For Quick Alerts
ALLOW NOTIFICATIONS  
For Daily Alerts

ಕೂದಲು ಉದುರುವ ಸಮಸ್ಯೆಗೆ ಮದ್ದು- ನೀಲಗಿರಿ ಎಣ್ಣೆ

|

ನೀಲಗಿರಿ ಎಣ್ಣೆ ಆರೋಗ್ಯಕ್ಕೆ ಮಾತ್ರವಲ್ಲ ಕೂದಲು ಉದುರುವುದನ್ನು ತಡೆಗಟ್ಟುತ್ತದೆ. ಮಂದವಾದ ಕೂದಲು ಬೇಕೆಂದು ಬಯಸುವವರು ಈ ಎಣ್ಣೆಯನ್ನು ಬಳಸುತ್ತಾರೆ. ಈ ಎಣ್ಣೆ ಹಚ್ಚಿದರೆ ತಲೆಹೊಟ್ಟಿನ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ.

ನೀಲಗಿರಿ ಎಣ್ಣೆಯಿಂದ ಸೊಂಪಾದ ಕೂದಲನ್ನು ಪಡೆಯ ಬಯಸುವವರು ಈ ಕೆಳಗಿನ ಪ್ರಯೋಗಗಳ ಮುಖಾಂತರ ಸೊಂಪಾದ ಕೂದಲು ಪಡೆಯಬಹುದು:

Treat Hair Fall With Eucalyptus Oil

ಬಿಸಿ ಎಣ್ಣೆಯಿಂದ ಮಸಾಜ್:
ನೀಲಗಿರಿ ಎಣ್ನೆಯನ್ನು ಬಿಸಿ ಮಾಡಿ ಅದರಿಂದ ತಲೆಗೆ ಮಸಾಜ್ 30 ನಿಮಿಷ ಇಡಿ. ನಂತರ ಶ್ಯಾಂಪೂ ಹಾಕಿ ತಲೆ ತೊಳೆಯಿರಿ. ಈ ರೀತಿ ಮಾಡುವುದರಿಂದ ಹೆಚ್ಚಾಗುವುದು.

ನೀಲಗಿರಿ ಎಣ್ಣೆ ಮತ್ತು ನಿಂಬೆ ರಸ: ತಲೆ ಹೊಟ್ಟು, ಕೂದಲು ಉದುರುವುದು ಈ ರೀತಿಯ ಸಮಸ್ಯೆ ಇರುವವರು ನೀಲಗಿರಿ ಎಣ್ಣೆಗೆ ಸ್ವಲ್ಪ ನಿಂಬೆ ರಸ ಹಾಕಿ ತಲೆಗೆ ಮಸಾಜ್ ಮಾಡಿದರೆ ಸಾಕು ತಲೆಹೊಟ್ಟು ಉಂಟಾಗುವುದಿಲ್ಲ. ಕೂದಲು ಉದುರುವುದು ಕೂಡ ಕಡಿಮೆಯಾಗುತ್ತಾ ಬರುತ್ತದೆ.

ನೀಲಗಿರಿ ಎಣ್ಣೆ ಮತ್ತು ಬಾದಾಮಿ ಎಣ್ಣೆ: ಈ ಎರಡು ಎಣ್ಣೆಯನನ್ನು ಮಿಶ್ರ ಮಾಡಿ ಕೂಡ ತಲೆಗೆ ಹಚ್ಚಬಹುದು. ಬಾದಾಮಿ ಮತ್ತು ನೀಲಗಿರಿ ಎಣ್ಣೆ ಎರಡೂ ಕೂದಲನ್ನು ಬಲಪಡಿಸುವ ಸಾಮರ್ಥ್ಯ ಹೊಂದಿದೆ.

ನೀಲಗಿರಿ ಎಣ್ಣೆ ಮತ್ತು ತೆಂಗಿನೆಣ್ಣೆ: ನೀಲಗಿರಿ ಎಣ್ಣೆಯನ್ನು ತೆಂಗಿನೆಣ್ಣೆಯ ಜೊತೆ ಮಿಶ್ರ ಮಾಡಿ ಸ್ವಲ್ಪ ಬಿಸಿ ಮಾಡಿ ತಲೆಗೆ ಹಚ್ಚಿ. ಬಿಸಿ ನೀರಿನಲ್ಲಿ ಅದ್ದಿ , ಟವಲ್ ಅನ್ನು ಹಿಂಡಿ ತಲೆಗೆ ಸುತ್ತಿ ಅರ್ಧ ಗಂಟೆಯ ಬಳಿಕ ತಲೆಸ್ನಾನ ಮಾಡಿ. ಇದರಿಂದ ಕೂದಲಿನ ಆರೋಗ್ಯದ ಗುಣಮಟ್ಟ ಹೆಚ್ಚುವುದು.

ನೀಲಗಿರಿ ಎಣ್ಣೆ ಮತ್ತು ದಾಸವಾಳದ ಎಲೆ:
ದಾಸವಾಳದ ಎಲೆಯಿಂದ ರಸವನ್ನು ಹಿಂಡಿ ಅದಕ್ಕೆ ನಿಲಗಿರಿ ಎಣ್ನೆಯನ್ನು ಮಿಶ್ರ ಮಾಡಿ ತಲೆಗೆ ಹಚ್ಚಿದರೆ ಸೊಂಪಾದ ಕೂದಲು ನಿಮ್ಮದಾಗುವುದು.

English summary

Treat Hair Fall With Eucalyptus Oil | Tips For Hair Care | ನೀಲಗಿರಿ ಎಣ್ಣೆಯಿಂದ ಪಡೆಯಿರಿ ಸೊಂಪಾದ ಕೂದಲು | ಕೂದಲಿನ ಆರೈಕೆಗೆ ಕೆಲ ಸಲಹೆಗಳು

One of the best benefits of eucalyptus oil on hair is, it stimulates the hair follicles thus help in getting thick, long and healthy hair. Eucalyptus oil is used as a core ingredient in many hair packs. If you want to increase hair growth naturally, use this essential oil.
X
Desktop Bottom Promotion