For Quick Alerts
ALLOW NOTIFICATIONS  
For Daily Alerts

ಪಿಕ್ಸಿ ಕಟ್ ಅನ್ನು ಕಾಪಾಡುವ ಬಗೆ ಹೇಗೆ?

By Arpitha Rao
|

ಪಿಕ್ಸಿ ಕಟ್ ಇತ್ತೀಚಿನ ಫ್ಯಾಶನ್ ಆಗಿದೆ.ನೀವು ಕೂಡ ಪಿಕ್ಸಿ ಕಟ್ ಮಾಡಿಸಬೇಕು ಎಂದು ಒಂದು ದಿನ ಸಲೂನ್ ಗೆ ಹೋಗಬಹುದು.ಆದರೆ ನಿಮಗೆ ಇದು ಕೇವಲ ಕಟ್ ಮಾಡಿಸುವದರಲ್ಲಲ್ಲ, ಕಟ್ ಮಾಡಿಸಿಕೊಂಡ ನಂತರ ಕೂದಲನ್ನು ಕಾಪಾಡುವುದೂ ಕೂಡ ಅಷ್ಟೇ ಮುಖ್ಯವಾಗುತ್ತದೆ ಎಂಬುದು ತಿಳಿದಿರಬಹುದು.ಪಿಕ್ಸಿ ಕಟ್ ನೀವು ಅದನ್ನು ನಿರ್ವಹಿಸುವುದನ್ನು ಬಲ್ಲವರಾದರೆ ಮಾತ್ರ ಸುಂದರವಾಗಿ ಕಾಣಿಸುತ್ತದೆ.ಹೌದು ಗಿಡ್ಡ ಕೂದಲು ಇದ್ದರೆ ಅದನ್ನು ನಿರ್ವಹಿಸುವುದು ಕೂಡ ಸುಲಭ ಆದರೆ ನಂತರದಲ್ಲಿ ನೀವು ನಿಮ್ಮ ಕೂದಲು ಆರೋಗ್ಯಕರವಾಗಿ ಇರಬೇಕು ಮತ್ತು ಸರಿಯಾಗಿ ಬೆಳೆಯಬೇಕು ಎಂದು ಬಯಸಿದಲ್ಲಿ ಅದಕ್ಕೆ ಸರಿಯಾದ ರೀತಿಯ ನಿರ್ವಹಣೆಯ ಅಗತ್ಯವಿದೆ.ಕೂದಲು ಗಿಡ್ಡ ಇದ್ದರೆ ಅದಕ್ಕೆ ಕಾಳಜಿವಹಿಸುವ ಅಗತ್ಯವಿಲ್ಲ ಎಂದಲ್ಲ ಆದರೆ ಕಾಳಜಿಯ ಪ್ರಮಾಣ ಕಡಿಮೆ ಸಾಕು! ಆದ್ದರಿಂದ ಸ್ವಲ್ಪ ಪ್ರಮಾಣದ ಕಾಳಜಿಯ ಅಗತ್ಯವಿರುತ್ತದೆ.ಸಾಮಾನ್ಯವಾಗಿ ಕೂದಲಿಗೆ ನೀವು ಸರಿಯಾಗಿ ಕಾಳಜಿವಹಿಸಬೇಕಾಗುತ್ತದೆ.ಪಿಕ್ಸಿ ಕಟ್ ಮಾಡಿಸಿದರೆ ಯಾವ ರೀತಿಯ ಎಕ್ಸ್ಟ್ರಾ ಕಾಳಜಿ ತೆಗೆದುಕೊಳ್ಳಬೇಕು?ಇದರ ಬಗ್ಗೆ ಈ ಕೆಳಗೆ ಮಾಹಿತಿಯನ್ನು ನೀಡುತ್ತಿದ್ದೇವೆ.ಓದಿ ತಿಳಿದುಕೊಳ್ಳಿ ಅದರಂತೆ ಪಾಲಿಸಿ ಇದರಿಂದ ನಿಮ್ಮ ಪಿಕ್ಸಿ ಕಟ್ ಅನ್ನು ಸುಂದರವಾಗಿ ಕಾಪಾಡಿಕೊಳ್ಳಬಹುದು.

How to maintain a pixie cut?

ಸ್ಟ್ರೈಟ್ ಹೇರ್ & ಪಿಕ್ಸೀ ಕಟ್ಸ್:
ನೇರ ಮತ್ತು ಗಿಡ್ಡ ಕೂದಲು ನಿಮ್ಮದಾದರೆ ನೀವು ಶಾಂಪೂ ಹಚ್ಚಿ ಸ್ವಚ್ಚವಾಗಿ ಇಟ್ಟುಕೊಳ್ಳಬೇಕಾಗುತ್ತದೆ.ಸ್ವಚ್ಚವಾದ ಕೂದಲಿನ ಜೊತೆಗೆ ಸ್ವಲ್ಪ ಹೆಚ್ಚು ಕಾಳಜಿಯ ಅಗತ್ಯ ಕೂಡ ಇದೆ.ಗಿಡ್ಡ ಮತ್ತು ನೇರ ಕೂದಲು ಬೇಗ ಜಿಡ್ಡುಗಟ್ಟುತ್ತದೆ.ಆದ್ದರಿಂದ ನೀವು ಪ್ರತಿದಿನ ಶಾಂಪೂ ಹಚ್ಚಿ ಸ್ವಚ್ಚವಾಗಿಟ್ಟುಕೊಳ್ಳಬೇಕು.ಸಾಧ್ಯವಾದರೆ ನಿಮಗೆ ಬೆಳಗ್ಗೆ ಸಮಯ ಸಿಗುವುದಿಲ್ಲ ಎಂದಾದರೆ ರಾತ್ರಿ ತಲೆಸ್ನಾನ ಮಾಡಿ ಕಂಡಿಷನರ್ ಹಾಕಿ ಒಣಗಲು ಬಿಡಿ.ಇದರಿಂದ ಕೂದಲು ಸುಂದರವಾಗಿರುತ್ತದೆ.

ವೇವಿ ಪಿಕ್ಸಿ ಕಟ್:
ಸ್ವಾಭಾವಿಕವಾಗಿರಲು ಅಥವಾ ಕೂದಲು ನೇರವಾಗಿ ಇರಲು ಈ ರೀತಿಯ ವೇವಿ ಕಟ್ ಮಾಡಿಸಿದಾಗ ಜೆಲ್ ಅನ್ನು ಬಳಸಬಹುದು.ವೇವಿ ಪಿಕ್ಸಿ ಕಟ್ ಮಾಡಿಸಿದರೆ ಹೆಚ್ಚು ಕಾಳಜಿಯ ಅಗತ್ಯವಿರುವುದಿಲ್ಲ.ನೀವು ಕೂದಲನ್ನು ಹಾಗೆ ಬಿಡಬಹುದು ಅಥವಾ ಕಂಡಿಷನರ್ ,ಜೆಲ್ ಗಳನ್ನೂ ಬಳಸಬಹುದು.ಆದರೆ ನೀವು ಕೂದಲನ್ನು ಸ್ವಚ್ಚವಾಗಿ ಅಚ್ಚುಕಟ್ಟಾಗಿ ಇರಿಸಿಕೊಳ್ಳಬೇಕು.ವಾರದಲ್ಲಿ 2 ಬಾರಿ ಶಾಂಪೂ ಹಾಕಿ ಕೂದಲನ್ನು ಸ್ವಚ್ಚಗೊಳಿಸಿ ಮತ್ತು ಗಾಳಿಯಲ್ಲಿ ಒಣಗಿಸಿಕೊಳ್ಳಿ.ಕೂದಲು ಸ್ಟೈಲ್ ಆಗಿ ಕಾಣಿಸಬೇಕು ಎಂದಿದ್ದರೆ ಹೀಟ್ ಅನ್ನು ಬಳಸಿ ಕೂದಲನ್ನು ಸ್ಟೈಲ್ ಆಗಿಸಿಕೊಳ್ಳಬಹುದು.

ಗುಂಗುರು ಕೂದಲು ಮತ್ತು ಪಿಕ್ಸಿ ಕಟ್ :
ನಿಮ್ಮ ಕೂದಲು ಗುಂಗುರು ಕೂದಲಾದರೆ(ಕರ್ಲಿ ಹೇರ್) ನೀವು ಹೆಚ್ಚು ಕಾಳಜಿವಹಿಸಬೇಕಾಗುತ್ತದೆ.ವಾರದಲ್ಲಿ ಒಮ್ಮೆ ತಲೆಸ್ನಾನ ಮಾಡಿದರೆ ಸಾಕಾಗುತ್ತದೆ ಆದರೆ ಕೂದಲನ್ನು ಸರಿಯಾಗಿ ನೋಡಿಕೊಳ್ಳಲು ಕಂಡಿಷನರ್ ಮತ್ತು ಜೆಲ್ ಅನ್ನು ಹೆಚ್ಚು ಬಳಸಬೇಕು.ನೀವು ಹೇರ್ ಬ್ಯಾಂಡ್ ಬಳಸಿದರೆ ಸೌಮ್ಯವಾಗಿ ಕಾಣುವಂತೆ ಮಾಡುತ್ತದೆ.

ಪಿಕ್ಸಿ ಕಟ್ ಮಾಡಿಸಿ ಸ್ಟೈಲ್ ಆಗಿ ಕಾಣಿರಿ:
ನಿಮ್ಮ ಕೂದಲು ಯಾವರೀತಿಯದೇ ಆಗಿರಲಿ ನೀವು ಪಿಕ್ಸಿ ಕಟ್ ಮಾಡಿಸಿ ಸ್ಟೈಲ್ ಆಗಿ ಕಾಣಿಸಿಕೊಳ್ಳಬಹುದು.ನೇರ ಕೂದಲು ಹೊಂದಿರುವವರಿಗೆ ಚಿಕ್ ಕೇಶವಿನ್ಯಾಸ ಸುಂದರವಾಗಿ ಕಾಣುತ್ತದೆ.ಈ ಕೇಶವಿನ್ಯಾಸ ನಿಮ್ಮ ಕಣ್ಣು ಮತ್ತು ಕೆನ್ನೆಯನ್ನು ಸುಂದರವಾಗಿ ಕಾಣಿಸುತ್ತವೆ.

ಉದ್ದ ಪದರದ ಕಿರೀಟವನ್ನು ತಲೆಗೆ ಬಳಸಿದರೆ ನಿಮ್ಮ ಪಿಕ್ಸಿ ಕೂದಲು ಸ್ವಾಭಾವಿಕ ಸ್ಟೈಲ್ ಅನ್ನು ಪಡೆದುಕೊಂಡಿರುತ್ತದೆ.ಇದಕ್ಕೆ ಹೆಚ್ಚಿನ ಕಾಳಜಿ ಅಗತ್ಯವಿಲ್ಲ.ಸ್ಪೈಕ್ ಕೂಡ ಫ್ಯಾಶನ್ ನಲ್ಲಿದ್ದು ನೇರ ಮತ್ತು ವೇವಿ ಕೂದಲು ಹೊಂದಿದವರಿಗೆ ಇದು ಸೂಕ್ತ.ಆದರೆ ಇದು ಗುಂಗುರು ಕೂದಲಿನವರಿಗೆ ಸೋಗಸಾಗಿರುವುದಿಲ್ಲ.

ಲೇಯರ್ಡ್ ಪಿಕ್ಸಿ ಕಟ್ ಮಾಡಿಸಿದರೆ ಗುಂಗುರು ಕೂದಲು ಮತ್ತು ಎಲ್ಲಾ ರೀತಿಯ ಕೂದಲಿನವರಿಗೂ ಇದು ಸುಂದರವಾಗಿ ಒಪ್ಪುತ್ತದೆ.

ಈಗ ನೀವು ಪಿಕ್ಸಿ ಕಟ್ ಕೂದಲನ್ನು ಹೇಗೆ ನಿರ್ವಹಿಸಬೇಕು ಎಂಬುದರ ಬಗ್ಗೆ ತಿಳಿದಿದ್ದೀರಿ.ಇನ್ನೇಕೆ ತಡ ನೀವೂ ಪಿಕ್ಸಿ ಕಟ್ ಮಾಡಿಸಿ.ಸ್ಟೈಲ್ ಆಗಿ ಕಾಣಿಸಿಕೊಳ್ಳಿ.

English summary

How to maintain a pixie cut?

Getting a pixie cut seems to be the latest fashion! You would find yourself in the salon wanting a pixie cut yourself some day. But, have you realized it’s not just about a cut, the whole quotient is about maintaining that cut.
Story first published: Saturday, December 7, 2013, 12:10 [IST]
X
Desktop Bottom Promotion