For Quick Alerts
ALLOW NOTIFICATIONS  
For Daily Alerts

ಕೂದಲು ಬಾಚುವಾಗ ಅಳವಡಿಸಬೇಕಾದ ನಿಯಮಗಳಿವು!

|
How To Comb Hair Properly
ಕೂದಲನ್ನು ವಿನ್ಯಾಸವಾಗಿ ಬಾಚುವುದು ಒಂದು ಕಲೆ ಹಾಗೂ ಆ ರೀತಿ ಬಾಚಲು ಕಲಿಯಬೇಕು. ಆದರೆ ಕೂದಲನ್ನು ಬಾಚಲು ಕೂಡ ತಿಳಿದಿರಬೇಕೆ ? ಎಂದು ಕೇಳಿದರೆ ನಮ್ಮ ಉತ್ತರ ಹೌದು, ಬಹಳಷ್ಟು ಜನರಿಗೆ ಕೂದಲಿನ ಆರೈಕೆಗಾಗಿ ಕೂದಲನ್ನು ಬಾಚುವ ವಿಧಾನ ತಿಳಿದಿರುವುದಿಲ್ಲ. ಸುಮ್ಮನೆ ಕೂದಲು ಬಾಚಲು ವಿಶೇಷ ಟ್ರೈನಿಂಗ್ ಬೇಕಾಗುವುದಿಲ್ಲ ಎಂದು ಭಾವಿಸಿದರೆ ನಿಮ್ಮ ಅನಿಸಿಕೆ ತಪ್ಪು. ಏಕೆಂದರೆ ಆರೋಗ್ಯವಂತ ಕೂದಲು ಬೇಕೆಂದು ಬಯಸುವವರು ಅದನ್ನು ಬಾಚುವ ನಿಯಮಗಳನ್ನು ಕೂಡ ತಿಳಿದಿರಬೇಕು. ಇಲ್ಲದಿದ್ದರೆ ಕೂದಲಿಗೆ ಹಾನಿಯಾಗಿ ಕೂದಲು ಉದುರುವ ಸಮಸ್ಯೆ ಹೆಚ್ಚಾಗುವುದೇ ಹೊರತು ಕಡಿಮೆಯಾಗುವುದಿಲ್ಲ.

ಸೊಂಪಾದ ಕೂದಲು ಬೇಕೆಂದು ಬಯಸುವುದಾದರೆ ಕೇವಲ ಎಣ್ಣೆ ಮತ್ತು ಶ್ಯಾಂಪೂ ಬಳಸಿದರಷ್ಟೇ ಸಾಲದು, ತಲೆ ಬಾಚುವಾಗ ಈ ಕೆಳಗಿನ ನಿಯಮಗಳನ್ನು ಪಾಲಿಸಿದರೆ ಒಳ್ಳೆಯದು.

1. ಒದ್ದೆ ಕೂದಲನ್ನು ಬಾಚಬಾರದು: ಕೂದಲಿನ ರಕ್ಷಣೆಗೆ ಇದು ತುಂಬಾ ಪ್ರಮುಖವಾದ ಅಂಶವಾಗಿದೆ. ಏಕೆಂದರೆ ಒದ್ದೆ ಕೂದಲಿನಿಂದ ತಲೆ ಬಾಚಿದರೆ ಕೂದಲಿನ ಬುಡಕ್ಕೆ ಹನಿಯಾಗುವುದರ ಜೊತೆಗೆ ಹೆಚ್ಚು ಕೂದಲು ಉದುರಲಾರಂಭಿಸುತ್ತದೆ. ಆದ್ದರಿಂದ ಕೂದಲು ಸಂಪೂರ್ಣವಾಗಿ ಒಣಗಿದ ಮೇಲೆಷ್ಟೆ ಬಾಚಬೇಕು.

2. ತಲೆ ಬುಡಕ್ಕೆ ಬಾಚಣಿಕೆ ತಾಗಬೇಕು: ಕೂದಲಿನ ಮೇಲ್ಭಾಗದಲ್ಲಿ ಮಾತ್ರ ಬಾಚಿ, ತಲೆ ಬುಡಕ್ಕೆ ತಾಗದಂತೆ ಬಾಚುವುದು ಸರಿಯಲ್ಲ. ಏಕೆಂದರೆ ತಲೆ ಬುಡಕ್ಕೆ ಬಾಚಣಿಕೆಯ ಸ್ಪರ್ಶ ಉಂಟಾದಾಗ ರಕ್ತ ಸಂಚಲ ಹೆಚ್ಚಾಗಿ ಕೂದಲಿನ ಬೆಳವಣಿಗೆಗ ಸಹಕಾರಿಯಾಗುವುದು. ಹಾಗಂತ ಬಾಚುವಾಗ ತುಂಬಾ ಬಲವಾಗಿ ಬಾಚಲು ಹೋಗಬಾರದು.

3. ಕೂದಲಿನ ಬುಡದಿಂದ ಬಾಚಬೇಕು: ಹೆಚ್ಚಾಗಿ ಕೂದಲು ಬಾಚುವಾಗ ಮೇಲ್ಭಾಗದಿಂದ ಬಾಚುತ್ತೇವೆ. ಆದರೆ ಕೂದಲಿನ ತುದಿಯಿಂದ ಬಾಚುತ್ತಾ ಸಿಕ್ಕು ತೆಗೆದು ಬಾಚುವ ವಿಧಾನ ಅನುಸರಿಸಿದರೆ ಕೂದಲು ಹಾಳಾಗುವುದಿಲ್ಲ.ಅದರಲ್ಲೂ ಉದ್ದ ಕೂದಲಿನವರು ಈ ವಿಧಾನವನ್ನು ಅನುಸರಿಸುವುದು ಒಳ್ಳೆಯದು.

4. ಬೈತಲೆ ತೆಗೆದು ಬಾಚುವುದು: ಕೂದಲನ್ನು ಬಾಚುವಾಗ ಬೈ ತಲೆ ತೆಗೆದು ಬಾಚಿದರೆ ಕೂದಲಿನ ಸಿಕ್ಕು ಬಿಡಿಸುವುದು ಸುಲಭ. ಅಲ್ಲದೆ ಕೂದಲು ಬಾಚಣಿಕೆಗೆ ಸಿಕ್ಕಿ ಗಂಟಾಗುವುದನ್ನು ತಪ್ಪಿಸಬಹುದು.

5. ಕೂದಲನ್ನು ಕಟ್ಟಿದ ನಂತರ ಬಾಚಬಾರದು: ಕೂದಲನ್ನು ಬಾಚಿ ಕಟ್ಟಿದ ನಂತರ ಮೇಲೆ-ಮೇಲಕ್ಕೆ ತಲೆಯನ್ನು ಬಾಚುವ ಅಭ್ಯಾಸ ಅನೇಕರಿಗೆ ಇರುತ್ತದೆ. ಆ ರೀತಿ ಬಾಚುವ ಅಭ್ಯಾಸ ಕೂದಲಿನ ಆರೈಕೆಗೆ ಒಳ್ಳೆಯದಲ್ಲ.

6. ಬಾಚಣಿಕೆ: ಕೂದಲಿನ ಆರೈಕೆಯಲ್ಲಿ ಬಾಚಣಿಕೆ ಕೂಡ ಪ್ರಮುಖ. ಸ್ವಲ್ಪ ದೊಡ್ಡ ಹಲ್ಲಿರುವ ಬಾಚಣಿಕೆಯಿಂದ ಕೂದಲಿನ ಗಂಟನ್ನು ಬಿಡಿಸಿ, ಚಿಕ್ಕ ಹಲ್ಲಿರುವ ಬಾಚಣಿಕೆಯಿಂದ ಕೂದಲನ್ನು ಬಾಚಿ ಕಟ್ಟುವ ಅಭ್ಯಾಸ ಕೂದಲಿನ ಬೆಳವಣಿಗೆಗೆ ಸಹಕಾರಿಯಾಗುವುದು.

English summary

How To Comb Hair Properly | Tips For Hair Care | ಕೂದಲನ್ನು ಸರಿಯಾದ ರೀತಿ ಬಾಚುವುದು ಹೇಗೆ? | ಕೂದಲಿನ ಆರೈಕೆಗೆ ಕೆಲ ಸಲಹೆಗಳು

Designing hair you required, skill but to protect hair you should know combing technique. We mentioned few of the basic rules you should follow to protect your hair.
Story first published: Wednesday, June 20, 2012, 12:12 [IST]
X
Desktop Bottom Promotion