For Quick Alerts
ALLOW NOTIFICATIONS  
For Daily Alerts

ಕೂದಲುದುರುವ ಸಮಸ್ಯೆಗೆ ಒಂದಿಷ್ಟು ಸರಳ ಟಿಪ್ಸ್

By Manu
|

ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನಶೈಲಿ, ಆಹಾರಕ್ರಮ ಕಲ್ಮಶಯುಕ್ತ ನೀರು...ಇವೆಲ್ಲವೂ ಕೇವಲ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಿರುವುದಲ್ಲದೆ ಸೌಂದರ್ಯವನ್ನು ನೀಡುವಂತಹ ಕೂದಲಿನ ಮೇಲೂ ಭಾರೀ ಪರಿಣಾಮವನ್ನುಂಟು ಮಾಡಿದೆ. ತಲೆ ಹೊಟ್ಟು, ಬಿಳಿ ಕೂದಲು, ಒಡೆದ ಕೂದಲಿನ ಬುಡ, ಜಿಡ್ಡುಗಟ್ಟಿದ ಕೂದಲು ಮತ್ತು ಇನ್ನಿತರ ಕೂದಲಿನ ಸಮಸ್ಯೆಗಳು ಗಂಡು ಮತ್ತು ಹೆಣ್ಣು ಎಂಬ ಭೇದ-ಭಾವವಿಲ್ಲದೆ ಕಾಡುತ್ತವೆ.

ಇಂತಹ ಕೊನೆಯಿಲ್ಲದ ಸಮಸ್ಯೆಗಳನ್ನು ನಿವಾರಿಸಲು ಬಹುಶಃ ನೀವು ಹಲವಾರು ಉತ್ಪನ್ನಗಳನ್ನು ಬಳಸಿರಬಹುದು. ಮಾರುಕಟ್ಟೆಯಲ್ಲಿ ಲಭ್ಯವಿರುವ ವೈಜ್ಞಾನಿಕವಾಗಿ ಸಾಬೀತು ಮಾಡಲಾದ ಉತ್ಪನ್ನಗಳನ್ನು ಬಳಸಿದರೂ ಕೂಡ, ನಿಮ್ಮ ಸಮಸ್ಯೆಗಳು ಇನ್ನೂ ಉಳಿದುಕೊಂಡಿರಲೂಬಹುದು ಅಲ್ಲವೇ? ಚಿಂತಿಸಬೇಡಿ, ಇವೆಲ್ಲಾ ಪ್ರಯೋಜನ ನಿಮ್ಮ ಅಡುಗೆಮನೆಯಲ್ಲಿಯೇ ಇದೆ...!

ಹೌದು, ನಿಮ್ಮ ಮನೆಯ ಅಡುಗೆಕೋಣೆಯಲ್ಲಿಯೇ ಅ೦ತಹ ಹಲವಾರು ಉತ್ಪನ್ನಗಳಿದ್ದು, ಅವುಗಳ ನಿಯಮಿತವಾದ ಉಪಯೋಗವು ನಿಮ್ಮ ಕೂದಲನ್ನು ನಯವಾಗಿಸುತ್ತವೆ, ಹಾಗೂ ನೇರವಾಗಿರುವ೦ತೆಯೂ ಮಾಡುತ್ತದೆ.. ಬನ್ನಿ ಕೂದಲಿನ ಸೌಂದರ್ಯ ವರ್ಧಿಸುವ ಮನೆಮದ್ದಿನ ಕುರಿತು ಮುಂದೆ ಓದಿ.. ಹಳ್ಳಿ ಮದ್ದಿರುವಾಗ ತಲೆಹೊಟ್ಟಿನ ಸಮಸ್ಯೆಯ ಚಿಂತೆ ಏತಕ್ಕೆ?

ಸಾಸಿವೆ ಎಣ್ಣೆ

Effective Home Remedies for Hair Loss
ಕೂದಲು ಉದುರುವಿಕೆಗೆ ಸತುವಿನ ಕೊರತೆಯಿಂದ ಒಮ್ಮೊಮ್ಮೆ ಕೂದಲು ಉದುರುವಿಕೆ ಕಂಡು ಬರುತ್ತದೆ. ಸಾಸಿವೆ ಎಣ್ಣೆಯಲ್ಲಿ ಅಧಿಕ ಪ್ರಮಾಣದ ಸತುವಿನ ಅಂಶವಿರುತ್ತದೆ.ಆದ್ದರಿಂದ ಸಾಸಿವೆ ಎಣ್ಣೆಯನ್ನು ಕೂದಲ ಬುಡಕ್ಕೆ ಲೇಪಿಸುವುದರಿಂದ ಕೂದಲು ಉದುರುವಿಕೆಯನ್ನು ತಡೆಗಟ್ಟಬಹುದು. ಇದಕ್ಕಾಗಿ ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ ಮಸಾಜ್ ಮಾಡಿ ಸಾಕು.

ಹಾಲಿನ ಸಿ೦ಪಡಿಕೆ

ನಿಮ್ಮ ಕೂದಲನ್ನು ಚಪ್ಪಟೆಯಾಗಿಸುವ ವಿಚಾರದಲ್ಲಿ ಹಾಲು ಬಹಳ ಪ್ರಯೋಜನಕಾರಿ. ಹಾಲನ್ನು ಪಿಚಕಾರಿಯ೦ತಹ ಬಾಟಲಿಯೊ೦ದರಲ್ಲಿ ತು೦ಬಿಸಿಕೊ೦ಡು ಅದನ್ನು ನಿಮ್ಮ ತಲೆಯ ಮೇಲೆಲ್ಲಾ ಸಿ೦ಪಡಿಸಿಕೊಳ್ಳಿರಿ. ನಿಮ್ಮ ಕೂದಲು ಹೀಗೆ ಚಿಮುಕಿಸಿದ ಹಾಲನ್ನು ಹೀರಿಕೊಳ್ಳುವ೦ತಾಗಲು ಅದನ್ನು ಅರ್ಧ ಗಂಟೆಯ ಕಾಲ ತಲೆಯ ಮೇಲೆ ಹಾಗೆಯೇ ಇರಗೊಡಿರಿ. ಅನ೦ತರ ಶ್ಯಾ೦ಪೂವನ್ನು ಬಳಸಿಕೊ೦ಡು ನಿಮ್ಮ ಕೇಶರಾಶಿಯನ್ನು ಚೆನ್ನಾಗಿ ತೊಳೆಯಿರಿ ಹಾಗೂ ಬದಲಾವಣೆಯನ್ನು ಗಮನಿಸಿರಿ.

ಬೇವಿನ ಎಣ್ಣೆಯ ಮಸಾಜ್

ರಾತ್ರಿ ಮಲಗುವ ಮುನ್ನ ಕೊಂಚ ಬೇವಿನೆಣ್ಣೆಯಿಂದ ತಲೆಗೂದಲ ಬುಡಕ್ಕೆ ಮಸಾಜ್ ಮಾಡಿ ಮಲಗಿ ಬೆಳಿಗ್ಗೆ ಎದ್ದ ಬಳಿಕ ತೊಳೆದುಕೊಳ್ಳುವುದರಿಂದ ಕೂದಲು ಉದುರುವುದು ನಿಲ್ಲುವ ಜೊತೆಗೇ ಕೂದಲಿಗೆ ಕಾಂತಿಯೂ ದೊರಕುತ್ತದೆ. ಇದರೊಂದಿಗೆ ಇತರ ಅವಶ್ಯಕ ತೈಲಳಾದ ಬಾದಾಮಿ ಎಣ್ಣೆ ಅಥವಾ ಆಲಿವ್ ಎಣ್ಣೆಯನ್ನು ಸೇರಿಸಿಕೊಳ್ಳುವ ಮೂಲಕ ಅತ್ಯುತ್ತಮ ಪರಿಣಾಮ ಪಡೆಯಬಹುದು. ಅಷ್ಟೇ ಅಲ್ಲದೆ ನಿಯಮಿತವಾಗಿ ಬೇವಿನೆಣ್ಣೆಯನ್ನು ತಲೆಗೂದಲಿಗೆ ಹಚ್ಚಿಕೊಳ್ಳುತ್ತಾ ಬರುವ ಮೂಲಕ ಆರೋಗ್ಯಕರ ಮತ್ತು ಸೊಂಪಾದ ಕೂದಲನ್ನು ಪಡೆಯಬಹುದು. ಏನೇ ಹೇಳಿ ಕೂದಲುದುರುವ ಸಮಸ್ಯೆಗೆ ಮನೆಮದ್ದೇ ಸರಿ

ಆಮ್ಲಾ ಮತ್ತು ಮೆಂತೆ ಪುಡಿ
ಒಂದು ಚಮಚ ಆಮ್ಲಾ ಪುಡಿಯನ್ನು ಮೆಂತೆ ಪುಡಿಯ ಜೊತೆಗೆ ಬೆರೆಸಿ. ಇದಕ್ಕೆ ಮೂರು ಟೇಬಲ್ ಚಮಚ ಹರಳೆಣ್ಣೆಯನ್ನು ಬೆರೆಸಿ. ಇದನ್ನು ನಿಮ್ಮ ಕೂದಲು ಮತ್ತು ಅದರ ಬುಡಕ್ಕೆ ಲೇಪಿಸಿ, ಮೃದುವಾಗಿ ಮಸಾಜ್ ಮಾಡಿ. ಒಂದು ಗಂಟೆ ಬಿಟ್ಟು ನಂತರ ಇದನ್ನು ತೊಳೆಯಿರಿ.

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆ ಬಳಸುವುದು ಅತ್ಯಂತ ಪರಿಣಾಮಕಾರಿ ಕೂದಲಿನ ಆರೈಕೆಯ ಟಿಪ್ಸ್. ಬಾದಾಮಿ ಎಣ್ಣೆಯನ್ನು ತಲೆಬುರುಡೆಗೆ ಹಚ್ಚಿ ಮತ್ತು ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಸ್ವಲ್ಪ ಸಮಯದ ಬಳಿಕ ಕೂದಲು ತೊಳೆಯಿರಿ. ನಿಯಮಿತ ಹಾಗೂ ನಿರಂತರವಾಗಿ ಬಾದಾಮಿ ಎಣ್ಣೆ ಬಳಸುವುದರಿಂದ ಕೂದಲು ದಪ್ಪ ಮತ್ತು ಸುಂದರವಾಗುತ್ತದೆ.

ಸೂರ್ಯಕಾಂತಿ ಎಣ್ಣೆ

ಸೂರ್ಯಕಾಂತಿ ಎಣ್ಣೆಯು ಮೃದುಕಾರಿಯಾಗಿ ಕೆಲಸ ಮಾಡುತ್ತದೆ ಮತ್ತು ಇದು ಜಿಡ್ಡಿನ ಕೂದಲನ್ನು ಕೋಮಲಯುಕ್ತವಾಗಿ ಮಾಡಲು ನೆರವಾಗಲಿದೆ. ಸೂರ್ಯಕಾಂತಿ ಎಣ್ಣೆಯು ಕೂದಲಿನ ಬೆಳವಣಿಗೆಗೆ ನೆರವಾಗಿ ಉದುರುವುದನ್ನು ತಡೆಯಲಿದೆ. ಕೂದಲಿನ ಆರೈಕೆಗೆ ಅಡುಗೆ ಎಣ್ಣೆ ಪರಿಗಣಿಸುವುದಾದರೆ ಆಗ ತೆಂಗಿನ ಎಣ್ಣೆ ಬಳಿಕದ ಸ್ಥಾನ ಸೂರ್ಯಕಾಂತಿ ಎಣ್ಣೆಗೆ ಸಿಗುತ್ತದೆ.
English summary

Effective Home Remedies for Hair Loss

There is nothing more attractive than a thick head of hair that glimmers with natural health. But hair loss is a problem that many people suffer from. There can be several factors behind hair loss such as environmental effects, aging, too much stress, excessive smoking, nutritional deficiencies, hormonal imbalance, genetic factors, scalp infections, use of wrong or chemically enriched hair productsSo boldsky share some effective home remedies, have a look
Story first published: Thursday, October 22, 2015, 18:55 [IST]
X
Desktop Bottom Promotion