For Quick Alerts
ALLOW NOTIFICATIONS  
For Daily Alerts

ವಧುವಿನ ಕೂದಲ ಆರೈಕೆಗೆ ಕೆಲ ಟಿಪ್ಸ್

By Super
|

ಜೀವನದಲ್ಲಿ ಒಮ್ಮೆ ಆಗುವ ಮದುವೆ ಪ್ರತಿಯೊಬ್ಬ ಹೆಣ್ಣಿಗೂ ಒಂದು ಸುಂದರ ಆಚರಣೆಯ ದಿನವಾಗಿರುತ್ತದೆ.ಮದುವೆಯ ದಿನ ಸುಂದರವಾಗಿ ಕಾಣಬೇಕು,ಸೊಗಸಾಗಿ ತಯಾರಾಗಬೇಕು ಎಂಬುದು ಪ್ರತಿಯೊಬ್ಬ ಹೆಣ್ಣಿನ ಇಚ್ಛೆ.ಆ ರೀತಿ ಸುಂದರವಾಗಿ ಕಾಣಲು ತ್ವಚೆ ಬಗ್ಗೆ ಎಷ್ಟು ಕಾಳಜಿ ವಹಿಸಬೇಕೋ ಅಷ್ಟೇ ಮುಖ್ಯವಾಗಿ ಕೂದಲಿನ ಆರೈಕೆ ಕೂಡ ಮುಖ್ಯ.ಸುಂದರವಾದ ಕೂದಲು ನಿಮ್ಮದಾಗಬೇಕು ಎಂದಲ್ಲಿ ಮದುವೆಗೆ ಎರಡು ದಿನ ಮೊದಲು ಆರೈಕೆ ಪ್ರಾರಂಭಿಸಿದರೆ ಯಾವುದೇ ಉಪಯೋಗವಿಲ್ಲ.ಮನೆಯಲ್ಲಿಯೇ ಕುಳಿತು ಕೆಲವು ತಿಂಗಳುಗಳ ಮೊದಲಿನಿಂದ ಆರೈಕೆ ಪ್ರಾರಂಭಿಸಿದರೆ ಮದುವೆಯ ದಿನ ನಿಮ್ಮ ಕೂದಲು ಯಾವ ಕೇಶವಿನ್ಯಾಸಕ್ಕೆ ಬೇಕಾದರೂ ಹೊಂದಿಕೊಂಡು ಎಲ್ಲರ ಗಮನ ಸೆಳೆಯುವಂತೆ ಮಾಡಬಹುದು.ಇದಕ್ಕಾಗಿ ನೀವು ತಿಂಗಳುಗಳ ಮೊದಲಿನಿಂದಲೇ ಬ್ಯೂಟಿಪಾರ್ಲರ್ ಗೆ ಹೋಗಿ ಹಣ ತೆರಬೇಕು ಎಂಬುದಿಲ್ಲ ಕೆಲವು ನೈಸರ್ಗಿಕ ವಿಧಾನಗಳನ್ನು ಅನುಸರಿಸಿ ನಿಮ್ಮ ಕೂದಲು ಸಹಜ ಸುಂದರವಾಗಿ ಕಾಣುವಂತೆ ಮಾಡಬಹದು.ಇದರಿಂದ ಕೂದಲಿಗೆ ಯಾವುದೇ ರೀತಿಯ ಹಾನಿ ಆಗುವುದನ್ನು ತಪ್ಪಿಸಬಹುದು.

ಮದುಮಗಳು ತನ್ನ ಕೂದಲನ್ನು ಹೇಗೆ ಆರೈಕೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಪರಿಣಿತ ತಜ್ಞರು ನೀಡಿರುವ ಕೆಲವು ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ.ಓದಿ ಇದನ್ನು ಅನುಸರಿಸಿ ಮತ್ತು ಮದುವೆಯಲ್ಲಿ ಸುಂದರವಾಗಿ ಎಲ್ಲರ ಕಣ್ಮನ ಸೆಳೆಯಿರಿ.

Hair care tips for bride-to-be

ಆದಷ್ಟು ಬೇಗ ಕಾಳಜಿವಹಿಸಲು ಪ್ರಾರಂಭಿಸಿ:
ಮದುವೆಗೆ ನಾಲ್ಕು ಐದು ದಿನಗಳಿರುವಾಗ ಕೂದಲನ್ನು ಕಾಳಜಿವಹಿಸುತ್ತೇನೆ ಎಂದರೆ ಅದು ಸಾಧ್ಯವಾಗದ ಮಾತು.ಆದ್ದರಿಂದ ಕೆಲವು ತಿಂಗಳುಗಳ ಮೊದಲೇ ಕೂದಲನ್ನು ಕಾಳಜಿ ತೆಗೆದುಕೊಳ್ಳಲು ಪ್ರಾರಂಭಿಸಿ.ಇದರಿಂದ ನೀವು ಕೊನೆ ಕ್ಷಣದಲ್ಲಿ ಆತಂಕ ಹೊಂದುವುದು ತಪ್ಪುತ್ತದೆ.ಕೂದಲ ಆರೈಕೆಯನ್ನು ಹೇಗೆ ಮಾಡಬೇಕು ಎಂಬುದನ್ನು ಕೂದಲ ತಜ್ಞರ ಸಲಹೆ ಪಡೆದು ಪ್ರಾರಂಭಿಸಿ.

ನಿಮ್ಮ ಕೂದಲು ಯಾವ ರೀತಿಯದು ಎಂಬುದನ್ನು ತಿಳಿದು ಆರೈಕೆ ಮಾಡಿ:

ನಿಮ್ಮ ಇಚ್ಚೆಯಂತೆ ಕೂದಲನ್ನು ಆರೈಕೆ ಮಾಡುವ ಮೊದಲು ನಿಮ್ಮ ಕೂದಲು ಯಾವ ರೀತಿಯದು ಎಂಬುದನ್ನು ತಿಳಿದುಕೊಳ್ಳಿ.ನಿಮ್ಮದು ಒಣ ಕೂದಲಾಗಿದ್ದರೆ ಹೆಚ್ಚು ಹೊಟ್ಟು ಇರಬಹುದು ಮತ್ತು ಅದನ್ನು ಹೋಗಲಾಡಿಸಲು ಮಾರುಕಟ್ಟೆಯಲ್ಲಿ ಲಭ್ಯವಿರುವ ಆಂಟಿ ಡ್ಯಾಂಡ್ರಾಫ್ ಬಳಸಿದಾಗ ಮಾತ್ರ ಸಾಧ್ಯ.ವಧುವಿನ ಸುಂದರ ಕೂದಲಿನ ಸಲಹೆಗೆ ತಜ್ಞರು ಹೇಳುವ ಪ್ರಕಾರ ಶಾಂಪೂ ಹಾಕಿ ಕೂದಲನ್ನು ತೊಳೆದ ನಂತರ ಸ್ವಾಭಾವಿಕವಾಗಿ ಇರಿಸುವುದರಿಂದ ಕೂದಲು ತನ್ನ ಹೊಳಪನ್ನು ಹೆಚ್ಚು ಕಾಲ ಉಳಿಸಿಕೊಳ್ಳುತ್ತದೆ ಎನ್ನುತ್ತಾರೆ.

ನೈಸರ್ಗಿಕ ಕೂದಲ ಆರೈಕೆ ಆಯ್ದುಕೊಳ್ಳಿ:
ನೈಸರ್ಗಿಕ ಉತ್ಪನ್ನಗಳನ್ನು ಬಳಸಿ ಕೂದಲನ್ನು ನೈಸರ್ಗಿಕವಾಗಿ ಆರೈಕೆ ಮಾಡಿ ಇದರಿಂದ ಕೂದಲು ಸಹಜ ಸುಂದರವಾಗಿರುತ್ತದೆ.ರಾಸಾಯನಿಕ ವಸ್ತುಗಳಿರುವ ಕೂದಲ ಆರೈಕೆ ಉತ್ಪನ್ನಗಳನ್ನು ಬಳಸಿದಲ್ಲಿ ಕೂದಲಿಗೆ ಹಾನಿಯಾಗುತ್ತದೆ ಮತ್ತು ಹೊಟ್ಟು,ಕೂದಲು ಉದುರುವಿಕೆ ಇವುಗಳೆಲ್ಲ ಹೆಚ್ಚುತ್ತವೆ.ಜೊತೆಗೆ ಮದುಮಗಳು ಕೂದಲನ್ನು ಹರ್ ಡ್ರೈಯರ್ ನಲ್ಲಿ ಕೂದಲು ಒಣಗಿಸುವುದು,ಕೂದಲಿಗೆ ಬಣ್ಣ ಬಳಸುವುದು,ಅಥವಾ ಇತರ ರಾಸಾಯನಿಕ ವಸ್ತುಗಳ ಬಳಕೆ ಮಾಡುವುದರಿಂದ ಕೂದಲು ತನ್ನ ಬಲವನ್ನು ಕಳೆದುಕೊಳ್ಳುತ್ತದೆ.ಒಂದು ವೇಳೆ ನಿಮ್ಮ ಕೂದಲಿಗೆ ಬಣ್ಣ ಬಳಸಬೇಕೆಂದಿದ್ದಲ್ಲಿ ಮದರಂಗಿಗೆ,ಡಿಕಾಕ್ಶನ್ ಮತ್ತು ನಿಂಬೆ ರಸ ಸೇರಿಸಿ ಬಳಸುವುದರಿಂದ ಕೂದಲು ನೈಸರ್ಗಿಕವಾಗಿ ಸುಂದರವಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ.ಹೊಳೆಯುವ ಕೂದಲು ನಿಮ್ಮದಾಗಬೇಕೆಂದಿದ್ದಲ್ಲಿ ತಿಂಗಳಿಗೆ ಒಮ್ಮೆಯಾದರೂ ಮೊಟ್ಟೆಯನ್ನು ಕೂದಲಿಗೆ ಹೆಚ್ಚಬೇಕು ಎನ್ನುತ್ತಾರೆ.

ಕೂದಲನ್ನು ಆಗಾಗ ಸ್ವಚ್ಚಗೊಳಿಸುತ್ತಿರಿ:
ಕಡಿಮೆ ಪ್ರಮಾಣದಲ್ಲಿ ಶಾಂಪೂ ಬಳಸಿ ಕೂದಲನ್ನು ವಾರದಲ್ಲಿ 3 ಬಾರಿಯಾದರೂ ಸ್ವಚ್ಚಗೊಳಿಸಲೇ ಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.ಬೇರೆ ಬೇರೆ ರೀತಿಯ ಕೇಶವಿನ್ಯಾಸಕ್ಕೆ ಮತ್ತು ಕೂದಲು ಹೊಳಪಿಗೆ ಸೂಕ್ತವಾಗುವಂತಹ ಪೌಷ್ಟಿಕಾಂಶವಿರುವ ಕಂಡಿಷನರ್ ಅನ್ನು ಕೂದಲಿಗೆ ಬಳಸಬೇಕು ಎಂದು ಹೇಳಲಾಗಿದೆ.ಮದುವೆಯ ಮೊದಲು ಕೆಲವು ದಿನಗಳು ಕೂದಲಿಗೆ ಮಸಾಜ್ ಮಾಡುವುದರಿಂದ ನಿಮ್ಮ ಇಚ್ಚೆಯಂತೆ ಕೂದಲು ಸುಂದರವಾಗಿ ನಯವಾಗುತ್ತದೆ ಎಂದು ಪರಿಣಿತರು ತಿಳಿಸಿದ್ದಾರೆ.

ಈ ಮೇಲೆ ತಿಳಿಸಿದ ಸಲಹೆಗಳು ಮದುಮಗಳಿಗೆ ಸೂಕ್ತವಾಗುವ ಕೂದಲ ಆರೈಕೆಗಳು.ಆದ್ದರಿಂದ ಇವುಗಳನ್ನು ಅನುಸರಿಸಿ ಸುಂದರವಾದ ಕೂದಲು ನಿಮ್ಮದಾಗಿಸಿಕೊಳ್ಳಿ.

English summary

Hair care tips for bride-to-be

Every bride has a keen desire to look unique, elegant,beautiful and attractive on her special day of wedding.
Story first published: Saturday, December 14, 2013, 10:12 [IST]
X
Desktop Bottom Promotion