For Quick Alerts
ALLOW NOTIFICATIONS  
For Daily Alerts

ಸೀಳುತುದಿಯನ್ನು ತಪ್ಪಿಸಲು ಕೆಲವು ಟಿಪ್ಸ್

By Hemanth Amin
|

ಪುರುಷರ ಕೂದಲಿನ ಆರೈಕೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಉದ್ಯಮ. ಪುರುಷರ ಕೂದಲಿನ ಆರೈಕೆ ಅದು ತುಂಬಾ ಗಂಭೀರವಾಗಿ ಪರಿಗಣಿಸಿದೆ ಮತ್ತು ಹೆಚ್ಚುತ್ತಿರುವ ಬೇಡಿಕೆಯನ್ನು ಅದು ಈಡೇರಿಸುತ್ತದೆ. ಇಂದು ಕೂದಲಿನ ಆರೈಕೆ ಕೇವಲ ಮಹಿಳೆಯರಿಗೆ ಮಾತ್ರವಲ್ಲ, ಪುರುಷರು ಇಂದಿನ ದಿನಗಳಲ್ಲಿ ತಮ್ಮ ಕೂದಲು ಮತ್ತು ಅದರ ಆರೈಕೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ಹಲವಾರು ರೀತಿಯ ಕೂದಲಿನ ಆರೈಕೆಯ ಉತ್ಪನ್ನಗಳು ಮಾರುಕಟ್ಟೆಗೆ ಬರುತ್ತಿವೆ. ಮಹಿಳೆಯರಂತೆ ಕೂದಲಿನ ತುದಿ ವಿಭಜನೆಯಾಗುವ ಸಮಸ್ಯೆಯನ್ನು ಪುರುಷರು ಕೂಡ ಎದುರಿಸುತ್ತಿದ್ದಾರೆ. ಕೂದಲಿನ ಹೊರಪೊರೆಯ ರಕ್ಷಣಾತ್ಮಕ ಹೊರಪದರವು ದೂರ ಹೋದಾಗ ಕೂದಲಿನ ಬುಡದ ವಿಭಜನೆಯಾಗುತ್ತದೆ.

ಪುರುಷರಲ್ಲಿ ಕೂದಲಿನ ತುದಿ ವಿಭಜನೆಗೆ ಹಲವಾರು ಕಾರಣಗಳಿರಬಹುದು. ಹೆಚ್ಚಿನ ಪುರುಷರು ಹೊರಗಡೆ ಸುತ್ತಾಡುತ್ತಾರೆ ಮತ್ತು ಬೈಕ್ ಚಾಲನೆ ಮಾಡುವಾಗ ಹೆಚ್ಚಿನ ಸಮಯ ಹೆಲ್ಮೆಟ್ ಧರಿಸುತ್ತಾರೆ. ಇತರ ಕಾರಣಗಳೆಂದರೆ ಇಂದಿನ ದಿನಗಳಲ್ಲಿ ಪುರುಷರು ಹೆಚ್ಚಾಗಿ ತಮ್ಮ ಕೂದಲನ್ನು ಅಂದಗೊಳಿಸಲು ಹಲವಾರು ರೀತಿಯ ಉತ್ಪನ್ನಗಳನ್ನು ಬಳಸುತ್ತಾರೆ ಮತ್ತು ಕೂದಲನ್ನು ನೇರವಾಗಿಸುತ್ತಾರೆ. ಸಲೂನ್ ನಲ್ಲಿ ಬಳಸುವ ಅಂದಗೊಳಿಸುವ ಉತ್ಪನ್ನಗಳಿಂದ ಹೀಗೆ ಆಗಬಹುದು. ಬದಲಾದ ಜೀವನಶೈಲಿ ಮತ್ತು ಕೂದಲಿನ ಆರೈಕೆ ಬಗ್ಗೆ ಸರಿಯಾದ ಕ್ರಮ ತೆಗೆದುಕೊಳ್ಳದೆ ಇರುವುದರಿಂದ ಪುರುಷರಲ್ಲಿಯೂ ಕೂದಲಿನ ಸಮಸ್ಯೆಗಳು ಅತಿಯಾಗುತ್ತಿದೆ.

ಸೀಳು ತುದಿಯನ್ನು ದೂರ ಮಾಡಲು ಹಲವಾರು ಚಿಕಿತ್ಸಾ ಕ್ರಮಗಳಿವೆ. ಕೇವಲ ಶಾಂಪೂ ಅಥವಾ ಕಂಡೀಷನರ್ ಹಾಕುವುದು ಮಾತ್ರ ಪುರುಷರ ಕೂದಲಿನ ರಕ್ಷಣೆಯಲ್ಲ. ಸೀಳು ತುದಿಯ ಸಮಸ್ಯೆಯನ್ನು ಎದುರಿಸುವಾಗ ನೀವು ನಿಮ್ಮ ಕೂದಲನ್ನು ಟ್ರಿಮ್ ಮಾಡಬೇಕಾಗಬಹುದು. ಸೀಳು ತುದಿ ಸಮಸ್ಯೆಗೆ ಚಿಕಿತ್ಸೆ ಮತ್ತು ಅದನ್ನು ತಪ್ಪಿಸಲು ಹಲವಾರು ರೀತಿಯ ಕೂದಲಿನ ಆರೈಕೆಯ ಆಯ್ಕೆಗಳಿವೆ

ಸೀಳು ತುದಿ ಎದುರಿಸುವ ಪುರುಷರಿಗೆ ಕೂದಲಿನ ಆರೈಕೆಯ ಹಲವಾರು ಟಿಪ್ಸ್ ಗಳು.

ಗುಣಮಟ್ಟದ ಶಾಖ ಸಾಧನಗಳು

ಗುಣಮಟ್ಟದ ಶಾಖ ಸಾಧನಗಳು

ಕೂದಲನ್ನು ಅಂದಗೊಳಿಸಲು ಪುರುಷರು ಹೆಚ್ಚಿನ ಸಾಧನಗಳನ್ನು ಬಳಸುತ್ತಾರೆ. ನಿಮ್ಮ ಕೂದಲಿನ ತುದಿ ವಿಭಜನೆಗೆ ಕಾರಣವಾಗುವ ಕಡಿಮೆ ಗುಣಮಟ್ಟದ ಸಾಧನಗಳ ಬದಲಿಗೆ ಗುಣಮಟ್ಟದ ಸಾಧನಗಳನ್ನು ಬಳಸುವುದು ತುಂಬಾ ಮುಖ್ಯ. ಬ್ಲೋ ಡ್ರೈಯರ್ ಸಾಮಾನ್ಯವಾಗಿ ಪುರುಷರು ಉಪಯೋಗಿಸುವ ಸಾಧನ. ಯಾವುದಾದರೂ ಬ್ರಾಂಡ್ ನ ಸ್ವಲ್ಪ ಒಳ್ಳೆಯ ಗುಣಮಟ್ಟದ ಸಾಧನ ಆಯ್ಕೆ ಮಾಡುವುದು ತುಂಬಾ ಮುಖ್ಯ.

ಶಾಂತರಾಗಿರಿ

ಶಾಂತರಾಗಿರಿ

ಹೆಚ್ಚಿನ ಪುರುಷರಿಗೆ ತಾಳ್ಮೆಯಿಂದ ಕೂದಲಿನ ಆರೈಕೆ ಮಾಡುವುದು ತುಂಬಾ ಹೊಸ ವಿಷಯ. ಇದರಿಂದ ಅಂದಗೊಳಿಸುವ ಸಾಧನ ಮತ್ತು ಕೂದಲಿನ ಆರೈಕೆಯ ಉತ್ಪನ್ನಗಳನ್ನು ಬಳಸುವ ಮೊದಲು ಅದರ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಮುಖ್ಯ. ಅವಸರದಿಂದ ನಿಮ್ಮ ಕೂದಲನ್ನು ಒಣಗಿಸುವುದು ಅಥವಾ ಅತಿಯಾದ ಶಾಖದಿಂದ ನಿಮ್ಮ ಕೂದಲಿಗೆ ಹಾನಿಯಾಗಿ ಹಲವಾರು ಸಮಸ್ಯೆಗಳು ಆರಂಭವಾಗಬಹುದು.

ಆಹಾರ ಕ್ರಮ

ಆಹಾರ ಕ್ರಮ

ಪುರುಷರ ಕೂದಲಿನ ಆರೈಕೆ ಕೇವಲ ಉತ್ಪನ್ನಗಳನ್ನು ಮಾತ್ರ ಒಳಗೊಂಡಿಲ್ಲ. ಆರೋಗ್ಯಕರ ಆಹಾರ ಕ್ರಮವನ್ನು ಪಾಲಿಸುವುದು ಕೂಡ ಮುಖ್ಯ. ನಿಮ್ಮ ದೈನಂದಿನ ಆಹಾರವು ಪ್ರಮುಖ ಪೋಷಕಾಂಶ, ಹೆಚ್ಚುವರಿಯಾಗಿ ಫಾಲಿಕ್ ಆಮ್ಲ ಮತ್ತು ಬಯೋಟಿನ್ ನ್ನು ಒಳಗೊಂಡಿರಬೇಕು. ಹಸಿರು ಎಲೆಯ ತರಕಾರಿಗಳು, ಕಿತ್ತಳೆ, ಸೋಯಾಬೀನ್, ಕಂದು ಅಕ್ಕಿ, ಮಸೂರ ಮತ್ತು ವಾಲ್ ನಟ್ಸ್ ನಿಮ್ಮ ಕೂದಲಿನ ಬೆಳವಣಿಗೆ ಮತ್ತು ಬಲಪಡಿಸಲು ಪ್ರಮುಖ ಪೌಷ್ಠಿಕಾಂಶಗಳನ್ನು ಒದಗಿಸುತ್ತದೆ.

ಸೂಕ್ತವಾಗಿ ಕೂದಲು ಒಣಗಿಸುವುದು

ಸೂಕ್ತವಾಗಿ ಕೂದಲು ಒಣಗಿಸುವುದು

ಸ್ನಾನದ ಬಳಿಕ ಕೂದಲನ್ನು ತುಂಬಾ ಎಚ್ಚರಿಕೆ ಮತ್ತು ಸೂಕ್ಷ್ಮವಾಗಿ ಒಣಗಿಸಿ. ಅತಿಯಾದ ಬಿಸಿ ಮತ್ತು ಅಸಮರ್ಪಕ ವಿಧಾನದಿಂದ ಕೂದಲು ಹಾನಿಗೊಳಗಾಗುವುದನ್ನು ತಪ್ಪಿಸಬಹುದು. ಸ್ವಾಭಾವಿಕವಾಗಿ ಕೂದಲನ್ನು ಶೇ. 80-90ರಷ್ಟು ಒಣಗಲು ಬಿಡಬೇಕು. ಇದರ ಬಳಿಕ ಬ್ಲೋ ಡ್ರೈಯರ್ ಉಪಯೋಗಿಸಬೇಕು. ಇದರ ಬಿಸಿಯನ್ನು ನಿಯಂತ್ರಿಸುವ ಸ್ವಿಚ್ ನೊಂದಿಗೆ ಎಚ್ಚರಿಕೆಯಿಂದ ಬಳಸಿ ಮತ್ತು ಸೂಕ್ತ ರೀತಿಯಲ್ಲಿ ಕೂದಲು ಒಣಗಿಸಿ.

ನಿಯಮಿತವಾಗಿ ತುಂಡಾಗುವುದು

ನಿಯಮಿತವಾಗಿ ತುಂಡಾಗುವುದು

ನೀವು ಸಲೂನಿಗೆ ಹೋಗಿ ನಿಮ್ಮ ಕೂದಲನ್ನು ಟ್ರಿಮ್ ಮಾಡುತ್ತೀರಿ ಅಥವಾ ಕಟ್ ಮಾಡಿಸುತ್ತೀರಿ. ಬುಡ ವಿಭಜನೆ ಬಗ್ಗೆ ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಅದು ಬರುತ್ತಲೇ ಇರುತ್ತದೆ. ನಿಯಮಿತವಾಗಿ ಟ್ರಿಮ್ ಮಾಡುವುದರಿಂದ ತುದಿ ವಿಭಜನೆ ಹರಡಿ ತುಂಬಾ ಕೆಟ್ಟ ಮಟ್ಟಕ್ಕೆ ತಲುಪಿ ಮತ್ತಷ್ಟು ಕೂದಲನ್ನು ಹಾನಿ ಮಾಡುವುದಕ್ಕೆ ಮೊದಲು ಇದನ್ನು ತಡೆಯಬಹುದು.

ಕಂಡೀಷನರ್

ಕಂಡೀಷನರ್

ಸ್ನಾನದ ಬಳಿಕ ಲಿವ್ ಇನ್ ಕಂಡೀಷನರ್ ಬಳಸುವ ಮೂಲಕ ಪದರಕ್ಕೆ ಹೆಚ್ಚಿನ ರಕ್ಷಣೆ ಒದಗಿಸಿ ಸೀಳು ತುದಿಯನ್ನು ತಡೆಯಬಹುದು. ಲಿವ್ ಇನ್ ಕಂಡೀಷನರ್ ಹಾಕಿದ ಬಳಿಕ ತಲೆಗೆ ಟವೆಲ್ ಹಾಕಬೇಕೆಂದಿದ್ದರೆ ಸೀಳು ತುದಿಯನ್ನು ತಡೆಯಲು ಇರುವಂತಹ ಕೆಲವೊಂದು ಕಂಡೀಷನರ್ ಗಳನ್ನು ಬಳಸಿ. ಇದು ತುಂಬಾ ಪರಿಣಾಮಕಾರಿ.

English summary

Hair Care Tips For Split Ends

The reason for split ends in men can be several. Men are more outgoing and most men wear helmets for long hours while riding their bikes. Other reasons could be due to the fact that most men nowadays tend to use hair grooming equipments like blowers and even straightens or due to hair grooming solutions used in saloons.
Story first published: Thursday, December 5, 2013, 14:15 [IST]
X
Desktop Bottom Promotion