For Quick Alerts
ALLOW NOTIFICATIONS  
For Daily Alerts

ವೀಕೆಂಡ್ ನಲ್ಲಿ ವಿನೆಗರ್ ನಿಂದ ಹೇರ್ ಕೇರ್ ಮಾಡಿ

|
Vinegar for Hair Care
ವಿನೆಗರ್ ನಿಂದ ತ್ವಚೆಗೆ ಸಾಕಷ್ಟು ಉಪಯೋಗವಿದೆ ಎನ್ನುವುದು ತಿಳಿದ ಸಂಗತಿ. ಆದರೆ ಕೇವಲ ತ್ವಚೆಗಷ್ಟೇ ಅಲ್ಲ, ಕೂದಲಿಗೂ ವಿನೆಗರ್ ತುಂಬಾ ಉಪಯೋಗಕ್ಕೆ ಬರುತ್ತೆ. ವಿನೆಗರ್ ನಿಂದ ಕೂದಲಿಗೆ ಮರಳಿ ಜೀವಕಳೆ ತರುವುದು ಸಾಧ್ಯ. ಈ ವೀಕೆಂಡ್ ನಲ್ಲಿ ವಿನೆಗರ್ ಬಳಸಿಕೊಂಡು ಕೂದಲಿಗೆ ಸ್ಪೆಷಕ್ ಕೇರ್ ನೀಡುವುದು ಹೇಗೆ ಎಂದು ಇಲ್ಲಿ ತಿಳಿದುಕೊಳ್ಳಿ.

ಕೂದಲಿನ ಪೋಷಣೆಗೆ ವಿನೆಗರ್ ಬಳಕೆ ಹೇಗೆ?

* ನೈಸರ್ಗಿಕ ಹೇರ್ ಕಂಡೀಶನರ್: ವೈಟ್ ಅಥವಾ ಆಪಲ್ ಸೈಡರ್ ವಿನೆಗರನ್ನು ಸ್ವಲ್ಪ ನೀರಿನೊಂದಿಗೆ ಬೆರೆಸಿ ಕೂದಲಿಗೆ ಶಾಂಪೂ ಆದ ನಂತರ ಮಸಾಜ್ ಮಾಡಿಕೊಂಡರೆ ರಕ್ತ ಸಂಚಲನ ಹೆಚ್ಚಾಗಿ ಕೂದಲನ್ನು ಗಟ್ಟಿಗೊಳಿಸಿ, ತುಂಡಾಗುವುದನ್ನು ತಪ್ಪಿಸುತ್ತದೆ.
ಎಣ್ಣೆ ಕೂದಲಿದ್ದವರಿಗೆ: ಸ್ವಲ್ಪ ನಿಂಬೆರಸದೊಂದಿಗೆ ವಿನೆಗರ್ ಬೆರೆಸಿ ಅದನ್ನು ಶಾಂಪೂ ಆದ ನಂತರ ಮಸಾಜ್ ಮಾಡಿಕೊಂಡು 15 ನಿಮಿಷದ ನಂತರ ತಣ್ಣಗಿನ ನೀರಿನಿಂದ ತೊಳೆದುಕೊಳ್ಳಬೇಕು.

* ಕೂದಲಿಗೆ ಹೊಳಪು ನೀಡಲು: ವಿನೆಗರ್ ಕೂದಲಿಗೆ ನೈಸರ್ಗಿಕವಾಗಿ ಹೊಳಪು ನೀಡುತ್ತದೆ. ಇದು ಕೂದಲನ್ನು ಮೃದುಗೊಳಿಸುವುದಲ್ಲದೆ ಕೂದಲು ಅತಿ ಸಿಕ್ಕಾಗುವುದನ್ನೂ ನಿವಾರಿಸುತ್ತದೆ. ಆದ್ದರಿಂದ ಕೂದಲನ್ನು ಶಾಂಪೂವಿನಿಂದ ತೊಳೆದ ನಂತರ ನೀರಿನೊಂದಿಗೆ ವಿನೆಗರ್ ಬಳಸಿ ಹಚ್ಚಿಕೊಂಡು ಸ್ವಲ್ಪ ಸಮಯದ ನಂತರ ತೊಳೆದುಕೊಂಡರೆ ಹೊಳಪು ಪಡೆದುಕೊಳ್ಳಬಹುದು.

* ತಲೆಹೊಟ್ಟಿನ ಸಮಸ್ಯೆಗೆ ಪರಿಹಾರ: ಕೂದಲಿನ ಬುಡದ ಚರ್ಮ ಒಣಗುವುದೇ ತಲೆಹೊಟ್ಟಿಗೆ ಕಾರಣ. ವಿನೆಗರ್ ನೊಂದಿಗೆ ಬಾದಾಮಿ ಎಣ್ಣೆ ಬೆರೆಸಿ ಹಚ್ಚಿಕೊಂಡರೆ ಕೂದಲಿನ ಬುಡದ ಚರ್ಮದಲ್ಲಿ ತೇವಾಂಶ ಉಳಿಯುವಂತೆ ಮಾಡುತ್ತದೆ. ಇದು ತಲೆಹೊಟ್ಟಿಗೆ ಮ್ಯಾಜಿಕ್ ನಂತೆ ಕೆಲಸ ಮಾಡುತ್ತೆ.

* ನೇರ ಕೂದಲಿಗೆ: ತುಂಬಾ ಒರಟಾದ ಕೂದಲಿಗೆ ಆಪಲ್ ಸೈಡರ್ ವಿನೆಗರ್ ಬಳಸಿದರೆ ಕೂದಲು ಮೃದುಗೊಳ್ಳುತ್ತದೆ. ಸ್ನಾನ ಮಾಡಿದ ನಂತರ ಕೂದಲು ಸ್ವಲ್ಪ ನೇರವಾಗಿರುವಂತೆ ಗೋಚರಿಸುತ್ತದೆ.

* ಬಾಚಣಿಕೆ ಶುದ್ಧವಾಗಿರಿಸಲು ವಿನೆಗರ್ ಬಳಕೆ: ವಿನೆಗರ್ ಮಿಶ್ರಿತ ನೀರಿನಲ್ಲಿ ಬಾಚಣಿಕೆಯನ್ನು ನೆನೆಸಿದರೆ ಅದು ಬೇಗನೆ ಕೊಳೆಯಿಂದ ಮುಕ್ತಗೊಳ್ಳುವುದಲ್ಲದೆ ಬ್ಯಾಕ್ಟೀರಿಯಾ ಮತ್ತು ಕೀಟಾಣುಗಳೂ ಉಳಿಯುವುದಿಲ್ಲ.

English summary

Vinegar for Hair Care | Hair Care Ingredients | ವಿನೆಗರ್ ನಿಂದ ಕೂದಲಿನ ಪೋಷಣೆ | ಕೂದಲಿನ ಪೋಷಣೆ

As we already know the vinegar is quite beneficiary for skin care, there is more to it. It is not only a best skin care product but even a good homemade hair care ingredient. Today, we will discuss on the benefits of vinegar on hair. Take a look.
Story first published: Saturday, November 19, 2011, 14:50 [IST]
X
Desktop Bottom Promotion