For Quick Alerts
ALLOW NOTIFICATIONS  
For Daily Alerts

ನೀಳ ಕೇಶರಾಶಿ ಚೆಲುವೆಗೆ ಏಳು ವಿಶೇಷ ಸಲಹೆ

|
Grow Hair Long
ಉದ್ದ ಕೂದಲಿನ ಆಸೆ ಇದ್ದರೂ ಕೂದಲು ಉದ್ದ ಬಿಟ್ಟರೆ ಅದರ ಪೋಷಣೆಗೆ ಹೆಚ್ಚು ಸಮಯ ಬೇಕಾಗುತ್ತೆ ಅಂತಲೇ ಕೂದಲನ್ನು ಕತ್ತರಿಸುವ ಹುಡುಗಿಯರು ಈಗ ಹೆಚ್ಚು. ಇದೇ ಕಾರಣಕ್ಕೆ ವರ್ಷ ವರ್ಷ ಕೂದಲು ಚಿಕ್ಕದಾಗುತ್ತಾ ಹೋಗುತ್ತೆ. ಆದರೆ ಉದ್ದ ಕೂದಲನ್ನು ಬೆಳೆಸುವುದು ಮತ್ತು ಪೋಷಿಸುವುದು ಹೆಚ್ಚೇನು ಕಷ್ಟವಿಲ್ಲ ಕೆಲವು ವಿಧಾನವನ್ನು ಅನುಸರಿಸುವುದರಿಂದ ಉದ್ದ ಕೂದಲು ಪಡೆಯುವುದು ಸಾಧ್ಯವಿದೆ.

ಉದ್ದ ಕೂದಲು ಬೇಗ ಪಡೆಯಲು ಹೀಗೆ ಮಾಡಿ:

* ಎಣ್ಣೆಯನ್ನು ಹೇಗೆ ಹಚ್ಚಬೇಕು?
ಕೂದಲಿಗೆ ಎಣ್ಣೆ ಹಚ್ಚುವುದಕ್ಕಿಂತ ಹೆಚ್ಚಿನ ಪೋಷಣೆ ಬೇರಿಲ್ಲ. ಆದರೆ ಕೇವಲ ಎಣ್ಣೆ ಹಚ್ಚುವುದರಿಂದ ಪ್ರಯೋಜನವಿಲ್ಲ. ಎಣ್ಣೆ ಮಸಾಜ್ ನ ವಿಧಾನವನ್ನೂ ತಿಳಿಯಬೇಕು. ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ತಲೆ ಬುಡಕ್ಕೆ ಮಸಾಜ್ ಮಾಡಿಕೊಂಡು ಬಿಸಿ ನೀರಿನಲ್ಲಿ ಅದ್ದಿದ ಟವಲ್ ನಿಂದ ಕೂದಲನ್ನು ಸುತ್ತಿಕೊಂಡರೆ ಎಣ್ಣೆಯನ್ನು ಕೂದಲಿನ ಬುಡ ಬೇಗನೆ ಹೀರಿಕೊಂಡು ಬೇಗನೆ ಕೂದಲು ಬೆಳೆಯಲು ಅನುವಾಗುತ್ತದೆ.

* ಯಾವ ಎಣ್ಣೆ ಬಳಸುತ್ತಿದ್ದೀರಾ?
ಕೂದಲು ವೇಗವಾಗಿ ಬೆಳೆಯಬೇಕೆಂದರೆ ಯಾವುದಾದರೂ ಎಣ್ಣೆ ಹಚ್ಚಿದರೆ ಆಗುವುದಿಲ್ಲ. ಕೂದಲು ಉದ್ದ ಬೆಳೆಯಬೇಕೆಂದರೆ ಬಾದಾಮಿ ಎಣ್ಣೆ ಹೆಚ್ಚು ಸೂಕ್ತ. ಇದರಲ್ಲಿರುವ ವಿಟಮಿನ್ ಇ ಕೂದಲ ಬೆಳವಣಿಗೆಗೆ ಪರಿಣಾಮಕಾರಿ.

* ಎಷ್ಟು ದಿನಕ್ಕೊಮ್ಮೆ ತಲೆ ಸ್ನಾನ?
ಎಣ್ಣೆ ಹಚ್ಚುವುದು ಕೂದಲಿಗೆ ಆರೋಗ್ಯಕರವೆಂದು ಎಣ್ಣೆ ಹಚ್ಚಿ ಸರಿಯಾಗಿ ಶುದ್ಧಗೊಳಿಸದಿದ್ದರೆ ಸರಿಯಲ್ಲ. ಕೂದಲು ಅಶುದ್ಧವಾಗಿದ್ದರೆ ಕೂದಲುದುರುವ ಸಾಧ್ಯತೆಯೂ ಹೆಚ್ಚು. ಆದ್ದರಿಂದ ಮೂರು ದಿನಗಳ ಅಂತರಕ್ಕೊಮ್ಮೆ ತಲೆಗೆ ಸ್ನಾನ ಮಾಡಬೇಕು. ಏಕೆಂದರೆ ಕೂದಲು ಶುದ್ಧವಿದ್ದರೇನೆ ಹೆಚ್ಚು ಬೆಳೆಯಲು ಸಾಧ್ಯ.

* ಹೇರ್ ಸ್ಟೈಲಿಂಗ್ ಸಾಧನದ ಬಳಕೆ ಎಷ್ಟು ಸೂಕ್ತ?
ಕೂದಲಿಗೆ ಹೇರ್ ಡ್ರೈ, ಐರನ್ ಅಥವಾ ಕರ್ಲರ್ ನಿರಂತರವಾಗಿ ಬಳಸಿದರೆ ಕೂದಲು ಬೇಗನೆ ಹಾಳಾಗುವುದರಲ್ಲಿ ಸಂಶಯವಿಲ್ಲ. ಇವುಗಳ ಬಳಕೆ ಕಡಿಮೆ ಮಾಡಿದಷ್ಟು ಕೂದಲು ಸಂರಕ್ಷಿತವಾಗಿರುತ್ತದೆ. ಇದರಿಂದ ಕೂದಲು ಅನಾರೋಗ್ಯವಾಗುವುದನ್ನು ತಪ್ಪಿಸಬಹುದು.

* ಕೂದಲ ಆರೋಗ್ಯಕ್ಕೆ ಯಾವ ಆಹಾರ ಸೇವಿಸಬೇಕು?
ಕೂದಲು ಉದ್ದವಾಗಿ ಬೆಳೆಯಬೇಕೆಂದರೆ ಮೀನು, ತೆಂಗಿನ ಕಾಯಿ, ಬಾದಾಮಿ, ತರಕಾರಿಯನ್ನು ಹೆಚ್ಚು ತಿನ್ನಬೇಕು.

* 3 ತಿಂಗಳಿಗೊಮ್ಮೆ ಕೂದಲು ಕತ್ತರಿಸಿ:
ಕೂದಲನ್ನು ಕತ್ತರಿಸದೇ ಇದ್ದರೆ ಬೇಗನೆ ಉದ್ದವಾಗುತ್ತದೆ ಎಂಬ ತಪ್ಪು ಕಲ್ಪನೆಯಿದೆ. ಆದರೆ ಕೂದಲು ಉದ್ದ ಬರಬೇಕೆಂದರೆ 3 ತಿಂಗಳಿಗೊಮ್ಮೆ ಕೂದಲ ತುದಿಯನ್ನು ಕತ್ತರಿಸಬೇಕು. ಕವಲೊಡೆದ ಕೂದಲನ್ನು ಕತ್ತರಿಸಿದರೆ ಸಾಕು.

* ಕೂದಲನ್ನು ಕಟ್ಟಬೇಕು:
ಯಾವಾಗಲೂ ಕೂದಲನ್ನು ಗಾಳಿಗೆ ಧೂಳಿಗೆ ಎಡೆಕೊಡಬಾರದು. ಉದ್ದ ಕೂದಲನ್ನು ಮಾಲಿನ್ಯದಿಂದ ರಕ್ಷಿಸಿಕೊಳ್ಳಬೇಕೆಂದರೆ ಕೂದಲನ್ನು ಕಟ್ಟಿಕೊಳ್ಳಬೇಕು. ಪ್ರಯಾಣ ಮಾಡುವಾಗ ಜಡೆ ಹೆಣೆದಿದ್ದರೆ ಅಥವಾ ಕೂದಲನ್ನು ಗಾಳಿಗೆ ಹೆಚ್ಚು ಬಿಡದೆ ಕಟ್ಟಿದ್ದರೆ ಕೂದಲು ತುಂಡಾಗಿ ಉದುರುವುದು ತಪ್ಪುತ್ತದೆ.

English summary

Grow Hair Long | Fast Hair Growth | ಬೇಗನೆ ಉದ್ದ ಕೂದಲು ಪಡೆಯುವುದು ಹೇಗೆ? | ಉದ್ದ ಕೂದಲಿನ ಪೋಷಣೆ

How many women can actually afford to grow their hair long these days? In between busy schedules and increasingly polluted atmospheres, the average length of our hair keeps becoming shorter and shorter every year. But here are some simple steps that can help you grow your hair long.
Story first published: Saturday, December 17, 2011, 14:04 [IST]
X
Desktop Bottom Promotion