For Quick Alerts
ALLOW NOTIFICATIONS  
For Daily Alerts

ಮಹಿಳೆಯರೇ ನಿಮ್ಮ ಕೂದಲು ಉದುರುವಿಕೆಗೆ ಕಾರಣ ಏನು ಗೊತ್ತೇ?

By Arpitha Rao
|

ಕೇವಲ ಪುರುಷರಿಗೆ ಮಾತ್ರವಲ್ಲ, ಮಹಿಳೆಯರಿಗೂ ಕೂಡ ಕೂದಲು ಉದುರುತ್ತದೆ. ಉದುರುವ ರೀತಿ ಬೇರೆಯಾಗಿರಬಹುದು, ಮಹಿಳೆಯರಿಗೆ ಬಹುಷಃ ಕೂದಲ ಸಾಂದ್ರತೆ ಕಡಿಮೆ ಆಗುವುದರ ಮೂಲಕ ಕೂದಲು ಉದುರುವುದರ ಬಗ್ಗೆ ತಿಳಿಯುತ್ತದೆ.

ಸರಿಯಾದ ರೀತಿಯಲ್ಲಿ ಇದಕ್ಕೆ ಚಿಕಿತ್ಸೆ ಪಡೆಯಲು ಕೂದಲು ಉದುರುತ್ತಿರುವ ಕಾರಣವನ್ನು ಮೊದಲು ಕಂಡು ಹಿಡಿದುಕೊಳ್ಳಬೇಕು. ಯಾವ ರೀತಿ ಕೂದಲು ಹಾನಿಗೊಳಗಾಗುತ್ತಿದೆ ಎಂಬುದರ ಮೇಲೆ ಸರಿಯಾದ ಪರಿಹಾರವನ್ನು ಕಂಡುಕೊಳ್ಳಬಹುದು. ನಾವು ಮಹಿಳೆಯರಲ್ಲಿ ಕೂದಲು ಉದುರುವಿಕೆಗೆ ಹತ್ತು ಕಾರಣಗಳನ್ನು ಇಲ್ಲಿ ನೀಡಿದ್ದೇವೆ.

ನಿಮ್ಮ ಕೂದಲೂ ಪ್ರೋಟೀನ್ ಬೇಕೆಂದು ಹೇಳುತ್ತೆ ಗೊತ್ತಾ?

ಕಳಪೆ ಕೂದಲ ಸಾಧನಗಳು
ಹೇರ್ ಸ್ಟ್ರೈಟನರ್, ಹೇರ್ ಕರ್ಲಿಂಗ್ ಐರನ್ ಅಥವಾ ಇತರ ಕೂದಲು ಉತ್ಪನ್ನಗಳು, ಜೆಲ್, ಸ್ಪ್ರೇ, ಇವುಗಳ ಅಧಿಕ ಬಳಕೆಯಿಂದ ಕೂದಲು ಹಾನಿಗೊಳಗಾಗುತ್ತದೆ. ಕೂದಲನ್ನು ಗಟ್ಟಿಯಾಗಿ ಕಟ್ಟುವುದು, ಒಗ್ಗದ ಹಣಿಗೆ ಬಳಸುವುದು, ಬೈತಲೆ ಹೆಚ್ಚು ಒಂದೇ ಕಡೆ ತೆಗೆಯುವುದು ಇದು ಕೂದಲು ಹೆಚ್ಚು ಉದುರಲು ಕಾರಣವಾಗುತ್ತದೆ.

Hair loss in women – which of these 10 reasons are causing yours?

PCOS
ಹಾರ್ಮೊನಿನ ಅಸಮತೋಲನದ ಕಾರಣದಿಂದಾಗಿ ಕೂಡ ಕೂದಲು ಹಾನಿಗೊಳಗಾಗುತ್ತದೆ.ಆಂಡ್ರೋಜೆನ್ಗಳ ಹೆಚ್ಚು ಸ್ರವಿಕೆಯಿಂದಾಗಿ ಸಿಸ್ಟ್ ಸಂಭವಿಸಿ ಅದು ಕೂಡ ಕೂದಲ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು.ನಿಮ್ಮ ದೇಹದಲ್ಲಿ ಹೆಚ್ಚು ಕೂದಲು ಕಾಣಿಸಿಕೊಳ್ಳಲಾರಂಭಿಸುತ್ತದೆ ಆದರೆ ನೆತ್ತಿಯಿಂದ ಕೂದಲು ಉದುರುತ್ತದೆ.

ಅನೀಮಿಯ
ಇದು ಕಬ್ಬಿಣದ ಅಂಶದ ಕೊರತೆಯಿಂದ ಕಾಣಿಸಿಕೊಳ್ಳುತ್ತದೆ. ಸಾಕಷ್ಟು ಮಹಿಳೆಯರು ಅಧಿಕ ಋತುಸ್ರಾವ ಮತ್ತು ಅಸಮರ್ಪಕ ಫಾಲಿಕ್ ಆಸಿಡ್ ನಿಂದಾಗಿ ಅನೀಮಿಯಕ್ಕೆ ಒಳಗಾಗುತ್ತಾರೆ. ಇದರಿಂದಾಗಿ ಹಿಮೊಗ್ಲೋಬಿನ್ ಪ್ರಮಾಣ ಕಡಿಮೆಯಾಗಿ ಆಮ್ಲಜನಕದ ಕೊರತೆ ಉಂಟಾಗುತ್ತದೆ. ಆಮ್ಲಜನಕ ಸರಿಯಾಗಿ ಸಿಗದಿದ್ದಾಗ ಕೂದಲು ದುರ್ಬಲಗೊಳ್ಳಲು ಆರಂಭಿಸುತ್ತದೆ ಇದರಿಂದ ಕೂದಲು ಸುಲಭವಾಗಿ ಕಿತ್ತು ಬರುತ್ತದೆ.

ರಜೋನಿವೃತ್ತಿ (ಮೆನೋಪಾಸ್)
ಮಹಿಳೆ ಮೆನೋಪಾಸ್ ಗೆ ಬಂದಾಗ ದೇಹದಲ್ಲಿ ಸಾಕಷ್ಟು ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ ಅವುಗಳಲ್ಲಿ ಕೂದಲು ಉದುರುವಿಕೆಯೂ ಒಂದು. ದೇಹದಲ್ಲಿ ಎಸ್ತ್ರೋಜೆನ್ ಪ್ರಮಾಣ ಕಡಿಮೆ ಆಗುವುದೇ ಇದಕ್ಕೆ ಕಾರಣ. ಈ ಸಮಯದಲ್ಲಿ ಕಾಳಜಿ ತೆಗೆದುಕೊಳ್ಳದಿದ್ದರೆ ಅದು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಈ ಸಮಯದಲ್ಲಿ ಸರಿಯಾದ ಆಹಾರ ತೆಗೆದುಕೊಳ್ಳುವುದರ ಜೊತೆಗೆ ಶಾಂಪೂ ಬಳಕೆ ಕೂಡ ಕಡಿಮೆ ಮಾಡಬೇಕು.

ಕಿತ್ತಳೆ ಹಣ್ಣಿನಿಂದ ಕೇಶ ಸೌಂದರ್ಯ

ಪ್ರಸವದ ನಂತರ
ಸಾಕಷ್ಟು ಮಹಿಳೆಯರಿಗೆ ಪ್ರಸವದ ನಂತರ ಕೂದಲು ಉದುರುವುದು ಕಂಡು ಬರುತ್ತದೆ. ಗರ್ಭಿಣಿ ಆಗಿದ್ದಾಗ ದೇಹದಲ್ಲಿ ಈಸ್ಟ್ರೋಜೆನ್ ಪ್ರಮಾಣ ಅಧಿಕವಾಗಿರುತ್ತದೆ ಇದರಿಂದ ಅಧಿಕ ಕೂದಲು ಹುಟ್ಟುತ್ತವೆ.ಆದರೆ ಒಮ್ಮೆ ಮಗು ಹುಟ್ಟಿದ ನಂತರ ಹಾರ್ಮೋನುಗಳು ಸಾಮಾನ್ಯ ಸ್ಥಿತಿಗೆ ಹೋಗುತ್ತವೆ ಇದರಿಂದ ಕೂದಲು ಉದುರುತ್ತದೆ. ಆದರೆ ಇದು ಸ್ವಲ್ಪ ದಿನದ ನಂತರ ಸಾಮಾನ್ಯ ಸ್ಥಿತಿಗೆ ಮರಳುತ್ತದೆ.

ಪ್ರೋಟಿನ್ ಕೊರತೆ
ನಮ್ಮ ಕೂದಲು ಕೆರೋಟಿನ್ ಎಂಬ ಪೌಷ್ಟಿಕತೆಯನ್ನು ಒಳಗೊಂಡಿರುತ್ತದೆ. ನಾವು ಪ್ರೋಟಿನ್ ಅಧಿಕವಾಗಿರುವ ಆಹಾರವನ್ನು ತೆಗೆದುಕೊಳ್ಳದಿದ್ದಾಗ ಕೂದಲು ಉದುರಲು ಪ್ರಾರಂಭವಾಗುತ್ತದೆ. ಇದು ಕೂದಲನ್ನು ದುರ್ಬಲಗೊಳಿಸಿ ಅಕಾಲಿಕವಾಗಿ ಉದುರುವುದಕ್ಕೆ ಕಾರಣವಾಗುತ್ತದೆ.

ಔಷಧಗಳು
ಮಹಿಳೆಯರು ಜನನ ನಿಯಂತ್ರಣ ಮಾತ್ರೆ ತೆಗೆದುಕೊಳ್ಳುವುದು ಕೂಡ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ.ಇದಲ್ಲದೆ ಹಾರ್ಮೊನಿನ ಥೆರಪಿ ಅಥವಾ ಮಾತ್ರೆಗಳು ಕೂಡ ಅಡ್ಡ ಪರಿಣಾಮ ಬೀರುತ್ತವೆ.ಕಿಮೊಥೆರಪಿ ಕೂಡ ಕೂದಲು ಉದುರುವಂತೆ ಅಡ್ಡ ಪರಿಣಾಮ ಉಂಟುಮಾಡುತ್ತದೆ.

ತೂಕ ಕಳೆದುಕೊಳ್ಳುವಿಕೆ
ಡಯೆಟ್ ಮಾಡುವುದು ಮತ್ತು ಒಂದೇ ಬಾರಿಗೆ ಸಾಕಷ್ಟು ತೂಕ ಕಳೆದುಕೊಳ್ಳುವುದು, ಇದು ಕೂದಲ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಪೋಷಕಾಂಶಗಳನ್ನು ಒಳಗೊಂಡ ಆಹಾರವನ್ನು ತೆಗೆದುಕೊಳ್ಳದೇ ತೂಕವನ್ನು ಕಡಿಮೆ ಮಾಡಿಕೊಳ್ಳುವ ಪ್ರಯತ್ನ ಮಾಡುವುದರ ಅಡ್ಡ ಪರಿಣಾಮವಾಗಿ ಕೂದಲು ಅಧಿಕವಾಗಿ ಉದುರಲು ಪ್ರಾರಂಭವಾಗಬಹುದು.

ವೈದ್ಯಕೀಯ ಕಾಯಿಲೆಗಳಾದ ಥೈರಾಯಿಡ್ ಮತ್ತು ಸ್ವರಕ್ಷಿತ ರೋಗ ಥೈರಾಯ್ಡ್ ನಲ್ಲಿ ಸ್ರವಿಸುವ ಟ್ರೈಅಯಡೋಥೈರೋನೀನ್ ಮತ್ತು ಥೈರಾಕ್ಸಿನ್ ಹಾರ್ಮೋನ್ ನಮ್ಮ ದೇಹದ ಬೆಳವಣಿಗೆಗೆ ಮುಖ್ಯ ಕಾರಣವಾಗಿದೆ. ಒಬ್ಬ ವ್ಯಕ್ತಿ ಹೈಪೋ ಥೈರಾಯಿಡ್ ಅಥವಾ ಹೈಪರ್ ಥೈರಾಯಿಡ್ ನಿಂದ ಬಳಲುತ್ತಿದ್ದರೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದಿದ್ದಲ್ಲಿ ತೊಂದರೆ ಉಂಟು ಮಾಡುತ್ತವೆ ಇದು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಕೂದಲು ಉದುರುವುದು ನಮ್ಮ ದೇಹದಲ್ಲಾಗುವ ಸಾಕಷ್ಟು ಬದಲಾವಣೆಗಳ ಕಾರಣವಾಗಿದೆ.ಸ್ವರಕ್ಷಿತ ರೋಗವು(autoimmune disease) ನಮ್ಮ ದೇಹದ ವಿವಿಧ ಜೀವಕೋಶಗಳು ಮತ್ತು ಅಂಗಾಂಶಗಳ ವಿರುದ್ಧ ಪ್ರತಿಕಾಯಗಳನ್ನು ಸೃಷ್ಟಿಸುತ್ತದೆ.ಇವುಗಳ ಪರಿಣಾಮವಾಗಿ ಕೂದಲು ಉದುರುತ್ತವೆ.

ಹದಿಹರೆಯದವರಿಗಾಗಿ 7 ಸೌಂದರ್ಯ ರಹಸ್ಯಗಳು

ಯಾವುದೇ ತೀವ್ರ ವೈದ್ಯಕೀಯ ಪರಿಸ್ಥಿತಿಗಳು
ಮಧುಮೇಹವೂ ಕೂಡ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ.ಮಧುಮೇಹ ದೇಹದ ರಕ್ತಪರಿಚಲನಾ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ.ಇದರಿಂದಾಗಿ ಪೌಷ್ಟಿಕಾಂಶ ಮತ್ತು ಆಮ್ಲಜನಕ ಕಡಿಮೆ ಪ್ರಮಾಣದಲ್ಲಿ ನೆತ್ತಿ ಮತ್ತು ಕಾಲನ್ನು ತಲುಪುತ್ತದೆ.ಮಧುಮೇಹಿ ರೋಗಿಗಳಿಗೆ ನೆತ್ತಿಯ ಭಾಗಕ್ಕೆ ರಕ್ತಪರಿಚಲನೆ ಕಡಿಮೆ ಪ್ರಮಾಣದಲ್ಲಿ ಆಗುವುದರಿಂದ ಕೂದಲು ಉದುರಲು ಪ್ರಾರಂಭವಾಗುತ್ತದೆ.ಸೋರಿಯಾಸಿಯ್ ಎಂಬುದು ಒಂದು ಚರ್ಮ ರೋಗ ಇದು ನೆತ್ತಿ ಮತ್ತು ಕೂದಲಿನ ಮೇಲೆ ಕೆಟ್ಟ ಪರಿಣಾಮ ಬೀರಿ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ.

English summary

Hair loss in women – which of these 10 reasons are causing yours?

Not just men, women too suffer from hair loss. While men may lose hair in a different pattern, women mostly complain of decreasing density of hair, of parting showing through increasingly, receding hair line or of a bald patch.
Story first published: Tuesday, June 10, 2014, 13:14 [IST]
X
Desktop Bottom Promotion