For Quick Alerts
ALLOW NOTIFICATIONS  
For Daily Alerts

ಸೊಂಪಾದ ಕೂದಲಿಗಾಗಿ 5 ಆರ್ಯುವೇದ ಹೇರ್ ಪ್ಯಾಕ್

|

ಉದ್ದ ಕೂದಲು ಮತ್ತೆ ಫ್ಯಾಷನ್ ಆಗಿದೆ. ಆದರೆ ಹಿಂದಿನ ಕಾಲದ ರೀತಿ ಈ ಕಾಲದ ಹೆಣ್ಣು ಮಕ್ಕಳು ತಲೆ ತುಂಬಾ ಎಣ್ಣೆ ಹಾಕಿ ಜಡೆ ಹಾಕುವುದಿಲ್ಲ, ಅದರ ಬದಲು ಉದ್ದ ಕೂದಲನ್ನು ಗಾಳಿಯಲ್ಲಿ ಹಾರಾಡಲು ಬಿಡುವುದು ಫ್ಯಾಷನ್ ಆಗಿದೆ. ಕೂದಲನ್ನು ಉದ್ದ ಬೆಳೆಸಬೇಕೆಂಬ ತೀರ್ಮಾನಕ್ಕೆ ಬಂದು ಕೂದಲನ್ನು ಉದ್ದ ಬೆಳೆಸಲಾರಂಭಿಸುವಾಗ ಕೂದಲು ಉದುರುವುದು, ಕೂದಲಿನ ಬುಡ ಕವಲೊಡೆಯುವುದು, ತಲೆಹೊಟ್ಟು ಈ ರೀತಿಯ ಸಮಸ್ಯೆಗಳು ಕಂಡು ಬರುತ್ತವೆ. ಕೂಡಲೇ ಕೂದಲಿಗೆ ಕತ್ತರಿ ಹಾಕಿ ಬಿಡುತ್ತೇವೆ.

ಕೂದಲನ್ನು ಉದ್ದವಾಗಿ ಬೆಳೆಸಬೇಕು, ಆ ಕೂದಲು ಆರೋಗ್ಯಕರವಾಗಿ ಆಕರ್ಷಕವಾಗಿ ಇರಬೇಕೆಂದು ಬಯಸುವುದಾದರೆ ಕೆಲವೊಂದು ಸರಳ ವಿಧಾನಗಳನ್ನು ಅನುಸರಿಸಿದರೆ ಸಾಕು ನೀವು ಬಯಸಿದಂತಹ ಕೂದಲನ್ನು ಪಡೆಯಬಹುದು. ಅದರಲ್ಲೂ ಕೂದಲಿನ ಆರೋಗ್ಯ ಹೆಚ್ಚಿಸುವಲ್ಲಿ ಹೇರ್ ಪ್ಯಾಕ್ ತುಂಬಾ ಸಹಕಾರಿಯಾಗಿದೆ. ಈ ಕೆಳಗೆ ಕೂದಲಿನ ಆರೋಗ್ಯ ಹೆಚ್ಚಿಸುವ ಹೇರ್ ಪ್ಯಾಕ್ ಗಳ ಬಗ್ಗೆ ಹೇಳಲಾಗಿದೆ. ಅವುಗಳಲ್ಲಿ ನಿಮಗೆ ಇಷ್ಟವಾದ ಹೇರ್ ಪ್ಯಾಕ್ ಅನ್ನು ಕೂದಲಿಗೆ ಹಚ್ಚಿಕೊಂಡು ಮಂದವಾದ, ಶೈನಿ ಕೂದಲನ್ನು ಪಡೆಯಬಹುದು.

ಬ್ರಾಹ್ಮೀ ಮತ್ತು ಮೆಹಂದಿಯ ಪ್ಯಾಕ್

ಬ್ರಾಹ್ಮೀ ಮತ್ತು ಮೆಹಂದಿಯ ಪ್ಯಾಕ್

ಬ್ರಾಹ್ಮೀ ಆರ್ಯುವೇದದಲ್ಲಿ ಬಳಸುವ ಔಷಧಿಯಾಗಿದೆ. ಇದು ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಕೂದಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಕೂದಲು ಉದುರುತ್ತಿದ್ದರೆ ಬ್ರಾಹ್ಮೀ ಮತ್ತು ಮೆಹಂದಿಯನ್ನು ಕಲೆಸಿ ಕೂದಲಿಗೆ ಹಚ್ಚಿದರೆ ಸಾಕು ಕೂದಲು ಉದುರುವುದು ಕಡಿಮೆಯಾಗುವುದು. ಹೇರ್ ಪ್ಯಾಕ್ ಮಾಡುವ ಮುನ್ನ ತೆಂಗಿನೆಣ್ಣೆಯಿಂದ ಮಸಾಜ್ ಮಾಡಿ, ನಂತರ ಈ ಹೇರ್ ಪ್ಯಾಕ್ ಹಚ್ಚಿದರೆ ಕೂದಲಿಗೆ ಮತ್ತಷ್ಟು ಒಳ್ಳೆಯದು.

ಬಿಸಿ ಎಣ್ಣೆಯ ಮಸಾಜ್

ಬಿಸಿ ಎಣ್ಣೆಯ ಮಸಾಜ್

ಎಲ್ಲಾ ಹೇರ್ ಪ್ಯಾಕ್ ಕ್ಕಿಂತ ಬಿಸಿ ಎಣ್ಣೆಯ ಮಸಾಜ್ ಕೂದಲಿಗೆ ತುಂಬಾ ಒಳ್ಳೆಯದು. ಈ ರೀತಿ ಮಾಡಿದರೆ ತಲೆಹೊಟ್ಟಿನ ಸಮಸ್ಯೆ ಇರುವುದಿಲ್ಲ. ಕೂದಲು ಒಣಗುವುದಿಲ್ಲ, ಕೂದಲಿನ ಬುಡ ಕೂಡ ಎಣ್ಣೆಯನ್ನು ಚೆನ್ನಾಗಿ ಹೀರಿಕೊಳ್ಳುತ್ತದೆ. ಇದರಿಂದ ಕೂದಲು ಬೇಗನೆ ಉದ್ದ ಬೆಳೆಯುವುದು.

ತ್ರಿಫಲಾ, ಬ್ರಾಹ್ಮೀ, ತುಳಸಿ

ತ್ರಿಫಲಾ, ಬ್ರಾಹ್ಮೀ, ತುಳಸಿ

ಈ ಹೇರ್ ಪ್ಯಾಕ್ ಅನ್ನು ಮನೆಯಲ್ಲಿಯೇ ಮಾಡಬಹುದು. ತ್ರಿಫಲಾ ಮತ್ತು ಬ್ರಾಹ್ಮೀ ಪುಡಿ , ತುಳಸಿ ಪುಡಿ ಇವುಗಳನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ಇಡಿ. ಕೂದಲಿಗೆ ಹಚ್ಚುವಾಗ ಎಣ್ಣೆ ಹಾಕಿ ಕಲೆಸಿ ಅರ್ಧ ಗಂಟೆಯ ಬಳಿಕ ತಲೆ ತೊಳೆಯಿರಿ. ಈ ಹೇರ್ ಪ್ಯಾಕಿ ಹಾಕಿದರೆ ಕೂದಲು ಸೊಂಪಾಗಿ ಬೆಳೆಯುತ್ತದೆ.

 ಮೆಹಂದಿ

ಮೆಹಂದಿ

ತಿಂಗಳಿಗೆ ಎರಡು ಬಾರಿಯಾದರೂ ಕೂದಲಿಗೆ ಮೆಹಮದಿ ಹಚ್ಚುವುದು ತುಂಬಾ ಒಳ್ಳೆಯದು. ಮೆಹಂದಿ ಕೆಲಸುವಾಗ ಅದಕ್ಕೆ ಸ್ವಲ್ಪ ದಾಸವಾಳದ ಎಲೆ, ಕರಿಬೇವಿನ ಎಲೆ, ನೆಲ್ಲಿ ಕಾಯಿ ಹಾಕಿ ಪೇಸ್ಟ್ ಮಾಡಿ ಮೆಹಂದಿ ಪುಡಿಯ ಜೊತೆ ಮಿಶ್ರಣ ಮಾಡಿ ತಲೆಗೆ ಹಚ್ಚಿ ಅರ್ಧ ಗಂಟೆಯ ಬಳಿಕ ಮೃದು ಶ್ಯಾಂಪೂ ಹಾಕಿ ತಲೆ ತೊಳೆಯಬೇಕು.

ಬಾಳೆ ಹಣ್ಣಿನ ಹೇರ್ ಪ್ಯಾಕ್

ಬಾಳೆ ಹಣ್ಣಿನ ಹೇರ್ ಪ್ಯಾಕ್

ಡ್ರೈ ಕೂದಲಿರುವವರು ಬಾಳೆ ಹಣ್ಣನ್ನು ಚೆನ್ನಾಗಿ ಹಿಸುಕಿ ಹಾಲಿನಲ್ಲಿ ಮಿಶ್ರಣ ತಲೆಗೆ ಹಚ್ಚಿ ನಂತರ ಮೃದುವಾದ ಶ್ಯಾಂಪೂನಿಂದ ತೊಳೆದರೆ ಡ್ರೈ ಕೂದಲಿನ ಸಮಸ್ಯೆ ಇರುವುದಿಲ್ಲ. ಕೂದಲು ಹೊಳಪನ್ನು ಪಡೆಯುತ್ತದೆ.

English summary

Hair Growth With Homemade Packs| Tips For Hair Care | ಕೂದಲನ್ನು ಉದ್ದ ಮಾಡುವ ಹೇರ್ ಪ್ಯಾಕ್ ಗಳು | ಕೂದಲಿನ ಆರೈಕೆಗೆ ಕೆಲ ಸಲಹೆಗಳು

Why waste money on expensive hair treatments when you can naturally grow hair with homemade packs? Here are few simple yet effective hair packs to increase hair growth.
X
Desktop Bottom Promotion