For Quick Alerts
ALLOW NOTIFICATIONS  
For Daily Alerts

ಸ್ವಿಮ್ಮಿಂಗ್ ಮಾಡುವವರಿಗೆ ಹೇರ್ ಕೇರ್ ಟಿಪ್ಸ್

|

ಈಜು ಕೊಳಗಳಲ್ಲಿ ಈಜುವ ಮುನ್ನ ಕೂದಲಿನ ಬಗ್ಗೆ ಕೇರ್ ತೆಗೆದುಕೊಳ್ಳುತ್ತಿದ್ದೀರಾ? ಇಲ್ಲವಾದರೆ ಇವತ್ತಿನಿಂದಲೇ ಕೂದಲಿನ ಆರೈಕೆ ಬಗ್ಗೆ ಗಮನ ಕೊಡಿ. ಈಜು ಕೊಳದಲ್ಲಿರುವ ಕ್ಲೋರಿನ್ ಅಂಶ ನಿಮ್ಮ ಕೂದಲಿಗೆ ತಾಗಿದರೆ ನಿಮ್ಮ ಕೂದಲು ಒರಟಾಗಿ, ಹೊಳಪನ್ನು ಕಳೆದುಕೊಳ್ಳುತ್ತದೆ, ಅಲ್ಲದೆ ಕೂದಲು ಉದುರುವ ಸಮಸ್ಯೆಯೂ ಕಂಡು ಬರುವುದು.

ಇಲ್ಲಿ ನಿಮ್ಮ ಕೂದಲಿನ ರಕ್ಷಣೆಗೆ ಈಜು ಕೊಳಕ್ಕೆ ಇಳಿಯುವ ಮೊದಲು ಏನು ಮಾಡಬೇಕೆಂಬ ಟಿಪ್ಸ್ ನೀಡಿದ್ದೇವೆ ನೋಡಿ:

Hair Care For Swimmers

* ತಲೆಯನ್ನು ತೊಳೆಯಿರಿ
ಈಜು ಕೊಳಕ್ಕೆ ಇಳಿಯುವ ಮುನ್ನ ಶುದ್ಧವಾದ ನೀರಿನಲ್ಲಿ ತಲೆ ತೊಳೆಯುವುದು ಒಳ್ಳೆಯದು, ಆದರೆ ತಲೆ ತೊಳೆಯುವಾಗ ಶ್ಯಾಂಪೂ ಹಾಕಬೇಡಿ, ಬರೀ ನೀರು ಮಾತ್ರ ಹಾಕಿ.

* ಸ್ವಿಮ್ಮಿಂಗ್ ಹೆಡ್ ಕ್ಯಾಪ್
ನೀರಿಗೆ ಇಳಿಯುವ ಮುಂಚೆ ಸ್ವಿಮ್ಮಿಂಗ್ ಹೆಡ್ ಕ್ಯಾಪ್ ಹಾಕಲೇಬೇಕು, ಇಲ್ಲದಿದ್ದರೆ ನಿಮ್ಮ ಕೂದಲು ಹಾಳಾಗುವುದು. ಕ್ಯಾಪ್ ಬಿಗಿಯಾಗಿರಬೇಕು, ನಂತರ ಕ್ಯಾಪ್ ಬಿಚ್ಚುವಾಗ ನಿಧಾನಕ್ಕೆ ಬಿಚ್ಚಿ.

* ನಂತರ ಕೂದಲಿಗೆ ಮೃದು ಸೋಪು ಹಾಕಿ ಶುದ್ಧ ನೀರಿನಲ್ಲಿ ತಲೆ ತೊಳೆಯಿರಿ. ಇದರಿಂದ ತಲೆ ಕೂದಲಿನಲ್ಲಿ ಉಳಿದಂತಹ ಸ್ವಲ್ಪ ಕ್ಲೋರಿನ್ ಅಂಶವನ್ನು ಹೋಗಲಾಡಿಸಬಹುದು.

* ಕಂಡೀಷನರ್: ನಂತರ ಕೂದಲಿಗೆ ಗುಣಮಟ್ಟದ ಕಂಡೀಷನರ್ ಹಚ್ಚಿ ತಲೆಗೆ ನೀರು ಹಾಕಿ ಟವಲ್ ನಿಂದ ಮೃದುವಾಗಿ ಕೂದಲನ್ನು ಒರೆಸಿ ಗಾಳಿಯಲ್ಲಿ ಒಣಗಿಸಿ.
ಈ ಅಂಶಗಳನ್ನು ಗಮನಿಸಿದರೆ ಕ್ಲೋರಿನ್ ಇರುವ ಈಜುಕೊಳದಲ್ಲಿ ಎಷ್ಟೇ ಹೊತ್ತು ಈಜಾಡಿದರು ಕೂದಲು ಹಾಳಾಗುವುದಿಲ್ಲ.

English summary

Hair Care For Swimmers

These hair care tips for swimmers need to be followed before and after your swim. Take a look at these hair care treatments for swimmers.
Story first published: Tuesday, November 5, 2013, 12:45 [IST]
X
Desktop Bottom Promotion