For Quick Alerts
ALLOW NOTIFICATIONS  
For Daily Alerts

ಉದ್ದವಾದ ಕಣ್ರೆಪ್ಪೆ ಚೆಲುವು ನಿಮ್ಮದಾಗಬೇಕೆ?

|

ಉದ್ದವಾದ, ಮಂದವಾದ ಕಣ್ರೆಪ್ಪೆ ಹೊಂದಿರುವವರ ಮುಖವನ್ನು ಗಮನಿಸಿದರೆ ಅವರಿಗೆ ಆ ಕಣ್ರೆಪ್ಪೆ ಮುಖಕ್ಕೆ ವಿಸೇಷ ಆಕರ್ಷಣೆಯನ್ನು ನೀಡಿರುತ್ತದೆ. ಅವರ ಸೌಂದರ್ಯ ಎದ್ದು ಕಾಣಲು ಅದೂ ಕೂಡ ಒಂದು ಕಾರಣವಾಗಿರುತ್ತದೆ. ಎಲ್ಲರಿಗೂ ಮಂದವಾದ ಕಣ್ರೆಪ್ಪೆ ಇರುವುದಿಲ್ಲ, ಕೆಲವರಿಗೆ ಕಣ್ರೆಪ್ಪೆ ಸ್ವಲ್ಪ ಕಡಿಮೆ ಇರುತ್ತದೆ, ಅಂಥವರು ತಮ್ಮ ಮುಖದ ಅಂದ ಹೆಚ್ಚಿಸಲು ಕೃತಕ ಕಣ್ರೆಪ್ಪೆ ಬಳಸುವುದನ್ನು ನೋಡಿರಬಹುದು.

C:\Anguraj\Boldsky Kannada\05_May\20-05\05

ಆದರೆ ನೈಸರ್ಗಿಕವಾಗಿ ಕಣ್ರೆಪ್ಪೆ ಹೊಂದಿರುವವರು ಕೆಲವೊಂದು ತಪ್ಪುಗಳನ್ನು ಮಾಡುವ ಮೂಲಕ ಕಣ್ರೆಪ್ಪೆ ಸೌಂದರ್ಯವನ್ನು ಕಳೆದುಕೊಳ್ಳುತ್ತಾರೆ. ಇಲ್ಲಿ ನಾವು ನೀವು ಉದ್ದವಾದ ಕಣ್ರೆಪ್ಪೆ ಸೌಂದರ್ಯ ಪಡೆಯಲು ಏನು ಮಾಡಬೇಕೆಂಬ ಟಿಪ್ಸ್ ನೀಡಿದ್ದೇವೆ ನೋಡಿ:

1. ಕಣ್ಣುಗಳನ್ನು ಉಜ್ಜಬೇಡಿ

1. ಕಣ್ಣುಗಳನ್ನು ಉಜ್ಜಬೇಡಿ

ಸುಮ್ಮನೆ ಕಣ್ಣು ಉಜ್ಜುವ ಅಭ್ಯಾಸಕೆಲವರಿಗೆ ಇರುತ್ತದೆ. ತುಂಬಾಸುಸ್ತು ಅನಿಸಿದಾಗ ಕಣ್ಣು ಉಜ್ಜುತ್ತೇವೆ, ಇದರಿಂದ ಸ್ವಲ್ಪ ಆಯಾಸ ಕಡಿಮೆಯಾದಂತೆ ಅನಿಸಿದರೂ ನಿಮ್ಮ ಕಣ್ರೆಪ್ಪೆಗೆ ಹಾಗೆ ಮಾಡುವುದು ಒಳ್ಳೆಯದಲ್ಲ. ಇದರಿಂದ ಕಣ್ರೆಪ್ಪೆಗಳು ಉದುರಿ ಹೋಗುವುದು. ಇನ್ನು ರಾತ್ರಿ ಮಲಗುವಾಗ ಹರಳ್ಳೆಣ್ನೆಯಿಂದ ಕಣ್ರೆಪ್ಪೆಗೆ ಮಸಾಜ್‌ ಮಾಡಿದರೆ ಕಣ್ರೆಪ್ಪೆ ಮಂದವಾಗಿ ಆಕರ್ಷಕವಾಗಿ ಇರುತ್ತದೆ, ಕಣ್ರೆಪ್ಪೆ ತೆಳು ಇರುವವರು ಈ ಟಿಪ್ಸ್ ಪಾಲಿಸಿದರೆ ಕೆಲವು ತಿಂಗಳುಗಳಲ್ಲಿ ಮಂದವಾದ ಕಣ್ರೆಪ್ಪೆ ಸೌಂದರ್ಯ ಪಡೆಯಬಹುದು.

2. ವಾಟರ್‌ಫ್ರೂಫ್‌ ಮಸ್ಕರಾ ಬೇಡ

2. ವಾಟರ್‌ಫ್ರೂಫ್‌ ಮಸ್ಕರಾ ಬೇಡ

ಸಾಮಾನ್ಯವಾಗಿ ನಾವೆಲ್ಲಾ ವಾಟರ್‌ ಫ್ರೂಫ್‌ ಮೇಕಪ್ ಇಷ್ಟಪಡುತ್ತೇವೆ. ಬೇಸಿಗೆಯಲ್ಲಿ ಬೆವರಿದಾಗ, ಮಳೆಗಾಲದಲ್ಲಿ ಮಳೆ ನೀರು ಬಿದ್ದಾಗ ಇವುಗಳು ಹರಡುವುದಿಲ್ಲ. ಆದ್ದರಿಂದ ಮುಖದಲ್ಲಿ ಮೇಕಪ್ ತುಂಬಾ ಸಮಯ ಉಳಿಯುವುದರಿಂದ ವಾಟರ್‌ಫ್ರೂಫ್‌ ಬಳಸುತ್ತೇವೆ. ಆದರೆ ವಾಟರ್‌ ಫ್ರೂಫ್‌ ಮಸ್ಕರಾ ಒಳ್ಳೆಯದಲ್ಲ. ಏಕೆಂದರೆ ಇದನ್ನು ಹಚ್ಚಿದಾಗ ಮಂದವಾಗಿ ಅಂಟಿ ಹಿಡಿದಿರುತ್ತದೆ. ಇದನ್ನು ತೆಗೆಯುವಾಗ ಕಣ್ರೆಪ್ಪೆ ಕೂಡ ಬರುವುದು. ದಿನಾ ಒಂದೊಂದು ಕಣ್ರೆಪ್ಪೆ ಉದುರಿದರೂ ಕ್ರಮೇಣ ಕಣ್ರೆಪ್ಪೆ ಮಂದ ಕಡಿಮೆಯಾಗುವುದು.

 3. ಮೇಕಪ್ ತೆಗೆಯುವಾಗ ಎಚ್ಚರ

3. ಮೇಕಪ್ ತೆಗೆಯುವಾಗ ಎಚ್ಚರ

ಕಣ್ಣಿಗೆ ಹಚ್ಚಿದ ಮೇಕಪ್ ತೆಗೆಯಲು ತೆಂಗಿನಣ್ಣೆ ಅಥವಾಆಲೀವ್‌ ಎಣ್ಣೆ, ಎಣ್ಣೆಯಿಂದ ಮಾಡಿದ ಕ್ಲೆನ್ಸರ್ ಬಳಸಿ. ನಿಮ್ಮ ಅಂಗೈಗೆ ಸ್ವಲ್ಪ ಎಣ್ಣೆ ಹಾಕಿ ಚೆನ್ನಾಗಿ ಉಜ್ಜಿ, ಆ ಎಣ್ಣೆಯನ್ನು ಕಣ್ಣಿಗೆ ಮೆಲ್ಲನೆ ಹಚ್ಚಿ, ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಹೀಗೆ ಮಾಡುವುದರಿಂದ ಮೇಕಪ್ ಸುಲಭವಾಗಿ ತೆಗೆಯಬಹುದು, ಕಣ್ರೆಪ್ಪೆಗೂ ಒಳ್ಳೆಯ ಮಸಾಜ್ ಸಿಗುವುದು.

4.ಎಣ್ಣೆ

4.ಎಣ್ಣೆ

ತ್ವಚೆಗೆ ಎಣ್ಣೆ ತುಂಬಾ ಒಳ್ಳೆಯದು ಎಂದು ಹೇಳುವುದನ್ನು ಕೇಳಿರಬಹುದು ನೀವು ಕಣ್ಣಿಗೆ ಹೇಗೆ ಮಸ್ಕರಾ ಹಚ್ಚುತ್ತೀತಾ ಅದೇ ರೀತಿ ಕಣ್ಣಿಗೆ ಎಣ್ಣೆ ಹಚ್ಚಿ. ರಾತ್ರಿ ಮಲಗುವ ಮುನ್ನ ಅಥವಾ ಸ್ನಾನಕ್ಕೆ ಅರ್ಧಗಂಟೆ ಮುನ್ನ ಮಾಡಿ. ಈ ರೀತಿ ಪ್ರತಿದಿನ ಮಾಡುತ್ತಿದ್ದರೆ ಕಣ್ರೆಪ್ಪೆ ಚೆನ್ನಾಗಿ ಬೆಳೆಯುತ್ತದೆ.

5. ಸೆರಮ್

5. ಸೆರಮ್

ಈ ಮೇಲಿನ ನಾಲ್ಕು ಟಿಪ್ಸ್ ಹೊರತಾಗಿ ಸೆರಮ್‌ ಕೂಡ ಟ್ರೈ ಮಾಡಬಹುದು. ಕಣ್ರೆಪ್ಪೆಗೆ ಹಚ್ಚಲು ಸೆರಮ್ ಸಿಗುತ್ತದೆ. ಅದನ್ನು 12 ವಾರ ಬಳಸಿದರೆ ಕಣ್ರೆಪ್ಪೆ ಮಂದವಾಗಿ ಬೆಳೆಯುವುದು. ಸೆರಮ್ ಬಳಕೆ ಮಾಡುತ್ತಿದ್ದರೆ ನಿಮ್ಮ ಕಣ್ಣುಗಳು ತುಂಬಾ ಆಕರ್ಷಕವಾಗಿ ಕಾಣುವುದು.

English summary

Tips to Get Longer, More Beautiful Lashes

Do you want to have long lashes then here are tips for you! With these five tips, your lashes will be longer in no time and give you radiant eyes, Have a look.
X
Desktop Bottom Promotion