For Quick Alerts
ALLOW NOTIFICATIONS  
For Daily Alerts

ಡಿಯರ್ ಲೇಡೀಸ್, ಈ ಸೌಂದರ್ಯ ಉತ್ಪನ್ನಗಳಿಗೆ ಹಣ ಹಾಕುವುದನ್ನು ನಿಲ್ಲಿಸಿ; ಬದಲಾಗಿ ಅವುಗಳನ್ನು ಮನೆಯಲ್ಲಿಯೇ ತಯಾರಿಸಿ

|

ಆರೋಗ್ಯಕರ ತ್ವಚೆ ಪಡೆಯಬೇಕಾದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಉತ್ಪನ್ನಗಳ ಬಳಕೆ ಅಗತ್ಯವಾಗಿರುತ್ತದೆ. ಆದರೆ ಎಲ್ಲರಿಗೂ ದುಬಾರಿ ಉತ್ಪನ್ನಗಳು ಕೊಳ್ಳಲು ಸಾಧ್ಯವಾಗುವುದಿಲ್ಲ. ಅಂತಹವರು ಆ ಉತ್ಪನ್ನಗಳನ್ನು ಮನೆಯಲ್ಲಿಯೇ ತಯಾರಿಸುವ ಮೂಲಕ ನಿಮ್ಮ ಹಣದ ಜೊತೆಗೆ ಅಡ್ಡಪರಿಣಾಮಗಳನನ್ನೂ ತಡೆಯಬಹುದು. ಹಾಗಾದರೆ ನಿಮ್ಮ ದೈನಂದಿನ ಜೀವನಕ್ಕೆ ಅಗತ್ಯವಿರುವ ತ್ವಚೆ ರಕ್ಷಣೆಯ ಉತ್ಪನ್ನಗಳನ್ನು ಮನೆಯಲ್ಲಿಯೇ ಹೇಗೆ ತಯಾರಿಸಬಹುದು ಎಂಬುದನ್ನು ಇಲ್ಲಿ ನೋಡೋಣ.

ಮನೆಯಲ್ಲಿಯೇ ತಯಾರಿಸಬಹುದಾದಂತಹ ಸೌಂದರ್ಯ ಉತ್ಪನ್ನಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಲಿಪ್ ಸ್ಕ್ರಬ್:

ಲಿಪ್ ಸ್ಕ್ರಬ್:

ಇತ್ತೀಚೆಗೆ, ಲಿಪ್ ಸ್ಕ್ರಬ್ಗಳು ನಿಮಗೆ ಪರಿಪೂರ್ಣವಾದ ತುಟಿಯನ್ನು ನೀಡುತ್ತದೆ. ಆದರೆ ಅವುಗಳನ್ನು ಖರೀದಿಸಲು ನಿಮ್ಮ ಜೇಬಿನಿಂದ ಹಣವನ್ನು ಖಾಲಿ ಮಾಡಬೇಕಾಗಿಲ್ಲ. ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು.

ಪರ್ಯಾಯ ವಿಧಾನ: ಸಣ್ಣ ಬಟ್ಟಲಿನಲ್ಲಿ ಒಂದು ಚಮಚ ಬ್ಔನ್ ಶುಗರ್, ಒಂದು ಚಮಚ ಜೇನುತುಪ್ಪ ಮತ್ತು ಕೆಲವು ಹನಿ ಲ್ಯಾವೆಂಡರ್ ಸಾರಭೂತ ಎಣ್ಣೆಯನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ತುಟಿಗಳಿಗೆ ಹಚ್ಚಿ, ಎರಡು ನಿಮಿಷಗಳ ಕಾಲ ವೃತ್ತಾಕಾರದ ಚಲನೆಗಳಲ್ಲಿ ಉಜ್ಜಿ ಮತ್ತು ನೀರಿನಿಂದ ತೊಳೆಯಿರಿ. ಜೇನುತುಪ್ಪವು ತುಟಿಗಳನ್ನು ಮೃದುಗೊಳಿಸಲು ಸಹಾಯ ಮಾಡುವುದು, ಬ್ರೌನ್ ಶುಗರ್ ನೈಸರ್ಗಿಕ ಎಫ್ಫೋಲಿಯೇಟರ್ ಆಗಿ ಕಾರ್ಯನಿರ್ವಹಿಸುವುದು ಜೊತೆಗೆ ಲ್ಯಾವೆಂಡರ್ ಆಯಿಲ್ ತುಟಿಗಳನ್ನು ಪೋಷಿಸುತ್ತದೆ.

ಫೇಸ್ ಸ್ಕ್ರಬ್:

ಫೇಸ್ ಸ್ಕ್ರಬ್:

ನಿಮ್ಮ ಮುಖವು ತುಂಬಾ ಸೂಕ್ಷ್ಮವಾಗಿರುವುದರಿಂದ ಮುಖಕ್ಕೆ ಬೇರೆಲ್ಲಾ ದೇಹದ ಭಾಗಗಳಿಗಿಂತ ಹೆಚ್ಚು ಗಮನದ ಅವಶ್ಯಕತೆಯಿದೆ. ಆದ್ದರಿಂದ ಮುಖಕ್ಕೆ ಹಾನಿಮಾಡುವಂತಹ ಅಂಶಗಳನ್ನ ಒಳಗೊಂಡಿರುವ ಉತ್ಪನ್ನಗಳನ್ನು ಬಳಸಬಾರದು. ನಿಮ್ಮ ಅಡುಗೆಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಪದಾರ್ಥಗಳೊಂದಿಗೆ ತಯಾರಿಸಲಾದ ಈ ನೈಸರ್ಗಿಕ ಮುಖದ ಸ್ಕ್ರಬ್ ಅನ್ನು ಪ್ರಯತ್ನಿಸಿ. ಈ ಪದಾರ್ಥಗಳಲ್ಲಿನ ನೈಸರ್ಗಿಕ ಕಿಣ್ವಗಳು ನಿಮ್ಮ ಚರ್ಮವನ್ನು ಸ್ವಾಭಾವಿಕವಾಗಿ ಹೊಳೆಯುವಂತೆ ಮಾಡುವುದು.

ಪರ್ಯಾಯ ವಿಧಾನ: ಎರಡು ಚಮಚ ಓಟ್ ಮೀಲ್ ಮತ್ತು ಒಂದು ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿ. ಅದಕ್ಕೆ ಒಂದು ಚಮಚ ಬಿಸಿನೀರು ಹಾಕಿ ಮಿಕ್ಸ್ ಮಾಡಿ. ಇದನ್ನು ಮುಖಕ್ಕೆ ಮೃದುವಾಗಿ ಹಚ್ಚಿ ಒಂದು ನಿಮಿಷ ಮಸಾಜ್ ಮಾಡಿ. ಇದು ಕೆಲವು ನಿಮಿಷಗಳ ಕಾಲ ಬಿಟ್ಟು ತೊಳೆಯಿರಿ.

ಹೇರ್ ಮಾಸ್ಕ್:

ಹೇರ್ ಮಾಸ್ಕ್:

ನಿಮ್ಮ ಕೂದಲಿನ ಎಲ್ಲಾ ತೊಂದರೆಗಳನ್ನು ಪರಿಹರಿಸಲು ಹೇರ್ ಮಾಸ್ಕ್ ತ್ವರಿತ ಮತ್ತು ಹೆಚ್ಚು ಪರಿಣಾಮಕಾರಿ. ಹೇರ್ ಮಾಸ್ಕ್ ಕೂದಲನ್ನು ಸಾಮಾನ್ಯ ಸ್ಥಿತಿಗೆ ತರುವುದಲ್ಲದೇ ಮೃದು ಮತ್ತು ಹೈಡ್ರೀಕರಿಸುತ್ತದೆ. ಈ ಉತ್ತಮ ಪರಿಹಾರವು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಹಾಗೂ ಕೂದಲಿಗೆ ಹೊಳಪನ್ನು ನೀಡುತ್ತದೆ. ಆದರೆ ಇದಕ್ಕೆ ಖರ್ಚು ಹೆಚ್ಚು. ಬದಲಾಗಿ ಈ ಕೆಳಗಿನ ಪರ್ಯಾಯ ವಿಧಾನ ಬಳಸಬಹುದು.

ಪರ್ಯಾಯ ವಿಧಾನ: ಒಂದು ಬಟ್ಟಲಿನಲ್ಲಿ ಒಂದು ಚಮಚ ಜೇನುತುಪ್ಪ, ಒಂದು ಮೊಟ್ಟೆ ಮತ್ತು ಒಂದು ಚಮಚ ಆಪಲ್ ಸೈಡರ್ ವಿನೆಗರ್ ಮಿಶ್ರಣ ಮಾಡಿ . ನಿಮ್ಮ ಕೂದಲಿನ ದಟ್ಟತೆಯನ್ನು ಅವಲಂಬಿಸಿ ಪ್ರಮಾಣವನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು. ಇದನ್ನು 30 ನಿಮಿಷಗಳ ಕಾಲ ಬಿಡಿ ಮತ್ತು ಚೆನ್ನಾಗಿ ತೊಳೆಯಿರಿ. ಈ ಎಲ್ಲಾ ಪದಾರ್ಥಗಳು ನಿಮ್ಮ ನೆತ್ತಿಯನ್ನು ಹೈಡ್ರೇಟ್ ಮಾಡುವುದಲ್ಲದೇ,ನಿಮ್ಮ ಕೂದಲಿಗೆ ಪೋಷಣೆ ಮತ್ತು ಹೊಳಪನ್ನು ನೀಡುತ್ತದೆ.

ಬಾಡಿ ಸ್ಕ್ರಬ್:

ಬಾಡಿ ಸ್ಕ್ರಬ್:

ಈ ಬಾಡಿಸ್ಕ್ರಬ್ ಗಳು ರಕ್ತ ಪರಿಚಲನೆ ಸುಧಾರಿಸುವ ಮೂಲಕ ನಿಮ್ಮ ಚರ್ಮಕ್ಕೆ ಉತ್ತೇಜನ ನೀಡುತ್ತದೆ, ಅಷ್ಟೇ ಅಲ್ಲ ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಣೆ ನೀಡುವುದು. ಆದರೆ ಉತ್ಪನ್ನವನ್ನು ಬಳಸುವ ಕಾಳಜಿ ಬಹುಮುಖ್ಯವಾಗಿರುತ್ತದೆ, ಆದ್ದರಿಂದ ಇಲ್ಲಿ ಅದಕ್ಕಾಗ ಸುಲಭ ಪರಿಹಾರ ನೀಡಲಾಗಿದೆ.

ಪರ್ಯಾಯ ವಿಧಾನ: ಅರ್ಧ ಕಪ್ ಕಾಫಿ ಪುಡಿ, ಅರ್ಧ ಕಪ್ ಬ್ರೌನ್ ಶುಗರ್ , ಅದೇ ಪ್ರಮಾಣದ ತೆಂಗಿನ ಎಣ್ಣೆ ಮತ್ತು ಒಂದು ಟೀಚಮಚ ವೆನಿಲ್ಲಾ ಸಾರವನ್ನು ಮಿಶ್ರಣ ಮಾಡಿ. ನಂತರ ಇದನ್ನು ನಿಮ್ಮ ದೇಹದ ಮೇಲೆ ನಿಧಾನವಾಗಿ ಉಜ್ಜಿಕೊಳ್ಳಿ.

ಡ್ರೈ ಶಾಂಪೂ:

ಡ್ರೈ ಶಾಂಪೂ:

ಡ್ರೈ ಶಾಂಪೂ ಜಿಡ್ಡಿನಂತೆ ಕಾಣುವ ಕೂದಲನ್ನು ಸರಿಪಡಿಸಲು ಸುಲಭವಾದ ಮಾರ್ಗವಾಗಿದೆ, ಆದರೆ ಇದಕ್ಕೆ ಬಳಸುವ ರಾಸಾಯನಿಕಗಳು ಕೂದಲಿಗೆ ಒಳ್ಳೆಯದಕ್ಕಿಂತ ಹಾನಿಯನ್ನೇ ಹೆಚ್ಚು ಮಾಡುತ್ತವೆ. ಆದ್ದರಿಂದ ಮನೆಯಲ್ಲಿಯೇ ಇದಕ್ಕೊಂದು ಪರ್ಯಾಯ ವಿಧಾನವನ್ನು ಆರಿಸಿಕೊಂಡರೆ ನಿಮ್ಮ ಕೂದಲು ಆರೋಗ್ಯಕರವಾಗಿರುತ್ತದೆ.

ಪರ್ಯಾಯ ವಿಧಾನ: ನಿಮಗೆ ಕಾರ್ನ್ ಫ್ಲೆಕ್ಸ್, ಕೋಕೋ ಪೌಡರ್, ಸಾರಭೂತ ತೈಲಗಳು ಮತ್ತು ಸ್ವಲ್ಪ ಆಕ್ಟಿವೇಟೆಡ್ ಕಾರ್ಬನ್(ಐಚ್ಛಿಕ) ಅಗತ್ಯವಿದೆ. ಇವುಗಳನ್ನು ಮಿಶ್ರಣ ಮಾಡಿ, ಆದರೆ ನೆನಪಿಡಿ ಹೆಚ್ಚು ಸಾರಭೂತ ಹನಿಗಳನ್ನು ಬಳಸಬೇಡಿ, ಏಕೆಂದರೆ ಇದು ಒಣ ಶಾಂಪೂ. ಇದನ್ನು ನಿಮ್ಮ ತಲೆಗೆ ಹಚ್ಚಿ ಸ್ವಲ್ಪ ಮಸಾಜ್ ಮಾಡಿ, ನಂತರ ತೊಳೆಯಿರಿ.

ಗಮನಿಸಿ: ಈ ಪದಾರ್ಥಗಳನ್ನು ಬಳಸುವ ಮೊದಲು ಅಲರ್ಜಿಯನ್ನು ಪರೀಕ್ಷಿಸಲು ಪ್ಯಾಚ್ ಪರೀಕ್ಷೆಯನ್ನು ಮಾಡಿ.

English summary

List of Beauty Products You Can Make At Home in kannada

Here we talking about List of Beauty Products You Can Make At Home in kannada, read on
Story first published: Thursday, July 1, 2021, 13:38 [IST]
X
Desktop Bottom Promotion