For Quick Alerts
ALLOW NOTIFICATIONS  
For Daily Alerts

ತಲೆ ಬೆವರಿ ಕೂದಲು ಹಾಳಾಗುವುದನ್ನು ತಡೆಯಲು ಟಿಪ್ಸ್

|

ಮನೆಗೆಲಸ ಮಾಡುವಾಗ ಅಥವಾ ವ್ಯಾಯಾಮ ಮಾಡುವಾಗ ಬೆವರುವುದು ಸಹಜ. ಹೆಚ್ಚಿನವರಿಗೆ ಮೈ ಮಾತ್ರವಲ್ಲ, ತಲೆಯೂ ತುಂಬಾ ಬೆವರುವುದು. ಹುಡುಗರಿಗಾದರೆ ದಿನಾ ತಲೆ ತೊಳೆಯಬಹುದು. ಆದರೆ ಉದ್ದ ಕೂದಲಿರುವ ಹುಡುಗಿಯರಿಗೆ ದಿನಾ ತಲೆ ತೊಳೆಯಲು ಕಷ್ಟವಾಗಬಹುದು. ಅಲ್ಲದೆ ಉದ್ದ ಕೂದಲಿನವರು ದಿನಾ ತಲೆ ತೊಳೆಯುವುದು ಕೂದಲಿನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.

ತಲೆ ತುಂಬಾ ಬೆವರಿದಾಗ ತಲೆ ತೊಳೆಯದಿದ್ದರೂ ಕೂದಲು ಉದುರಲಾರಂಭಿಸುತ್ತದೆ. ಆದ್ದರಿಂದ ತಲೆ ಬೆವರುವುದನ್ನು ತಡೆಗಟ್ಟಲು ಈ ಕೆಳಗಿನ ಟಿಪ್ಸ್ ಬಳಸುವುದು ಒಳ್ಳೆಯದು:

How To Make Hair Not To Sweat

* ಉದ್ದ ಕೂದಲಿನವರು ವ್ಯಾಯಾಮ ಅಥವಾ ಮನೆಗೆಲ ಮಾಡುವಾಗ ತುರುಬು ಕಟ್ಟಿ, ಕ್ಲಿಪ್ ಹಾಕುವುದು ಒಳ್ಳೆಯದು. ಕೂದಲನ್ನು ತುಂಬಾ ಬಿಗಿಯಾಗಿ ಕಟ್ಟಬೇಡಿ.

* ಹಣೆ, ಕಣ್ಣಿಗೆ ಕೂದಲು ಬೀಳುವುದನ್ನು ತಡೆಯಲು ಹೇರ್ ಬ್ಯಾಂಡ್ ಹಾಕಿ.

* ದೊಡ್ಡದಾಗಿರುವ ಹೆಡ್ ಬ್ಯಾಂಡ್ ಅನ್ನು ಹಣೆಗೆ ಹಾಕಿ. ಕಾಟನ್ ನಿಂದ ಮಾಡಿದ್ದು ಆಗಿದ್ದರೆ ಬೆವರನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.

* ವ್ಯಾಯಾಮ ಮಾಡುವಾಗ ಟೋಪಿ ಧರಿಸಬೇಡಿ. ನಿಮ್ಮ ಕೂದಲಿಗೆ ಉಸಿರಾಡಲು ಅವಕಾಶ ಕಲ್ಪಿಸಿಕೊಡಿ. ಇಲ್ಲದಿದ್ದರೆ ಕೂದಲಿಗೆ ಹಾನಿಯಾಗುವುದು.

* ವ್ಯಾಯಾಮ ಮಾಡಿದ ಬಳಿಕ ಬಿಸಿ ನೀರನ್ನು ತಲೆಗೆ ಹಾಕಬೇಡಿ. ಉಗುರು ಬೆಚ್ಚಗಿನ ನೀರು ತಲೆಗೆ ಹಾಕಿ ಶ್ಯಾಂಪೂ ಹಾಕಿ ತೊಳೆಯಬಹುದು. ನೈಸರ್ಗಿಕವಾದ ಕಂಡೀಷನರ್ ಅಂದರೆ ಮೊಸರು, ಮೆಹಂದಿ, ಮೊಟ್ಟೆ ಇವುಗಳಿಂದ ಕೂದಲಿನ ಪೋಷಣೆ ಮಾಡಿ.

* ಈಜುಕೊಳಕ್ಕೆ ಹೋಗುವಾಗ ಕೂದಲಿನ ರಕ್ಷಣೆ ಸ್ವಿಮ್ಮಿಂಗ್ ಹಾಕಿ.

* ಸ್ಟೀಮ್ ಬಾತ್ ನಿಮ್ಮ ಕೂದಲಿನ ಬುಡವನ್ನು ಒಣಗಿಸುತ್ತದೆ. ಆದ್ದರಿಂದ ಜೋಜೋಬೊ ಎಣ್ಣೆಯನ್ನು ತಲೆಗೆ ಹಚ್ಚಿ, ನಂತರ ಟವಲ್ ಸುತ್ತುವುದು ಒಳ್ಳೆಯದು.

English summary

How To Make Hair Not To Sweat | Tips For Hair Care | ತಲೆ ಬೆವರುವುದನ್ನು ತಡೆಯಲು ಟಿಪ್ಸ್ | ಕೂದಲಿನ ಆರೈಕೆಗೆ ಕೆಲ ಸಲಹೆಗಳು

If you are tried using sweatbands, but that failed. What can I do to my hair to make it stop sweating? like that thinking then try this...
Story first published: Thursday, April 25, 2013, 15:44 [IST]
X
Desktop Bottom Promotion