For Quick Alerts
ALLOW NOTIFICATIONS  
For Daily Alerts

ನೈಸರ್ಗಿಕ ಹೇರ್ ಸ್ಟ್ರೈಟ್ನಿಂಗ್‌ಗೆ ಕೆಲ ವಿಧಾನಗಳು

By Goutham Kumar
|

ನೈಸರ್ಗಿಕವಾಗಿ ತಮಗೆ ಇರೋ ತಲೆಕೂದಲನ್ನು ನೇರವಾಗಿಸುವ ಅರ್ಥಾತ್ ಇಂದಿನ ಆಧುನಿಕ ಭಾಷೆಯಲ್ಲಿ 'ಸ್ಟ್ರೈಟ್ನಿಂಗ್' ಮಾಡಿಸಿಕೊಳ್ಳೋ ಪ್ರವೃತ್ತಿ ಇಂದಿನ ಮಹಿಳೆಯರಲ್ಲಿ, ಯುವತಿಯರಲ್ಲಿ ಹೆಚ್ಚಾಗಿ ಕಂಡುಬರ್ತಾ ಇದೆ. ಯುವತಿಯರಂತೂ ಈ ಹೇರ್ ಸ್ಟ್ರೈಟ್ನಿಂಗ್‍ಗೆ ಸಾವಿರಾರು ರೂಪಾಯಿಗಳನ್ನು ಸುರಿಸುತ್ತಿದ್ದಾರೆ. ಆದರೆ ಇದರಿಂದಾಗಿ ಕೂದಲಿಗೆ ಅಲ್ಪಮಟ್ಟಿನ ಹೊಳಪು, ಆಕಾರ ಬಂದರೂ ಕೂದಲಿನ ಆರೋಗ್ಯಕ್ಕೆ ಇದರಿಂದಾಗಿ ಬಹಳಷ್ಟು ಹಾನಿಯಿದೆ.

ಈ ಪ್ರಕ್ರಿಯೆಯಿಂದ ಕೂದಲಿನ ನೈಸರ್ಗಿಕ ಸೌಂದರ್ಯಕ್ಕೆ ಧಕ್ಕೆಯಾಗುವುದರ ಜೊತೆಗೆ ಈ ಕ್ರಿಯೆಗೆ ಬಳಸುವ ಹಾನಿಕಾರಕ ರಾಸಾಯನಿಕಗಳಿಂದಾಗಿ ಕೂದಲ ಪೋಷಣೆಗೂ ಬಹಳಷ್ಟು ತೊಂದರೆಯಾಗುತ್ತದೆ.

ಹೀಗೆ ಸಾವಿರಾರು ರೂಪಾಯಿಗಳನ್ನು ವ್ಯಯಿಸಿ, ಕೂದಲ ನೈಜ ಸೌಂದರ್ಯವನ್ನು ಹಾಳು ಮಾಡಿಕೊಳ್ಳೋ ಬದಲು, ನೈಸರ್ಗಿಕ ವಿಧಾನಗಳ ಮೂಲಕ ಹೇರ್ ಸ್ಟ್ರೈಟ್ನಿಂಗ್‌ ಮಾಡಸಿಕೊಳ್ಳೋದು ಉತ್ತಮ ಅಲ್ವಾ? ಹೌದು ಅಂತಾದ್ರೆ ಇಲ್ಲಿ ಕೊಟ್ಟಿರೋ ಕೆಲ ನೈಸರ್ಗಿಕ ವಿಧಾನಗಳನ್ನು ನೀವು ಅನುಸರಿಸಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಒಣಗಿದ ಮತ್ತು ಮಂಕಾದ ಕೂದಲಿಗೆ 9 ಮಾಸ್ಕ್‪‌ಗಳು

ಹಾಲು:

ಹಾಲು:

ಒಂದು ಸ್ಪ್ರೇ ಬಾಟಲ್‍ನಲ್ಲಿ 1/3 ಕಪ್‍ನಷ್ಟು ನೀರು ಮತ್ತು ಅಷ್ಟೇ ಪ್ರಮಾಣದಲ್ಲಿ ಹಾಲನ್ನು ಮಿಶ್ರ ಮಾಡಿಕೊಳ್ಳಿ. ಬಳಿಕ ಈ ಮಿಶ್ರಣವನ್ನು ಕೂದಲಿಗೆ ಸ್ಪ್ರೇ ಮಾಡಿಕೊಳ್ಳಿ. ಅಗಲವಾದ ಬಾಚಣಿಗೆಯಿಂದ ಕೂದಲನ್ನು ಬಾಚಿ, ಗಂಟುಗಳನ್ನು ತೊಲಗಿಸಿ, ಕೂದಲಿನ ಪ್ರತಿಯೊಂದು ಎಳೆಗೂ ಮಿಶ್ರಣ ಸರಿಯಾಗಿ ಕೋಟ್ ಆಗುವಂತೆ ನೋಡಿಕೊಳ್ಳಿ. ಸ್ನಾನಕ್ಕಿಂತ ಸುಮಾರು 1 ಗಂಟೆ ಮುಂಚೆ ಈ ರೀತಿ ಮಾಡೋದು ಉತ್ತಮ. ಬಳಿಕ ಸ್ನಾನದ ವೇಳೆ ಕೂದಲನ್ನು ಶಾಂಪೂ ಹಾಗೂ ಕಂಡೀಷನರ್‍ನಿಂದ ತೊಳೆಯಿರಿ ಅಷ್ಟೇ, ಮಿರಿಮಿರಿ ಮಿಂಚುವ ಸ್ಟ್ರೈಟ್ ಹೇರ್ ನಿಮ್ಮದಾಗುತ್ತದೆ. ಕೂದಲನ್ನು ಮತ್ತೊಮ್ಮೆ ತೊಳೆಯುವವರೆಗೆ ಕೂದಲು ಇದೇ ರೀತಿ ಇರುತ್ತದೆ.

ಹಾಲು ಮತ್ತು ಜೇನು:

ಹಾಲು ಮತ್ತು ಜೇನು:

ಕೇವಲ ಹಾಲು ಮಾತ್ರ ಉಪಯೋಗಿಸಿದರೂ ಕೂದಲನ್ನು ಸ್ಟ್ರೈಟ್ ಮಾಡಬಹುದು, ಆದ್ರೆ ಹಾಲಿನ ಜೊತೆಗೆ ಜೇನುತುಪ್ಪವನ್ನೂ ಸೇರಿಸಿದ್ರೆ ಕೂದಲಿಗೆ ಇನ್ನಷ್ಟು ಪೋಷಣೆ ದೊರಕುತ್ತದೆ. ಗುಂಗುರು ಕೂದಲನ್ನು ಈ ಮೂಲಕ ನೇರವಾಗಿಸಿ, ಮ್ಯಾನೇಜ್ ಮಾಡ್ಬಹುದು.

ಮುಲ್ತಾನಿ ಮಿಟ್ಟಿ:

ಮುಲ್ತಾನಿ ಮಿಟ್ಟಿ:

ಒಂದು ಕಪ್‍ನ ತುಂಬಾ ಮುಲ್ತಾನಿ ಮಿಟ್ಟಿಯನ್ನು ತೆಗೆದುಕೊಳ್ಳಿ. ಅದಕ್ಕೆ ಒಂದು ಮೊಟ್ಟೆ ಮತ್ತು 5 ಚಮಚದಷ್ಟು ಅಕ್ಕಿ ಹುಡಿಯನ್ನು ಸೇರಿಸಿ, ಚೆನ್ನಾಗಿ ಮಿಶ್ರ ಮಾಡಿ. ಈಗ ನಿಮ್ಮ ಕೂದಲನ್ನು ಅಗಲವಾದ ಚಾಚಣಿಗೆಯಿಂದ 2-3 ಬಾರಿ ಬಾಚಿಕೊಂಡು, ಈ ಮಿಶ್ರಣವನ್ನು ತಲೆಗೆ ಹಚ್ಚಿಕೊಳ್ಳಿ. ಸುಮಾರು 40 ನಿಮಿಷಗಳ ಕಾಲ ಕೂದಲನ್ನು ಒಣಗಲು ಬಿಟ್ಟು, ಬಳಿಕ ಶುದ್ಧವಾದ ನೀರಿನಿಂದ ತೊಳೆಯಿರಿ. ಪ್ರತಿರಾತ್ರಿ ಮಲಗೋ ಮುಂಚೆ ಈ ಮಿಶ್ರಣವನ್ನು ಹಚ್ಚಿಕೊಳ್ಳೋದ್ರಿಂದ ಸದಾ ಸ್ಟ್ರೈಟ್ ಹೇರ್ ನಿಮ್ಮದಾಗುತ್ತೆ.

ಆಲಿವ್ ಆಯಿಲ್ ಮತ್ತು ಮೊಟ್ಟೆ:

ಆಲಿವ್ ಆಯಿಲ್ ಮತ್ತು ಮೊಟ್ಟೆ:

2 ಮೊಟ್ಟೆಗಳನ್ನು ಒಡೆದು, ಸರಿಯಾಗಿ ಮಿಶ್ರ ಮಾಡಿಕೊಳ್ಳಿ. ಇದಕ್ಕೆ 1-2 ಚಮಚ ಆಲಿವ್ ಆಯಿಲ್ ಸೇರಿಸಿ, ಮತ್ತಷ್ಟು ಮಿಶ್ರ ಮಾಡಿ. ಒಂದು ಬ್ರಶ್‍ನ ಸಹಾಯದಿಂದ ಈ ಮಿಶ್ರಣವನ್ನು ತಲೆಗೆ ಹಚ್ಚಿಕೊಳ್ಳಿ. ಕೆಲ ಗಂಟೆಗಳ ಕಾಲ ಕೂದಲನ್ನು ಒಣಗಲು ಬಿಟ್ಟು, ಬಳಿಕ ಶಾಂಪೂವಿನ ಮೂಲಕ ತೊಳೆಯಿರಿ. ಇದರಿಂದ ಕೂದಲು ನೇರವಾಗುವುದರ ಜೊತೆಗೆ ಕೂದಲಿಗೆ ಉತ್ತಮ ಪೋಷಣೆಯೂ ಲಭಿಸುತ್ತದೆ.

ನಿಂಬೆ ರಸ ಮತ್ತು ತೆಂಗಿನ ಹಾಲು:

ನಿಂಬೆ ರಸ ಮತ್ತು ತೆಂಗಿನ ಹಾಲು:

ತೆಂಗಿನಕಾಯಿಯನ್ನು ತುರಿದು, ಅದರ ಹಾಲನ್ನು ತೆಗೆದು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ಈ ಹಾಲಿಗೆ ಸ್ವಲ್ಪ ಲಿಂಬೆರಸವನ್ನು ಸೇರಿಸಿ. ಈ ಮಿಶ್ರಣವು ಸ್ವಲ್ಪ ದಪ್ಪವಾಗುವವರೆಗೆ ಚೆನ್ನಾಗಿ ಮಿಶ್ರ ಮಾಡಿ. ಒಂದು ದಿನಗಳ ಕಾಲ ಈ ಮಿಶ್ರಣವನ್ನು ಫ್ರಿಡ್ಜ್‍ನಲ್ಲಿಟ್ಟು ತಂಪು ಮಾಡಿ. ಮರುದಿನ ಇದನ್ನು ತಲೆಗೆ ಹಚ್ಚಿಕೊಳ್ಳಿ, ಮತ್ತು ಬಿಸಿ ಟವೆಲ್‍ನ ಮೂಲಕ ಮಸಾಜ್ ಮಾಡಿ. ಒಂದು ಗಂಟೆ ಕಳೆದ ಬಳಿಕ ಕೂದಲನ್ನು ತೊಳೆಯಿರಿ. ವಾರದಲ್ಲಿ ಮೂರು ಬಾರಿ ಈ ರೀತಿ ಮಾಡೋದ್ರಿಂದ ಬಹಳ ಬೇಗ ಕೂದಲನ್ನು ಸ್ಟ್ರೈಟ್ ಮಾಡಿಸಿಕೊಳ್ಳಬಹುದು.

ಬಿಸಿ ತೆಂಗಿನೆಣ್ಣೆ:

ಬಿಸಿ ತೆಂಗಿನೆಣ್ಣೆ:

ಸ್ವಲ್ಪ ತೆಂಗಿನೆಣ್ಣೆಯನ್ನು ತೆಗೆದುಕೊಂಡು, ಬಿಸಿ ಮಾಡಿ ನೆತ್ತಿಗೆ ಹಚ್ಚಿಕೊಳ್ಳಿ. ತಲೆಗೆ ಒಣಗಿದ ಟವೆಲ್ ಕಟ್ಟಿಕೊಂಡು ಸುಮಾರು 20-30 ನಿಮಿಷಗಳ ಕಾಲ ತಲೆಯನ್ನು ಒಣಗಲು ಬಿಡಿ. ಬಳಿಕ ಶ್ಯಾಂಪೂ ಹಾಕಿ ಕೂದಲನ್ನು ತೊಳೆಯಿರಿ. ಬಳಿಕ ಮತ್ತೆ ಸುಮಾರು 5 ನಿಮಿಷಗಳ ಕಾಲ ಮತ್ತೆ ಟವೆಲ್‍ನಿಂದ ಮುಚ್ಚಿ. ಡ್ರೈಯರ್ ಅಥವಾ ನೈಸರ್ಗಿಕವಾಗಿ ಕೂದಲನ್ನು ಒಣಗಿಸಿ. ಹೀಗೆ ಮಾಡೋದ್ರಿಂದ ಹೊಳಪಿನ ಸ್ಟ್ರೈಟ್ ಹೇರ್ ನಿಮ್ಮದಾಗುತ್ತೆ.

English summary

How to Straighten Hair at Home Naturally

The trend of hair straightening is in, these days. Girls are spending thousands of bucks on getting their hair straight. But, ultimately they are harming the texture of their hair, and losing the nourishment because lots of chemicals used in this process, which are very harmful for their hair.
Story first published: Wednesday, April 16, 2014, 15:07 [IST]
X
Desktop Bottom Promotion