For Quick Alerts
ALLOW NOTIFICATIONS  
For Daily Alerts

ಕೂದಲಿನ ಸಮಸ್ಯೆಗೆ ತಯಾರಿಸಿ ಎಗ್ ಹೇರ್ ಪ್ಯಾಕ್!

By Poornima heggade
|

ಕೇವಲ ಬೆಳಗಿನ ಉಪಹಾರಕ್ಕೆ ಅಥವಾ ದಿನದ ಯಾವುದೇ ಸಮಯದಲ್ಲಾದರೂ ತಿನ್ನಲು ಆಮ್ಲೆಟ್ ತಯಾರಿಸಲು ಮೊಟ್ಟೆಯನ್ನು ಬಳಸುವುದು ಸಾಮಾನ್ಯ. ಆದರೆ ಇವು ನಿಮ್ಮ ಕೂದಲಿನ ಸೌಂದರ್ಯ ವರ್ಧಕದಂತೆಯೂ ಕೆಲಸ ಮಾಡಬಹುದು ಎಂದರೆ ನಂಬುತ್ತೀರೆ? ಖಂಡಿತ ನಂಬಲೇ ಬೇಕು. ಏಕೆಂದರೆ ಇದರಲ್ಲಿರುವ ಸಮೃದ್ಧವಾದ ಪ್ರೋಟೀನ್, ವಿಟಮಿನ್, ಅಗತ್ಯ ಮೇದಾಮ್ಲಗಳು ಮತ್ತು ಆಂಟಿ ಆಕ್ಸಿಡೆಂಟ್ಸ್‌ಗಳು ನಿಮ್ಮ ಕೂದಲಿನ ವಿವಿಧ ಸಮಸ್ಯೆಗಳನ್ನು ಹೋಗಲಾಡಿಸಲು ಮತ್ತು ರೇಷ್ಮೆಯಂತಹ ಮತ್ತು ಹೊಳೆಯುವ ಕೂದಲನ್ನು ನೀಡಲು ಸಹಕಾರಿಯಾಗಿವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸಾಂಪ್ರಾಯಿಕ ಧಿರಿಸಿಗೆ ಅತ್ಯುತ್ತಮ ಕೇಶವಿನ್ಯಾಸ

ಮೊಟ್ಟೆಗಳಲ್ಲಿರುವ ವಿವಿಧ ಅತ್ಯುತ್ತಮ ಅಂಶಗಳು, ಒಣ ಕೂದಲು, ಕೂದಲು ಉದುರುವಿಕೆ, ಶುಷ್ಕ ನೆತ್ತಿ, ತಲೆಹೊಟ್ಟು ಮೊದಲಾದ ಸಮಸ್ಯೆಗಳ ವಿರುದ್ಧ ಹೋರಾಡಿ ನಿಮ್ಮ ಕೂದಲಿನ ಹೊಳಪನ್ನು ಹೆಚ್ಚಿಸುತ್ತವೆ. ಜೊತೆಗೆ ಇದರಲ್ಲಿರುವ ಅಗತ್ಯ ಮೇದಾಮ್ಲಗಳು ಕೂದಲನ್ನು ಹೊರ ಹೊದಿಕೆ/ ಕಿರುಚೀಲಗಳಂತೆ ಪೋಷಣೆಯನ್ನು ಮಾಡುತ್ತವೆ.

Beat hair problems with these home-made egg hair packs

ಮೊಟ್ಟೆಯಲ್ಲಿರುವ ಸಮೃದ್ಧ ಹಳದಿ ಬಣ್ಣಕ್ಕೆ ಕಾರಣವಾದ ಕ್ಸಾಂಥೋಫಿಲ್ ಅಥವಾ ಆಂಟಿಆಕ್ಸಿಡೆಂಟ್ಸ್ (ಉತ್ಕರ್ಷಣ) ನೆತ್ತಿಗೆ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸಲು ಮತ್ತು ನೆತ್ತಿತ ಒರಟು ಹೋಗಲಾಡಿಸಲು ಮತ್ತು ಒಡೆಯುವ ಕೂದಲಿಗೆ ಚಿಕಿತ್ಸೆಯನ್ನು ನೀಡಲು ಸಹಾಯಕವಾಗಿದೆ. ಕೊಲೆಸ್ಟ್ರಾಲ್, ಅಗತ್ಯವಾದ ಅಂಶಗಳನ್ನು ಹೀರಿಕೊಂಡು ಕೂದಲಿನ ಬೆಳವಣಿಗೆ ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ.

ಕೂದಲಿನ ಆರೈಕೆಗಾಗಿ ಮೊಟ್ಟೆಯನ್ನು ಬಳಸಿ ತಯಾರಿಸಬಹುದಾದ ಕೆಲವು ಮನೆಮದ್ದುಗಳನ್ನು ಇಲ್ಲಿ ನೀಡಲಾಗಿದೆ. ಪ್ರಯತ್ನಿಸಿ, ಪರಿಣಾಮವನ್ನು ನೀವೇ ಕಾಣಿರಿ!

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಪುರುಷರೇ, ಬೇಸಿಗೆಯಲ್ಲಿ ನಿಮ್ಮ ಕೂದಲಿನ ಬಗ್ಗೆ ಎಚ್ಚರ

ಕೂದಲು ಬೆಳವಣಿಗೆಗೆ ತಳಪಾಯ / ಚಾಲನೆ:
ಒಂದು ಮೊಟ್ಟೆಯ ಬಿಳಿ ಭಾಗದೊಂದಿಗೆ ಒಂದು ಟೀ ಚಮಚ ಆಲಿವ್ ಎಣ್ಣೆಯನ್ನು ಮಿಶ್ರಣ ಮಾಡಿ. ಈ ಮಿಶ್ರಣ ಮಾಡಿದ ಪೇಸ್ಟ್ ನ್ನು ನೆತ್ತಿಯ ಮತ್ತು ಕೂದಲಿನ ಭಾಗಕ್ಕೆ ಚೆನ್ನಾಗಿ ಹಚ್ಚಿ. 15 ರಿಂದ 20 ನಿಮಿಷಗಳ ಕಾಲ ಅದನ್ನು ಹಾಗೆಯೇ ಬಿಟ್ಟು ನಂತರ ತಂಪಾದ ನೀರು ಮತ್ತು ಸೌಮ್ಯ ಶಾಂಪೂ ಬಳಸಿ ಕೂದಲನ್ನು ಚೆನ್ನಾಗಿ ತೊಳೆಯಿರಿ. (ಓದಿ: ಕೂದಲುದುರುವಿಕೆಗೆ ಪರಿಣಾಮಕಾರಿ ಮನೆಯ ಮದ್ದುಗಳು)

ರೇಷ್ಮೆಯಂತಹ ಕೂದಲಿಗಾಗಿ:
ಒಂದು ಲೋಟ ಮೊಸರನ್ನು ತೆಗೆದುಕೊಳ್ಳಿ ( ನಿಮ್ಮ ಕೂದಲಿನ ಉದ್ದಕ್ಕೆ ತಕ್ಕ ಹಾಗೆ ಮೊಸರಿನ ಪ್ರಮಾಣವನ್ನು ಆಯ್ಕೆ ಮಾಡಿಕೊಳ್ಳಬಹುದು) ಇದನ್ನು ಮೊಟ್ಟೆಯ ಲೋಳೆಯೊಂದಿಗೆ ಸೇರಿಸಿ. ಇದನ್ನು ಚೆನ್ನಾಗಿ ಮಿಶ್ರಣ ಮಾಡಿ ನಿಮ್ಮ ಕೂದಲಿಗೆ ಹಚ್ಚಿ. ಕನಿಷ್ಠ 20 ನಿಮಿಷಗಳ ಕಾಲ ಇರಿಸಿ ಮತ್ತು ನಂತರ ವಾಸನೆ ತೊಡೆದುಹಾಕಲು ತಣ್ಣೀರಿನಲ್ಲಿ ಚೆನ್ಣಾಗಿ ಕೂದಲನ್ನು ತೊಳೆಯಿರಿ.

ಉತ್ತಮ ಕೂದಲಿಗಾಗಿ:
ಒಂದು ಬಟ್ಟಲಿನಲ್ಲಿ ಮೊಟ್ಟೆಯ ಲೋಳೆ ಸುರಿಯಿರಿ ಮತ್ತು ಒಂದು ಚಮಚ ಆಲಿವ್ ತೈಲವನ್ನು ಸೇರಿಸಿ. ಇದು ಸಂಪೂರ್ಣವಾಗಿ ಹದವಾಗುವವರೆಗೆ ಮಿಶ್ರಣ ಮಾಡಿ. ನಂತರ ಈ ಮಿಶ್ರಣವನ್ನು ದ್ರವರೂಪಕ್ಕೆ ತರಲು ಉಗುರು ಬೆಚ್ಚಗಿನ ನೀರನ್ನು ಸೇರಿಸಿ. ಕೂದಲನ್ನು ತೊಳೆದ ನಂತರ, ಈ ಕಂಡೀಶನರ್ ನ್ನು ಕೂದಲಿಗೆ ಅನ್ವಯಿಸಿ. ಕೆಲವು ಸಮಯದವರೆಗೆ ಹಾಗೇಯೇ ಬಿಟ್ಟು ನಂತರ ಕೂದಲನ್ನು ತೊಳೆಯಿರಿ. ( ಓದಿ : ಈ ಸಲಹೆಗಳಿಂದ ಪಡೆಯಿರಿ ಮೃಧುವಾದ ಫ್ರೀಜಿ ಕೂದಲು)

ಹಾನಿಗೊಳಗಾದ ಕೂದಲಿಗೆ:
ಒಂದು ಬಟ್ಟಲಿನಲ್ಲಿ ಒಂದು ಮೊಟ್ಟೆಯ ಲೋಳೆಯನ್ನು ತೆಗೆದುಕೊಳ್ಳಿ. ಒಂದು ಚಮಚ ಜೇನು, ಒಂದು ಚಮಚ ಮೊಸರು ಮತ್ತು ಅರ್ಧ ಚಮಚ ತೆಂಗಿನ ಎಣ್ಣೆ ಅಥವಾ ಬಾದಾಮಿ ಎಣ್ಣೆಯನ್ನು ಇದಕ್ಕೆ ಸೇರಿಸಿ. ಈ ಮಿಶ್ರಣವನ್ನು ನಿಮ್ಮ ಕೂದಲು ಮೇಲೆ ಲೇಪಿಸಿ. ಎರಡು ಗಂಟೆಗಳ ಕಾಲ ಹಾಗೇಯೇ ಬಿಟ್ಟು ನಂತರ ಕೂದಲನ್ನು ತೊಳೆಯಿರಿ.

ಈ ಮೊಟ್ಟೆಯ ಕಂಡೀಶನರ್ ಪ್ಯಾಕ್ ಕೂದಲಿಗೆ ಲೇಪಿಸಿದ ಮೇಲೆ ಉಗುರು ಬೆಚ್ಚಗಿನ ನೀರಿನಲ್ಲೇ ತೊಳೆಯಿರಿ. ಏಕೆಂದರೆ ಮೊಟ್ಟೆಗಳಲ್ಲಿ ಶಾಖ ಹೆಪ್ಪುಗಟ್ಟಿಸುವ (ಜಿಡ್ಡಿನ ಅಂಶ) ಪ್ರೋಟೀನ್ ಅಂಶಗಳಿರುತ್ತವೆ. ಆದ್ದರಿಂದ ಬಿಸಿ ನೀರು ಬಳಸಿದರೆ ಕೂದಲು ಸ್ವಚ್ಛವಾಗುವುದು ಕಷ್ಟ.

English summary

Beat hair problems with these home-made egg hair packs

Don’t just use eggs to make omelettes for breakfast. They can very well come in handy as a beauty product for your hair. Rich in protein, vitamins, essential fatty acids and antioxidants,
Story first published: Saturday, March 29, 2014, 16:49 [IST]
X
Desktop Bottom Promotion