For Quick Alerts
ALLOW NOTIFICATIONS  
For Daily Alerts

ಕೂದಲಿನ ಸಮೃದ್ಧ ಪೋಷಣೆಗೆ-ಹಳ್ಳಿಮದ್ದಿನ ಕರಾಮತ್ತು

By Manu
|

ಕೂದಲು ಉದುರುವುದು, ತಲೆ ಹೊಟ್ಟು, ಬಿಳಿ ಕೂದಲು, ಒಡೆದ ಕೂದಲಿನ ಬುಡ, ಜಿಡ್ಡುಗಟ್ಟಿದ ಕೂದಲು ಮತ್ತು ಇನ್ನಿತರ ಕೂದಲಿನ ಸಮಸ್ಯೆಗಳು ಗಂಡು ಮತ್ತು ಹೆಣ್ಣು ಎಂಬ ಭೇದ-ಭಾವವಿಲ್ಲದೆ ಕಾಡುತ್ತವೆ. ಇಂತಹ ಕೊನೆಯಿಲ್ಲದ ಸಮಸ್ಯೆಗಳನ್ನು ನಿವಾರಿಸಲು ಬಹುಶಃ ನೀವು ಹಲವಾರು ಉತ್ಪನ್ನಗಳನ್ನು ಬಳಸಿರಬಹುದು. ಮಾರುಕಟ್ಟೆಯಲ್ಲಿ ಲಭ್ಯವಿರುವ ವೈಜ್ಞಾನಿಕವಾಗಿ ಸಾಬೀತು ಮಾಡಲಾದ ಉತ್ಪನ್ನಗಳನ್ನು ಬಳಸಿದರೂ ಕೂಡ, ನಿಮ್ಮ ಸಮಸ್ಯೆಗಳು ಇನ್ನೂ ಉಳಿದುಕೊಂಡಿರಲೂಬಹುದು ಅಲ್ಲವೇ? ಚಿಂತಿಸಬೇಡಿ, ಕೆಲವೊಂದು ನೈಸರ್ಗಿಕವಾಗಿ ದೊರೆಯುವ ಹಳ್ಳಿಗಾಡಿನ ಚಮತ್ಕಾರ ಪ್ರಯೋಜನವನ್ನು ಒಮ್ಮೆ ಪ್ರಯತ್ನಿಸಿ ನೋಡಿ...

ನೆಲ್ಲಿಕಾಯಿ-ತುಳಸಿ ಪ್ಯಾಕ್

Hair fall treatment at home- Six remedies that work!
ನೆಲ್ಲಿಕಾಯಿಯನ್ನು ತುಳಸಿ ಮತ್ತು ನೀರಿನೊಂದಿಗೆ ಬೆರೆಸಿಕೊಂಡು ಮೃದುವಾದ ಪೇಸ್ಟ್ ಮಾಡಿ ಮಾಡಿಕೊಳ್ಳಿ. ಒಂದು ವೇಳೆ ನಿಮ್ಮ ಬಳಿ ನೆಲ್ಲಿಕಾಯಿ ಇಲ್ಲವಾದಲ್ಲಿ, ನೆಲ್ಲಿ ಕಾಯಿ ಪುಡಿಯನ್ನು ಸಹ ಬಳಸಬಹುದು. ಈ ಪ್ಯಾಕನ್ನು ನಿಮ್ಮ ಕೂದಲಿನ ಬುಡಕ್ಕೆ ಲೇಪಿಸಿ 30 ನಿಮಿಷಗಳ ಕಾಲ ಬಿಡಿ, ನಂತರ ಇದನ್ನು ತೊಳೆಯಿರಿ. ಈ ಬಗೆಯಲ್ಲಿ ನೆಲ್ಲಿಕಾಯಿ ರಸವನ್ನು ಲೇಪಿಸಿಕೊಳ್ಳುವುದರಿಂದ, ತಲೆಹೊಟ್ಟನ್ನು ನಿವಾರಿಸಿಕೊಳ್ಳಬಹುದು. ಈ ವಿಧಾನವನ್ನು ವಾರಕ್ಕೆ ಎರಡು ಬಾರಿ ಮಾಡಿ, ತ್ವರಿತಗತಿಯಲ್ಲಿ ಫಲಿತಾಂಶವನ್ನು ಪಡೆಯಬಹುದು. ಇದು ನಿಮಗೆ ತಲೆಹೊಟ್ಟನ್ನು ಮಾತ್ರ ನಿವಾರಿಸುವುದಿಲ್ಲ, ಜೊತೆಗೆ ನಿಮ್ಮ ಕೂದಲಿಗೆ ಕಂಡೀಶನರನ್ನು ಸಹ ನೀಡಿ, ಸ್ವಾಭಾವಿಕವಾಗಿ ಕೂದಲು ಹೊಳೆಯುವಂತೆ ಮಾಡುತ್ತದೆ. ರೇಷ್ಮೆಯಂತಹ ಕೂದಲಿಗಾಗಿ ಇಲ್ಲಿದೆ ನೋಡಿ ಸರಳ ಟಿಪ್ಸ್

ಅಡುಗೆಮನೆಯಲ್ಲಿರುವ ಮೆ೦ತೆಕಾಳು

ಹೌದು, ಅಡುಗೆಮನೆಯಲ್ಲಿರುವ ಮೆ೦ತೆಕಾಳು ಕೂಡ ಕೂದಲಿನ ಸಮಸ್ಯೆಗೆ ಉಪಯುಕ್ತ ಮನೆಮದ್ದಾಗಿದೆ, ನೀವು ಮಾಡಬೇಕಾದದು ಇಷ್ಟೇ, ಮೆ೦ತೆಕಾಳುಗಳನ್ನು ಏಳೆ೦ಟು ಗಂಟೆಗಳ ನೆನೆಸಿಡಿರಿ ಕಾಳುಗಳು ನೆನೆದು ಮೆತ್ತಗಾಗುತ್ತಲೇ ಅವುಗಳನ್ನು ಮಿಕ್ಸರ್ ಗ್ರೈ೦ಡರ್ ನಲ್ಲಿ ತಿರುವಿ ಪೇಸ್ಟ್‌ನ ರೂಪಕ್ಕೆ ತ೦ದುಕೊಳ್ಳಿರಿ. ಈ ಪೇಸ್ಟ್ ಅನ್ನು ನಿಮ್ಮ ನೆತ್ತಿಗೆ ನೇರವಾಗಿ ಹಚ್ಚಿಕೊಳ್ಳಿರಿ ಹಾಗೂ ಅದು ನೆತ್ತಿಯ ಮೇಲೆ ಹಾಗೆಯೇ ಒಣಗಲು ಅವಕಾಶ ನೀಡಿರಿ. ಬಳಿಕ ಮ೦ದವಾದ ಶ್ಯಾ೦ಪೂವಿನಿ೦ದ ಅದನ್ನು ತೊಳೆದುಕೊಳ್ಳುವುದರ ಮೂಲಕ ಕೋಮಲವಾದ ಕೇಶರಾಶಿಯನ್ನು ನಿಮ್ಮದಾಗಿಸಿಕೊಳ್ಳಿರಿ.

ಕೂದಲಿನ ಹೊಳಪಿಗಾಗಿ
ಒಂದು ಚಿಕ್ಕ ಪಾತ್ರೆಯಲ್ಲಿ ಎರಡು ದೊಡ್ಡ ಚಮಚ ಕೊಬ್ಬರಿ ಎಣ್ಣೆಗೆ ಒಂದು ದೊಡ್ಡ ಗಾತ್ರದ ಲಿಂಬೆರಸವನ್ನು ಸೇರಿಸಿ ಚೆನ್ನಾಗಿ ಕಲಕಿ. ಬಳಿಕ ಈ ಪಾತ್ರೆಯನ್ನು ಫ್ರಿಜ್ಜಿನಲ್ಲಿಡಿ. ಕೊಂಚ ಹೊತ್ತಿನ ಬಳಿಕ ಈ ದ್ರವ ಗಾಢವಾಗುತ್ತದೆ. ಈ ದ್ರವವನ್ನು ಕೂದಲ ಬುಡಕ್ಕೆ ಬರುವಂತೆ ಇಡಿಯ ತಲೆಗೆ ಹಚ್ಚಿ. ಬಳಿಕ ಅಗಲವಾದ ಬಾಚಣಿಗೆಯನ್ನು ಬಳಸಿ ತಲೆಬಾಚಿಕೊಳ್ಳಿ. ಹದಿನೈದು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ಕೂದಲು ನಯವಾಗಿ, ಗುಂಗುರುಗಳಿಲ್ಲದೇ ಮತ್ತು ಕಾಂತಿಯುಕ್ತವಾಗಿ ಹೊಳೆಯುತ್ತದೆ.

ಕೂದಲ ಉದುರುವಿಕೆ ಸಮಸ್ಯೆಗೆ
ಕೂದಲ ಉದುರುವಿಕೆಗೆ ಕೂದಲ ಬುಡದಲ್ಲಿ ಸಾಕಷ್ಟು ಪೋಷಣೆ ಇಲ್ಲದಿರುವುದು ಪ್ರಮುಖ ಕಾರಣವಾಗಿದೆ. ಇದಕ್ಕೆ ಲಿಂಬೆರಸ, ಶಿರ್ಕಾ ಮತ್ತು ಉಪ್ಪು ಸೇರಿಸಿ ಕೂದಲ ಬುಡಕ್ಕೆ ಹಚ್ಚಿಕೊಳ್ಳಬೇಕು. ಇದರಿಂದ ಕೂದಲುದುರುವ ತೊಂದರೆ ನಿವಾರಣೆಯಾಗುತ್ತದೆ. ಸ್ವಲ್ಪ ಕೇಳಿ, ಕೂದಲು ಉದುರುತ್ತಿದೆ ಎಂದು ಚಿಂತಿಸಬೇಡಿ

ಲೋಳೆಸರದ ದ್ರವ

ಈಗತಾನೇ ಕೊಯ್ದ ಲೋಳೆಸರದ ಕೋಡೊಂದನ್ನು ನೇರವಾಗಿ ಅದರ ದ್ರವ ಕೂದಲ ಬುಡಕ್ಕೆ ತಲುಪುವಂತೆ ನಯವಾಗಿ ಉಚ್ಚಿ. ಕೋಡನ್ನು ಒತ್ತಿ ದ್ರವ ಒಸರುವಂತೆ ಮಾಡಿ. ಕೊಂಚ ಹೊತ್ತಿನ ಬಳಿಕ ಉಗುರುಬೆಚ್ಚನೆಯ ನೀರಿನಿಂದ ಸ್ವಚ್ಛಗೊಳಿಸಿ. ದಿನಂಪ್ರತಿ ಉಪಯೋಗಿಸಿದರೆ ಒಂದೇ ವಾರದಲ್ಲಿ ಪರಿಣಾಮ ಕಂಡುಬರುತ್ತದೆ.

ಸಾಸಿವೆ ಮತ್ತು ಮದರಂಗಿ ಎಲೆಗಳು

ಸ್ವಲ್ಪ ಸಾಸಿವೆ ಎಣ್ಣೆಯನ್ನು ತಳ ಆಳವಿರುವ ಪಾತ್ರೆಯಲ್ಲಿ ಕುದಿಸಿರಿ ಹಾಗೂ ಒಂದು ಚಿಟಿಕೆಯಷ್ಟು ಮದರಂಗಿ ಎಲೆಗಳನ್ನು ಕ್ರಮಕ್ರಮವಾಗಿ ಎಲ್ಲಾ ಎಲೆಗಳೂ ಸಹ ಈ ಎಣ್ಣೆಯಲ್ಲಿ ಸುಟ್ಟು ಹೋಗುವವರೆಗೆ ಸೇರಿಸಿರಿ. ನಂತರ ಒಂದು ಸ್ವಚ್ಛವಾದ ಬಟ್ಟೆಯನ್ನುಪಯೋಗಿಸಿ ಈ ಎಣ್ಣೆಯನ್ನು ಸೋಸಿರಿ.
ನಿಯಮಿತವಾಗಿ ಈ ಎಣ್ಣೆಯನ್ನು ನಿಮ್ಮ ಕೇಶರಾಶಿಗೆ ಮಸಾಜ್ ಮಾಡಿರಿ ಹಾಗೂ ತನ್ಮೂಲಕ ಕೂದಲ ಬೆಳವಣಿಗೆಯನ್ನು ವೃದ್ಧಿಗೊಳಿಸಿರಿ.

ಬೆಳ್ಳುಳ್ಳಿ ಮತ್ತು ಈರುಳ್ಳಿ
ಬೆಳ್ಳುಳ್ಳಿ ಮತ್ತು ಈರುಳ್ಳಿಗಳು ಗಂಧಕ ಸಮೃದ್ಧ ಆಗರಗಳಾಗಿವೆ. ಆದ್ದರಿಂದ ಇದನ್ನು ಸಾಂಪ್ರದಾಯಿಕ ಔಷಧಗಳನ್ನು ತಯಾರಿಸುವಾಗ ಬಳಸುತ್ತಾರೆ. ಇವು ಕೂದಲ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತವೆ.
ಬೆಳ್ಳುಳ್ಳಿಯನ್ನು ಕೂದಲ ಬೆಳವಣಿಗೆಗೆ ಹೀಗೆ ಬಳಸಲಾಗುತ್ತದೆ: 4-5 ಬೆಳ್ಳುಳ್ಳಿಗಳನ್ನು ಜಜ್ಜಿಕೊಂಡು ತೆಂಗಿನ ಎಣ್ಣೆಯ ಜೊತೆ ಬೆರೆಸಿಕೊಳ್ಳಿ. ಇದನ್ನು ಕುದಿಯುವವರೆಗೆ ಚೆನ್ನಾಗಿ ಕಾಯಿಸಿ, ನಂತರ 2-3 ನಿಮಿಷಗಳ ಕಾಲ ಕಾಯಿರಿ. ಆಮೇಲೆ, ಇದು ಆರುವವರೆಗೆ ಕಾಯಿರಿ.


ಇದು ಆರಿದ ಮೇಲೆ, ಇದನ್ನು ನಿಮ್ಮ ಕೂದಲ ಮೇಲೆ ಲೇಪಿಸಿ ಮೃದುವಾಗಿ ಮಸಾಜ್ ಮಾಡಿ. ಅತ್ಯುತ್ತಮ ಫಲಿತಾಂಶಗಳಿಗಾಗಿ ಇದನ್ನು ವಾರಕ್ಕೆ 2-3 ಬಾರಿ ಮಾಡಿ. ಈರುಳ್ಳಿಯನ್ನು ಕತ್ತರಿಸಿ, ರಸ ಪಡೆಯುವ ಮೂಲಕ ಇದರ ಸದುಪಯೋಗವನ್ನು ನೀವು ಪಡೆಯಬಹುದು. ಈರುಳ್ಳಿಯ ರಸವನ್ನು ನಿಮ್ಮ ಕೂದಲಿಗೆ ಲೇಪಿಸಿ 15 ನಿಮಿಷ ಬಿಡಿ. ನಂತರ ನೀರಿನಲ್ಲಿ ತೊಳೆಯಿರಿ.
English summary

Hair fall treatment at home- Six remedies that work!

Hair fall problem? Looking for a treatment that works without the side-effects of chemicals or medications? You should try these home remedies. According to hair experts, losing 50-100 strands of hair every day is fairly normal. It is only a cause of concern when you lose more than that. But you can stop hair fall in its tracks with these simple home remedies. Here’s how you can make them.
Story first published: Saturday, October 31, 2015, 20:29 [IST]
X
Desktop Bottom Promotion