For Quick Alerts
ALLOW NOTIFICATIONS  
For Daily Alerts

ನಿಮ್ಮ ಚರ್ಮವು ನಿಮಗಿರುವ ಒತ್ತಡವನ್ನು ಪ್ರತಿಬಿಂಬಿಸುತ್ತದೆ ಎಂಬುವುದು ನಿಮಗೆ ಗೊತ್ತಾ?: ಹೇಗೆ ಇಲ್ಲಿದೆ ಮಾಹಿತಿ

|

ನಿಮ್ಮ ಚರ್ಮವು ನಿಮ್ಮ ದೇಹದ ಅತಿದೊಡ್ಡ ಅಂಗವಾಗಿದೆ. ಬಾಹ್ಯದಲ್ಲಿ ಅಂದರೆ ಶರೀರದ ಹೊರಗೆ ಸಮಸ್ಯೆಗಳಿವೆ ಎಂಬುವುದನ್ನು ಚರ್ಮ ಹಲವು ಬಾರಿ ತೋರಿಸುತ್ತದೆ. ಇದು ಅದರ ಸಂಕೇತವು ಹೌದು. ಯಸ್, ಚರ್ಮ ಮತ್ತು ಒತ್ತಡಕ್ಕೆ ಅವಿನಾಭಾವ ಸಂಬಂಧವಿದೆ. ಯಾಕೆಂದರೆ ನೀವು ಮಾನಸಿಕ, ದೈಹಿಕ ಮತ್ತು ಹಾರ್ಮೋನುಗಳ ಒತ್ತಡದಿಂದ ಬಳಲುತ್ತಿದ್ದರೆ ಅದು ನಿಮ್ಮ ಚರ್ಮದಲ್ಲಿ ಗೋಚರಿಸುತ್ತದೆ.

Ways Your Stress Affects Your Looks;Know How to Calm It in Kannada

ಈ ರೀತಿ ಆಗಿರುವ ಅನೇಕ ಉದಾಹರಣೆಗಳು ಇದೆ. ಈ ಬಗ್ಗೆ ಅನೇಕ ಸಂಶೋಧನೆಗಳು ನಡೆಸು ಬಹಿರಂಗವಾಗವು ಆಗಿದೆ. ಚರ್ಮಕ್ಕೆ ನಾವು ಆಹಾರ, ಔಷಧ, ತ್ವಚೆಗೆ ಸಂಬಂಧಪಟ್ಟ ಉತ್ಪನ್ನಗಳನ್ನು ಬಳಸುತ್ತೇವೆ ಎಂದು ನೀವು ಹೇಳಬಹುದು. ಆದರೆ ಅವೆಲ್ಲ ಕ್ಷಣಿಕ ಅಷ್ಟೇ. ಯಾಕೆಂದರೆ ಒತ್ತಡದ ಮುಂದೆ ಇವೆಲ್ಲ ನಗಣ್ಯ. ನೀವು ಒತ್ತಡ ಅಥವಾ ಮಾನಸಿಕವಾಗಿ ಕುಗ್ಗಿದ್ದರೆ ಅದು ನಿಮ್ಮ ಮುಖದಲ್ಲಿ ಕಂಡು ಬರುವುದು ನಿಶ್ಚಯ.

ನೀವು ಅದನ್ನು ತ್ವಚೆ ಉತ್ಪನ್ನಗಳಿಂದ ಸರಿಪಡಿಸಲು ಸಾಧ್ಯವೇ ಇಲ್ಲ ಎನ್ನುವುದು ಸಂಶೋಧಕರ ಅಭಿಪ್ರಾಯ. ಹಾಗಾದರೆ ಮಾನಸಿಕ, ದೈಹಿಕ ಮತ್ತು ಹಾರ್ಮೋನುಗಳ ಒತ್ತಡವು ನಿಮ್ಮ ಚರ್ಮವನ್ನು ಹೇಗೆ ಬದಲಾಯಿಸುತ್ತೆ. ಅದನ್ನು ನೀವು ಕಂಡುಹುಡುಕುವುದು ಹೇಗೆ..? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

 1. ಸೂರ್ಯನ ಶಾಖ ಮತ್ತು ದಣಿದ ಚರ್ಮದ ರಕ್ಷಣೆ

1. ಸೂರ್ಯನ ಶಾಖ ಮತ್ತು ದಣಿದ ಚರ್ಮದ ರಕ್ಷಣೆ

ಇದು ದೈಹಿಕವಾಗಿ ಮನುಷ್ಯನ ದೇಹಕ್ಕೆ ಉಂಟಾಗುವ ಒತ್ತಡದ ಭಾಗ ಹಾಗಿದೆ. ಯಾವುದೇ ಕೆಲಸ ಕಾರ್ಯಗಳಿರಬಹುದು ಅಥವಾ ಆಟ ಇನ್ನಿತರ ವಿಚಾರ ಇರಬಹುದು. ಈ ವೇಳೆ ನೀವು ಹೆಚ್ಚಿನ ಸಮಯ ಸೂರ್ಯನ ಬೆಳಕಿನಲ್ಲೇ ಇರುತ್ತೀರಿ. ಮಧ್ಯಾಹನದ ಹೊತ್ತಿನಲ್ಲಿ ಅಂತು ಸೂರ್ಯನ ಬಿಸಿಲು ಮೈ ಸುಡುತ್ತೆ. ಈ ರೀತಿ ಬಿಸಿಲಿಗೆ ನಮ್ಮ ದೇಹವನ್ನು ತೀವ್ರ ತರದಲ್ಲಿ ಒಡ್ಡಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.

ಹೌದು, ನಿಮ್ಮ ಚರ್ಮವನ್ನು ದೈಹಿಕವಾಗಿ ಒತ್ತಡಕ್ಕೆ ಒಳಪಡಿಸುವ ಮತ್ತು ಅದರ ರಕ್ಷಣೆಯನ್ನು ದುರ್ಬಲಗೊಳಿಸುವ ಒಂದು ಕಿರಣದ ಅಂಶವಿದೆ. ಅದುವೇ ನೇರಳಾತೀತ (UV) ವಿಕಿರಣ. ಸೂರ್ಯನಿಗೆ ಒಡ್ಡಿಕೊಳ್ಳುವ ಕಾರ್ಸಿನೋಜೆನಿಕ್ ಘಟಕ, ಇದು ಚರ್ಮದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಸೂರ್ಯನ ಬಿಸಿಲಿನ ನೇರಳಾತೀತ ಕಿರಣಗಳಿಂದ ಸನ್ ಬರ್ನ್ಸ್ ಉಂಟಾಗುತ್ತದೆ. ನೇರಳಾತೀತ ವಿಕಿರಣಕ್ಕೆ ಅತಿಯಾಗಿ ಒಡ್ಡಿಕೊಳ್ಳುವುದರಿಂದ ಕಪ್ಪು ಕಲೆಗಳು, ಮೋಲ್ಗಳು ಮತ್ತು ಚರ್ಮದ ಕ್ಯಾನ್ಸರ್ಗೆ ಕಾರಣವಾಗಬಹುದು. ಹಾಗಾದರೆ ಚರ್ಮದ ರಕ್ಷಣೆ ಹೇಗೆ ಮಾಡಿಕೊಳ್ಳಬಹುದು ಅಥವಾ ಚರ್ಮದ ದೈಹಿಕ ಒತ್ತಡವನ್ನು ಹೇಗೆ ನಿವಾರಿಸಿಕೊಳ್ಳುವುದು..? ಅನ್ನುವುದನ್ನು ನೋಡುವುದಾದರೆ.

ಯುವಿ ಕಿರಣಗಳು ಮತ್ತು ಸೂರ್ಯನ ಒತ್ತಡವನ್ನು ಎದುರಿಸಲು ಉತ್ತಮ ಮಾರ್ಗವೆಂದರೆ ಪ್ರತಿದಿನ ಬೆಳಿಗ್ಗೆ ಸನ್‌ಸ್ಕ್ರೀನ್ ಅನ್ನು ಹಚ್ಚಬೇಕು. ಬಿಸಿಲಿಗೆ ಮೈ ಒಡ್ಡುವ ಸಮಯದಲ್ಲಿ ಸನ್ ಸ್ಕ್ರೀನ್ ಹಾಕಿಕೊಳ್ಳಬೇಕು. ಇದು ಸೂರ್ಯನ ನೇರಳಾತೀತ ಕಿರಣಗಳಿಂದ ರಕ್ಷಣೆ ನೀಡುತ್ತದೆ. ಇನ್ನು ಸಿಟ್ರಸ್ ಹಣ್ಣುಗಳ ಸಿಪ್ಪೆಯನ್ನು ತಿನ್ನುವುದು ಸಹ ಸೂರ್ಯನ ವಿಕಿರಣದಿಂದ ರಕ್ಷಣೆಯನ್ನು ಒದಗಿಸುತ್ತದೆ.ಅಲ್ಲದೇ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಸಿ ಯ ಹೆಚ್ಚಿನ ಹಣ್ಣುಗಳು ಸೇವನೆಯಿಂದ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಉಂಟಾಗುವ ಸ್ವತಂತ್ರ ರಾಡಿಕಲ್ ಹಾನಿಯಿಂದ ನಿಮ್ಮ ಕೋಶಗಳನ್ನು ರಕ್ಷಿಸುತ್ತದೆ.

2. ಉರಿಯೂತ ಮತ್ತು ಚರ್ಮದ ಕಿರಿಕಿರಿ

2. ಉರಿಯೂತ ಮತ್ತು ಚರ್ಮದ ಕಿರಿಕಿರಿ

ಹೈವ್ಸ್, ಸೋರಿಯಾಸಿಸ್, ಎಸ್ಜಿಮಾ, ಡರ್ಮಟೈಟಿಸ್ ಮತ್ತು ರೊಸಾಸಿಯವು ಸಾಮಾನ್ಯವಾಗಿ ಉರಿಯೂತದ ಪರಿಣಾಮವಾಗಿದೆ. ಈ ಉರಿಯೂತ ಅಥವಾ ಇನ್ಫ್ಲಮೇಶನ್ ನಮ್ಮ ಒತ್ತಡದಿಂದ ಸಂಭವಿಸುತ್ತದೆ. ಮೆದುಳು ಒವರ್ ಡ್ರೈವ್ ಆದ ಸಂದರ್ಭದಲ್ಲಿ ಇದು ಚರ್ಮದಲ್ಲಿ ಸಮಸ್ಯೆಗಳು ಮೂಡುವ ಮೂಲಕ ತಿಳಿದು ಬರುತ್ತದೆ. ಉದಾಹರಣೆಗೆ ನಿದ್ದೆ ಇಲ್ಲದೆ ಇರುವಾಗ ಅಥವಾ ತೀವ್ರ ವಾದ ಕೆಲಸ ಬಳಿಕ ನಿಮ್ಮ ಮುಖದಲಿ ಆ ಒತ್ತಡ ಕಾಣಿಸುತ್ತದೆ. ಮೊಡವೆಗಳು ಏಳಬಹುದು.

ಈ ರೀತಿ ಇನ್ಫ್ಲಮೇಶನ್, ಚರ್ಮದ ಕಿರಿ ಕಿರಿ ಇದ್ದರೆ ನೀವು ಒತ್ತಡದಲ್ಲಿ ಇದ್ದೀರಿ ಎಂದು ಅರ್ಥ. ಆದರೆ ಒಂದು ನೆನಪಿರಲಿ ನೀವು ಕೂಡಲೇ ಯಾವುದಕ್ಕೂ ನಿರ್ಧಾರಕ್ಕೆ ಬರಬೇಡಿ. ಯಾಕೆಂದರೆ ಇನ್ಫ್ಲಮೇಶನ್, ಚರ್ಮದ ಕಿರಿ ಕಿರಿ ಕೆಲವೊಂದು ಬಾರಿ ನಾವು ಸೇವಿಸುವ ಆಹಾರದಿಂದ ಉಂಟಾಗಿರಬಹುದು. ಅಥವಾ ಹಾನಿಕಾರಕ ಉತ್ಪನ್ನದ ಪರಿಣಾಮವೇ ಆಗಿರಬಹುದು. ಹೀಗಾಗಿ ನಿಮಗೆ ಈ ಬಗ್ಗೆ ಅಂದಾಜಿಸಲು ಸಾಧ್ಯವಾಗದೆ ಇದ್ದರೆ ವೈದ್ಯರನ್ನು ಭೇಟಿ ಮಾಡುವುದು ಉತ್ತಮ.

3. ಮುಖದಲ್ಲಿ ತೀವ್ರ ತರಹದ ಎಣ್ಣೆ ಮತ್ತು ಮೊಡವೆ

3. ಮುಖದಲ್ಲಿ ತೀವ್ರ ತರಹದ ಎಣ್ಣೆ ಮತ್ತು ಮೊಡವೆ

ಒತ್ತಡವು ಮೊಡವೆಗಳೊಂದಿಗೆ ಹೆಚ್ಚು ಸಂಬಂಧಿಸಿದೆ, ವಿಶೇಷವಾಗಿ ಮಹಿಳೆಯರಿಗೆ. ಹೌದು, ಅಸಮತೋಲಿತ ಹಾರ್ಮೋನುಗಳು ಮತ್ತು ರಾಸಾಯನಿಕಗಳ ಬದಲಾವಣೆಯಿಂದ ಮಹಿಳೆಯರಲ್ಲಿ ಹೆಚ್ಚು ಮೊಡವೆ ಹಾಗೂ ಚರ್ಮದಲಿ ಎಣ್ಣೆ ರೀತಿಯ ಉತ್ಪನ್ನ ಉಂಟಾಗುತ್ತದೆ. ನೀವು ಕೂಡ ಈ ಬಗ್ಗೆ ಅನುಭವಿಸಿರಬಹುದು. ಹಾರ್ಮೋನ್ ಗಳ ಬದಲಾವಣೆ ವೇಳೆ ಚರ್ಮದಲ್ಲೂ ಬದಲಾವಣೆ ಇರುತ್ತದೆ.

ಈ ರೀತಿ ನಿಮ್ಮ ಮುಖ ಅಥವಾ ಚರ್ಮದಲ್ಲಿ ತೀವ್ರ ತರದ ಎಣ್ಣೆ ರೀತಿಯ ಅನುಭವ ಆದರೆ ಹಾಗೂ ಮೊಡವೆಗಳು ಇದ್ದರೆ ಇದು ಒತ್ತಡದಿಂದ ಉಂಟಾಗಿದೆ ಎಂದು ಅಂದಾಜಿಸಬಹುದು. ಅಲ್ಲದೇ ಈ ರೀತಿಯ ಒತ್ತಡ ಉಂಟಾದಾಗ ಐದು ನಿಮಿಷ ಇದಕ್ಕಾಗಿ ಸಮಯ ಕೊಟ್ಟು ವ್ಯಾಯಾಮಗಳನ್ನು ಮಾಡುವ ಮೂಲಕ ಈ ರೀತಿಯ ಸಮಸ್ಯೆಗಳಿಂದ ದೂರ ಇರಬಹುದು. ಅಲ್ಲದೇ ಇವುಗಳನ್ನು ತಡೆಗಟ್ಟಲು ಆಹಾರ ಹಾಗೂ ಚಿಕಿತ್ಸೆಯನ್ನು ಪಡೆಯಬಹುದು.

4. ಮೇಣದಂಥ ನೆತ್ತಿ, ಕೂದಲು ಉದುರುವಿಕೆ ಮತ್ತು ಉಗುರುಗಳು ಸಿಪ್ಪೆಸುಲಿಯುವುದು

4. ಮೇಣದಂಥ ನೆತ್ತಿ, ಕೂದಲು ಉದುರುವಿಕೆ ಮತ್ತು ಉಗುರುಗಳು ಸಿಪ್ಪೆಸುಲಿಯುವುದು

ನೀವು ನಿಮಗೆ ಅರಿವಿಲ್ಲದೆ ನಿಮ್ಮ ಕೂದಲನ್ನು ಎಳೆಯುವ ಹವ್ಯಾಸವನ್ನು ಹೊಂದಿದ್ದೀರಾ..? ಉಗುರುಗಳನ್ನು ಕಚ್ಚಿದ್ದೀರಾ..? ಇದು ಕೂಡ ಒತ್ತಡದ ಒಂದು ಭಾಗವಾಗಿದೆ. ಈ ರೀತಿಯ ಹವ್ಯಾಸ ಇದ್ದರೆ ನೀವು ಒತ್ತಡದಲ್ಲಿ ಇದ್ದೀರಿ ಎಂದು ಅರ್ಥ. ಹೌದು, ವ್ಯಾಕ್ಸ್ ಮಾಡಿರುವ ಸ್ಕಿನ್ ರೀತಿ ಇದ್ದರೆ ಎಸ್ಜಿಮಾ ಎಂಬ ಸಮಸ್ತೆ ಆಗಿರಬಹುದು.

ಅಥವಾ ಕೂದಲು ಉದುರುವುದು, ಉಗುರುಗಳ ಸಿಪ್ಪೆಸುಲಿಯುವುದು ಇವುಗಳೆಲ್ಲ ಒತ್ತಡದ ಭಾಗವಾಗಿದೆ. ಈ ರೀತಿ ಆಗದೆ ಇರೌ ಅಥವಾ ಈ ಸಮಸ್ಯೆಯಿಂದ ದೂರ ಇರಲು ಕೆಲವೊಂದು ತಂತ್ರಗಳನ್ನು ಪಾಲಿಸಬಹುದು. ಅಂದರೆ ಬಿಸಿ ನೀರಿನ ಸ್ನಾನ ಬಿಟ್ಟು ಬಿಡುವುದು. ನಿಯಮಿತವಾಗಿ ಯೋಗ ಮಾಡುವುದು. ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವುದು. ಈ ಮೂಲಕ ನಿಮ್ಮ ದೇಹ ಮತ್ತು ಎಲ್ಲಾ ರೀತಿಯ ಒತ್ತಡವನ್ನು ಸಮತೋಲನದಲಿ ಇಡಬಹುದು.

5. ತೆಳುವಾದ, ಹೆಚ್ಚು ಸೂಕ್ಷ್ಮ ಚರ್ಮ

5. ತೆಳುವಾದ, ಹೆಚ್ಚು ಸೂಕ್ಷ್ಮ ಚರ್ಮ

ಅಸಹಜವಾಗಿ ಹೆಚ್ಚಿನ ಕಾರ್ಟಿಸೋಲ್ ಮಟ್ಟಗಳ ಸಂದರ್ಭಗಳಲ್ಲಿ ಚರ್ಮವು ತೆಳುವಾಗಬಹುದು. ಕಾರ್ಟಿಸೋಲ್ ಚರ್ಮದ ಪ್ರೋಟೀನ್‌ಗಳ ವಿಘಟನೆಗೆ ಕಾರಣವಾಗುತ್ತದೆ, ಇದು ವಿಶ್ವಾಸಾರ್ಹ ಮೂಲ ಚರ್ಮವು ಬಹುತೇಕ ಕಾಗದದ-ತೆಳುವಾಗಿ ಕಾಣುವಂತೆ ಮಾಡುತ್ತದೆ. ಈ ರೀತಿ ಇದ್ದಾಗ ಸುಲಭವಾಗಿ ಮೂಗೇಟುಗಳು ಮತ್ತು ಹರಿದುಹೋಗುತ್ತದೆ.

ಈ ರೋಗಲಕ್ಷಣವು ಕುಶಿಂಗ್ ಸಿಂಡ್ರೋಮ್ ಅಥವಾ ಹೈಪರ್ಕಾರ್ಟಿಸೋಲಿಸಮ್ ಎಂದು ಕರೆಯುತ್ತಾರೆ. ಇದೊಂದು ಹಾರ್ಮೋನ್ ರೋಗವಾಗಿದ್ದು, ಗ್ಲೂಕೋಸ್ ಅಸಹಿಷ್ಣುತೆ, ಸ್ನಾಯು ದೌರ್ಬಲ್ಯ ಮತ್ತು ದುರ್ಬಲಗೊಂಡ ಪ್ರತಿರಕ್ಷಣಾ ವ್ಯವಸ್ಥೆ ನಂತಹ ಹೆಚ್ಚುವರಿ ಲಕ್ಷಣಗಳನ್ನು ಒಳಗೊಂಡಿದೆ. ಹೀಗಾಗಿ ನೀವು ಈ ರೀತಿಯ ಸಮಸ್ಯೆ ಎದುರಿಸುತ್ತಿದ್ದರೆ ಕೂಡಲೇ ವೈದ್ಯರನ್ನು ಭೇಟಿ ಸಮಾಲೋಚನೆ ನಡೆಸುವುದು ಒಳ್ಳೆಯ ಐಡಿಯಾ.

6. ಗಾಯ ಸರಿಯಾಗುವುದಕ್ಕೆ ವಿಳಂಬ

6. ಗಾಯ ಸರಿಯಾಗುವುದಕ್ಕೆ ವಿಳಂಬ

ನಿಮ್ಮ ಗಾಯ ಗುಣವಾಗುತ್ತಿಲ್ಲವೇ..? ಅದಕ್ಕೆ ಕಾರಣ ಒತ್ತಡ. ಹೌದು, ತೀವ್ರವಾದ ಒತ್ತಡದ ಹಿನ್ನೆಲೆಯಲ್ಲಿ, ನಿಮ್ಮ ಎಪಿಡರ್ಮಿಸ್ ತ್ವರಿತವಾಗಿ ದುರ್ಬಲಗೊಳ್ಳಬಹುದು, ಸೋಂಕುಗಳು ಮತ್ತು ಪರಿಸರ ರೋಗಕಾರಕಗಳ ಅಪಾಯವನ್ನು ಹೆಚ್ಚಿಸುತ್ತದೆ. ಇದು ಗಾಯಗಳು, ಚರ್ಮವು ಮತ್ತು ಮೊಡವೆಗಳನ್ನು ಗುಣಪಡಿಸುವ ನಿಮ್ಮ ಚರ್ಮದ ನೈಸರ್ಗಿಕ ಸಾಮರ್ಥ್ಯವನ್ನು ನಿಧಾನಗೊಳಿಸುತ್ತದೆ.

ಈ ರೀತಿಯ ಗಾಯವನ್ನು ಸರಿ ಪಡಿಸಲು ನೀವು ಗ್ಲಿಸರಿನ್ ಮತ್ತು ಹೈಲುರಾನಿಕ್ ಆಮ್ಲದೊಂದಿಗೆ ಉತ್ಪನ್ನಗಳನ್ನು ಬಳಸಬಹುದು. ಅಲ್ಲದೇ ಆಂತರಿಕ ಚಿಕಿತ್ಸೆಗಾಗಿ ಉತ್ಕರ್ಷಣ ನಿರೋಧಕ-ಭರಿತ ಆಹಾರವನ್ನು ಸೇವಿಸಬಹುದು. ಚರ್ಮವನ್ನು ಹೈಡ್ರೀಕರಿಸುವುದರ ಜೊತೆಗೆ, ಸತು, ಸಾಲ್ ಮತ್ತು ಅಗಸೆಬೀಜದ ಎಣ್ಣೆಯನ್ನು ಆಧರಿಸಿದ ಉತ್ಪನ್ನಗಳನ್ನು ಬಳಸುವತ್ತ ಗಮನಹರಿಸಿ. ಈ ಪದಾರ್ಥಗಳನ್ನು ನಿಮ್ಮ ಚರ್ಮವನ್ನು ತೇವಗೊಳಿಸುವಂತೆ ಮತ್ತು ಗಾಯವನ್ನು ಗುಣಪಡಿಸಲು ಪ್ಯಾಕ್ಡ್ ಹೀಲಿಂಗ್ ಪಂಚ್ ಅನ್ನು ಒದಗಿಸಲು ಸಹಾಯ ಮಾಡುತ್ತದೆ.

7. ದಣಿದ ಕಣ್ಣುಗಳು ಮತ್ತು ಒರ್ಬಿಟಲ್ ಚರ್ಮ

7. ದಣಿದ ಕಣ್ಣುಗಳು ಮತ್ತು ಒರ್ಬಿಟಲ್ ಚರ್ಮ

ನಿಮ್ಮ ಕಣ್ಣುಗಳ ಸುತ್ತಲಿನ ಕಪ್ಪು ವರ್ತುಲಗಳ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ..?ಅದು ಯಾಕೆ ಉಂಟಾಗುತ್ತದೆ ಎಂದು ನಿಮಗೆ ತಿಳಿದಿದ್ಯಾ..? ಅದು ಉಂಟಾಗುವುದು ಒತ್ತಡದಿಂದ . ಹೌದು, ನಿಮ್ಮ ಕಣ್ಣುಗಳ ಸುತ್ತ ಕಪ್ಪು ಕಲೆ ಇದ್ದರೆ ಅದು ಸರಿಯಾದ ನಿದ್ದೆ ಇಲ್ಲದೆ ಉಂಟಾಗುತ್ತಿದೆ ಎಂದು ಅರಿವಿಗೆ ಬರುತ್ತದೆ.

ಹೀಗಾಗಿ ನೀವು ಇದರಿಂದ ತಪ್ಪಿಸಿಕೊಳ್ಳಲು ಮಲಗುವ ಎರಡು ಗಂಟೆ ಮೊದಲು ಮೊಬೈಲ್ ಬಳಕೆ ಮಾಡದೆ ಇರುವುದು, ಧ್ಯಾನ ಮತ್ತು ಯೋಗ ನಡೆಸುವುದು. ಚಿಕಿತ್ಸೆ ಪಡೆಯುವ ಮೂಲಕ ಸರಿಯಾದ ನಿದ್ದೆ ಪಡೆದುಕೊಳ್ಳಬಹುದು. ಈ ಮೂಲಕ ಕಣ್ಣಿನ ದಣಿವು ಕಡಿಮೆ ಗೊಳಿಸಬಹುದು.

8. ಫೈನ್ ಲೈನ್ಸ್ ಮತ್ತು ಸುಕ್ಕುಗಳು

8. ಫೈನ್ ಲೈನ್ಸ್ ಮತ್ತು ಸುಕ್ಕುಗಳು

ಮುಖದಲ್ಲಿ ಫೈನ್ ಲೈನ್ ಗಳು ಮತ್ತು ಸುಕ್ಕುಗಳು ಇದ್ಯಾ..? ಹಾಗಾದರೆ ನೀವು ಒತ್ತಡವನ್ನು ಅನುಭವಿಸುತ್ತಿದ್ದೀರಿ ಎಂದು ತಿಳಿದುಕೊಳ್ಳಿ. ಹೌದು, ಒತ್ತಡದಿಂದ ಮುಖದಲ್ಲಿ ಸುಕ್ಕುಗಳು ಉಂಟಾಗಬಹುದು. ಮಾನಸಿಕ ಆರೋಗ್ಯ ಚೆನ್ನಾಗಿಲ್ಲ ಎಂದರೆ ಮುಖ ವಯಸ್ಸಾದಂತೆ ಕಾಣುತ್ತದೆ. ಇದನ್ನು ತಡೆಗಟ್ಟಲು ನೀವು ಮುಖದ ಯೋಗ ನಡೆಸಹುದು. ಆಗಾಗೇ ಮುಖ ತೊಳಿಯುವುದು ಒಳ್ಳೆಯದು. ಯೋಗದ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

9. ಒತ್ತಡಕ್ಕೆ ಪರಿಹಾರವೇನು..?

9. ಒತ್ತಡಕ್ಕೆ ಪರಿಹಾರವೇನು..?

ಒತ್ತಡ ಒಂದಲ್ಲ ಒಂದು ರೀತಿಯಲ್ಲಿ ಉಂಟಾಗುತ್ತದೆ. ಇದಕ್ಕೆ ಪ್ರಮುಖ ಪರಿಹಾರ ಎಂದರೆ ಯೋಗ ಮತ್ತು ಉತ್ತಮ ಆಹಾರ. ಹೌದು, ಉತ್ತಮವಾಗಿ ದಿನನಿತ್ಯ ಯೋಗ ಮಾಡಿದರೆ ನಿಮ್ಮ ಒತ್ತಡವು ಕಡಿಮೆ ಆಗುತ್ತದೆ. ಅಲ್ಲದೇ ಮನೆಯಲ್ಲೂ ನೆಮ್ಮದಿ ಇರುತ್ತದೆ. ಅಲ್ಲದೇ ಆರೋಗ್ಯವನ್ನು, ಚರ್ಮವನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು.

English summary

Ways Your Stress Affects Your Looks;Know How to Calm It in Kannada

Here we are discussing about Ways Your Stress Affects Your Looks;Know How to Calm It in Kannada. Read more.
X
Desktop Bottom Promotion