತ್ತಾರೆ.

ಪುರುಷರು ತಲೆ ಉದುರುವುದರ ಬಗ್ಗೆ ಹೆಚ್ಚು ಚಿಂತೆ ಮಾಡಬೇಕಿಲ್ಲ. ಇದಕ್ಕಾಗಿ ಕೆಲವೊಂದು ಮನೆಮದ್ದುಗಳಿವೆ. ಈ ನೈಸರ್ಗಿಕ ಚಿಕಿತ್ಸೆಯು ಕೂದಲು ಮತ್ತೆ ಬೆಳೆಯುವಂತೆ ಮಾಡುತ್ತದೆ. ಅಗತ್ಯವಾಗಿರುವ ಕೆಲವೊಂದು ಎಣ್ಣೆಗಳು, ಮೊಟ್ಟೆಯ ಪ್ಯಾಕ್ ಮತ್ತು ಇತರ ಕೆಲವೊಂದು ನೈಸರ್ಗಿಕ ಪದಾರ್ಥಗಳಿಂದ ಕೂದಲು ಉದುರುವುದನ್ನು ತಡೆಯಬಹುದು. ಪುರುಷರಲ್ಲಿ ಕೂದಲು ಉದುರುವುದನ್ನು ತಡೆಯಲು ಇರುವ ಕೆಲವೊಂದು ಟಿಪ್ಸ್‌ಗಳ ಬಗ್ಗೆ ನಾವಿಲ್ಲಿ ಗಮನಹರಿಸುವ...

ವಿಟಮಿನ್ ಎಚ್: ಕೂದಲು ಉದುರುವುದು

ವಿಟಮಿನ್ ಎಚ್: ಕೂದಲು ಉದುರುವುದು

ಬಯೋಟಿನ್ ಎಂದು ಕರೆಯಲ್ಪಡುವ ವಿಟಮಿನ್ ಎಚ್ ನ ಪ್ರಮಾಣ ದೇಹದಲ್ಲಿ ಕಡಿಮೆಯಾಗುವುದರಿಂದ ಕೂದಲು ಉದುರುವ ಸಮಸ್ಯೆ ಉಂಟಾಗುತ್ತದೆ ಮತ್ತು ಉಗುರನ್ನು ದುರ್ಬಲಗೊಳಿಸಬಹುದು. ಈ ವಿಟಮಿನ್ ನಿಮ್ಮ ಕೂದಲನ್ನು ಬಲಗೊಳಿಸಿ, ಉದುರುವುದನ್ನು ತಡೆಯುತ್ತದೆ. ಬಯೋಟಿನ್ ಗಳಿರುವ ಆಹಾರವೆಂದರೆ ಮೊಟ್ಟೆ, ನೆಲಗಡಲೆ, ಮೊಸರು, ಲಿವರ್, ಚೀಸ್ ಇತ್ಯಾದಿ. ಕೂದಲು ಉದುರುವ ಸಮಸ್ಯೆಯಿದ್ದರೆ ಬಯೋಟಿನ್ ನ್ನು ಮಾತ್ರೆ ಅಥವಾ ಕ್ಯಾಪ್ಸೂಲ್ ಮೂಲಕವೂ ಸೇವಿಸಬಹುದು.

ಆಹಾರ ಕ್ರಮದಲ್ಲಿ ಪ್ರೋಟೀನ್ ಅಳವಡಿಸಿ

ಆಹಾರ ಕ್ರಮದಲ್ಲಿ ಪ್ರೋಟೀನ್ ಅಳವಡಿಸಿ

ಟ್ಟ ಆಹಾರಕ್ರಮವು ನಿಮ್ಮ ಕೂದಲಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಆರೋಗ್ಯಕರ ಕೂದಲು ಮತ್ತು ಅದು ಉದುರುವುದನ್ನು ನಿಲ್ಲಿಸಲು ನಿಮ್ಮ ಆಹಾರ ಕ್ರಮದಲ್ಲಿ ಪ್ರೋಟೀನ್ ಅಳವಡಿಸಿಕೊಳ್ಳಿ. ಕಾಳುಗಳು, ದ್ವಿದಳಧಾನ್ಯ, ಮಾಂಸ, ಕೋಳಿ, ಸೋಯಾ, ಹಾಲು ಮತ್ತು ಮೊಟ್ಟೆಗಳು ಪ್ರೋಟೀನ್ ನ ಮೂಲಗಳು.

ಎಳ್ಳೆಣ್ಣೆ ತೈಲಗಳೊಂದಿಗೆ ತಲೆಗೆ ಮಸಾಜ್

ಎಳ್ಳೆಣ್ಣೆ ತೈಲಗಳೊಂದಿಗೆ ತಲೆಗೆ ಮಸಾಜ್

ಎಳ್ಳೆಣ್ಣೆ ತೈಲಗಳು ಹೆಚ್ಚು ಜಿಗುಟಾಗಿರುವುದಿಲ್ಲ ಮತ್ತು ಇದು ತಲೆಬುರುಡೆಯಲ್ಲಿ ಬೇಗನೆ ಹೀರಿಕೊಳ್ಳುತ್ತದೆ. ಇದು ಹೊಸ ಕೂದಲಿನ ಬೆಳವಣಿಗೆ ಮತ್ತು ಕೂದಲು ಉದುರುವಿಕೆಯನ್ನು ತಡೆಯುತ್ತದೆ. ಅಷ್ಟೇ ಅಲ್ಲದೆ ಲ್ಯಾವೆಂಡರ್ ಎಣ್ಣೆ ಮತ್ತು ಎಳ್ಳೆಣ್ಣೆಯಲ್ಲಿರುವ ಗುಣಗಳು ಕೂಡ ಕೂದಲು ಬೆಳೆಯಲು ನೆರವಾಗುತ್ತದೆ.

ಮೊಸರು ಮತ್ತು ಮೊಟ್ಟೆ ಪ್ಯಾಕ್

ಮೊಸರು ಮತ್ತು ಮೊಟ್ಟೆ ಪ್ಯಾಕ್

ಅರ್ಧ ಕಪ್ ಮೊಸರಿನೊಂದಿಗೆ ಒಂದು ಮೊಟ್ಟೆಯನ್ನು ಸೇರಿಸಿ ಪೇಸ್ಟ್ ಮಾಡಿ. ಇದನ್ನು ನಿಮ್ಮ ತಲೆಗೆ ಮಸಾಜ್ ಮಾಡಿ. ಇದು ಕೂದಲು ಉದುರುವುದನ್ನು ನಿಲ್ಲಿಸುತ್ತದೆ ಮತ್ತು ತಲೆಹೊಟ್ಟನ್ನು ಹೋಗಲಾಡಿಸುತ್ತದೆ. ಪುರುಷರಲ್ಲಿ ತಲೆಕೂದಲು ಉದುರುವುದನ್ನು ನಿಲ್ಲಿಸಲು ಇದು ಅತ್ಯುತ್ತಮ ಮನೆಮದ್ದು.

ಈರುಳ್ಳಿ ಜ್ಯೂಸ್

ಈರುಳ್ಳಿ ಜ್ಯೂಸ್

ಈರುಳ್ಳಿ ರಸವು ಕೂದಲಿನ ಬೆಳವಣಿಗೆ ಮತ್ತು ಅದು ಬಲಗೊಳ್ಳಲು ನೆರವಾಗುತ್ತದೆ. ಒಂದು ಗಂಟೆಗಳ ಕಾಲ ಎರಡರಿಂದ ಮೂರು ಈರುಳ್ಳಿಯನ್ನು ಬೇಯಿಸಿ, ನೀರನ್ನು ತೆಗೆದು ತಣ್ಣಗಾಗಲು ಬಿಡಿ. ತದನಂತರ ಈ ನೀರಿನಿಂದ ನಿಮ್ಮ ಕೂದಲನ್ನು ಚೆನ್ನಾಗಿ ತೊಳೆಯಿರಿ. ಇದು ನಿಮ್ಮ ಕೂದಲು ಉದುರುವುದನ್ನು ತಡೆಯಲು ಪುರುಷರು ಬಳಸಬಹುದಾದ ಅತ್ಯುತ್ತಮ ಮನೆಮದ್ದಾಗಿದೆ.

English summary

Natural Ways To Prevent Hair Loss In Men

Hair loss has become a common issue these days. Both men and women suffer from hair loss. However, the rate and severity of hair loss is more in men. It is normal to lose 100 strands of hair per day but when it is more than this then it is a matter of concern. Have a look at some of the natural tips to prevent hair loss in men.
X
Desktop Bottom Promotion