Latest Updates
-
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ!
ಮಳೆಗಾಲ ಬಂತೆಂದರೆ ಸಾಕು ಕೂದಲುದುರುವ ಸಮಸ್ಯೆ!
ಸುಡುವ ಬೇಸಿಗೆಯ ನಂತರ ಪ್ರತಿಯೊಬ್ಬರು ವರುಣ ದೇವನ ಆಗಮನಕ್ಕಾಗಿ ಕಾದು ಕುಳಿತಿರುತ್ತಾರೆ. ಮಳೆಗಾಲವೆಂದರೆ ಏನೋ ಒಂದು ತೆರನಾದ ಸಂಭ್ರಮ. ಈ ಕಾಲದಲ್ಲಿ ಪ್ರತಿಯೊಂದು ತೊಳೆದಿಟ್ಟ ಕನ್ನಡಿಯಂತೆ ಶುಭ್ರವಾಗಿ ಕಂಡುಬರುತ್ತದೆ, ವಾತಾವರಣ ತಂಪಾಗಿ ನಾವಿರುವ ಪರಿಸರ ಕಾಂತಿಯುಕ್ತವಾಗಿರುತ್ತದೆ. ಮಳೆಗಾಲದಲ್ಲಿ ಕೂದಲಿನ ಕಾಳಜಿಗೆ ಟಿಪ್ಸ್
ಒಟ್ಟಾರೆ ಹೇಳುವುದಾದರೆ ಮಳೆ ಹನಿಯ ಆಗಮನ ನಮ್ಮಲ್ಲಿ ಹೊಸ ಸಂತಸದ ಅಲೆಗಳನ್ನು ಸೃಷ್ಟಿ ಮಾಡಿಬಿಡುತ್ತದೆ. ಆದರೆ ಮಳೆಗಾಲವು ಹಲವರ ತ್ವಚೆ ಮತ್ತು ಕೂದಲಿಗೆ ಶುಭ ಸುದ್ದಿಯನ್ನೇನು ತರದು. ಹಾಗಾಗಿ ಈ ತಂಪಾದ ಮಳೆಹನಿಯೊಂದಿಗೆ ಆಟವಾಡುತ್ತಾ ಕೆಲವೊಂದು ಮುನ್ನೆಚ್ಚರಿಕೆಗಳನ್ನು ನಾವು ತೆಗೆದುಕೊಳ್ಳುವುದು ಅತ್ಯವಶ್ಯಕವಾಗಿದೆ.
ಅದರಲ್ಲೂ ಕೂದಲು ಒದ್ದೆಯಾಗಿ ಅದರಿಂದ ಉಂಟಾಗಿರುವ ಕೂದಲಿನ ಸಮಸ್ಯೆಗಳನ್ನು ತಡೆಗಟ್ಟಲು ನಾವು ಕೆಲವೊಂದು ವಿಧಾನಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ. ಇದೇನೂ ಅಷ್ಟೊಂದು ಕಷ್ಟದ ಕೆಲಸವಲ್ಲ, ಸುಲಭವಾಗಿ ಅನುಸರಿಸಬಹುದಾದ ವಿಧಾನಗಳಾಗಿವೆ, ಬನ್ನಿ ಅವು ಯಾವುದು ಎಂಬುದನ್ನು ನೋಡೋಣ...

ತೆಂಗಿನಕಾಯಿ ಎಣ್ಣೆಯ ಮಸಾಜ್
ತೆಂಗಿನಕಾಯಿ ಎಣ್ಣೆ ಕೂದಲಿಗೆ ಪೋಷಕಾಂಶವನ್ನು ಒದಗಿಸುವುದರ ಜೊತೆಗೆ, ಮಳೆಗಾಲದಲ್ಲಿ ಕಂಡುಬರುವ ಕೂದಲಿನ ಸಮಸ್ಯೆಗೆ ಸೂಕ್ತ ಮನೆಮದ್ದಾಗಿದೆ. ಹಾಗಾಗಿ ಮಳೆಗಾಲದಲ್ಲಿ ವಾರಕ್ಕೆ ಒಮ್ಮೆಯಾದರೂ ತೆಂಗಿನ ಎಣ್ಣೆಯಿಂದ ನಿಯಮಿತವಾಗಿ ಮಸಾಜ್ ಮಾಡುವುದನ್ನು ಮರೆಯಬೇಡಿ, ಇದು ನೈಸರ್ಗಿಕವಾಗಿ ಕೂದಲು ಉದುರುವುದನ್ನು ತಡೆಯುತ್ತದೆ, ಹಾಗೂ ಹಾನಿಗೊಳಗಾದ ಕೂದಲನ್ನು ತೆಗೆಯುತ್ತದ.

ನೈಸರ್ಗಿಕವಾದ ಶ್ಯಾಂಪೂ ಬಳಸಿ
ರಾಸಾಯನಿಕಗಳಿಂದ ಕೂಡಿದ ಶಾಂಪೂಗಳನ್ನು ಬಳಸಿ ನಿಮ್ಮ ಕೂದಲನ್ನು ಹಾಳು ಮಾಡಿಕೊಳ್ಳುವ ಬದಲು, ನಿಮ್ಮ ಕೂದಲಿಗೆ ಯಾವುದೇ ಹಾನಿ ಮಾಡದಂತಹ ನೈಸರ್ಗಿಕ ಶಾಂಪೂವನ್ನು ಬಳಸುವುದು ಉತ್ತಮ.ಇದು ನಿಮ್ಮ ಕೂದಲಿಗು ಆರೈಕೆಯನ್ನು ನೀಡುತ್ತದೆ ಮತ್ತು ಅದಕ್ಕೆ ಹಾನಿಯಾಗುವುದನ್ನು ಸಹ ತಪ್ಪಿಸುತ್ತದೆ. ಹಾಗಾಗಿ ಮಳೆಗಾಲದಲ್ಲಿ ವಾರಕ್ಕೆ 2-ಮೂರು ಬಾರಿಯಾದರೂ ನೈಸರ್ಗಿಕವಾದ ಶ್ಯಾಂಪೂ ಉಪಯೋಗಿಸಿ ತಲೆಸ್ನಾನ ಮಾಡುವುದನ್ನು ಮರೆಯಬೇಡಿ, ಇದು ಮಳೆಗಾಲದಲ್ಲಿ ಕೂದಲು ಗಂಟು ಕಟ್ಟಿಕೊಳ್ಳಬಹುದಾದ ಸಮಸ್ಯೆಯನ್ನು ಕಡಿಮೆ ಮಾಡಿ, ಕೂದಲುದುರುವ ಸಮಸ್ಯೆಯನ್ನು ನಿಯಂತ್ರಿಸುತ್ತದೆ.

ಮೆಹೆಂದಿ ಪ್ಯಾಕ್
ಮಳೆಗಾಲದಲ್ಲಿ ಕೂದಲನ್ನು ಮೃದು ಹಾಗೂ ಕಾಂತಿಯುಕ್ತಗೊಳಿಸಲು ಮೆಹೆಂದಿವನ್ನೂ ಕೂದಲಿಗೆ ಹಚ್ಚಿಕೊಳ್ಳಬಹುದು. ಸಾಮಾನ್ಯವಾಗಿ ಬಿಳಿ ಕೂದಲನ್ನು ಬಣ್ಣಬರುವಂತೆ ಮಾಡಲು ಮೆಹೆಂದಿಯನ್ನು ಬಳಸುತ್ತಾರೆ ಅಂತೆಯೇ ಮಳೆಗಾಲದಲ್ಲೂ ಮೆಹೆಂದಿ ಹೇರ್ ಪ್ಯಾಕ್ ಅನ್ನು ವಾರಕ್ಕೆ ಒಮ್ಮೆಯಾದರೂ ಈ ಮಿಶ್ರಣವನ್ನು ಪೇಸ್ಟ್ ತರ ಮಾಡಿಕೊಂಡು ನಿಮ್ಮ ಕೂದಲಿನ ಬುಡಕ್ಕೆ ಹಚ್ಚಿ. ಇದರಿಂದ ನಿಮ್ಮ ಕೂದಲು ಮೃದುಗೊಂಡು, ಸುಂದರವಾಗಿ ಹಾಗೂ ಕಾಂತಿಯುಕ್ತವಾಗುತ್ತದೆ.

ಕೂದಲು ಕಟ್ಟಿಕೊಳ್ಳಿ
ಮಳೆಗಾಲದಲ್ಲಿ ಹೊರಗೆ ಹೋಗುವಾಗ ಅಥವಾ ಮಲಗುವಾಗ ಕೂದಲನ್ನು ಹಾಗೆಯೇ ಬಿಡುವುದು ಸೂಕ್ತವಲ್ಲ. ಕೂದಲನ್ನು ಸಡಿಲವಾಗಿ ಬಿಡದೆ ಪೂರ್ತಿ ತಲೆ ಬಾಚಿಕೊಂಡು ಕಟ್ಟಿಕೊಳ್ಳುವುದು ಸರಿ. ಇದರಿಂದ ಕೂದಲು ತುಂಡಾಗಿ ಉದುರುವುದು ತಪ್ಪುತ್ತದೆ ಮತ್ತು ಧೂಳು, ಕೊಳೆ ತಲೆಯಲ್ಲಿ ಸೇರಿಕೊಳ್ಳುವುದನ್ನೂ ತಡೆಯುತ್ತದೆ.

ಕೂದಲ ಅಲಂಕಾರ ಸಾಮಾಗ್ರಿಗಳು
ಕೂದಲಿಗೆ ಅಲಂಕಾರ ಸಾಮಾಗ್ರಿಗಳನ್ನು ಬಳಸಬೇಕೆಂದಲ್ಲಿ, ಉದಾಹರಣೆಗೆ ಪರ್ಮಿಂಗ್, ಸ್ಟ್ರೇಟಿಂಗ್ ಅಥವಾ ಕಲರ್ ಮಾಡಿಕೊಳ್ಳುವುದಕ್ಕಾಗಿ ಮಳೆಗಾಲ ಕಡಿಮೆ ಆಗುವವರೆಗೆ ಕಾಯಿರಿ. ಮಳೆಗಾಲದಲ್ಲಿ ಕೂದಲಿನ ಆರೈಕೆಗೆ ಮೊದಲ ಆದ್ಯತೆ ನೀಡಿ.



Click it and Unblock the Notifications