Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಇನ್ನು ಕ್ಷಣಾರ್ಧದಲ್ಲಿ ಕೂದಲಿನ ಸೌಂದರ್ಯ ಹೆಚ್ಚಿಸಿಕೊಳ್ಳಿ!
ಮಿರಮಿರನೆ ಮಿಂಚುವ ಕಪ್ಪು ಕೂದಲು ದೈವದತ್ತ ಕೊಡುಗೆ. ಇಳಿಬಿದ್ದ ಕೇಶರಾಶಿ ಗರಿಗೆದರಿದ ನವಿಲಿನ ನಾಟ್ಯದಂತೆ. ದಟ್ಟವಾದ ಕೇಶರಾಶಿಯ ಮೋಹ ಪ್ರತಿಯೊಬ್ಬ ಮಹಿಳೆಯರ ಕನಸಾಗಿರುತ್ತದೆ. ಆದರೆ ಇಂದಿನ ಯುವತಿಯರು ಹೆಚ್ಚು ತೊಂದರೆ ಅನುಭವಿಸುತ್ತಿರುವುದು ಕೂದಲು ಉದುರುವ ಸಮಸ್ಯೆಯಿಂದಾಗಿದೆ. ಕೂದಲುದುರುವ ಸಮಸ್ಯೆಯನ್ನು ಹೆಚ್ಚಿನ ತರುಣಿಯರು ಮಹಿಳೆಯರು ಅನುಭವಿಸುತ್ತಿದ್ದು ಇದಕ್ಕಾಗಿ ವೈದ್ಯರುಗಳ ಮೊರೆ ಹೋಗುವುದು ಸಾಮಾನ್ಯವಾಗಿ ಬಿಟ್ಟಿದೆ.
ನಿಮ್ಮ ನಿದ್ದೆಗೆಡಿಸುವ ತಲೆಗೂದಲಿನ ಸಮಸ್ಯೆಗೆ ಅಂತ್ಯಹಾಡಲೆಂದೇ ಇಂದಿನ ಲೇಖನದಲ್ಲಿ ನಾವು ಕೆಲವೊಂದು ಟಿಪ್ಸ್‌ಗಳೊಂದಿಗೆ ಬಂದಿರುವೆವು. ಹೆಚ್ಚಿನ ರಾಸಾಯನಿಕ ಅಂಶಗಳನ್ನು ಕೂದಲಿಗೆ ಬಳಸುತ್ತಿರುವುದು ಮತ್ತು ನಿತ್ಯದ ಜೀವನದಲ್ಲಿ ನೀವು ಅನುಭವಿಸುತ್ತಿರುವ ಮಾನಸಿಕ ಒತ್ತಡ, ನಿದ್ದೆಯ ಕೊರತೆ, ಪ್ರೋಟೀನ್ ವಿಟಮಿನ್ಗಳ ಅಭಾವ ಕೂದಲಿನ ಉದುರುವಿಕೆ ಕಾರಣವಾಗಿವೆ. ಹಾಗಿದ್ದರೆ ಇದಕ್ಕೆ ಪರಿಹಾರವೇ ಇಲ್ಲವೇ ಎಂಬ ಚಿಂತೆ ನಿಮ್ಮನ್ನು ಕಾಡುತ್ತಿರಬಹುದು. ಇದಕ್ಕಿರುವ ಪರಿಹಾರಗಳೆಂದರೆ ನೈಸರ್ಗಿಕ ವಿಧಾನಗಳನ್ನು ಅನುಸರಿಸುವುದಾಗಿದೆ. ಅದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ನೀಡಲಿರುವೆವು, ಮುಂದೆ ಓದಿ...

ತಲೆಯ ಮಸಾಜ್
ತಲೆಬುಡದ ರಕ್ತ ಸಂಚಾರವನ್ನು ಹೆಚ್ಚಿಸುವ ಮಸಾಜ್ ವಿಷಕಾರಿ ಅಂಶಗಳನ್ನು ತೊಡೆದು ಹಾಕುತ್ತದೆ. ಎಣ್ಣೆಯನ್ನು ಬಳಸಿ ಇಲ್ಲವೇ ಹಾಗೆಯೇ ಕೂಡ ಮಸಾಜ್ ಅನ್ನು ನೀವು ಕೈಗೊಳ್ಳಬಹುದು. ಬಿಸಿ ಎಣ್ಣೆಯನ್ನು ಕೂದಲಿನ ಮಸಾಜ್‌ಗಾಗಿ ಬಳಸುವುದರಿಂದ ಇದು ಕೂದಲಿನ ಒಣಗುವಿಕೆಯ ಸಮಸ್ಯೆಯನ್ನು ನಿವಾರಿಸಿ ಕೂದಲಿನ ಕೋಶಗಳನ್ನು ಸಮೃದ್ಧಗೊಳಿಸುತ್ತವೆ. ಬಾದಾಮಿ, ತೆಂಗಿನೆಣ್ಣೆ, ಹರಳೆಣ್ಣೆಯನ್ನು ಬಿಸಿ ಎಣ್ಣೆ ಮಸಾಜ್‌ಗಾಗಿ ಬಳಸಬಹುದಾಗಿದೆ.

ನೆಲ್ಲಿಕಾಯಿ ಸೇವನೆ
ವಿಟಮಿನ್ ಸಿಯನ್ನು ಹೇರಳವಾಗಿ ಒಳಗೊಂಡಿರುವ ನೆಲ್ಲಿಕಾಯಿ ಸೇವನೆಯನ್ನು ನಿತ್ಯವೂ ಮಾಡುವುದರಿಂದ ಕೂದಲಿಗೆ ಸಂಬಂಧಿಸಿದ ಹೆಚ್ಚಿನ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಅಮಿನೊ ಆಸಿಡ್ಸ್, ಮಿನರಲ್ಸ್, ಫ್ಲಾವನೊಯ್ಡ್ಸ್, ಟ್ಯಾನಿನ್‌ಗಳನ್ನು ನೆಲ್ಲಿಕಾಯಿ ಒಳಗೊಂಡಿದೆ. ಕೂದಲು ಉದುರುವಿಕೆ, ಸಣ್ಣ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುವಿಕೆ ಮೊದಲಾದ ಸಮಸ್ಯೆಗಳಿಗೆ ಹಸಿ ಅಥವಾ ಒಣಗಿದ ನೆಲ್ಲಿಕಾಯಿಯ ಸೇವನೆಯನ್ನು ನಿಮಗೆ ಮಾಡಬಹುದಾಗಿದೆ.

ನೆಲ್ಲಿಕಾಯಿ ಸೇವನೆ
ತಾಜಾ ಆಗಿರುವ ನೆಲ್ಲಿಕಾಯಿಗಳನ್ನು ಬಿಸಿಲಿನಲ್ಲಿ ಒಣಗಿಸಿ. ಒಣಗಿದ ನೆಲ್ಲಿಕಾಯಿ ಹಣ್ಣುಗಳನ್ನು ಪುಡಿ ಮಾಡಿಕೊಳ್ಳಿ. ಈ ಪುಡಿಯನ್ನು ನೀವು ಇತರ ಪದಾರ್ಥಗಳ ಜೊತೆಗೆ ಬೆರೆಸಿಕೊಂಡು ಕೂದಲಿಗೆ ಲೇಪಿಸಿಕೊಳ್ಳಬಹುದು. ಒಂದು ಟೇಬಲ್ ಚಮಚ ಆಮ್ಲಾ ಪುಡಿಗೆ ಎರಡು ಟೇಬಲ್ ಚಮಚ ಬಿಸಿಯಾಗಿರುವ ತೆಂಗಿನ ಎಣ್ಣೆಯನ್ನು ಬೆರೆಸಿಕೊಳ್ಳಿ. ಇದನ್ನು ನಿಮ್ಮ ಕೂದಲ ಬುಡಕ್ಕೆ ಲೇಪಿಸಿಕೊಂಡು 10 ನಿಮಿಷಗಳ ಕಾಲ ಮಸಾಜ್ ಮಾಡಿ. ಎರಡು ಗಂಟೆ ಬಿಟ್ಟು ನಂತರ ಮೈಲ್ಡ್ ಶಾಂಪೂವಿನಿಂದ ತೊಳೆಯಿರಿ.

ಅಗಸೆ ಬೀಜಗಳ ಸೇವನೆ
ಫ್ಲಾಕ್ಸ್ ಬೀಜಗಳು ಅಥವಾ ಅಗಸೆ ಬೀಜಗಳು ನಮ್ಮ ಆರೋಗ್ಯಕ್ಕೆ ಅತ್ಯಂತ ಉಪಯೋಗಕಾರಿಯಾದ ಬೀಜಗಳು ಆಗಿರುತ್ತವೆ. ಇದನ್ನು ಪ್ರಾಚೀನ ಕಾಲದಿಂದಲೂ ಸಹ ಬಳಸಿಕೊಂಡು ಬರಲಾಗುತ್ತಿದೆ. ಪ್ರಾಚೀನ ಪ್ರಾಚ್ಯ ವಸ್ತುಗಳ ಉತ್ಪನ್ನಗಳಲ್ಲಿ ಕಂಡು ಬಂದ ಅಂಶಗಳ ಪ್ರಕಾರ ಇದನ್ನು ಮೊದಲು ಈಜಿಪ್ಟ್‌ನಲ್ಲಿ ನೆಫೆರೆಟಿಗಳು ಇದ್ದ ಕಾಲದಲ್ಲಿ ಬಳಸಲು ಆರಂಭಿಸಿದರಂತೆ. ಇದನ್ನು ಇದರಲ್ಲಿರುವ ಸ್ವಾಭಾವಿಕ ನಾರಿನಂಶಕ್ಕಾಗಿ ಬೆಳೆಯಲು ಆರಂಭಿಸಿದರಂತೆ. ಇದು ಭಾರತದಲ್ಲಿ ವಿಶೇಷವಾಗಿ ಹಳ್ಳಿಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ.

ಅಗಸೆ ಬೀಜಗಳ ಸೇವನೆ
ಕೂದಲಿನ ಬೆಳವಣಿಗೆಗೆ ಅತ್ಯಗತ್ಯವಾಗಿರುವ ಮತ್ತು ದುರ್ಬಲ ಕೂದಲನ್ನು ಪೋಷಿಸುವ ಅಗಸೆ ಬೀಜಗಳನ್ನು ಸೇವಿಸುವುದು ಉತ್ತಮ ಪರಿಹಾರವಾಗಿದೆ. ಸೆಲೇನಿಯಮ್, ಅಮಿನೊ ಆಸಿಡ್ಸ್, ಕ್ಯಾಲ್ಶಿಯಮ್, ಫಾಸ್ಫರಸ್, ಬಿ ವಿಟಮಿನ್‌ಗಳನ್ನು ಅಗಸೆ ಒಳಗೊಂಡಿದೆ. ಒಮೇಗಾ 3 ಆಸಿಡ್ಸ್ ಕೂಡ ಇದರಲ್ಲಿದೆ. ಸಲಾಡ್, ಸಿಹಿ ತಿನಿಸುಗಳಲ್ಲಿ ಅಗಸೆ ಬೀಜಗಳನ್ನು ಪುಡಿ ಮಾಡಿಕೊಂಡು ಕೂಡ ಸೇವಿಸಬಹುದಾಗಿದೆ.

ಪ್ರೋಟೀನ್ ಮತ್ತು ಕಬ್ಬಿಣದ ಅಂಶಗಳಿರುವ ಆಹಾರಗಳು
ಅಗತ್ಯವಾಗಿರುವ ಪ್ರೋಟೋನ್‌ಗಳ ಸೇವನೆಯನ್ನು ಮಾಡದಿರುವುದು ಕೂಡ ಕೂದಲಿನ ಉದುರುವಿಕೆಗೆ ಕಾರಣವಾಗಿದೆ. ಬೇಳೆಕಾಳುಗಳು, ದ್ವಿದಳ ಧಾನ್ಯಗಳು, ಮಟನ್, ಚಿಕನ್‌ಗಳ ಸೇವನೆಯಿಂದ ಅಗತ್ಯವಾಗಿರುವ ಪ್ರೋಟೀನ್‌ಗಳು ದೊರೆಯುತ್ತವೆ. ಇದರಿಂದ ಕೂಡ ಕೂದಲಿನ ಬೆಳವಣಿಗೆ ವೇಗವಾಗಿ ನಡೆಯುತ್ತದೆ.

ನೈಸರ್ಗಿಕ ಉಪಚಾರ
ನಿಮ್ಮ ಕೂದಲನ್ನು ಶಾಂಪೂವಿನಿಂದ ತೊಳೆದುಕೊಂಡ ನಂತರ ನೈಸರ್ಗಿಕ ಉಪಚಾರಗಳನ್ನು ನಡೆಸಿ. ಲಿಂಬೆ, ಪುದೀನಾ, ರೋಸ್‌ಮೇರಿ, ಲ್ಯಾವೆಂಡರ್, ಮೆಂತೆ ಮತ್ತು ನೆಲ್ಲಿಕಾಯಿಯನ್ನು ಒಳಗೊಂಡಿರುವ ನೈಸರ್ಗಿಕ ಉಪಚಾರಗಳನ್ನು ಬಳಸಿ. ಈ ಗಿಡಮೂಲಿಕೆಗಳನ್ನು ಚೆನ್ನಾಗಿ ಕುದಿಸಿ ಅವುಗಳ ರಸದಿಂದ ಕೂದಲನ್ನು ತೊಳೆದುಕೊಳ್ಳಿ.

ಒತ್ತಡ ಬೇಡ
ಕೂದಲು ಉದುರುವಿಕೆ ಮತ್ತು ನೆರೆತಕ್ಕೆ ಮುಖ್ಯ ಕಾರಣ ಒತ್ತಡವಾಗಿದೆ. ಒತ್ತಡವನ್ನು ನಿವಾರಿಸುವ ಚಟುವಟಿಕೆಗಳನ್ನು ನಿಮ್ಮದಾಗಿಸಿಕೊಳ್ಳಿ. ಈ ಚಟುವಟಿಕೆಗಳು ನಿಮ್ಮ ಕೂದಲನ್ನು ಆರೋಗ್ಯಕರವಾಗಿಸಿ ಅದರ ಬೆಳವಣಿಗೆಗೆ ಕಾರಣವಾಗುತ್ತದೆ.

ನಿಯಮಿತ ವ್ಯಾಯಾಮ
ನಿಯಮಿತ ವ್ಯಾಯಾಮ ನಿಮ್ಮಲ್ಲಿ ಬೆವರನ್ನು ಉಂಟುಮಾಡುತ್ತದೆ. ಅಂತೆಯೇ ಕೂದಲಿನ ಕೋಶಗಳನ್ನು ತೋಯಿಸುತ್ತವೆ. ಕೂದಲಿನ ಕೋಶಗಳಲ್ಲಿ ಅಡಗಿರುವ ಮೃತಕೋಶಗಳು ಮತ್ತು ಎಣ್ಣೆ ಹೊರಹೋದಾಗ ಕೂದಲು ಬೆಳೆಯಲು ಆರಂಭಗೊಳ್ಳುತ್ತದೆ. ವ್ಯಾಯಮವು ರಕ್ತದ ಪರಿಚಲನೆಯನ್ನು ತುದಿಯಿಂದ ಬುಡದವರೆಗೆ ಮಾಡುತ್ತದೆ ಹಾಗೂ ಕೂದಲಿಗೆ ಬೇಕಾದ ನ್ಯೂಟ್ರೀನ್‌ಗಳು ಮತ್ತು ಆಮ್ಲಜನಕವನ್ನು ಪೂರೈಸುತ್ತದೆ.



Click it and Unblock the Notifications











