For Quick Alerts
ALLOW NOTIFICATIONS  
For Daily Alerts

ತ್ವಚೆಗೆ ಸ್ಟೀರಾಯ್ಡ್ ಬಳಸುತ್ತೀರಾ? ತಪ್ಪದೇ ಇದನ್ನು ಓದಿ

|

ನಾವು ಚರ್ಮದ ಕಿರಿಕಿರಿ ಅಥವಾ ಉರಿಯೂತವನ್ನು ಎದುರಿಸಿದಾಗ ಸಾಮಾನ್ಯವಾಗಿ ಔಷಧಾಲಯಗಳಿಗೆ ಭೇಟಿ ನೀಡಿ ಸುಲಭವಾಗಿ ಲಭ್ಯವಿರುವ ತ್ವರಿತ ಪರಿಹಾರವನ್ನು ಹುಡುಕುತ್ತೇವೇ ಅಲ್ಲವೇ? ಆದರೆ ಔಷಧಿಗಳನ್ನು ಸರಿಯಾಗಿ ಬಳಸದಿದ್ದರೆ ಮತ್ತು ಸರಿಯಾದ ರೀತಿಯಲ್ಲಿ ತೆಗೆದುಕೊಳ್ಳದಿದ್ದರೆ ಅದರ ಪ್ರಯೋಜನಕ್ಕಿಂತ ಹೆಚ್ಚಿನ ಹಾನಿಯನ್ನೇ ಎದುರಿಸಬೇಕಾಗುತ್ತದೆ ಎಂಬುದನ್ನು ನಾವು ಮರೆಯುತ್ತಿದ್ದೇವೆ.

What Are The Side Effects Of Using Steriods On Skin

ಸ್ಟೀರಾಯ್ಡ್ ಗಳು ಅಂತಹ ಉದಾಹರಣೆಗಳಲ್ಲಿ ಒಂದಾಗಿದೆ. ಚರ್ಮದ ಕಿರಿಕಿರಿ ಅಥವಾ ಚರ್ಮದ ಯಾವುದೇ ಸಮಸ್ಯೆಯನ್ನು ನಾವು ಎದುರಿಸುತ್ತಿರುವಾಗ ನಮ್ಮ ಚರ್ಮಕ್ಕೆ ನೇರವಾಗಿ ಕೆಲವು ಔಷಧಗಳನ್ನು ಅನ್ವಯಿಸಬಹುದು ಮತ್ತು ತ್ವರಿತ ಪರಿಹಾರವನ್ನು ಪಡೆಯಬಹುದು. ಆದರೆ ಈ ದಿನಗಳಲ್ಲಿ ಅದರ ದುರುಪಯೋಗ ಹೆಚ್ಚುತ್ತಿದೆ. ಚರ್ಮರೋಗ ವೈದ್ಯರ ಸಲಹೆಯಿಲ್ಲದೆ ಸ್ಟೀರಾಯ್ಡ್ ಗಳನ್ನು ಎಂದಿಗೂ ಅನ್ವಯಿಸಬಾರದು ಎಂದು ರೋಗಿಯಾಗಿ ನಾವು ಮೊಟ್ಟ ಮೊದಲು ಅರ್ಥಮಾಡಿಕೊಳ್ಳಬೇಕು.

ಪ್ರಸ್ತುತ, ಬಹಳಷ್ಟು ಅಧ್ಯಯನಗಳು ಮಾರುಕಟ್ಟೆಯಲ್ಲಿ ಸುಮಾರು 18 ವಿವಿಧ ಸ್ಟೀರಾಯ್ಡ್ಗಳು ಲಭ್ಯವಿವೆ ಎಂದು ತೋರಿಸಿವೆ. ಈ ಸ್ಟೀರಾಯ್ಡ್ಗಳ ಸಾಮರ್ಥ್ಯವು ಮಂದ ಪರಿಣಾಮಗಳಿಂದ ಅತೀ ಅಧಿಕವಾಗಿ ಬದಲಾಗುತ್ತವೆ. ಇವು ವಿಭಿನ್ನ ಬ್ರಾಂಡ್ ಹೆಸರುಗಳು ಮತ್ತು ವಿಭಿನ್ನ ಸೂತ್ರೀಕರಣಗಳಲ್ಲಿ ಲಭ್ಯವಿವೆ. ಅವುಗಳಲ್ಲಿ ಕೆಲವು ಸಾಕಷ್ಟು ಔಷಧಾಲಯಗಳಲ್ಲಿ ಲಭ್ಯವಿವೆ, ಇದು ಹೆಚ್ಚುತ್ತಿರುವ ದುರುಪಯೋಗಕ್ಕೆ ಕಾರಣವಾಗಿವೆ.

ಸೋಂಕು ಉಲ್ಬಣ

ಸೋಂಕು ಉಲ್ಬಣ

  • ನಿರಂತರವಾಗಿ ಇರುವ ಚರ್ಮದ ಸೋಂಕನ್ನು ಮತ್ತಷ್ಟು ಉಲ್ಬಣಗೊಳ್ಳುತ್ತದೆ.
  • ಫೋಲಿಕ್ಯುಲೈಟಿಸ್ ಸಂಭವಿಸಬಹುದು ಅಂದರೆ ಮೂಲತಃ ಚರ್ಮದ ಪದರಗಳಲ್ಲಿರುವ ಕೂದಲು ಕಿರುಚೀಲಗಳು ಉಬ್ಬಿಕೊಳ್ಳಬಹುದು.
  • ಚರ್ಮಕ್ಕೆ ಹಾನಿ

    ಚರ್ಮಕ್ಕೆ ಹಾನಿ

    • ದೀರ್ಘಕಾಲದವರೆಗೆ ಸ್ಟಿರಾಯ್ಡ್ ಗಳನ್ನು ಬಳಸಿದರೆ ಅದು ಆ ನಿರ್ದಿಷ್ಟ ಪ್ರದೇಶಗಳಲ್ಲಿ ಚರ್ಮ ತೆಳುವಾಗುವುದಕ್ಕೆ ಕಾರಣವಾಗಬಹುದು ಎಂದು ಸಾಬೀತಾಗಿದೆ. ಹೀಗಾಗಿ ಚರ್ಮಕ್ಕೆ ಹಾನಿಯಾಗುವ ಸಾಧ್ಯತೆಗಳು ಹೆಚ್ಚು.
    • ಮೇಲ್ಮೈ ಕಾರ್ಟಿಕೊಸ್ಟೆರಾಯ್ಡ್, ಮಂದ ಚರ್ಮದ ಅಲರ್ಜಿಯನ್ನು ಉಂಟುಮಾಡುತ್ತದೆ, ಇದನ್ನು ಸಾಮಾನ್ಯವಾಗಿ ಕಾಂಟ್ಯಾಕ್ಟ್ ಡರ್ಮಟೈಟಿಸ್ ಎಂದು ಕರೆಯಲಾಗುತ್ತದೆ.
    • ಮೊಡವೆಗಳು ಹೆಚ್ಚು

      ಮೊಡವೆಗಳು ಹೆಚ್ಚು

      • ಸ್ಟೀರಾಯ್ಡ್ಗಳನ್ನು ಅಧಿಕವಾಗಿ ಬಳಸುವುದರಿಂದ ಮೊಡವೆಗಳು ಹೆಚ್ಚಾಗಬಹುದು.
      • ಕೆಂಪು ಮತ್ತು ಹಿಸುಕಿದ ಚರ್ಮವು ಹೆಚ್ಚಿನ ಸಾಮರ್ಥ್ಯದ ಸ್ಟೀರಾಯ್ಡ್ಗಳನ್ನು ದೀರ್ಘಕಾಲದವರೆಗೆ ಅನ್ವಯಿಸುವ ಫಲಿತಾಂಶಗಳಲ್ಲಿ ಒಂದಾಗಿದೆ. ಇದನ್ನು ರೋಸಾಸಿಯಾದ ಜ್ವಾಲೆ (ಚರ್ಮದ ಮೇಲೆ ಉಂಟಾಗುವ ಸಮಸ್ಯೆ) ಎಂದು ಕರೆಯಲಾಗುತ್ತದೆ.
      • ಚರ್ಮದ ಬಣ್ಣದ ಬದಲಾವಣೆ

        ಚರ್ಮದ ಬಣ್ಣದ ಬದಲಾವಣೆ

        • ಅಸಮರ್ಪಕ ಸ್ಟೀರಾಯ್ಡ್ ಬಳಸುವುದರಿಂದಾಗಿ ಕೆಲವು ಜನರು ಚರ್ಮದ ಬಣ್ಣದ ಬದಲಾವಣೆಯನ್ನು ಸಹ ಅನುಭವಿಸಬಹುದು. ಸ್ಟೀರಾಯ್ಡ್ಗಳನ್ನು ಅನ್ವಯಿಸಿರುವ ಪ್ರದೇಶಗಳಲ್ಲಿ ಚರ್ಮವು ಅಸಮವಾಗಿರುತ್ತದೆ ಅಥವಾ ಕಪ್ಪು ತೇಪೆಗಳು ಕಾಣಿಸಿಕೊಳ್ಳುತ್ತವೆ.
        • ಚರ್ಮದ ಸಮಸ್ಯೆಗೆ ತಕ್ಷಣದ ಪರಿಹಾರ ಸಿಗುತ್ತದೆ ಎಂದು ಅನ್ನಿಸಿದರೂ ಕೂಡ ಸ್ಟೀರಾಯ್ಡ್ ಬಳಕೆ ದೀರ್ಘಕಾಲದ ಅಡ್ದಪರಿಣಾಮವನ್ನು ಉಂಟುಮಾಡುತ್ತವೆ. ಹಾಗಾಗಿ ಸ್ಟೀರಾಯ್ಡ್ ಗಳನ್ನು ಬಳಸುವುದಕ್ಕಿಂತ ಮೊದಲು ನಿಮ್ಮ ವೈದ್ಯರ ಸಲಹೆಯನ್ನು ಕೇಳುವುದು ಅತ್ಯಂತ ಸೂಕ್ತ.

English summary

Side Effects Of Using Steroids On Skin

Here we are discussing about What Are The Side Effects Of Using Steriods On Skin. we forget that medicines if not used correctly and under correct supervision can do more harm than benefit. Steroids are one of the examples of the same. Read more.
X
Desktop Bottom Promotion