For Quick Alerts
ALLOW NOTIFICATIONS  
For Daily Alerts

ಪುರುಷರ ಕೂದಲುದುರುವ ಸಮಸ್ಯೆಗೆ ಫಲಪ್ರದ ಮನೆಮದ್ದು

|

ಕೂದಲುರುದುರುವುದು ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಅನ್ವಯವಾಗುವ ತೊಂದರೆಯಾದರೂ ಬಕ್ಕ ತಲೆ ಅಥವಾ ಬೊಕ್ಕತಲೆಯಾಗುವ ಸಂಭವ ಮಾತ್ರ ಪುರುಷರಿಗೇ ಮೀಸಲು. ಏಕೆಂದರೆ ಇದಕ್ಕೆ ಪುರುಷರಲ್ಲಿರುವ ಟೆಸ್ಟೋಸ್ಟೆರಾನ್ ರಸದೂತ ಕಾರಣ ಎಂದು ವೈದ್ಯರು ತಿಳಿಸುತ್ತಾರೆ. ಆದರೆ ಇದು ಹೇಗೆ ಕೆಲವರಲ್ಲಿ ಮಾತ್ರ ಪರಿಣಾಮ ಬೀರುತ್ತದೆ?

ತಲೆತುಂಬ ಕೂದಲಿದ್ದವರ ದೇಹದಲ್ಲಿ ಟೆಸ್ಟೋಸ್ಟೆರಾನ್ ಇಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ. ಇದೆ, ಆದರೆ ವಾಸ್ತವವಾಗಿ ಪ್ರತಿಯೊಬ್ಬರೂ ದಿನಕ್ಕೆ ನೂರು ಕೂದಲುಗಳನ್ನು ಸರಾಸರಿ ಕಳೆದುಕೊಳ್ಳುತ್ತಾರೆ. ಅದಕ್ಕೆ ತಕ್ಕನಾಗಿ ಉದುರಿದ ಸ್ಥಳದಲ್ಲಿ ಹೊಸ ಕೂದಲು ಹುಟ್ಟುತ್ತದೆ. ಬೊಕ್ಕತಲೆಯವರಲ್ಲಿ ಇದು ಹುಟ್ಟದೇ ಆ ಸ್ಥಳದಲ್ಲಿ ಅತಿ ಚಿಕ್ಕದಾದ ಸರಿಸುಮಾರು ಪಾರದರ್ಶಕವಾದ ಚಿಕ್ಕ ಕೂದಲು ಬೆಳೆಯುತ್ತದೆ. ನಂತರ ಬೊಕ್ಕತಲೆ ವಿಸ್ತಾರವಾಗುತ್ತಾ ಹೋಗುತ್ತದೆ. ಆದರೆ ಚಿಕ್ಕವಯಸ್ಸಿಗೇ ಕೂದಲು ಉದುರಲು ಪ್ರಾರಂಭವಾಗುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಪುರುಷರಲ್ಲಿ ಕೂದಲುದುರುವ ಸಮಸ್ಯೆಗೆ ಇಲ್ಲಿದೆ ಪರಿಹಾರ

ಇಂತಹ ಸಮಸ್ಯೆಗೆ ಸೂಕ್ತ ಸಮಯದಲ್ಲಿ ಸರಿಯಾದ ಆಹಾರ ಸೇವಿಸದಿರುವುದು, ವಿಟಮಿನ್ ಮತ್ತು ಖನಿಜಗಳ ಕೊರತೆ, ಕೆಲವು ಔಷಧಿಗಳ ಅಡ್ಡಪರಿಣಾಮಗಳು ಇವುಗಳಲ್ಲಿ ಪ್ರಮುಖವಾಗಿವೆ. ಕೆಲವರಿಗೆ ತಲೆಯಲ್ಲಿ ಮತ್ತು ದೇಹದ ಇತರ ಭಾಗಗಳಲ್ಲಿಯೂ ಚರ್ಮವೇ ಬಿಳಿಚಿಕೊಂಡು ಪಡೆದು ಕೂದಲು ಭಾರಿಯಾಗಿ ಉದುರಲು ಕಾರಣವಾಗುತ್ತದೆ. ಈ ಸ್ಥಿತಿಗೆ ಅಲೋಪೀಸಿಯಾ (alopecia) ಎಂದು ಕರೆಯುತ್ತಾರೆ. ಆದರೆ ಈ ಸ್ಥಿತಿಗೆ ತಲುಪದಿರಲು ಕೆಲವು ಮನೆಮದ್ದುಗಳು ಸಮರ್ಥವಾಗಿ ಆರೈಕೆ ನೀಡುತ್ತವೆ. ಬನ್ನಿ ಅವು ಯಾವುದು ಎಂಬುದನ್ನು ನೋಡೋಣ..

ವಿಟಮಿನ್ ಎಚ್ ಕೊರತೆಗೆ ಮೊಟ್ಟೆ ತಿನ್ನಿ

ವಿಟಮಿನ್ ಎಚ್ ಕೊರತೆಗೆ ಮೊಟ್ಟೆ ತಿನ್ನಿ

ಬಯೋಟಿನ್ (biotin) ಎಂದೂ ಕರೆಯಲಾಗುವ ವಿಟಮಿನ್ ಎಚ್ ಪೋಷಕಾಂಶ ಹೊಸಕೂದಲು ಬೆಳೆಯಲು ಅಗತ್ಯವಾಗಿದೆ. ಒಂದು ವೇಳೆ ನಿಮ್ಮ ಆಹಾರದಲ್ಲಿ ಇದು ಕಡಿಮೆಯಿದ್ದರೆ ಉದುರಿದ ಕೂದಲಿನ ಸ್ಥಾನವನ್ನು ಹೊಸಕೂದಲು ಪಡೆಯುವುದು ಅನುಮಾನ. ಈ ಅನುಮಾನವನ್ನು ಪರಿಹರಿಸಲು ನಿಮ್ಮ ಆಹಾರದಲ್ಲಿ ವಿಟಮಿನ್ ಎಚ್ ಹೆಚ್ಚಿರುವ ಮೊಟ್ಟೆ, ಶೇಂಗಾಬೀಜ, ಮೊಸರು, ಲಿವರ್, ಸಾಲ್ಮನ್ ಮೀನು, ಚೀಸ್ ಮೊದಲಾದ ಆಹಾರಗಳನ್ನು ಸೇವಿಸಿ. ವೈದ್ಯರ ಸಲಹೆ ಪಡೆದು ಬಯೋಟಿನ್ ಅಂಶವಿರುವ ಮಾತ್ರೆಗಳನ್ನೂ ಸೇವಿಸಬಹುದು.

ನಿಮ್ಮ ಆಹಾರದಲ್ಲಿ ಪ್ರೋಟೀನ್ ಯಥೇಚ್ಛವಾಗಿರಲಿ

ನಿಮ್ಮ ಆಹಾರದಲ್ಲಿ ಪ್ರೋಟೀನ್ ಯಥೇಚ್ಛವಾಗಿರಲಿ

ನಿಮ್ಮ ಆಹಾರದಲ್ಲಿ ಪ್ರೋಟೀನುಗಳಿರದಿದ್ದರೂ ಕೂದಲು ಉದುರುವುದು ಕಡಿಮೆಯಾಗದು. ಕೂದಲನ್ನು ಉಳಿಸಿಕೊಳ್ಳುವುದರ ಜೊತೆಗೇ ಉತ್ತಮ ಕಾಂತಿಯುತವಾಗಿರಿಸಿಕೊಳ್ಳಲು ದ್ವಿದಳ ಬೀಜಗಳು (ಬೀನ್ಸ್,ರಾಜ್ಮಾ, ಕಡಲೆ ಕಾಳು, ಅಲಸಂಡೆ, ಹೆಸರುಕಾಳು, ಹುರುಳಿ ಕಾಳು ಮೊದಲಾದವು) ನಿಮ್ಮ ಆಹಾರದಲ್ಲಿರುವಂತೆ ನೀಡಿಕೊಳ್ಳಿ. ಇವುಗಳನ್ನು ಮೊಳಕೆ ಬರಿಸಿ ಸೇವಿಸಿದರೆ ಇನ್ನೂ ಉತ್ತಮ. ಇನ್ನುಳಿದಂತೆ ಕೋಳಿಮಾಂಸ, ಸೋಯಾ ಅವರೆ, ಹಾಲು ಮತ್ತು ಮೊಟ್ಟೆ ಸಹಾ ಪ್ರೋಟೀನುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡುತ್ತವೆ.

ಎಳ್ಳೆಣ್ಣೆಯಿಂದ ಮಸಾಜ್ ಮಾಡಿ

ಎಳ್ಳೆಣ್ಣೆಯಿಂದ ಮಸಾಜ್ ಮಾಡಿ

ಅವಶ್ಯಕ ಎಣ್ಣೆಗಳಾದ (Essential oils) ಎಳ್ಳೆಣ್ಣೆ ಮತ್ತು ಲ್ಯಾವೆಂಡರ್ ಎಣ್ಣೆ ಸರಿಸುಮಾರು ನೀರಿನಷ್ಟೇ ತೆಳ್ಳಗಿರುವುದರಿಂದ ತಲೆಗೆ ಹಚ್ಚಿ ಮಾಲಿಶ್ ಮಾಡಿಕೊಳ್ಳುವುದು ಸುಲಭವೂ ಆರೋಗ್ಯಕರವೂ ಆಗಿದೆ. ಈ ಎಣ್ಣೆಯನ್ನು ತಲೆಯ ಚರ್ಮ ಸುಲಭವಾಗಿ ಹೀರಿಕೊಂಡು ಕೂದಲ ಬುಡಕ್ಕೆ ಉತ್ತಮ ಪೋಷಣೆ ನೀಡುತ್ತದೆ. ಇದರಿಂದ ಕೂದಲುದುರುವುದು ಕಡಿಮೆಯಾಗುತ್ತದೆ ಹಾಗೂ ಕೂದಲು ಸೊಂಪಾಗಿ ಬೆಳೆಯಲು ನೆರವಾಗುತ್ತದೆ.

ಮೊಸರು ಮತ್ತು ಮೊಟ್ಟೆಯ ಮಿಶ್ರಣ ಹಚ್ಚಿ

ಮೊಸರು ಮತ್ತು ಮೊಟ್ಟೆಯ ಮಿಶ್ರಣ ಹಚ್ಚಿ

ಸಮಪ್ರಮಾಣದಲ್ಲಿ ಮೊಟ್ಟೆ ಮತ್ತು ಮೊಸರನ್ನು ಮಿಶ್ರಣ ಮಾಡಿ ಲೇಪನವನ್ನು ತಯಾರಿಸಿ. ಇದನ್ನು ತಣ್ಣೀರಿನಿಂದ ಸ್ವಚ್ಛಗೊಳಿಸಿಕೊಂಡ ತಲೆಗೆ ಹಚ್ಚಿ ಒಣಗಲು ಬಿಡಿ. ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಬಿಟ್ಟು ತಣ್ಣೀರಿನಿಂದ ನಾಜೂಕಿನಿಂದ ತೊಳೆದುಕೊಳ್ಳಿ. ಶ್ಯಾಂಪೂ ಉಪಯೋಗಿಸಬೇಡಿ. ಇದರಿಂದ ಕೂದಲುದುರುವುದು ಕಡಿಮೆಯಾಗುವುದರ ಜೊತೆ ತಲೆಹೊಟ್ಟನ್ನು ನಿವಾರಿಸಲೂ ನೆರವಾಗುತ್ತದೆ.

ಈರುಳ್ಳಿ ರಸ ಬಳಸಿ

ಈರುಳ್ಳಿ ರಸ ಬಳಸಿ

ಈರುಳ್ಳಿ ರಸ ಕೂದಲ ಬುಡಕ್ಕೆ ಪ್ರಚೋದನೆ ನೀಡಿ ಹೊಸ ಕೂದಲು ಬೆಳೆಯಲು ನೆರವಾಗುತ್ತದೆ. ಇದಕ್ಕಾಗಿ ಎರಡು ಅಥವಾ ಮೂರು ನೀರುಳ್ಳಿಯನ್ನು ಒಂದು ಲೀಟರ್ ನೀರಿನಲ್ಲಿ ಹಾಕಿ ಸುಮಾರು ಒಂದು ಘಂಟೆ ಕಾಲ ಚಿಕ್ಕ ಉರಿಯಲ್ಲಿ ಕುದಿಸಿ. ಈ ನೀರನ್ನು ಸೋಸಿ ನೀರುಳ್ಳಿಯ ಅಂಶವನ್ನು ತೆಗೆದು ನೀರನ್ನು ತಣಿಸಿ. ಈ ನೀರಿನಿಂದ ತಲೆಕೂದಲನ್ನು ಒದ್ದೆಗೊಳಿಸಿ ಒಣಗಲು ಬಿಡಿ. ಸುಮಾರು ಒಂದು ಘಂಟೆಯ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಪ್ರತಿಬಾರಿಯೂ ಹೊಸದಾಗಿಯೇ ನೀರುಳ್ಳಿಯನ್ನು ಕುದಿಸಿದ ನೀರನ್ನು ಬಳಸಬೇಕು. ನಿನ್ನೆಯ ನೀರು ಇಂದು ಉಪಯೋಗವಾಗುವುದಿಲ್ಲ.

ಬೆಳ್ಳುಳ್ಳಿಯ ಲೇಪನ ಹಚ್ಚಿ

ಬೆಳ್ಳುಳ್ಳಿಯ ಲೇಪನ ಹಚ್ಚಿ

ಕೆಲವು ಬೆಳ್ಳುಳ್ಳಿಯ ಎಸಳುಗಳನ್ನು ಸಿಪ್ಪೆ ಸುಲಿದು ನುಣ್ಣಗೆ ಅರೆಯಿರಿ. ಈ ಲೇಪನವನ್ನು ನವಿರಾಗಿ ತಲೆಯಲ್ಲಿ ಕೂದಲಿಲ್ಲದ ಸ್ಥಳಗಳಿಗೆ ಅಥವಾ ಕೂದಲು ಉದುರಲು ಪ್ರಾರಂಭವಾಗಿರುವ ಸ್ಥಳಗಳಲ್ಲಿ ಹಚ್ಚಿ. ಇದು ಕೂದಲ ಬುಡಕ್ಕೆ ಪ್ರಚೋದನೆ ನೀಡಿ ಹೊಸ ಕೂದಲು ಬೆಳೆಯಲು ಸಹಕರಿಸುತ್ತದೆ. ಸುಮಾರು ಹದಿನೈದು ನಿಮಿಷದಿಂದ ಅರ್ಧ ಘಂಟೆ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ.

ಹಸಿರು ಟೀ ಹಚ್ಚಿ

ಹಸಿರು ಟೀ ಹಚ್ಚಿ

ಒಂದು ಕಪ್ ಬಿಸಿನೀರಿಗೆ ಒಂದು ಬ್ಯಾಗ್ ಹಸಿರು ಟೀ ಮುಳುಗಿಸಿ ಚಮಚದಿಂದ ಕಲಕಿ. ಸುಮಾರು ಎರಡರಿಂದ ಮೂರು ನಿಮಿಷ ಬಿಟ್ಟು ಚೀಲವನ್ನು ಹಿಂಡಿ ನಿವಾರಿಸಿ. ಈ ನೀರನ್ನು ಈಗ ತಣಿಯಲು ಬಿಡಿ. ಈ ನೀರನ್ನು ತಲೆಗೂದಲಿಗೆ ಹಚ್ಚಿ ನಯವಾಗಿ ಮಸಾಜ್ ಮಾಡಿ. ಸುಮಾರು ಇಪ್ಪತ್ತು ನಿಮಿಷ ಬಿಟ್ಟು ತಣ್ಣೀರು ಮತ್ತು ಸೌಮ್ಯವಾದ ಶಾಂಪೂ ಉಪಯೋಗಿಸಿ ತೊಳೆದುಕೊಳ್ಳಿ.

ಧೂಮಪಾನದಿಂದ ದೂರವಿರಿ

ಧೂಮಪಾನದಿಂದ ದೂರವಿರಿ

ಧೂಮಪಾನದ ದುಷ್ಪರಿಣಾಮಗಳಲ್ಲಿ ಕೂದಲು ಉದುರುವುದೂ ಒಂದು. ಇದು ಇರುವ ಕೂದಲನ್ನು ಹಾಳುಗೆಡವುವ ಮೂಲಕ ಕೂದಲು ಉದುರುವಿಕೆಯನ್ನು ಮತ್ತು ಬಕ್ಕತಲೆಯಾಗುವ ಸಂಭವವನ್ನು ಹೆಚ್ಚಿಸುತ್ತದೆ.

ತಲೆಸ್ನಾನಕ್ಕೆ ಸೌಮ್ಯ ಶಾಂಪೂ ಉಪಯೋಗಿಸಿ

ತಲೆಸ್ನಾನಕ್ಕೆ ಸೌಮ್ಯ ಶಾಂಪೂ ಉಪಯೋಗಿಸಿ

ತಲೆಸ್ನಾನಕ್ಕೆ ಎಂದೂ ಮೈಸೋಪನ್ನು ಉಪಯೋಗಿಸಬೇಡಿ. ಇದರಿಂದ ತಲೆಗೂದಲ ಬುಡದಲ್ಲಿರುವ ತೈಲಗಳೂ ಸೋರಿಹೋಗಿ ಕೂದಲ ಬುಡ ಸಡಿಲವಾಗುತ್ತಾ ಬರುತ್ತದೆ ಹಾಗೂ ಕೂದಲು ಸುಲಭವಾಗಿ ಉದುರುತ್ತದೆ. ಎಷ್ಟು ಸುಲಭ ಎಂದರೆ ಬೀಸುವ ಗಾಳಿಯೂ ಕೆಲವು ಕೂದಲನ್ನು ಕಿತ್ತುಬಿಡುವಷ್ಟಿರುತ್ತದೆ. ಆದ್ದರಿಂದ ತಲೆಗೂದಲಿಗಾಗಿಯೇ ಇರುವ ಸೌಮ್ಯವಾದ ಶಾಂಪೂ ಉಪಯೋಗಿಸಿ.

ಪದೇ ಪದೇ ತೊಳೆದುಕೊಳ್ಳಬೇಡಿ

ಪದೇ ಪದೇ ತೊಳೆದುಕೊಳ್ಳಬೇಡಿ

ಪ್ರತಿದಿನ ಸ್ನಾನ ಮಾಡಿದರೂ ತಲೆಸ್ನಾನವನ್ನು ಮಾತ್ರ ವಾರಕ್ಕೆರಡು ಬಾರಿ ಮಾಡಿ. ಏಕೆಂದರೆ ಪ್ರತಿಬಾರಿ ಸ್ನಾನ ಮಾಡಿದಾಗಲೂ ಕೂದಲ ಬುಡದಿಂದ ಕೊಂಚವಾದರೂ ಅವಶ್ಯಕ ಪೋಶಕಾಂಶಗಳು ಮತ್ತು ತೈಲಗಳು ಸೋರಿಹೋಗುತ್ತವೆ. ಇದನ್ನು ಕನಿಷ್ಠಗೊಳಿಸಲು ವಾರಕ್ಕೆರಡು ಬಾರಿ ಮಾತ್ರ ತಲೆಸ್ನಾನ ಮಾಡುವುದು ಉತ್ತಮ.

English summary

Best home remedies to stop hair loss in men

Hair loss has become a common issue these days. Both men and women suffer from hair loss. However, the rate and severity of hair loss is more in men. It is normal to lose 100 strands of hair per day but when it is more than this then it is a matter of concern. In earlier days hair loss was due to ageing but in today's life young people suffer from hair loss and this is increasing day by day.
X
Desktop Bottom Promotion