For Quick Alerts
ALLOW NOTIFICATIONS  
For Daily Alerts

ಮಹಿಳೆಯರ ಬೊಕ್ಕತಲೆ ಸಮಸ್ಯೆ ನಿವಾರಣೆಗೆ ಟಾಪ್ ಸಲಹೆಗಳು

|

ಸಾಧಾರಣವಾಗಿ ಬೊಕ್ಕತಲೆ ಪುರುಷರಲ್ಲಿ ಕಂಡುಬರುವ ವಿದ್ಯಮಾನವಾಗಿದೆ. ಇದಕ್ಕೆ ಖಂಡಿತವಾದ ಉತ್ತರವನ್ನು ನೀಡಲು ವೈದ್ಯವಿಜ್ಞಾನಕ್ಕೆ ಇದುವರೆಗೆ ಸಾಧ್ಯವಾಗಿಲ್ಲ. ಆದರೆ ಸ್ಥೂಲವಾಗಿ ಗಂಡಸರಲ್ಲಿರುವ ಟೆಸ್ಟೋಸ್ಟಿರೋನ್ ಎಂಬ ಹಾರ್ಮೋನು ಇದಕ್ಕೆ ಕಾರಣ ಎಂದು ನಂಬಲಾಗಿದೆ. ಅಂದರೆ ಮಹಿಳೆಯರಲ್ಲಿ ಟೆಸ್ಟೋಸ್ಟೆರೋನ್ ಇಲ್ಲದೇ ಪ್ರೊಜೆಸ್ಟರಾನ್ ಎಂಬ ಹಾರ್ಮೋನು ಇರುವುದರಿಂದ ಸಾಮಾನ್ಯವಾಗಿ ಬಕ್ಕತನ ಕಂಡುಬರುವುದಿಲ್ಲ.

ಆದರೂ ಮಧ್ಯವಯಸ್ಸು ದಾಟಿದ ಬಳಿಕ ಹಲವು ಮಹಿಳೆಯರಲ್ಲಿ ಕೂದಲು ಉದುರುವ ಸಮಸ್ಯೆ ಎದುರಾಗುತ್ತದೆ. ನಿಜಕ್ಕೂ ಹೇಳಬೇಕೆಂದರೆ ಪ್ರತಿದಿನವೂ ನಮ್ಮ ತಲೆಯಿಂದ ಸುಮಾರು ಐವತ್ತರಿಂದ ನೂರು ಕೂದಲುಗಳನ್ನು ಕಳೆದುಕೊಳ್ಳುತ್ತೇವೆ. ಆದರೆ ಉದುರಿದ ಕೂದಲ ಬುಡದಿಂದ ಹೊಸ ಕೂದಲು ಬೆಳೆಯುತ್ತದೆ. ಒಂದು ವೇಳೆ ಹಳೆಯ ಕೂದಲು ಉದುರಿದ ಬಳಿಕ ಈ ಕೂದಲ ಬುಡ ಮುಚ್ಚಿ ಹೋದರೆ? ಅಲ್ಲಿ ಬೆಳೆಯದೇ ಇರುವ ಕೂದಲು ಬಕ್ಕತನಕ್ಕೆ ಕಾರಣವಾಗುತ್ತದೆ. ವಿಚ್ಛೇದನದಿಂದ ಮಹಿಳೆಯರಲ್ಲಿ ಕೂದಲುದುರುವ ಸಮಸ್ಯೆ!

 What is female pattern baldness? Reasons and how to treat it?

ಕೆಲವೊಮ್ಮೆ ಹೊಸಕೂದಲು ಪೂರ್ಣಪ್ರಮಾಣದ ಬೆಳವಣಿಗೆ ಪಡೆಯುವ ಮೊದಲೇ ಉದುರುತ್ತದೆ. ಇದರಿಂದ ಕೂದಲು ಇನ್ನಷ್ಟು ಗಿಡ್ಡವಾಗುತ್ತದೆ. ಒಂದು ವೇಳೆ ಮುಚ್ಚಿದ್ದ ಕೂದಲ ಬುಡದಿಂದ ಕೂದಲೊಂದು ಬೆಳೆದರೂ ಅದು ಹಿಂದಿನಷ್ಟು ಆರೋಗ್ಯಕಾರಿಯಾಗಿಲ್ಲದೇ ಸಪೂರವಾಗಿ ಕಳೆಗುಂದಿರುತ್ತದೆ. ಕೆಲವೊಮ್ಮೆ ತುದಿಗಳು ಸೀಳಿರುತ್ತವೆ.

ಪುರುಷರಲ್ಲಿ ಬಕ್ಕತನ ಒಂದು ನಿಯಮದಂತೆ ವ್ಯಾಪಿಸುತ್ತಾ ಹೋದರೆ ಮಹಿಳೆಯರಲ್ಲಿ ಬೇರೆಯೇ ತರಹ ಕಂಡುಬರುತ್ತದೆ. ಬೈತಲೆಯ ಅಕ್ಕಪಕ್ಕದ ಕೂದಲುಗಳು ಹೆಚ್ಚು ಉದುರಿ ಬೈತಲೆ ಹೆಚ್ಚು ಅಗಲವಾಗುತ್ತದೆ. ನೆತ್ತಿಯ ಭಾಗದಲ್ಲಿ ದಟ್ಟವಾಗಿದ್ದ ಕೂದಲು ವಿರಳವಾಗತೊಡಗುತ್ತದೆ.

ಮಹಿಳೆಯರ ಈ ತೊಂದರೆಗೆ ಹಲವು ಕಾರಣಗಳಿವೆ
1. ಮನೆತನದ ವಂಶವಾಹಿನಿಯಿಂದ ಬರಬಹುದು.
2. ವೃದ್ಧಾಪ್ಯ
3. ದೇಹದ ಮೇಲಾದ ಶಸ್ತ್ರಚಿಕಿತ್ಸೆ ಅಥವಾ ಯಾವುದೋ ಔಷಧಿಯ ಅಡ್ಡ ಪರಿಣಾಮಗಳು
4. ರಜೋ ನಿವೃತ್ತಿ.

ಒಂದು ವೇಳೆ ಈ ತೊಂದರೆಯಿಂದ ನೀವು ಬಳಲುತ್ತಿದ್ದರೆ ಪ್ರಥಮವಾಗಿ ಚರ್ಮ ತಜ್ಞರನ್ನು ಭೇಟಿಯಾಗಿ ಇದಕ್ಕೆ ಕಾರಣಗಳನ್ನು ಕಂಡುಕೊಳ್ಳಲು ಯತ್ನಿಸಬೇಕು. ಪುರುಷರಲ್ಲಿ ಮೊದಲು ಹಣೆಯಿಂದ ಪ್ರಾರಂಭವಾಗಿ ಕ್ರಮೇಣ ಹಿಂದಕ್ಕೆ ಹೋದರೆ ಮಹಿಳೆಯರಲ್ಲಿ ಬೇರೆಯೇ ತರಹದಲ್ಲಿ ಈ ತೊಂದರೆ ಬಾಧಿಸುವುದರಿಂದ ಚರ್ಮ ತಜ್ಞರು ಇಬ್ಬರಿಗೂ ಬೇರೆ ಬೇರೆ ತರಹದ ಚಿಕಿತ್ಸೆ ನೀಡಬೇಕಾಗುತ್ತದೆ.

ದೈಹಿಕವಾಗಿ ಕೂದಲುದುರುವುದರಿಂದ ಹೆಚ್ಚಿನ ತೊಂದರೆ ಇಲ್ಲ. ಏಕೆಂದರೆ ನಮ್ಮ ದೇಹದ ಉಷ್ಣತೆಯನ್ನು ಹೊರಹಾಕಲು ಚರ್ಮದ ಮೇಲೆ ಅತಿ ನವಿರಾದ ಅತಿ ಚಿಕ್ಕ ಕೂದಲುಗಳಿವೆ. (ಸೂಕ್ಷ್ಮವಾಗಿ ಗಮನಿಸಿದರೆ ಅರೆಪಾರದರ್ಶಕವಾದ ಈ ಕೂದಲುಗಳು ಕಂಡುಬರುತ್ತವೆ). ಆದರೆ ನಮ್ಮ ಸಮಾಜ ಬಕ್ಕತಲೆಯವರನ್ನು ನಡೆಸಿಕೊಳ್ಳುವ ರೀತಿ ಭಾವನಾತ್ಮಕವಾಗಿ ಹತಾಶರನ್ನಾಗಿಸುತ್ತದೆ.

ಮಹಿಳೆಯರ ಇಂತಹ ತೊಂದರೆಗೆ ಕೆಲವು ಚಿಕಿತ್ಸೆಗಳು ಹೀಗಿವೆ.
1. ಕೂದಲನ್ನು ಗುಂಗುರಾಗಿಸುವುದರಿಂದ ಕೂದಲಿಲ್ಲದ ಸ್ಥಳವನ್ನು ಮರೆಮಾಚಬಹುದು. ಕೂದಲಿಗೆ ಕೃತಕ ಬಣ್ಣ ಹಚ್ಚುವುದು ಅಥವಾ ಕೂದಲನ್ನು ಕೂದಲಿಲ್ಲದ ಸ್ಥಳದ ಮೇಲೆ ಬರುವಂತೆ ಬೇರೆ ವಿನ್ಯಾಸದಲ್ಲಿ ಬಾಚುವುದರಿಂದ ತಾತ್ಕಾಲಿಕ ಶಮನ ಪಡೆಯಬಹುದು.
2. ತಜ್ಞ ಸಮಾಲೋಚಕರ ಸಹಾಯ ಪಡೆದು ಇದಕ್ಕೆ ಕಾರಣವನ್ನು ಹುಡುಕಿ ಸೂಕ್ತ ಚಿಕಿತ್ಸೆ ಅಳವಡಿಸಿಕೊಳ್ಳಬಹುದು.
3. ಕೃತಕ ಕೂದಲನ್ನು ಧರಿಸುವುದರ ಮೂಲಕ ಸೌಂದರ್ಯವನ್ನು ಮರಳಿ ಪಡೆಯಬಹುದು. ಆದರೆ ಇಡಿಯ ದಿನ ಧರಿಸಿರುವುದು ನೆತ್ತಿಯ ಬಿಸಿಯನ್ನು ಹೆಚ್ಚಿಸುವುದರಿಂದ ಕನಿಷ್ಟ ಕಾಲ ಮಾತ್ರ ಧರಿಸಬೇಕು.
4. ಕೃತಕ ಕೂದಲ ನೆಡುವಿಕೆಯಿಂದ ಶಮನ ಪಡೆಯಬಹುದು. ಆದರೆ ಈ ಕೂದಲು ಬೆಳೆಯುವುದಿಲ್ಲ. ಅಲ್ಲದೇ ಕೂದಲು ನೆಡಲು ಈ ಕ್ಷೇತ್ರದಲ್ಲಿ ನುರಿತ ವೃತ್ತಿನಿರತರ ಬಳಿ ಹೋಗುವುದು ಕ್ಷೇಮ. ಪ್ರತಿದಿನ ಕೂದಲು ಬಾಚುವಾಗ ತುಂಬಾ ಕಾಳಜಿ ವಹಿಸಬೇಕು.

English summary

What is female pattern baldness? Reasons and how to treat it?

One among the common variety of hair loss in women is known as female pattern baldness. Studies say that each stand of hair is engraved in cavity that is represented as a tiny hole which is also known as follicle. In females, pattern baldness takes place with the gradual thinning at the part line.
X
Desktop Bottom Promotion