For Quick Alerts
ALLOW NOTIFICATIONS  
For Daily Alerts

ರೇಷ್ಮೆಯಂತಹ ಕೂದಲಿಗಾಗಿ ಸ್ಟ್ರೈಟ್ನಿಂಗ್ ಮೆಷಿನ್

|
Hair Straightening Machine
ಪರ್ಮನೆಂಟ್ ಹೇರ್ ಸ್ಟ್ರೈಟ್ನಿಂಗ್ ಮಾಡಿಸಲು ಕೆಲವರಿಗೆ ಇಷ್ಟವಿರುವುದಿಲ್ಲ. ಆದರೆ ಪಾರ್ಟಿಗಳಿಗೆ ಹೋಗುವಾಗ ಕೂದಲು ರೇಶ್ಮೆಯಂತೆ ಮೃದುವಾಗಿ ಮತ್ತು ಹೊಳಪಿನಿಂದ ಕಾಣಲು ಹೇರ್ ಸ್ಟ್ರೈಟ್ನಿಂಗ್ ಮಾಡಿಸಲು ಇಷ್ಟ ಪಡುತ್ತಾರೆ. ಹೀಗೆ ಅಪರೂಪಕ್ಕೆ ಸ್ಟ್ರೈಟ್ನಿಂಗ್ ಮಾಡಿಸುವವರು ಪಾರ್ಲರ್ ಹೋಗುವುದಕ್ಕಿಂತ ಮನೆಯಲ್ಲಿಯೆ ಮಾಡಿಕೊಳ್ಳಬಹುದು.

ಆದರೆ ಕೂದಲಿನ ಆರೈಕೆಗಾಗಿ ಈ ಸ್ಟ್ರೈಟ್ನಿಂಗ್ ಮೆಷಿನ್ ಬಳಸುವ ವಿಧಾನವನ್ನು ತಿಳಿದುಕೊಳ್ಳುವುದು ಒಳ್ಳೆಯದು. ಶೈನಿ ಕೂದಲಿನಿಂದ ಸೌಂದರ್ಯ ಹೆಚ್ಚಿಸುವ ಮತ್ತು ಕೂದಲಿಗೆ ಯಾವುದೇ ಹಾನಿಯಾಗದಂತೆ ಸ್ಟ್ರೈಟ್ನಿಂಗ್ ಮಾಡುವ ವಿಧಾನ ನೋಡಿ ಇಲ್ಲಿದೆ.

1. ಸ್ಟ್ರೈಟ್ನಿಂಗ್ ಮಾಡುವ ಮೊದಲು ಮೆಷಿನ್ ಅನ್ನು ಒಣ ಬಟ್ಟೆಯಿಂದ ಒರೆಸಬೇಕು.

2. ಮೆಷಿನ್ ಅನ್ನು ತುಂಬಾ ಉಷ್ಣತೆಯಲ್ಲಿ ಇಡಬಾರದು. ತುಂಬಾ ಉಷ್ಣತೆಗೆ ಸೆಟ್ ಮಾಡಿದರೆ ಕೂದಲು ಹಾಳಾಗಿ ಹೋಗುತ್ತದೆ.

3. ಸ್ಟ್ರೈಟ್ನಿಂಗ್ ಮಾಡುವ ಮೊದಲು ಹೇರ್ ಡ್ರೈ ಬಳಸಿ ಕೂದಲನ್ನು ಒಣಗಿಸಿದರೆ ಕೂದಲು ಮತ್ತಷ್ಟು ಹೊಳಪನ್ನು ಹೊಂದುತ್ತದೆ.

4. ಸ್ಟ್ರೈಟ್ನಿಂಗ್ ಮಾಡುವ ಮೊದಲು ಕೂದಲಿನಲ್ಲಿ ಯಾವುದೇ ತೇವಾಂಶವಿರಬಾರದು.

5. ಸ್ವಲ್ಪ ಕೂದಲನ್ನು ತೆಗೆದು ಬುಡದಿಂದಲೆ ಸ್ಟ್ರೈಟ್ನಿಂಗ್ ಮಾಡಿ.

6. ಸ್ಟ್ರೈಟ್ನಿಂಗ್ ಮಾಡುವಾಗ ಬಾಚಣಿಕೆ ಜೊತೆಗಿರಲಿ. ಸ್ವಲ್ಪ ಕೂದಲನ್ನು ತೆಗೆದು ಬಾಚಿ ಅದನ್ನು ಸ್ಟ್ರೈಟ್ನಿಂಗ್ ಮಾಡಿ, ಹೀಗೆ ಎಲ್ಲಾ ಕೂದಲಿಗೆ ಮಾಡಬೇಕು.

ಸುರಕ್ಷಿತವಾಗಿ ಸ್ಟ್ರೈಟ್ನಿಂಗ್ ಬಳಸುವ ವಿಧಾನ:

1. ಮೆಷಿನ್ ಅನ್ನು ಸರಿಯಾದ ರೀತಿಯಲ್ಲಿ ಹಿಡಿದುಕೊಳ್ಳಬೇಕು. ಮೆಷಿನ್ ಅನ್ನು ಅಧಿಕವಾಗಿ ಬಿಸಿ ಮಾಡಬಾರದು.

2. ಬಿಸಿಯಾಗಿರುವಾಗ ಮೆಷಿನ್ ಮುಂದುಗಡೆ ಕೈ ತಾಗಿಸಬಾರದು.

3. ಸ್ಟ್ರೈಟ್ನಿಂಗ್ ಮಾಡಿದ ನಂತರ ಕೂದಲಿಗೆ ಸೆರೂಮ್ ಹಚ್ಚಿ. ಹೀಗೆ ಹಚ್ಚಿದರೆ ಕೂದಲಿನ ಹೊಳಪು ಹೆಚ್ಚುವುದು ಮತ್ತು ಕೂದಲಿಗೆ ಯಾವುದೇ ಹಾನಿ ಉಂಟಾಗುವುದಿಲ್ಲ.

English summary

How To Use Straightening Machine At Home | Tips For hair Care | ಮನೆಯಲ್ಲಿಯೆ ಸ್ಟ್ರೈಟ್ನಿಂಗ್ ಮೆಷಿನ್ ಬಳಸುವ ವಿಧಾನ | ಕೂದಲಿನ ಆರೈಕೆಗೆ ಕೆಲ ಸಲಹೆಗಳು

While using your straightening machine make sure you know how to use straighteners correctly as they can even damage your hair. Here are some tips to how to use this straightener to get a shiny hair without damage.
Story first published: Wednesday, April 4, 2012, 10:09 [IST]
X
Desktop Bottom Promotion