ನಿಮ್ಮ ಕೂದಲಿಗೆ ತೆಂಗಿನೆಣ್ಣೆ ಒಳ್ಳೆಯದು ಏಕೆ ಗೊತ್ತೇ?

Posted By:
Subscribe to Boldsky

ನೀವು ಟಿವಿಯಲ್ಲಿ ಬರುವ ಜಾಹೀರಾತಿನಲ್ಲಿ ನೋಡಿರಬಹುದು ಕೂದಲಿಗೆ ತೆಂಗಿನೆಣ್ಣೆ ಒಳ್ಳೆಯದು ಎಂಬುದನ್ನು ತೋರಿಸುತ್ತಿರುತ್ತಾರೆ. ಜಾಹೀರಾತಿನಲ್ಲಿ ಬರುವ ಈ ಅಂಶ ನಿಜವಾಗಿಯೂ ಸತ್ಯವಾದುದು. ನಿಮ್ಮ ಕೂದಲಿಗೆ ಅಗತ್ಯವಾಗಿರುವ ಪೋಷಕಾಂಶಗಳನ್ನು ನೀಡುವಲ್ಲಿ ತೆಂಗೆನೆಣ್ಣೆಯ ಪಾತ್ರ ಹಿರಿದು.

ಸಾಂಪ್ರಾಯಿಕ ಧಿರಿಸಿಗೆ ಅತ್ಯುತ್ತಮ ಕೇಶವಿನ್ಯಾಸ

ತೆಂಗಿನ ಎಣ್ಣೆ ಕೂದಲನ್ನು ಸುಂದರವಾಗಿ ಮಾಡುವುದರಲ್ಲಿ ಇರುವ ಕೆಲವೇ ಎಣ್ಣೆಗಳಲ್ಲಿ ಒಂದು.ಏಕೆಂದರೆ ಇದು ಕೂದಲ ರಚನೆಯನ್ನು ಸುಲಭಗೊಳಿಸುತ್ತದೆ. ಕೂದಲಿಗೆ ಶ್ಯಾಂಪೂ ಬಳಸುವ ಮೊದಲು ಈ ಎಣ್ಣೆಯನ್ನು ಬಳಸಿ.

ಒಂದು ಕೈತುಂಬಾ ಎಣ್ಣೆ ಹಾಕಿ ಅದನ್ನು ನೆತ್ತಿಯ ಮೇಲೆ ಹಾಕಿ ನಿಧಾನವಾಗಿ ಮಸಾಜ್ ಮಾಡಿ ಮತ್ತು ಒಂದು ಗಂಟೆಯ ನಂತರ ತೊಳೆಯಿರಿ. ಹಾಗೆ ಮಾಡಿದಲ್ಲಿ ಹಿಂದೆಂದೂ ಕಾಣದ ಹೊಳೆಯುವ ಮೃದುವಾದ ಕೂದಲು ನಿಮ್ಮದಾಗುವುದರಲ್ಲಿ ಅನುಮಾನ ಬೇಡ.

ಕೈಯಲ್ಲಿ ಎಣ್ಣೆ ಹಾಕಿಕೊಂಡು ನೆತ್ತಿಗೆ ಹಾಕಿ ಪ್ರತಿದಿನ ಸ್ವಲ್ಪ ಹೊತ್ತು ಮಸಾಜ್ ಮಾಡಿ.ಹೀಗೆ ಮಾಡಿದಲ್ಲಿ ಖಂಡಿತವಾಗಿ ಬದಲಾವಣೆಯನ್ನು ಕಾಣುತ್ತೀರಿ. ಇದು ಕೂದಲಿನ ಎಲ್ಲಾ ಸಮಸ್ಯೆಗಳನ್ನು ದೂರ ಮಾಡುವ ಚಮತ್ಕಾರೀ ಅಂಶಗಳನ್ನು ಹೊಂದಿದೆ. ನಿಮ್ಮ ಕೂದಲಿಗೆ ತೆಂಗಿನೆಣ್ಣೆ ಏಕೆ ಒಳ್ಳೆಯದು ಎಂಬುದನ್ನು ಕೆಳಗಿನ ಮಾಹಿತಿಗಳ ಮೂಲಕ ತಿಳಿಯೋಣ.

ಮೊಸರಿನಿಂದ ನಿಮ್ಮ ಕೂದಲ ಹೊಳಪು ಹೆಚ್ಚಿಸಿ!

ಸಿಕ್ಕಾದ ಕೂದಲಿಗೆ:

ಸಿಕ್ಕಾದ ಕೂದಲಿಗೆ:

ನಿಮ್ಮ ಕೂದಲು ಸಿಕ್ಕು ಸಿಕ್ಕಾಗಿದ್ದು ಗಂಟಾಗಿದ್ದರೆ ಇದನ್ನು ಬಿಡಿಸಲು ತೆಂಗಿನೆಣ್ಣೆಯನ್ನು ಪ್ರತಿ ದಿನ ಕೂದಲಿಗೆ ಹಚ್ಚಿ. ಇದು ಕೂದಲಿನ ಸಿಕ್ಕಿನ ಗಂಟನ್ನು ಬಿಡಿಸುತ್ತದೆ, ಜೊತೆಗೆ ಕೂದಲು ಇನ್ನಷ್ಟು ಹೊಳೆಯುವಂತೆ ಮಾಡುತ್ತದೆ.

ಕೂದಲಿನ ಬುಡವನ್ನು ದೃಢಗೊಳಿಸುತ್ತದೆ:

ಕೂದಲಿನ ಬುಡವನ್ನು ದೃಢಗೊಳಿಸುತ್ತದೆ:

ನಿಮ್ಮ ಒಣ ಮತ್ತು ಬಲವಿಲ್ಲದ ಕೂದಲಿನ ಬುಡವನ್ನು ಸದೃಢಗೊಳಿಸಲು ತೆಂಗಿನೆಣ್ಣೆ ಅತೀ ಅಗತ್ಯ. ಇದು ಬುಡವನ್ನು ಬಲಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ.

ಕೂದಲ ಹಾನಿ ತಡೆಗಟ್ಟುತ್ತದೆ:

ಕೂದಲ ಹಾನಿ ತಡೆಗಟ್ಟುತ್ತದೆ:

ಕೂದಲುದುರುವ ಸಮಸ್ಯೆ ಸಾಮಾನ್ಯವಾಗಿ ಎಲ್ಲಾ ವಯಸ್ಸಿನವರಿಗೆ ಇರುವ ಸಮಸ್ಯೆ. ನಿಮ್ಮ ಕೂದಲಿನ ಬುಡ ಹಾಗೂ ಚಿಪ್ಪಿಗೆ ತೆಂಗಿನೆಣ್ಣೆಯನ್ನು ಹಚ್ಚುವುದರಿಂದ ನಿಮ್ಮ ಕೂದಲುದುರುವ ಸಮಸ್ಯೆ ಮಾಯವಾಗುತ್ತದೆ.

ಡ್ಯಾಂಡ್ರಫ್ ನಿವಾರಣೆ:

ಡ್ಯಾಂಡ್ರಫ್ ನಿವಾರಣೆ:

ಡ್ಯಾಂಡ್ರಫ್ ಅನ್ನು ನಿವಾರಿಸುವ ಸಾಮರ್ಥ್ಯ ತೆಂಗಿನೆಣ್ಣೆಗಿದೆ. ವಾರಕ್ಕೊಮ್ಮೆ ತಲೆಯ ಬುಡಕ್ಕೆ ತೆಂಗಿನೆಣ್ಣೆಯನ್ನು ಹಚ್ಚಿ. ಈ ಸಮಸ್ಯೆ ಒಂದು ವಾರದಲ್ಲಿ ದೂರ ಸರಿಯುತ್ತದೆ.

ಕೂದಲ ಹೊಳಪಿಗೆ:

ಕೂದಲ ಹೊಳಪಿಗೆ:

ನಿಮ್ಮ ಕೂದಲಿಗೆ ತೆಂಗಿನೆಣ್ಣೆ ಏಕೆ ಉತ್ತಮ ಎಂಬುದಕ್ಕೆ ಕಾರಣ ಅದು ನಿಮ್ಮ ಕೂದಲಿಗೆ ನೀಡುವ ಹೊಳಪಾಗಿದೆ. ರಾಸಾಯನಿಕ ಉತ್ಪನ್ನಗಳ ಹಾನಿಯಿಂದ ಉಂಟಾದ ಸಮಸ್ಯೆಗಳಿಂದ ನಿಮ್ಮ ಕೂದಲಿಗೆ ರಕ್ಷಣೆ ದೊರೆಯುತ್ತದೆ.

English summary

5 Reasons Coconut Oil Is Good For Hair

You might have seen tons of advertisements on television stating that coconut oil is good for your hair. Though you might have ignored that boring and repeated advertisement like a million times, you should have at least once paid attention to what they are actually advising you on.
Story first published: Wednesday, May 14, 2014, 12:29 [IST]
Please Wait while comments are loading...
Subscribe Newsletter