For Quick Alerts
ALLOW NOTIFICATIONS  
For Daily Alerts

ಸುಂದರವಾದ ಕೂದಲಿಗೆ ಮನೆಮದ್ದುಗಳು

By ಪೂರ್ಣಿಮಾ ಹೆಗಡೆ
|

ಸುಂದರವಾದ ಕೂದಲು ನಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಇದು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಪ್ರತಿಬಿಂಬಿಸುತ್ತದೆ. ಆದರೆ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಅದರಲ್ಲೂ ನಗರ ಪ್ರದೇಶದ ವಾತಾವರಣ ನಮ್ಮ ಕೂದಲಿನ ಆರೋಗ್ಯವನ್ನು ಇನ್ನಷ್ಟು ಕೆಡಿಸುತ್ತಿದೆ. ಜೊತೆಗೆ ಮಾನಸಿಕ ಒತ್ತಡ, ಸರಿಯಲ್ಲದ ಆಹಾರ ಕ್ರಮ, ಹಾರ್ಮೋನ್ ಬದಲಾವಣೆ ಹಾಗೂ ಹಲವಾರು ಶಾಂಪೂ, ಕಂಡೀಶನರ್ ಬಳಸುವುದರಿಂದಲೂ ಕೂಡ ಕೂದಲಿನ ಆರೋಗ್ಯದಲ್ಲಿ ಕುಂಠಿತವಾಗುತ್ತದೆ.

ನಿಮ್ಮ ತ್ವಚೆಯನ್ನು ಸಂರಕ್ಷಿಸುವಂತೆ ಕೂದಲನ್ನೂ ಸಹ ಸರಿಯಾಗಿ ನೋಡಿಕೊಳ್ಳಬೇಕಾಗುತ್ತದೆ. ಕೂದಲನ್ನು ಸ್ವಚ್ಚವಾಗಿಟ್ಟುಕೊಳ್ಳುವುದು, ಸರಿಯಾದ ಶಾಂಪೂಗಳನ್ನು ಬಳಸುವುದು ಬಹಳ ಮುಖ್ಯ. ಸರಿಯಾಗಿ ಕೂದಲಿನ ನಿರ್ವಹಣೆ ಮಾಡದಿದ್ದಲ್ಲಿ ಕೂದಲುದುರುವ ಅಥವಾ ತಲೆಹೊಟ್ಟು ಹಾಗೂ ಇನ್ನೂ ಹತ್ತಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

Home Remedies For Beautiful Hair

ಆದ್ದರಿಂದಲೇ ನಿಮ್ಮ ಕೂದಲಿನ ಉತ್ತಮ ಆರೋಗ್ಯಕ್ಕಾಗಿ ಕೆಲವು ಮನೆಮದ್ದುಗಳು ಇಲ್ಲಿವೆ.

ಸ್ವಚ್ಚತೆ:

1. ಅತ್ಯಂತ ಪರಿಣಾಮಕಾರಿಯಾದ ಮನೆಮದ್ದು, ಶಿಕೇಕಾಯಿ ಮತ್ತು ನೆಲ್ಲಿಯ ಮಿಶ್ರಣವಾಗಿದೆ.. ಸುಮಾರು 1 ಲೀಟರ್ ನೀರಿನಲ್ಲಿ ಈ ಮಿಶ್ರಣವನ್ನು ಸಮ ಪ್ರಮಾಣದಲ್ಲಿ ಹಾಕಿ ರಾತ್ರಿ ನೆನೆಸಿಡಬೇಕು. ಮರುದಿನ, ನೀರು ಅರ್ಧದಷ್ಟು ಕಡಿಮೆಯಾಗುವವರೆಗೆ ಕುದಿಸಿ ನಂತರ ಆರಿಸಿ ಕೂದಲಿಗೆ ಲೇಪಿಸಿ.

2. ಟೀ ಟ್ರೀ ಆಯಿಲ್ ತಲೆಯಲ್ಲಿರುವ ಹೇನಿಗೆ ಅತ್ಯಂತ ಪರಿಣಾಮಕಾರಿ ಚಿಕಿತ್ಸೆ ಎಂದು ತಿಳಿದುಬಂದಿದೆ. ಚಿಕ್ಕ ಮಕ್ಕಳ ಪಾಲಕರು ಕಠಿಣ ರಾಸಾಯನಿಕ ಶ್ಯಾಂಪೂಗಳ ಪರ್ಯಾಯವಾಗಿ ಈ ಶಾಂಪೂವನ್ನು ಬಳಸಬಹುದು. ಟೀ ಟ್ರೀ ಆಯಿಲ್ ಕೂದಲು ಬೆಳೆಯಲು ಮತ್ತು ನೆತ್ತಿಯಲ್ಲಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯಮಾಡುತ್ತದೆ. ಟೀ ಟ್ರೀ ಆಯಿಲ್ ಮತ್ತು ನೈಸರ್ಗಿಕ ಶಾಂಪೂ ಮಕ್ಕಳಿಗೂ ಕೂಡ ಉಪಯೋಗಿಸಬಹುದು.

3 . ಕ್ಯಮೊಮೈಲ್ ಕೂದಲಿಗೆ ಅತ್ಯುತ್ತಮ ಟಾನಿಕ್ / ಔಷಧ. ಕೂದಲಿನ ಹೊಳಪನ್ನು ಹೆಚ್ಚಿಸಲು ಕೂದಲಿನ ಸ್ನಾನವಾದ ನಂತರ ಇದನ್ನು ಕೂದಲಿಗೆ ಲೇಪಿಸಿ.

ಕಂಡೀಷನಿಂಗ್ :

1 . ಕೂದಲನ್ನು ತೊಳೆಯುವುದಕ್ಕಿಂತ ಮೊದಲು ಅರ್ಧ ಕಪ್ ಮೇಯನೇಸ್ ಬಳಸಿ ಮಸಾಜ್ ಮಾಡಿ ಮತ್ತು ಒಂದು ಪ್ಲಾಸ್ಟಿಕ್ ಚೀಲವನ್ನು ಕೂದಲಿಗೆ ಕಟ್ಟಿಡಿ. 15 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ಕೂದಲಿಗೆ ಶಾಂಪೂ ಬಳಸುವುದಕ್ಕಿಂತ ಮೊದಲು ತೊಳೆಯಿರಿ.

2 . ಒಣ ಕೂದಲನ್ನು ಹೊಂದಿರುವವರು ನೆತ್ತಿಯ ಮೇಲೆ ಪನ್ನೀರು ಮಸಾಜ್ ಮಾಡಬೇಕು. ಇದು ಡ್ರೈ/ ಒಣ ಕೂದಲನ್ನು ಮೃದುಮಾಡಲು ಸಹಾಯಮಾಡುತ್ತದೆ. ಒಂದು ಕಳಿತ ಪಪ್ಪಾಯಿ ಜೊತೆ ಆಲಿವ್ ಎಣ್ಣೆ ಮತ್ತು ಜೇನುತುಪ್ಪ ಮಿಶ್ರಣ ಮಾಡಿ ಮತ್ತು ನಿಮ್ಮ ಕೂದಲಿಗೆ ಹಚ್ಚಿ. ಒಂದು ಗಂಟೆಯ ನಂತರ ತೊಳೆಯಿರಿ.

3 . ಎಣ್ಣೆಯುಕ್ತ ಕೂದಲಿನ ಜನರು ಮುಲ್ತಾನಿ ಮಿಟ್ಟಿ , ಆಮ್ಲಾ , ಮತ್ತು ಶೀಕೇಕಾಯಿ ಮಿಶ್ರಣವನ್ನು ಬಳಸಬಹುದು. ಇದನ್ನು ಹಚ್ಚಿ 40 ನಿಮಿಷಗಳ ನಂತರ ಕೂದಲನ್ನು ತೊಳೆಯಿರಿ.

4 . ಪುದೀನಾ ಎಣ್ಣೆ ತಲೆಗೆ ತಂಪು ಪ್ರಭಾವವನ್ನು ನೀಡುತ್ತದೆ ಮತ್ತು ತಲೆ ಹೊಟ್ಟು ಮತ್ತು ಹೇನನ್ನು ತೆಗೆದುಹಾಕುತ್ತದೆ. ಪುದೀನಾ ಎಣ್ಣೆ ಎಣ್ಣೆಯುಕ್ತ ಕೂದಲನ್ನು ಹೋಗಲಾಡಿಸುತ್ತದೆ. ಇದು ಕಠಿಣವಾಗಿರುವುದರಿಂದ ಎಣ್ಣೆಯುಕ್ತ ಕೂದಲಿಗೆ ಚಿಕಿತ್ಸೆ ನೀಡುತ್ತದೆ.

5 .ಕೂದಲಿನ ಸ್ನಾನದ ಮೊದಲು ನಿಯಮಿತವಾಗಿ ತಾಜಾ ಮೆಂತ್ಯ ಎಲೆಗಳ ಪೇಸ್ಟ್ ಹಚ್ಚುವುದರಿಂದ ಇದು ಕೂದಲಿನ ನೈಸರ್ಗಿಕ ಬಣ್ಣವನ್ನು ಸಂರಕ್ಷಿಸುತ್ತದೆ ಮತ್ತು ಕೂದಲು ಸಹ ರೇಷ್ಮೆಯಂತಹ ಹೊಳಪನ್ನು ಪಡೆಯುತ್ತದೆ. ಜೊತೆಗೆ ತಲೆಹೊಟ್ಟಿಗೂ ಸೂಕ್ತ ಪರಿಹಾರ ಒದಗಿಸುತ್ತದೆ.

ಕೂದಲನ್ನು ಬಲಪಡಿಸಲು:

1 .ಬಾಳೆಹಣ್ಣಿನಲ್ಲಿರುವ ಸಮೃದ್ಧ ಖನಿಜಗಳು ಮತ್ತು ಇತರ ಪೋಷಕಾಂಶಗಳು ಕೂದಲಿನ ಮರುಹುಟ್ಟು ಮತ್ತು ಹೊಳಪನ್ನು ಹೆಚ್ಚಿಸುತ್ತದೆ. ಒಂದು ಬಾಳೆಹಣ್ಣಿನ ಮಾಸ್ಕ್ (ಕೂದಲಿಗೆ ಲೇಪಿಸುವುದು) ಒಣ ಕೂದಲು , ಬಣ್ಣ ಹಚ್ಚಿದ ಕೂದಲಿಗೆ ಸೂಕ್ತವಾಗಿದೆ.

2 . ಲೆಟ್ಯೂಸೆ ಎಲೆಯ ರಸ ಕೂದಲು ಉದುರುವ ಸಮಸ್ಯೆಯನ್ನು ಬಗೆಹರಿಸುವಲ್ಲಿ ತುಂಬಾ ಪರಿಣಾಮಕಾರಿಯಾಗಿದೆ .

3 . ಹರಳೆಣ್ಣೆ ಕೂದಲುದುರುವಿಕೆಗೆ ಪರಿಹಾರ ಒದಗಿಸುತ್ತದೆ. ಕೂದಲು ಬೆಳೆಯಲೂ ಕೂಡ ಇದು ಸಹಾಯಕವಾಗಿದೆ.

4 . ಲ್ಯಾವೆಂಡರ್, ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ತೈಲ ಉತ್ಪಾದನೆಯನ್ನು ಸಮತೋಲನಗೊಳಿಸುತ್ತದೆ.

5 . ಮೊಸರು ಒಂದು ಕಂಡಿಷನರ್ ನಂತೆ ಮತ್ತು ಕೂದಲಿನ ಶುದ್ಧೀಕರಣಕ್ಕೆ ಸಹಾಯ ಮಾಡುತ್ತದೆ.

English summary

Home Remedies For Beautiful Hair

Similar to skin, hair care involves cleansing, conditioning and strengthening. This can be achieved by adopting these simple hair care home remedies.
X
Desktop Bottom Promotion