For Quick Alerts
ALLOW NOTIFICATIONS  
For Daily Alerts

ಕೂದಲಿನ ಸಮೃದ್ಧ ಪೋಷಣೆಗೆ ಆಲೂಗಡ್ಡೆ ಜ್ಯೂಸ್

By Arshad
|

ತಲೆಗೂದಲನ್ನು ತೊಳೆದುಕೊಳ್ಳಲು ಮತ್ತು ಅಗತ್ಯ ಪೋಷಣೆ ನೀಡಲು ಈರುಳ್ಳಿ ರಸ ಉತ್ತಮ ಎಂದು ಇದುವರೆಗೆ ತಿಳಿದುಕೊಂಡಿದ್ದೆವು. ಇದು ಸರಿಯೇ, ಆದರೆ ಇದಕ್ಕಿಂತಲೂ ಉತ್ತಮ ಪರಿಣಾಮವನ್ನು ಆಲೂಗಡ್ಡೆಯ ರಸ ನೀಡುತ್ತದೆ ಎಂದು ಇತ್ತೀಚಿನ ಸಂಶೋಧನೆಗಳು ತಿಳಿಸಿವೆ. ಆಲೂಗಡ್ಡೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಪಿಷ್ಟ ಕೂದಲಿನಲ್ಲಿರುವ ಹೆಚ್ಚಿನ ಪ್ರಮಾಣದ ಎಣ್ಣೆಯಂಶವನ್ನು ನಿವಾರಿಸುವ ಮೂಲಕ ಹೆಚ್ಚು ದೃಢತೆ ಮತ್ತು ಹೊಳಪನ್ನು ನೀಡುತ್ತದೆ. ಆಲೂಗಡ್ಡೆಯ ಮಾಯಾ ಜಾದೂಗೆ ಬೆರಗಾಗಲೇಬೇಕು!

ಅಲ್ಲದೇ ಕೂದಲ ಬಣ್ಣವನ್ನು ಗಾಢಗೊಳಿಸುವ ಗುಣದ ಕಾರಣ ಕೂದಲ ಬಣ್ಣವನ್ನು ಇನ್ನಷ್ಟು ದಟ್ಟವಾಗಿಸಲು ಅಥವಾ ಕೂದಲಿಗೆ ಇದಕ್ಕೂ ಮೊದಲು ಹಚ್ಚಿಕೊಂಡಿದ್ದ ಬಣ್ಣವನ್ನು ನಿವಾರಿಸಲು ನೆರವಾಗುತ್ತದೆ. ಇದನ್ನು ಬಳಸಲು ಅತ್ಯಂತ ಮುಖ್ಯ ಕಾರಣ ಇದರ ಲಭ್ಯತೆ, ವರ್ಷದ ಎಲ್ಲಾ ದಿನಗಳಲ್ಲಿ ಲಭ್ಯವಿರುವ ಆಲೂಗಡ್ಡೆ ಅತಿ ಅಗ್ಗವೂ ಹೌದು. ಆಲೂಗಡ್ಡೆಯ ರಸವನ್ನು ಕೂದಲ ಬುಡಕ್ಕೆ ಹಚ್ಚುವ ಮೂಲಕ ಕೂದಲ ಬುಡಕ್ಕೆ ಹೆಚ್ಚಿನ ಪೋಷಣೆ ದೊರಕುವ ಕಾರಣ ದೃಢತೆ ಹೆಚ್ಚುತ್ತದೆ, ಉದುರುವ ಸಾಧ್ಯತೆ ಕಡಿಮೆಯಾಗುತ್ತದೆ ಹಾಗೂ ಕೂದಲು ಇನ್ನಷ್ಟು ಉದ್ದವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ...

ಕೂದಲ ಬೆಳವಣಿಗೆಗೆ

ಕೂದಲ ಬೆಳವಣಿಗೆಗೆ

ನಿಮ್ಮ ಕೂದಲು ಕೊತ್ತಂಬರಿ ಸೊಪ್ಪಿನ ಕಟ್ಟಿಗಿಂತಲೂ ಚಿಕ್ಕದಾಗಿದ್ದರೆ ನಿಮಗೆ ಆಲುಗಡ್ಡೆಯ ರಸ ಅತ್ಯಗತ್ಯವಾಗಿದೆ. ಏಕೆಂದರೆ ಇದರ ಪೋಷಣೆ ಕೂದಲ ಉದ್ದ ಹೆಚ್ಚಿಸುವಲ್ಲಿ ಪ್ರಮುಖವಾಗಿದ್ದು ಅತಿ ಶೀಘ್ರಸಮಯದಲ್ಲಿ ಕೂದಲು ದಟ್ಟವಾಗಿ ಬೆಳೆಯುತ್ತದೆ. ಆಲುಗಡ್ಡೆಯನ್ನು ಮಿಕ್ಸಿಯಲ್ಲಿ ಕಡೆದು ಹಿಂಡಿ ತೆಗೆದ ರಸವನ್ನು ತಲೆಗೆ ಹಚ್ಚುವ ಎಣ್ಣೆಯಂತೆಯೇ ಹಚ್ಚಿಕೊಂಡು ಕೊಂಚ ಸಮಯದ ಬಳಿಕ ಉಗುರುಬೆಚ್ಚನೆಯ ನೀರಿನಲ್ಲಿ ಸ್ನಾನ ಮಾಡಿಕೊಂಡರೆ ಉತ್ತಮ ಪರಿಣಾಮ ಪಡೆಯಬಹುದು. ಅತ್ಯುತ್ತಮ ಫಲಿತಾಂಶವನ್ನು ಪಡೆಯಲು ಈ ವಿಧಾನವನ್ನು ತಿಂಗಳಿಗೆ ಎರಡು ಬಾರಿ ಅನುಸರಿಸಿ.

ಕೂದಲಿಗೆ ಬಣ್ಣ ನೀಡಲು

ಕೂದಲಿಗೆ ಬಣ್ಣ ನೀಡಲು

ಕೂದಲ ಬಣ್ಣ ಬದಲಿಸಲು ಸಹಾ ಆಲೂಗಡ್ಡೆ ಉತ್ತಮವಾಗಿದೆ. ಇದಕ್ಕಾಗಿ ನೂರು ಮಿ.ಲೀ ಆಲೂಗಡ್ಡೆ ರಸಕ್ಕೆ ಐವತ್ತು ಮಿ.ಲೀ ಟೊಮೇಟೊ ರಸವನ್ನು ಸೇರಿಸಿ (ಸಿಪ್ಪೆ ಮತ್ತು ಬೀಜವನ್ನು ನಿವಾರಿಸಿ ಕೇವಲ ತಿರುಳನ್ನು ಅರೆದು ಹಿಂಡಿ ತೆಗೆದ ರಸ) ಮಿಶ್ರಣ ತಯಾರಿಸಿ. ಈ ಮಿಶ್ರಣವನ್ನು ಈಗ ತಾನೇ ತೊಳೆದು ಒಣಗಿಸಿದ ಕೂದಲಿಗೆ ದಪ್ಪನಾಗಿ ಹಚ್ಚಿ. ಎಲ್ಲಾ ಪ್ರಮಾಣವನ್ನು ಕೂದಲ ಎಲ್ಲಾ ಭಾಗಗಳಿಗೆ ಬರುವಂತೆ ಆವರಿಸಿ. ಸುಮಾರು ಹತ್ತು ನಿಮಿಷಗಳ ಬಳಿಕ ತೊಳೆದುಕೊಳ್ಳಿ. ಒಂದು ವೇಳೆ ಹೆಚ್ಚು ಬಿಳಿಚಿಸಬೇಕಿದ್ದರೆ ಹೆಚ್ಚು ಸಮಯ ಬಿಡಿ. ಬಳಿಕ ಗುಲಾಬಿ ನೀರು ಬಳಸಿ ತೊಳೆದುಕೊಳ್ಳಿ.

ಕೂದಲು ಉದುರುವುದನ್ನು ತಡೆಯಲು

ಕೂದಲು ಉದುರುವುದನ್ನು ತಡೆಯಲು

ಕೂದಲುದುರುವಿಕೆಗೂ ಆಲೂಗಡ್ಡೆ ಫಲಪ್ರದವಾಗಿದೆ. ಇದಕ್ಕಾಗಿ ಐವತ್ತು ಮಿ.ಲೀ ಆಲುಗಡ್ಡೆ ರಸಕ್ಕೆ ಹತ್ತು ಮಿ.ಲೀ. ಕೊಬ್ಬರಿ ಎಣ್ಣೆ ಮತ್ತು ಐದು ಮಿ.ಲೀ ಆಲಿವ್ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ತಲೆಗೂದಲ ಬುಡಕ್ಕೆ ನಯವಾಗಿ ಮಸಾಜ್ ಮಾಡುತ್ತಾ ಹಚ್ಚಿ. ಬಳಿಕ ತಲೆಗೆ ಬಿಸಿಯಾಗಿರುವ ಟವೆಲೊಂದನ್ನು ಸುತ್ತಿ ಸುಮಾರು ಹದಿನೈದು ನಿಮಿಷ ಬಿಟ್ಟು ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ಬಿಳಿಗೂದಲನ್ನು ಮರೆಮಾಚಲು

ಬಿಳಿಗೂದಲನ್ನು ಮರೆಮಾಚಲು

ತಲೆಗೂದಲಲ್ಲಿ ಅಲ್ಲಲ್ಲಿ ಬಿಳಿಗೂದಲು ಕಾಣಿಸಿಕೊಳ್ಳಲು ತೊಡಗಿದರೆ ಆಲೂಗಡ್ಡೆ ಜ್ಯೂಸ್ ಬಳಸಿ. ನಿತ್ಯದ ಶಾಂಪೂ ಬದಲಿಗೆ ಆಲುಗಡ್ಡೆ ರಸ ಹಚ್ಚಿ ಸ್ನಾನ ಮಾಡಿ. ಮೂರು ವಾರದಲ್ಲಿ ಬೆಳ್ಳಗಾಗಿದ್ದ ಕೂದಲುಗಳು ಸರಿಸುಮಾರು ಕಪ್ಪುವರ್ಣಕ್ಕೆ ತಿರುಗಿರುವುದನ್ನು ಗಮನಿಸಬಹುದು. ಇದರಿಂದ ಕೂದಲು ನಯವೂ, ಕಾಂತಿಯುತವೂ ಆಗುತ್ತದೆ.

ಒಣಗೂದಲಿಗೆ ಪೋಷಣೆ ನೀಡುತ್ತದೆ

ಒಣಗೂದಲಿಗೆ ಪೋಷಣೆ ನೀಡುತ್ತದೆ

ಐವತ್ತು ಮಿ.ಲೀ ಆಲೂಗಡ್ಡೆ ರಸ ಮತ್ತು ಒಂಬತ್ತು ಮಿ.ಲೀ ಲೋಳೆಸರದ ಲೇಪನ ಸೇರಿಸಿ ಮಿಶ್ರಣ ತಯಾರಿಸಿ. ಇದನ್ನು ಕೂದಲ ಬುಡದಿಂದ ತುದಿಯವರೆಗೆ ನಯವಾಗಿ ಬೆರಳುಗಳಿಂದ ಹಚ್ಚುತ್ತಾ ಹೋಗಿ. ಹದಿನೈದು ನಿಮಿಷ ಬಿಟ್ಟು ತಣ್ಣೀರು ಅಥವಾ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ತಲೆಬುರುಡೆಯಲ್ಲಿ ಎಣ್ಣೆಯಂಶ ಹೆಚ್ಚಾಗಿದ್ದರೆ ನಿವಾರಿಸುತ್ತದೆ

ತಲೆಬುರುಡೆಯಲ್ಲಿ ಎಣ್ಣೆಯಂಶ ಹೆಚ್ಚಾಗಿದ್ದರೆ ನಿವಾರಿಸುತ್ತದೆ

ಕೆಲವೊಮ್ಮೆ ಚರ್ಮದ ಗ್ರಂಥಿಗಳು ಒಸರುವ ದ್ರವಗಳು ತಲೆಬುರುಡೆಯನ್ನು ಎಣ್ಣೆಯಾಗಿಸುತ್ತವೆ. ಈ ತೊಂದರೆಯನ್ನು ನಿವಾರಿಸಲು ಸಮಪ್ರಮಾಣದಲ್ಲಿ ಅನ್ನದ ಗಂಜಿ ಮತ್ತು ಆಲೂಗಡ್ಡೆ ರಸವನ್ನು ಸೇರಿಸಿ ಮಿಶ್ರಣ ಮಾಡಿ.ಆಲೂಗಡ್ಡೆ ರಸದಲ್ಲಿರುವ ಪಿಷ್ಟ ಹೆಚ್ಚಿನ ಮತ್ತು ಅನಗತ್ಯ ಎಣ್ಣೆಯಂಶವನ್ನು ನಿವಾರಿಸಿ ಕೂದಲ ಆರೋಗ್ಯ ವೃದ್ಧಿಸುತ್ತದೆ.

ಹೇರ್ ಜೆಲ್ ತಹರ ಬಳಸಬಹುದು

ಹೇರ್ ಜೆಲ್ ತಹರ ಬಳಸಬಹುದು

ಇತ್ತೀಚೆಗೆ ಕೂದಲು ದೃಢವಾಗಿ ಒಂದೆಡೆ ಕೂರಲು ಅಥವಾ ನೆಚ್ಚಿನ ಕೇಶಶೃಂಗಾರ ರೂಪಿಸಲು ಹೇರ್ ಜೆಲ್ ಬಳಕೆಯಾಗುತ್ತಿದೆ. ಒಂದು ವೇಳೆ ಈ ಜೆಲ್ ಖಾಲಿಯಾದರೆ ಚಿಂತೆ ಬೇಡ ಒಂದು ದೊಡ್ಡ ಚಮಚ ಆಲೂಗಡ್ಡೆ ರಸ, ಎರಡು ದೊಡ್ಡ ಚಮಚ ಲೋಳೆಸರದ ದ್ರಾವಣ ಸೇರಿಸಿ ಮಿಶ್ರಣ ಮಾಡಿ. ಗಾಢವಾಗಿರುವ ಈ ಜೆಲ್ ಕೂದಲು ನೈಸರ್ಗಿಕ ಬಣ್ಣ ಪಡೆಯುವುದರ ಜೊತೆಗೇ ನೆಚ್ಚಿನ ಕೇಶಶೃಂಗಾರ ರೂಪಿಸಿಕೊಳ್ಳಲೂ ನೆರವಾಗುತ್ತದೆ.

English summary

Here Is Why You Should Rinse Your Hair With Potato Juice

Many times, we told you that onion juice is the best ingredient you can apply to your hair. No doubt it is our first option for you to try. But, recently studies have proven potato juice to be highly beneficial when it comes to protecting your tresses. Potato juice is rich in starch content, which will get rid of the excess oil in your hair. Take a look at why potato juice is necessary for your hair: 
Story first published: Wednesday, November 4, 2015, 10:56 [IST]
X
Desktop Bottom Promotion