For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ಕೂದಲಿನ ಕಾಳಜಿಗೆ ಟಿಪ್ಸ್

By Super
|

ಒದ್ದೆ ಕೂದಲಿನ ನೋಟವನ್ನು ಇಷ್ಟ ಪಡುವವರಿಗೆ ಇಲ್ಲೊಂದು ಕೆಟ್ಟ ಸುದ್ದಿ ಇದೆ. ಇದರಿಂದ ಪ್ರಮುಖ ಸಮಸ್ಯೆಗಳು ಕಾಣಬಹುದು ಎನ್ನಲಾಗಿದೆ. ಮಳೆಗಾಲದಲ್ಲಿ ತಲೆಕೂದಲಿನ ಸಮಸ್ಯೆ ಅಧಿಕವಾಗುತ್ತದೆ ಮತ್ತು ಆರ್ದ್ರತೆ ಹೆಚ್ಚುವುದರಿದ ಕೂದಲಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

ನೀವು ಪ್ರಪಂಚದ ಯಾವ ಭಾಗದಿಂದ ಬಂದಿದ್ದರೂ ಮಳೆಗಾಲದಲ್ಲಿ ಆಗುವ ಪ್ರತಿಕೂಲ ಪ್ರಭಾವದಿಂದ ರಕ್ಷಿಸಲು ಈ ಟಿಪ್ಸ್ ಸಹಾಯಕ್ಕೆ ಬರುತ್ತವೆ.

ಕೇಶ ವಿನ್ಯಾಸಕಗಳ ಬಳಕೆ ಕಡಿಮೆ ಮಾಡಿ

ಕೇಶ ವಿನ್ಯಾಸಕಗಳ ಬಳಕೆ ಕಡಿಮೆ ಮಾಡಿ

ನಿಮ್ಮ ಕೂದಲು ಸ್ವಾಭಾವಿಕ ಸೌಂದರ್ಯವನ್ನು ಹೊಂದಿರದಿದ್ದರೆ ನೀವು ಸ್ಟೈಲಿಂಗ್ ಉತ್ಪನ್ನಗಳನ್ನು ಬಳಸುವಿರಿ ಎಂಬುದು ಅರ್ಥಪೂರ್ಣ ಆದರೆ ಮಳೆಗಾಲದಲ್ಲಿ ಇದನ್ನು ಬಳಸದಿರುವುದು ಸೂಕ್ತ. ಹೆಚ್ಚು ತೇವಾಂಶದ ಕಾರಣ ರಾಸಾಯನಿಕ ವಸ್ತುಗಳನ್ನು ಬಳಸಿ ತಯಾರಿಸುವ ಈ ಉತ್ಪನ್ನಗಳು ಅತಿ ಎಣ್ಣೆ ಅಥವಾ ಜಿದ್ದಿನಿಂದ ಕೂಡುವಂತೆ ಮಾಡುತ್ತವೆ.ಇದು ನಿಮ್ಮ ಕೂದಲು ಮತ್ತು ನೆತ್ತಿ ಗೆ ಹಾನಿ ಉಂಟುಮಾಡುತ್ತದೆ. ಜೆಲ್ ಗಳು ತಲೆಹೊಟ್ಟು ಬರಲು ಕಾರಣವಾಗಬಹುದು.

ಕೂದಲನ್ನು ಡ್ರೈ ಆಗಿರಿಸಿಕೊಳ್ಳಿ

ಕೂದಲನ್ನು ಡ್ರೈ ಆಗಿರಿಸಿಕೊಳ್ಳಿ

ಆದಷ್ಟು ನಿಮ್ಮ ಕೂದಲನ್ನು ಒಣ ಆಗಿರಿಸಿಕೊಳ್ಳಿ. ಸಾಮಾನ್ಯವಾಗಿ 50 ರಿಂದ 60 ರಷ್ಟು ಕೂದಲು ಕಳೆದುಕೊಳ್ಳುವ ನಾವು ಮಳೆಗಾಲದಲ್ಲಿ ಗೊತ್ತಿಲ್ಲದೇ 200 ರಷ್ಟು ಕಳೆದುಕೊಳ್ಳುತ್ತೇವೆ. ಕೂದಲನ್ನು ಒಣವಾಗಿಟ್ಟುಕೊಳ್ಳುವುದರಿಂದ ಇದು ತಲೆಹೊಟ್ಟು,ಕೂದಲು ಉದುರುವಿಕೆಯಿಂದ ಕಾಪಾಡುತ್ತದೆ. ಆದರೆ ಹೇರ್ ಡ್ರೈ ಬಳಸಬೇಡಿ, ಗಾಳಿಯಲ್ಲೇ ಒಣಗಿಸಿ.

ಮೈಲ್ಡ್ ಶ್ಯಾಂಪ್ಯೂ ಉಪಯೋಗಿಸಿ

ಮೈಲ್ಡ್ ಶ್ಯಾಂಪ್ಯೂ ಉಪಯೋಗಿಸಿ

ಹೊತ್ತು ಮತ್ತು ಕೂದಲು ಉದುವುದರ ಜೊತೆಗೆ ಜಿಡ್ಡಿನಿಂದ ಕೂಡಿದ ಕೂದಲನ್ನು ನೀವು ಹೊಂದಬಹುದು ಆದ್ದರಿಂದ ನೀವು ಪ್ರತಿದಿನ ಮೈಲ್ಡ್ ಶಾಂಪು ಉಪಯೋಗಿಸಿ ತಲೆಸ್ನಾನ ಮಾಡಬೇಕು. ಮೈಲ್ಡ್ ಶಾಂಪು ಬಳಸಲು ಇನ್ನೊಂದು ಕಾರಣವೆಂದರೆ ಮಳೆಗಾಲದಲ್ಲಿ ನಿಮ್ಮ ಕೂದಲು ಗಂಟು ಕಟ್ಟಿಕೊಳ್ಳಬಹುದು ಶ್ಯಾಂಪು ಹಾಕುವುದರಿಂದ ಇದು ಕಡಿಮೆ ಆಗುತ್ತದೆ. ನಿಮ್ಮ ಕೂದಲು ಮಳೆಯಲ್ಲಿ ನೆನೆದರೆ ಶಾಂಪು ಹಾಕಿ ಸ್ನಾನ ಮಾಡಿ.

ಆಹಾರದ ಬಗ್ಗೆ ಗಮನವಿರಲಿ

ಆಹಾರದ ಬಗ್ಗೆ ಗಮನವಿರಲಿ

ಆರೋಗ್ಯಯುತವಾದ ಕೂದಲಿಗೆ ಪ್ರೊಟೀನ್ ನ ಅವಶ್ಯಕತೆ ಹೆಚ್ಚು.ನಿಮ್ಮ ಆರೋಗ್ಯವನ್ನು ತೋರಿಸಬೇಕೆಂದಿದ್ದರೆ ಪ್ರತಿದಿನ ಮೊಟ್ಟೆ,ಕ್ಯಾರೆಟ್,ಧಾನ್ಯಗಳು ಮತ್ತು ಹಸಿರು ತರಕಾರಿಗಳು,ರಾಜ್ಮ,ನಟ್ಸ್,ಡೈರಿ ಉತ್ಪನ್ನಗಳನ್ನು ಬಳಸಬೇಕು.

ನಿಯಮಿತವಾಗಿ ಕಂಡೀಷನಿಂಗ್ ಅತ್ಯಗತ್ಯ

ನಿಯಮಿತವಾಗಿ ಕಂಡೀಷನಿಂಗ್ ಅತ್ಯಗತ್ಯ

ಗಾಳಿಯಲ್ಲಿರುವ ಆರ್ದ್ರತೆಯ ಮಟ್ಟ ಕೂದಲು ಒರಟು ಮತ್ತು ಒಣ ಆಗುವಂತೆ ಮಾಡುತ್ತದೆ ಇದರಿಂದ ಕೂದಲು ಒರಟಾಗಿ ಕಾಣುತ್ತದೆ. ಪ್ರತಿದಿನ ಕಂಡಿಶನಿಂಗ್ ಮಾಡುವುದರಿಂದ ಕೂದಲು ಸುಂದರವಾಗುತ್ತದೆ.

ಇತರ ಟಿಪ್ಸ್ ಗಳು

ಇತರ ಟಿಪ್ಸ್ ಗಳು

* ಚೆನ್ನಾಗಿ ನೀರು ಕುಡಿಯಿರಿ

* ವಾರಕೊಮ್ಮೆ ತಲೆಗೆ ಎಣ್ಣೆ ಹಾಕಿ

* ದೊಡ್ಡ ಹಲ್ಲಿನ ಹಣಿಗೆಯನ್ನು ತಲೆ ಬಾಚಲು ಉಪಯೋಗಿಸಿ

* ಒದ್ದೆ ಇರುವಾಗ ಕೂದಲನ್ನು ಕಟ್ಟಬೇಡಿ

* ಕೂದಲನ್ನು ಒಣಗಿಸಿ

* ಬಾಚಣಿಕೆಯನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಡಿ

ಇಷ್ಟೆಲ್ಲಾ ಟಿಪ್ಸ್ ಗಳನ್ನು ಪಾಲಿಸಿದ ನಂತರವೂ ಹೊತ್ತು ಮತ್ತು ಇತರ ತೊಂದರೆಗಳು ಕಾಣಿಸಿಕೊಂಡಲ್ಲಿ ಟ್ರಿಕೊಲೋಜಿಸ್ಟ್ ಅನ್ನು ಭೇಟಿ ಮಾಡಿ. ಪ್ರತೀದಿನ ನೀವು ಕೂದಲ ಕಾಳಜಿ ಮಾಡಿದರೆ ನಿಮಗೆ ಈ ಸಮಸ್ಯೆಗಳೇ ಕಂಡುಬರುವುದಿಲ್ಲ.

English summary

Monsoon Hair Care Tips

For all of you fashionistas out there who love to sport the wet hair look, there’s some bad news. Although it may look and feel great, wet hair can lead to major hair woes. Hair problems become more frequent during the monsoons.So, during the monsoons it is advisable to try and refrain from using these products. 
X
Desktop Bottom Promotion