For Quick Alerts
ALLOW NOTIFICATIONS  
For Daily Alerts

ಕೂದಲು ಬೇಗನೆ ಉದ್ದ ಬೆಳೆಯಬೇಕೆ? ಇಲ್ಲಿದೆ ಟಿಪ್ಸ್

|

ಕೂದಲು ಬೇಗನೆ ಉದ್ದ ಬರಬೇಕೆಂಬ ಆಸೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಉದ್ದ ಕೂದಲನ್ನು ಬಿಡಲು ಇಷ್ಟಪಡದಿದ್ದರೂ, ಕೂದಲು ಕತ್ತರಿಸಿದ ಬಳಿಕ ಬೇಗನೆ ಉದ್ದ ಬೆಳೆಯದಿದ್ದರೆ ಚಡಪಡಿಕೆ ಪ್ರಾರಂಭವಾಗುತ್ತದೆ. ಕೂದಲು ಉದ್ದ ಬೆಳೆಯಲಿಲ್ಲವೆಂದರೆ ಏನೋ ತಳಮಳ, 'ಅಯ್ಯೋ ಕೂದಲು ಏಕೆ ಉದ್ದ ಬರುತ್ತಿಲ್ಲ, ನನ್ನ ಕೂದಲಿಗೆ ಹಾನಿಯಾಗಿದೆಯೇ' ಎಂದು ಅನಿಸಲಾರಂಭಿಸುತ್ತದೆ.

ಮತ್ತೆ ಕೆಲವರಿಗೆ ಉದ್ದ ಕೂದಲಿನ ನಾಗವೇಣಿ ಆಗಬೇಕೆಂಬ ಆಸೆ ಇರುತ್ತದೆ. ಆದರೆ ಕೂದಲು ಉದ್ದ ಬೆಳೆಯುವುದಿಲ್ಲ. ಕೂದಲು ಬೇಗನೆ ಉದ್ದ ಬೆಳೆಯಬೇಕೆ? ಕೂದಲಿನ ಆರೈಕೆಗೆ ನೀವು ಅನುಸರಿಸುತ್ತಿರುವ ವಿಧಾನ ಸರಿಯಾಗಿ ಇದೆಯೇ ಎಂದು ನೋಡಿ, ಏಕೆಂದರೆ ಈ ಕೆಳಗಿನ ವಿಧಾನಗಳನ್ನು ಪಾಲಿಸಿದವರೆಗೆ ಕೂದಲು ಉದ್ದ ಬೆಳೆಯುತ್ತಿಲ್ಲ ಎಂಬ ಸಮಸ್ಯೆ ಕಂಡು ಬರುವುದಿಲ್ಲ:

ತಲೆಯನ್ನು ಬಾಚಬೇಕು

ತಲೆಯನ್ನು ಬಾಚಬೇಕು

ತಲೆಯನ್ನು ದಿನದಲ್ಲಿ ಎರಡು ಬಾರಿ ಬಾಚಿ, ಗಿಡ್ಡ ಕೂದಲಿನವರು ದಿನದಲ್ಲಿ 3-4 ಬಾರಿ ಬಾಚಬಹುದು. ತಲೆಬಾಚಿದಾಗ ತಲೆಗೆ ಮಸಾಜ್ ದೊರೆತು ಕೂದಲಿನ ಬೆಳವಣಿಗೆಗೆ ಸಹಕಾರಿಯಾಗುವುದು. ತಲೆ ಬಾಚಲು ಸೂಕ್ತವಾದ ಬಾಚಣಿಕೆಯನ್ನು ಬಳಸಿ.

ತಲೆ ಬಾಚುವಾಗ ಸ್ವಲ್ಪ ಒತ್ತಡ ಹಾಕಿ ಬಾಚಿ

ತಲೆ ಬಾಚುವಾಗ ಸ್ವಲ್ಪ ಒತ್ತಡ ಹಾಕಿ ಬಾಚಿ

ಕೆಲವರು ತಲೆ ಬಾಚುವಾಗ ಒತ್ತಡ ಹಾಕುವುದೇ ಇಲ್ಲ, ಒತ್ತಡ ಹಾಕಿದರೆ ಎಲ್ಲಿ ಕೂದಲು ಉದುರಿ ಹೋಗುತ್ತದೋ ಎಂಬ ಭಯ. ಆದರೆ ಸ್ವಲ್ಪ ಒತ್ತಡ ಹಾಕಿ ತಲೆ ಬಾಚುವುದು ಕೂದಲಿನ ಬೆಳವಣಿಗೆಗೆ ಸಹಕಾರಿ, ಆದ್ದರಿಂದ ಭಯಬೇಡ, ಬಾಚಣಿಕೆ ಮೇಲೆ ಒತ್ತಡ ಹಾಕಿ ತಲೆಯನ್ನು ಬಾಚಿ.

 ಎಣ್ಣೆ

ಎಣ್ಣೆ

ತುಂಬಾ ಜನರಿಗೆ ಎಣ್ಣೆ ಅಂದರೆ ಅಲರ್ಜಿ, ಕೂದಲಿಗೆ ತಾಗಿಸುವುದಿಲ್ಲ. ಆದರೆ ವಾರದಲ್ಲಿ 3-4 ಬಾರಿ ತಲೆಗೆ ಎಣ್ಣೆ ಹಚ್ಚಿ ಅರ್ಧ ಗಂಟೆಯ ಬಳಿಕ ಶ್ಯಾಂಪೂ ಹಚ್ಚಿ ತಲೆ ತೊಳೆಯಿರಿ.

ದಾಸವಾಳ

ದಾಸವಾಳ

ದಾಸವಾಳ ಕೂದಲಿನ ಬೆಳವಣಿಗೆಗೆ ತುಂಬಾ ಸಹಕಾರಿ. ಎಣ್ಣೆಗೆ ದಾಸವಾಳದ ಹೂ ಹಾಕಿ ಕುದಿಸಿ, ಆ ಎಣ್ಣೆಯನ್ನು ಹಚ್ಚಿದರೆ ಕೂದಲು ಬೇಗನೆ ಉದ್ದ ಬೆಳೆಯುವುದು.

ಕೂದಲನ್ನು ಕಟ್ಟುವುದು

ಕೂದಲನ್ನು ಕಟ್ಟುವುದು

ಮಲಗುವ ಮುನ್ನ ಸಡಿಲವಾದ ಜಡೆ ಹಾಕಿ ಕೂದಲನ್ನು ಕಟ್ಟಿ, ಇದರಿಂದ ಕೂದಲು ಸಿಕ್ಕಾಗುವುದಿಲ್ಲ, ಇದರಿಂದಾಗಿ ಕೂದಲು ಹಾಳಾಗುವುದಿಲ್ಲ.

ವಿಟಮಿನ್ ಇ ಕೊಬ್ಬಿನಂಶ

ವಿಟಮಿನ್ ಇ ಕೊಬ್ಬಿನಂಶ

ಕೂದಲಿನ ಬೆಳವಣಿಗೆಗೆ ವಿಟಮಿನ್ ಇ ತುಂಬಾ ಅವಶ್ಯಕ. ಬಾದಾಮಿ, ವಾಲ್ ನಟ್ಸ್ ಇವುಗಳಲ್ಲಿ ವಿಟಮಿನ್ ಇ ಇರುವುದರಿಂದ ಇವುಗಳನ್ನು ಆಹಾರಕ್ರಮದಲ್ಲಿ ಸೇರಿಸಿ. ವಿಟಮಿನ್ ಇ ಇರುವ ಎಣ್ಣೆಯನ್ನು ಹಚ್ಚುವುದು ಕೂಡ ಒಳ್ಳೆಯದು.

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆ

ತೆಂಗಿನೆಣ್ಣೆ ಜೊತೆ ಬಾದಾಮಿ ಎಣ್ಣೆಯನ್ನು ಮಿಕ್ಸ್ ಮಾಡಿ ತಲೆಗೆ ಹಚ್ಚುವುದರಿಂದ ಕೂದಲು ಬೇಗನೆ ಉದ್ದ ಬೆಳೆಯುವುದು.

ಕೂದಲಿಗೆ ಬಿಸಿ ನೀವು ಹಾಕಬೇಡಿ

ಕೂದಲಿಗೆ ಬಿಸಿ ನೀವು ಹಾಕಬೇಡಿ

ಕೂದಲಿಗೆ ಬಿಸಿ ನೀರು ಹಾಕಿದರೆ ಕೂದಲು ಹಾಳಾಗುತ್ತದೆ, ಆದ್ದರಿಂದ ತಣ್ಣೀರು ಅಥವಾ ಉಗುರು ಬೆಚ್ಚಗಿನ ನೀರು ಹಾಕುವುದು ಒಳ್ಳೆಯದು.

ಕೂದಲನ್ನು ಸ್ವಚ್ಛವಾಗಿಡಿ

ಕೂದಲನ್ನು ಸ್ವಚ್ಛವಾಗಿಡಿ

ಕೂದಲಿಗೆ ಜೆಲ್ ಹಚ್ಚಿದ್ದರೆ ಮಲಗುವ ಮುನ್ನ ಅದನ್ನು ತೊಳೆದು ಮಲಗಿ. ತುಂಬಾ ಎಣ್ಣೆಯಂಶ ತಲೆಯಲ್ಲಿ ಇಟ್ಟುಕೊಳ್ಳಬೇಡಿ. ದೂಳಿಗೆ ಹೋಗುವಾಗ ಸ್ಕಾರ್ಫ್ ಕಟ್ಟಿ, ನಂತರ ಬಂದ ಮೇಲೆ ತಲೆಯನ್ನು ತೊಳೆಯಿರಿ. ಈ ರೀತಿ ಆರೈಕೆ ಮಾಡಿದರೆ ಕೂದಲು ಬೇಗನೆ ಉದ್ದ ಬೆಳೆಯುವುದು.

ಗಾಡಿಯಲ್ಲಿ ಹೋಗುವಾಗ ಸ್ಕಾರ್ಫ್ ಕಟ್ಟಿ

ಗಾಡಿಯಲ್ಲಿ ಹೋಗುವಾಗ ಸ್ಕಾರ್ಫ್ ಕಟ್ಟಿ

ಗಾಡಿಯಲ್ಲಿ ಹೋಗುವಾಗ ಕೂದಲನ್ನು ಹಾರಾಡಲು ಬಿಡಬೇಡಿ, ಕೂದಲನ್ನು ಕಟ್ಟಿ ಸ್ಕಾರ್ಫ್ ಅಥವಾ ಕ್ಯಾಪ್ ಹಾಕಿ. ಈ ರೀತಿ ಮಾಡಿದರೆ ಕೂದಲು ಹಾಳಾಗುವುದಿಲ್ಲ.

English summary

10 Steps To Grow Hair Faster

Most of these steps for proper hair growth are known to you. Oil your hair, washing, having nutritious food is possible if you want to grow your hair faster. However, we have tried to present them to you in a hassle-free way. These are revised hair growth tips for a busy working woman. 
X
Desktop Bottom Promotion