For Quick Alerts
ALLOW NOTIFICATIONS  
For Daily Alerts

ಮಹಿಳೆಯರ ತ್ವಚೆಗೆ ಶೇವಿಂಗ್‌ ಒಳ್ಳೆಯದಲ್ಲ ಎನ್ನುವುದು ಇದೇ ಕಾರಣಕ್ಕೆ

|

ಬೇಡದ ಕೂದಲನ್ನು ತೆಗೆಯಲು ಹಲವಾರು ವಿಧಾನಗಳಿವೆ. ಅವುಗಳಲ್ಲಿ ರೇಝರ್ ಹಾಗೂ ವ್ಯಾಕ್ಸ್ ವಿಧಾನಗಳನ್ನು ಹೆಚ್ಚಾಗಿ ಬಳಸುತ್ತಾರೆ. ಅದರಲ್ಲೂ ವ್ಯಾಕ್ಸ್‌ನಲ್ಲಿ ಸ್ವಲ್ಪ ನೋವಾಗುವುದರಿಂದ ಶೇವಿಂಗ್‌ ಮಾಡುವುದೇ ಸೂಕ್ತ ಎನ್ನುವುದು ಹೆಚ್ಚಿನವರ ಅಭಿಪ್ರಾಯವಾಗಿದೆ.

Why Dry Shaving Is Bad For Your Skin

ನೀವು ಶೇವಿಂಗ್‌ ವಿಧಾನ ಪಾಲಿಸುತ್ತಿದ್ದರೆ ಬೇಡದ ಕೂದಲನ್ನು ತೆಗೆಯಲು ಶೇವಿಂಗ್ ಏಕೆ ಅಷ್ಟು ಸೂಕ್ತವಾದ ವಿಧಾನವಲ್ಲ, ಇದರಿಂದ ತ್ವಚೆಯ ಮೇಲಾಗುವ ಪರಿಣಾಮಗಳೇನು, ಒಂದು ವೇಳೆ ಶೇವಿಂಗ್‌ ಬಳಸಿದ್ದೆ ತ್ವಚೆ ಆರೈಕೆ ಹೇಗಿರಬೇಕೆಂಬ ಟಿಪ್ಸ್ ನೀಡಿದ್ದೇವೆ ನೋಡಿ:

ತ್ವಚೆಯ ನುಣಪನ್ನು ಹಾಳು ಮಾಡುತ್ತದೆ:

ತ್ವಚೆಯ ನುಣಪನ್ನು ಹಾಳು ಮಾಡುತ್ತದೆ:

ಶೇವಿಂಗ್‌ ಜೆಲ್, ಕ್ರೀಮ್ಸ್ ಬಳಸಿ ಶೇವಿಂಗ್ ಮಾಡುವುದರಿಂದ ಬೇಡದ ಕೂದಲನ್ನು ಸುಲಭವಾಗಿ ತೆಗೆಯಬಹುದು, ಆದರೆ ಇವುಗಳನ್ನು ಬಳಸದೆ ಬೇಡದ ಕೂದಲನ್ನು ತೆಗೆಯುವುದರಿಂದ ರೇಝರ್‌ ತ್ವಚೆಗೆ ತಾಗುವುದು. ಈ ಅಭ್ಯಾಸದಿಂದ ಕ್ರಮೇಣ ತ್ವಚೆ ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ.

ಒಣ ತ್ವಚೆ ಮತ್ತಷ್ಟು ಹೆಚ್ಚಾಗುವುದು

ಒಣ ತ್ವಚೆ ಮತ್ತಷ್ಟು ಹೆಚ್ಚಾಗುವುದು

ನಿಮ್ಮದು ಡ್ರೈ ಅಥವಾ ಒಣ ತ್ವಚೆಯಾಗಿದ್ದರೆ ಶೇವಿಂಗ್‌ ಮಾಡುವುದು ಖಂಡಿತ ಒಳ್ಳೆಯ ಆಯ್ಕೆಯಲ್ಲಿ. ಏಕೆಂದರೆ ಈ ವಿಧಾನದಿಂದ ತ್ವಚೆ ಮತ್ತಷ್ಟು ಡ್ರೈಯಾಗುವುದು. ತ್ವಚೆ ಡ್ರೈಯಾಗುವುದರಿಂದ ತುರಿಕೆ ಉಂಟಾಗುವುದು. ಶೇವಿಂಗ್ ಜೆಲ್‌ ಅಥವಾ ಕ್ರೀಂ ಬಳಸುವುದರಿಂದ ತ್ವಚೆ ಒಣಗುವುದನ್ನು ಸ್ವಲ್ಪ ಮಟ್ಟಿಗೆ ತಪ್ಪಿಸಬಹುದು. ಇನ್ನು ಶೇವಿಂಗ್‌ ಮಾಡಿದ ಬಳಿಕವೂ ಮಾಯಿಶ್ಚರೈಸರ್ ಮಾಡಬೇಕು.

ಶೇವಿಂಗ್‌ನಿಂದ ತ್ವಚೆ ಉರಿ ಉಂಟಾಗುವುದು

ಶೇವಿಂಗ್‌ನಿಂದ ತ್ವಚೆ ಉರಿ ಉಂಟಾಗುವುದು

ರೇಝರ್ ಬಳಸಿ ಬೇಡದ ಕೂದಲು ತೆಗೆದರೆ ಒಂದೆರಡು ದಿನದಲ್ಲಿ ತುರಿಕೆ, ಉರಿ ಕಂಡು ಬರುವುದು ಎಂದು ಅನೇಕ ಮಹಿಳೆಯರು ಕಂಪ್ಲೇಂಟ್‌ ಮಾಡುತ್ತಾರೆ. ಆದರೆ ವ್ಯಾಕ್ಸ್ ಮಾಡಿಸುವುದರಿಂದ ಈ ರೀತಿಯ ಸಮಸ್ಯೆ ಕಂಡು ಬರುವುದಿಲ್ಲ. ಇನ್ನು ಶೇವಿಂಗ್‌ ಮಾಡುವುದರಿಂದ ಕೆಲವರಿಗೆ ಅಲರ್ಜಿ ರೀತಿಯಲ್ಲಿ ಚಿಕ್ಕ-ಚಿಕ್ಕ ಗುಳ್ಳೆಗಳು ಏಳುವುದು, ಇದರಿಂದ ಕೂಡ ಸಾಕಷ್ಟು ಕಿರಿಕಿರಿ ಅನುಭವಿಸಬೇಕಾಗುತ್ತದೆ.

 ಕಾಲಿನ ಸೌಂದರ್ಯ ಹಾಳಾಗುವುದು

ಕಾಲಿನ ಸೌಂದರ್ಯ ಹಾಳಾಗುವುದು

ಶೇವಿಂಗ್ ಮಾಡುವುದರಿಂದ ಕಾಲಿನ ಸೌಂದರ್ಯ ಹಾಳಾಗುವುದು. ಆಗಾಗ ಶೇವಿಂಗ್ ಮಾಡುತ್ತಿದ್ದರೆ ಕಾಲುಗಳಲ್ಲಿ ಚಿಕ್ಕ-ಚಿಕ್ಕ ಗುಳ್ಳೆಗಳು ಎದ್ದು, ಕಪ್ಪು-ಕಪ್ಪಾಗಿ ಕಾಣುವುದು. ಹೀಗಾಗಿ ನೀವು ಬೇಡದ ಕೂದಲನ್ನು ತೆಗೆದರೂ ಕಾಲುಗಳು ಆಕರ್ಷಕವಾಗಿ ಕಾಣುವುದಿಲ್ಲ, ಇದರಿಂದಾಗಿ ಶಾರ್ಟ್ಸ್, ಮಿಡಿ ಈ ರೀತಿಯ ಡ್ರೆಸ್‌ ಧರಿಸಿದಾಗ ಮುಜುಗರ ಉಂಟಾಗುವುದು. ಅಲ್ಲದೆ ಶೇವಿಂಗ್ ಮಾಡುವುದರಿಂದ ಕೂದಲನ್ನು ಬುಡದಿಂದ ಕೀಳಲು ಸಾಧ್ಯವಿಲ್ಲ, ಇದರಿಂದ ಉಳಿದ ಕೂದಲು ಒಂದೆರಡು ದಿನದಲ್ಲಿ ಮುಳ್ಳು-ಮುಳ್ಳಾಗಿ ಕಾಣಿಸುವುದು.

ಶೇವಿಂಗ್ ಮಾಡುವವರು ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳು

ಶೇವಿಂಗ್ ಮಾಡುವವರು ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳು

  • ಅಪರೂಪಕ್ಕೆ ಶೇವಿಂಗ್ ವಿಧಾನ ಅನುಸರಿಸಿದರೆ ತ್ವಚೆ ಮೇಲೆ ಅಷ್ಟೇನು ಕೆಟ್ಟ ಪರಿಣಾಮವಿಲ್ಲ. ಆದರೆ ಹೀಗೆ ಶೇವಿಂಗ್‌ ಮಾಡುವಾಗ ಶ್ರೇವಿಂಗ್‌ ಕ್ರೀಮ್ ಅಥವಾ ಜೆಲ್ ಬಳಸಬೇಕು. ಶೇವಿಂಗ್ ಮಾಡಿದ ಬಳಿಕ ಮಾಯಿಶ್ಚರೈಸರ್ ಹಚ್ಚಬೇಕು.
  • ಶೇವಿಂಗ್ ಮಾಡುವಾಗ ರೇಝರ್‌ ಬಳಸುವ ವಿಧಾನ ತಿಳಿದರಬೇಕು, ಇಲ್ಲದಿದ್ದರೆ ಕೂದಲು ಸರಿಯಾಗಿ ತುಂಡಾಗುವುದಿಲ್ಲ, ಇದರಿಂದ ತ್ವಚೆ ನುಣಪಾಗುವುದಿಲ್ಲ. ರೇಝರ್‌ ಅನ್ನು ಕೂದಲು ಬೆಳೆಯುವ ವಿರುದ್ಧ ದಿಕ್ಕಿನಲ್ಲಿ ಎಳೆಯಿರಿ. ಅಂದರೆ ಕಾಲು ಶೇವಿಂಗ್‌ ಮಾಡುವಾಗ ಕೆಳಗಿನಿಂದ ಮೇಲ್ಭಾಗಕ್ಕೆ ರೇಝರ್‌ ಎಳೆಯಿರಿ. ಹೀಗೆ ಮಾಡಿದರೆ ಕೂದಲು ಸ್ವಲ್ಪ ನೀಟಾಗಿ ತೆಗೆಯಬಹುದು.
  • ಇನ್ನು ರೇಝರ್ ಬಳಸಿದ ಬಳಿಕ ಮಾಯಿಶ್ಚರೈಸರ್‌ ಹಚ್ಚಿ, ಉರಿ, ತುರಿಕೆ ಕಂಡು ಬಂದರೆ ತೆಂಗಿಣ್ಣೆ ಹಚ್ಚಿದರೆ ಒಳ್ಳೆಯದು.
  • ರೇಝರ್ ಬಳಸಿದರೆ ಬೇಗನೆ ಕೂದಲು ಬೆಳೆಯುವುದು ಹಾಗೂ ತ್ವಚೆಯ ಹೊಳಪು ಹಾಳಾಗುವುದು, ಇದರ ಬದಲಿಗೆ ಇತರ ವಿಧಾನ ಬಳಸಿ, ಬೇಡದ ಕೂದಲನ್ನು ತೆಗೆಯಬಹುದು. ವ್ಯಾಕ್ಸಿಂಗ್, ರೇಝರ್‌ ಟ್ರೀಟ್ಮೆಂಟ್‌ ಇವುಗಳ ಮೂಲಕ ಬೇಡದ ಕೂದಲಿನಿಂದ ಮುಕ್ತಿ ಪಡೆಯಬಹುದು.

English summary

Why Dry Shaving Is Bad For Your Skin

Shaving dr is a habit you need to put a stop on immediately or you are going to regret it later. The reason you ask? We have five for you.
X
Desktop Bottom Promotion