For Quick Alerts
ALLOW NOTIFICATIONS  
For Daily Alerts

ವ್ಯಾಕ್ಸಿಂಗ್ ನಂತರದ ತ್ವಚೆಯ ಸಮಸ್ಯೆಗೆ ಈ ಸಲಹೆ ಪಾಲಿಸಿ

|

ಹುಡುಗಿಯರು ಸಾಮಾನ್ಯವಾಗಿ ಎಲ್ಲಾ ವಿಷಯದಲ್ಲೂ ಪರಿಪೂರ್ಣವಾಗಿರಲು ಬಯಸುತ್ತಾರೆ, ಅದರಲ್ಲೂ ತಮ್ಮ ಸೌಂದರ್ಯದ ವಿಷಯಕ್ಕೆ ಬಂದಾಗ ತುಸು ಜಾಸ್ತಿಯೇ ಸಮಯ ಮೀಸಲಿಟ್ಟು, ಅದರ ಬಗ್ಗೆ ಹೆಚ್ಚಿನ ಗಮನ ವಹಿಸುತ್ತಾರೆ. ನಮ್ಮಲ್ಲಿ ತಿಂಗಳಿನ ಕೊನೆಯಲ್ಲಿ ಕೆಲವು ಮಾಡಲೇ ಬೇಕಾದ ಪಟ್ಟಿಯಿರುತ್ತದೆ. ಆ ಕಾರ್ಯಗಳನ್ನು ಎಂದಿಗೂ ತಪ್ಪಿಸುವುದೇ ಇಲ್ಲ. ಅಂತಹ ಪ್ರಮುಖ ಕಾರ್ಯಗಳ ಪಟ್ಟಿಯಲ್ಲಿ, ತಿಂಗಳ ಕೊನೆಯಲ್ಲಿ ಮಾಡಿಸುವ ವ್ಯಾಕ್ಸಿಂಗ್ ಕೂಡ ಒಂದು.

ಕೆಲವರಿಗೆ ಎರಡು ಮೂರು ವಾರಗಳ ಕಾಲ ಕೂದಲಿಲ್ಲದ ಮತ್ತು ನಯವಾದ ಚರ್ಮವು ವ್ಯಾಕ್ಸಿಂಗ್ ಬಳಿಕವೂ ಹಾಗೆಯೇ ಉಳಿಯುತ್ತದೆ, ಆದರೆ ಎಲ್ಲರಿಗೂ ಹೀಗೆ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ವ್ಯಾಕ್ಸಿಂಗ್ ನಂತರ ಬ್ರೇಕ್‌ಔಟ್‌ಗಳು ನಮ್ಮಲ್ಲಿ ಅನೇಕರು ಎದುರಿಸುತ್ತಿರುವ ಸಮಸ್ಯೆಯಾಗಿದೆ.

Struggling With Post Waxing Breakouts Here’s Preventing Tips
ವ್ಯಾಕ್ಸಿಂಗ್ ನಂತರ ದದ್ದುಗಳು, ಗುಳ್ಳೆಗಳು, ತುರಿಕೆ ಮತ್ತು ಚರ್ಮದ ಉಬ್ಬುಗಳು ಮೊದಲಾದವು ಸಾಮಾನ್ಯವಾಗಿವೆ. ಈ ಸಮಸ್ಯೆಗಳಿಗೆ ಕಾರಣ ವಿಭಿನ್ನವಾಗಿರಬಹುದು. ಇದು ವ್ಯಾಕ್ಸಿಂಗ್ ನಂತರ ತಕ್ಷಣ ಸೂರ್ಯನ ಕಿರಣಗಳಿಗೆ ಒಡ್ಡಿಕೊಳ್ಳುವುದಿರಬಹುದು ಅಥವಾ ಚರ್ಮದ ರಕ್ಷಣೆಯ ಉತ್ಪನ್ನಗಳ ಅಸಡ್ಡೆ ಬಳಕೆಯೂ ಇರಬಹುದು.

ಆದರೂ ಈ ಬಗ್ಗೆ ನೀವು ಹೆಚ್ಚು ಚಿಂತೆ ಮಾಡುವ ಅಗತ್ಯವಿಲ್ಲ. ವ್ಯಾಕ್ಸಿಂಗ್ ನಂತರ ಉಂಟಾಗುವ ಸಮಸ್ಯೆಗಳನ್ನು ಸುಲಭವಾಗಿ ನಿಭಾಯಿಸಬಹುದು. ಅದು ಹೇಗೆ ಎಂಬ ಸಂಗತಿಗಳನ್ನು ನಾವು ಇಂದು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.

1. ವ್ಯಾಕ್ಸಿಂಗ್ ಗಿಂತ ಮೊದಲು ಮಾಡಬೇಕಾದ್ದೇನು?

1. ವ್ಯಾಕ್ಸಿಂಗ್ ಗಿಂತ ಮೊದಲು ಮಾಡಬೇಕಾದ್ದೇನು?

ವ್ಯಾಕ್ಸಿಂಗ್ ನಂತರ ಮಾತ್ರವಲ್ಲ, ನೀವು ವ್ಯಾಕ್ಸಿಂಗ್ ಮಾಡುವುದಕ್ಕಿ ದಿನ ಗೊತ್ತುಪಡಿಸಿದ ಮೇಲೆ ವ್ಯಾಕ್ಸಿಂಗ್ ಗಿಂತಲೂ ಮೊದಲು ಕೆಲವು ಅಂಶಗಳನ್ನು ಗಮನದಲ್ಲಿಡಬೇಕು. ಮೊದಲು ನಿಮ್ಮ ತ್ವಚೆಯನ್ನು ವ್ಯಾಕ್ಸಿಂಗ್ ಗೆ ಸಿದ್ಧಗೊಳಿಸಬೇಕು. ಅಂದರೆ ಸ್ಕ್ರಬ್ಬಿಂಗ್ ಮಾಡುವುದು, ಡೆಡ್ ಸ್ಕಿನ್ ಕೋಶವನ್ನು ತೆಗೆಯಲು ಮೃದುವಾದ ಸ್ಕ್ರಬ್ಬಿಂಗ್ ಬಳಸಿ ತ್ವಚೆಯನ್ನು ಮೃದುವಾಗಿ ಉಜ್ಜಿ. ವ್ಯಾಕ್ಸಿಂಗ್ ಮಾಡಿಸುವುದಕ್ಕಿಂತ ಎರಡು ದಿನ ಮೊದಲು ಹೀಗೆ ಮಾಡುವುದರಿಂದ ವ್ಯಾಕ್ಸಿಂಗ್ ನಂತರ ಅದ್ಭುತವಾದ ಮೃದು ತ್ವಚೆಯ ಅನುಭವವನ್ನು ಪಡೆಯುವಿರಿ. ಮತ್ತು ಹೀಗೆ ಮಾಡುವುದರಿಂದ ವ್ಯಾಕ್ಸಿಂಗ್ ನಂತರ ಉಂಟಾಗಬಹುದಾದ ತುರಿಕೆ ಮೊದಲಾದವುಗಳು ನಿವಾರಣೆಯಾಗಬಹುದು.

2. ನಿಮ್ಮ ಸಲೂನ್ ಅನ್ನು ಬುದ್ಧಿವಂತಿಕೆಯಿಂದ ಆರಿಸಿ

2. ನಿಮ್ಮ ಸಲೂನ್ ಅನ್ನು ಬುದ್ಧಿವಂತಿಕೆಯಿಂದ ಆರಿಸಿ

ವ್ಯಾಕ್ಸಿಂಗ್ ನಂತರದ ಸಮಸ್ಯೆಗೆ ಆರೋಗ್ಯಕರವಲ್ಲದ ಸಲೂನ್ ಕೂಡ ಒಂದು ಕಾರಣವಾಗಬಹುದು. ನಿಮ್ಮ ವ್ಯಾಕ್ಸಿಂಗ್ ಮಾಡಿಸಲು ಹೊರಟಿರುವ ಸ್ಥಳವು ಸ್ವಚ್ಛವಾಗಿದೆಯೇ, ಸ್ವಚ್ಛವಾದ ವ್ಯಾಕ್ಸಿಂಗ್ ಸಾಧನಗಳನ್ನು ಬಳಸುತ್ತಾರೆಯೇ ಎಂದು ಪರಿಶೀಲಿಸಿ. ಮೊದಲೇ ಆ ಸಲೂನ್ ಅಥವಾ ಬ್ಯೂಟಿ ಪಾರ್ಲರ್ ಬಗ್ಗೆ ಇರುವ ವಿಮರ್ಶೆಗಳನ್ನು ಕೇಳಿ / ಓದಿ ತಿಳಿದುಕೊಳ್ಳಿ. ನೀವು ಒಂದೇ ಪಾರ್ಲರ್ ಗೆ ಹೋಗುತ್ತಿದ್ದು, ಪ್ರತಿಸಲ ಹೋಗಿ ವ್ಯಾಕ್ಸಿಂಗ್ ಮಾಡಿಸಿದಾಗಲೂ ಸಮಸ್ಯೆ ಉಂಟಾದರೆ ಆ ಪಾರ್ಲರ್ ಆರೋಗ್ಯಕರವಾಗಿಲ್ಲ ಎಂಬುದು ಖಚಿತ. ಮುಂದಿನ ಬಾರಿ ನಿಮ್ಮ ಪಾರ್ಲರ್ ಗೆ ಭೇತಿ ನೀಡಿದಾಗ ಮೊದಲು ಸುತ್ತಲೂ ಪರಿಶೀಲಿಸಿ, ಒಂದು ವೇಳೆ ಸ್ವಚ್ಛವಾಗಿಲ್ಲ ಅನಿಸಿದರೆ ಬೇರೆ ಪಾರ್ಲರ್ ನ್ನು ನೋಡಿಕೊಳ್ಳುವುದು ಒಳಿತು. ಒಂದು ವೇಳೆ ನೀವು ಮನೆಯಲ್ಲಿಯೇ ವ್ಯಾಕ್ಸಿಂಗ್ ಮಾಡಿಕೊಳ್ಳುವ ಹಾಗಿದ್ದರೆ, ಸುತ್ತಲೂ ಸ್ವಚ್ಛವಾಗಿಡಿ, ವ್ಯಾಕ್ಸಿಂಗ್ ಸಾಧನಗಳನ್ನು ತೊಳೆದುಕೊಳ್ಳು ಮತ್ತು ಕೈಗವಚಗಳನ್ನು ಬಳಸಿ.

3. ಸೂರ್ಯನ ಕಿರಣಕ್ಕೆ ತೆರೆದುಕೊಳ್ಳಬೇಡಿ.

3. ಸೂರ್ಯನ ಕಿರಣಕ್ಕೆ ತೆರೆದುಕೊಳ್ಳಬೇಡಿ.

ವ್ಯಾಕ್ಸಿಂಗ್ ಆದ ತಕ್ಷಣ ನಿಮ್ಮ ಚರ್ಮಕ್ಕೆ ಸೂರ್ಯನ ಕಿರಣ ಬೀಳದಂತೆ ನೋಡಿಕೊಳ್ಳಿ. ವ್ಯಾಕ್ಸಿಂಗ್, ನಿಮ್ಮ ಚರ್ಮದ ಮೇಲಿನ ಪದರವನ್ನು, ಅನಗತ್ಯ ಕೂದಲಿನೊಂದಿಗೆ ತೆಗೆದುಹಾಕುತ್ತದೆ. ಇದು ನಿಮ್ಮ ಚರ್ಮವನ್ನು ಇನ್ನಷ್ಟು ಹಾನಿಗೊಳಗಾಗುವಂತೆ ಮಾಡುತ್ತದೆ. ಆದ್ದರಿಂದ ವ್ಯಾಕ್ಸಿಂಗ್ ಆದ ತಕ್ಷಣ, ಸೂರ್ಯನ ಹಾನಿಕಾರಕ ಕಿರಣಗಳಿಗೆ ಚರ್ಮವನ್ನು ಒಡ್ಡುವುದು ಒಳ್ಳೆಯದಲ್ಲ. ಸೂರ್ಯನಿಂದ ಉಂಟಾಗುವ ಹಾನಿ ಹೆಚ್ಚು ಮತ್ತು ವ್ಯಾಕ್ಸಿಂಗ್ ನಂತರದ ಸಮಸ್ಯೆಗೆ ಇದೂ ಒಂದು ಪ್ರಮುಖ ಕಾರಣ. ಆದ್ದರಿಂದ, ನಿಮ್ಮ ವ್ಯಾಕ್ಸಿಂಗ್ ಮುಗಿದ ನಂತರ ಹೊರಬರುವಾಗ ಮೊದಲು ನಿಮ್ಮ ತ್ವಚೆಯನ್ನು ಬಟ್ಟೆಯಿಂದ ಮುಚ್ಚಿಕೊಳ್ಳಿ.

4. ಬಿಸಿ ನೀರಿನ ಸ್ನಾನ ಮಾಡದಿರಿ

4. ಬಿಸಿ ನೀರಿನ ಸ್ನಾನ ಮಾಡದಿರಿ

ವ್ಯಾಕ್ಸಿಂಗ್, ನಿಮಗೆ ಜಿಗುಟಾದ ಅನುಭವವನ್ನು ನೀಡುತ್ತದೆ, ನೀವು ಅದನ್ನು ತೊಳೆಯುವವರೆಗೂ ಅದು ಹೋಗುವುದಿಲ್ಲ. ಹಾಗಾಗಿ ಸ್ವಚ್ಛಗೊಳಿಸಲು ವ್ಯಾಕ್ಸಿಂಗ್ ನಂತರ ನಾವು ಹೆಚ್ಚಾಗಿ ಬಿಸಿನೀರಿನ ಸ್ನಾನವನ್ನೇ ಆರಿಸಿಕೊಳ್ಳುತ್ತೇವೆ. ನೋವಿನ ವ್ಯಾಕ್ಸಿಂಗ್ ಪ್ರಕ್ರಿಯೆ ಮುಗಿದ ನಂತರ ವಿಶ್ರಾಂತಿ ಪಡೆಯಲು ಇದು ಸರಿಯಾದ ಮಾರ್ಗವೆಂದು ತೋರುತ್ತದೆ. ನೀವು ಹೀಗೆ ಬಿಸಿ ನೀರಿನ ಸ್ನಾನ ಮಾಡಲು ಎಷ್ಟು ಪ್ರಚೋದಿಸಿದರೂ, ಬಿಸಿನೀರಿನ ಸ್ನಾನವನ್ನು ಮಾಡಬೇಡಿ. ಬಿಸಿನೀರು ಚರ್ಮವನ್ನು ಸುಡುವಂತ ಮಾಡುತ್ತದೆ. ವ್ಯಾಕ್ಸಿಂಗ್ ನ ನಂತರ ಸ್ವಚ್ಛಗೊಳಿಸಲು ತಣ್ಣೀರನ್ನು ಬಳಸಿ ಮತ್ತು ಯಾವುದೇ ಕಾರಣಕ್ಕೂ ಸೋಪ್ ಅನ್ನು ಬಳಸಬೇಡಿ. ಅಲ್ಲದೆ, ಸಾರ್ವಜನಿಕ ಸ್ನಾನಗೃಹ ಮತ್ತು ಈಜುಕೊಳಗಳಲ್ಲಿ ಸ್ನಾನ ಮಾಡಬೇಡಿ. ಇವು ನಿಮ್ಮ ಚರ್ಮಕ್ಕೆ ಸೋಂಕು ತಗುಲಿ ಸಮಸ್ಯೆ ಉಂಟಾಗಲು ಕಾರಣವಾಗಬಹುದು.

5. ವ್ಯಾಕ್ಸಿಂಗ್ ನಂತರದ ಆರೈಕೆ ಪ್ರಮುಖವಾಗಿದೆ

5. ವ್ಯಾಕ್ಸಿಂಗ್ ನಂತರದ ಆರೈಕೆ ಪ್ರಮುಖವಾಗಿದೆ

ನೀವು ವ್ಯಾಕ್ಸಿಂಗ್ ಮಾಡಿದ ತಕ್ಷಣ ಚರ್ಮವನ್ನು ಮುಟ್ಟಬೇಡಿ. ಇದು ಚರ್ಮಕ್ಕೆ ಕಿರಿಕಿರಿಯನ್ನು ಉಂಟುಮಾಡುತ್ತದೆ. ಚರ್ಮದ ಮೇಲೆ ಹಿತವಾದ ಉತ್ಪನ್ನಗಳನ್ನು ಬಳಸುವುದರಿಂದ ನಿಮಗೆ ಸ್ವಲ್ಪ ಪರಿಹಾರ ಸಿಗುತ್ತದೆ ಜೊತೆಗೆ ವ್ಯಾಕ್ಸಿಂಗ್ ನಂತರದ ಸಮಸ್ಯೆ ಉಂಟಾಗದಂತೆಯೂ ತಡೆಯಬಹುದು. ನೈಸರ್ಗಿಕವಾಗ ಉತ್ಪನ್ನಗಳನ್ನೇ ಬಳಸಿ ಉದಾಹರಣೆಗೆ, ಅಲೋವೆರಾ ಜೆಲ್ ಅನ್ನು ತ್ವಚೆಗೆ ಹಚ್ಚಬಹುದು. ನಿಮ್ಮ ತ್ವಚೆಯನ್ನು ಆರ್ಧ್ರಕವಾಗಿರಿಸುವುದು ಅಥವಾ ಮಾಯಿಶ್ಚರೈಸ್ ಆಗಿಸುವುದು ಬಹಳ ಮುಖ್ಯವಾಗಿದೆ. ನಿಮ್ಮ ಚರ್ಮವನ್ನು ಆರ್ಧ್ರಕವಾಗಿಸಲು ತೈಲ ಮುಕ್ತ ಮಾಯಿಶ್ಚರೈಸರ್ ಗಳನ್ನು ಬಳಸಿ. ಕೆಲವು ಉತ್ಪನ್ನಗಳಲ್ಲಿನ ಸಂಶ್ಲೇಷಿತ ತೈಲವು ಚರ್ಮವನ್ನು ಕಿರಿಕಿರಿಗೊಳಿಸುತ್ತದೆ ಮತ್ತು ಚರ್ಮದ ಸಮಸ್ಯೆಗೆ ಕಾರಣವಾಗುತ್ತದೆ. ಅಲ್ಲದೇ ವ್ಯಾಕ್ಸಿಂಗ್ ಮಾಡಿದ ಕೂಡಲೇ ನಿಮ್ಮ ಚರ್ಮವನ್ನು ಸ್ಕ್ರಬ್ಬಿಂಗ್ ಮಾಡಬೇಡಿ. ನೀವು ಎಫ್ಫೋಲಿಯೇಟ್ ಮಾಡುವ ಮೊದಲು ಒಂದು ದಿನ ಕಾಯಿರಿ. ಮತ್ತು ಒಳಗಿನ ಕೂದಲು ಮತ್ತು ಗುಳ್ಳೆಗಳು ಬರದಂತೆ ತಡೆಗಟ್ಟಲು ಚರ್ಮವನ್ನು ಸ್ಕ್ರಬ್ಬಿಂಗ್ ಮಾಡಿ. ಇವುಗಳ ಜೊತೆಗೆ ನೀವು ವ್ಯಾಕ್ಸಿಂಗ್ ಮಾಡಿದ ದಿನ ವ್ಯಾಯಾಮ ಮಾಡುವುದನ್ನು ತಪ್ಪಿಸಿ. ಏಕೆಂದರೆ ಬೆವರು ಕೂಡ ಚರ್ಮಕ್ಕೆ ಕಿರಿಕಿರಿ ಉಂಟುಮಾಡಬಹುದು. ಆದ್ದರಿಂದ, ದೈಹಿಕ ಚಟುವಟಿಕೆಗೆ ಒಂದು ದಿನ ವಿರಾಮ ನೀಡಿ.

6. ನೀವು ಧರಿಸಿರುವ ಬಟ್ಟೆಗಳ ಬಗ್ಗೆ ಗಮನ ಕೊಡಿ

6. ನೀವು ಧರಿಸಿರುವ ಬಟ್ಟೆಗಳ ಬಗ್ಗೆ ಗಮನ ಕೊಡಿ

ನಿಮ್ಮ ವ್ಯಾಕ್ಸಿಂಗ್ ಪ್ರಕ್ರಿಯೆಯ ನಂತರ ಬಿಗಿಯಾದ ಬಟ್ಟೆಗಳನ್ನು ಧರಿಸುವುದು ಒಳ್ಳೆಯದಲ್ಲ. ನಿಮ್ಮ ಚರ್ಮದ ವಿರುದ್ಧ ಬಟ್ಟೆಯು ನಿರಂತರವಾಗಿ ಉಜ್ಜುತ್ತಿದ್ದರೆ ಚರ್ಮಕ್ಕೆ ಕಿರಿಕಿರಿಯಾಗಬಹುದು ಮತ್ತು ಚರ್ಮದ ಸಮಸ್ಯೆಗೆ ಕಾರಣವಾಗಬಹುದು. ಆದ್ದರಿಂದ ಸ್ವಲ್ಪ ಹಗುರವಾದ ಹಾಗೂ ಸಡಿಲವಾದ ಬಟ್ಟೆಗಳನ್ನೇ ಧರಿಸಿ. ನೀವು ಧರಿಸುವ ಬಟ್ಟೆ ಎಂಥದ್ದು ಎನ್ನುವುದು ಕೂಡ ಅಷ್ಟೇ ಮುಖ್ಯ. ಹತ್ತಿ ಮತ್ತು ಲಿನಿನ್ ಬಟ್ಟೆಗಳನ್ನೇ ಧರಿಸಿ. ಇವು ಸುಲಭವಾಗಿ ಗಾಳಿಯಾಡಲು ಬಿಡುತ್ತವೆ ಮತ್ತು ಚರ್ಮಕ್ಕೆ ಕಿರಿಕಿರಿಯುಂಟುಮಾಡುವುದಿಲ್ಲ. ವ್ಯಾಕ್ಸಿಂಗ್ ನಂತರ ಒಂದೆರಡು ದಿನಗಳವರೆಗೆ ನೈಲಾನ್, ಅಕ್ರಿಲಿಕ್ ಮತ್ತು ಪಾಲಿಯೆಸ್ಟರ್‌ನಂತಹ ಸಂಶ್ಲೇಷಿತ ಬಟ್ಟೆಗಳನ್ನು ಧರಿಸದೇ ಇರುವುದು ಉತ್ತಮ.

ವ್ಯಾಕ್ಸಿಂಗ್ ಮಾಡುವ ಮೊದಲು ಈ ಕೆಲವು ಸಲಹೆಗಳನ್ನು ಪಾಲಿಸಿದರೆ ಖಂಡಿತವಾಗಿಯೂ ವ್ಯಾಕ್ಸಿಂಗ್ ನಂತರದ ಸಮಸ್ಯೆಗಳಿಂದ ನೀವು ಮುಕ್ತಿ ಪಡೆಯಬಹುದು.

English summary

Struggling With Post Waxing Breakouts Here’s Preventing Tips

we are discussing about Struggling With Post Waxing Breakouts Here’s Preventing Tips. It might be exposing it immediately to the sun or careless use of skincare products. No reason to worry though. Post waxing breakouts can be dealt with ease. Today, we share with you how. Read more.
X
Desktop Bottom Promotion