For Quick Alerts
ALLOW NOTIFICATIONS  
For Daily Alerts

ಸೌಂದರ್ಯವರ್ಧನೆಗೆ ತುಪ್ಪ ಬಳಸುವ 6 ವಿಧಾನಗಳು

|

ತುಪ್ಪ ಹಾಕಿ ಮಾಡುವ ಅಡುಗೆ ರುಚಿಯ ಸ್ವಾದವೇ ಬೇರೆ. ಅಲ್ಲದೆ ತುಪ್ಪದಲ್ಲಿರುವ ಆರೋಗ್ಯಕರ ಗುಣಗಳ ಬಗ್ಗೆ ಎಲ್ಲರಿಗೆ ಗೊತ್ತಿರುತ್ತದೆ. ಆದರೆ ಇದನ್ನು ಸೌಂದರ್ಯವರ್ಧಕವಾಗಿ ಬಳಸುವ ವಿಧಾನ ಗೊತ್ತಿದೆಯೇ?

Ghee For lip Care

ಹೌದು ಅದ್ಭುತವಾದ ಸೌಂದರ್ಯವರ್ಧಕವಾಗಿದೆ, ಅನೇಕ ತ್ವಚೆ ಸಮಸ್ಯೆ ಹೋಗಲಾಡಿಸಲು ಆಯುರ್ವೇದದಲ್ಲಿ ತುಪ್ಪವನ್ನು ಬಳಸಲಾಗುತ್ತದೆ. ನಾವು ಈ ಲೇಖನದಲ್ಲಿ ತುಪ್ಪವನ್ನು ಬಳಸಿ ನಿಮ್ಮ ತ್ವಚೆಯ ಮೃದುತ್ವ ಹೆಚ್ಚಿಸುವುದು ಹೇಗೆ? ತುಟಿಯ ರಂಗು ಹೆಚ್ಚಿಸುವುದು ಹೇಗೆ ಹೀಗೆ ಮುಂತಾದ ಸೌಂದರ್ಯವರ್ಧಕ ಟಿಪ್ಸ್ ನೀಡಿದ್ದೇವೆ ನೋಡಿ:

ತುಪ್ಪ ಅತ್ಯುತ್ತಮವಾದ ಲಿಪ್‌ ಬಾಮ್‌

ತುಪ್ಪ ಅತ್ಯುತ್ತಮವಾದ ಲಿಪ್‌ ಬಾಮ್‌

ತುಟಿ ತುಂಬಾ ಒಣಗಿದೆಯೇ, ತುಟಿಯ ಸಿಪ್ಪೆ ಕಿತ್ತು ಬರುತ್ತಿದೆಯೇ? ಯಾವ ಲಿಪ್‌ ಬಾಮ್‌ ಹಚ್ಚಬೇಕು ಎಂದು ತಲೆಕೆಡಿಸಿಕೊಳ್ಳಬೇಕಾಗಿಲ್ಲ, ಒಂದು ಚಮಚ ತುಪ್ಪ ತೆಗೆದು ನಿಮ್ಮ ತುಟಿಗೆ ಹಚ್ಚಿ. ಇನ್ನು ರಾತ್ರಿ ಮಲಗುವ ಮುನ್ನ ತುಟಿಗೆ ತುಪ್ಪ ಹಚ್ಚಿ ಮಲಗಿ. ಹೀಗೆ ಮಾಡಿದರೆ ಒಂದೆರಡು ದಿನದಲ್ಲಿ ತುಟಿಯಲ್ಲಿ ವ್ಯತ್ಯಾಸ ಗೋಚರವಾಗುವುದು, ಒಂದು ವಾರದೊಳಗೆ ತುಟಿ ಮೃದುತ್ವ ಮರಳಿ ಪಡೆಯುತ್ತದೆ.

ತುಪ್ಪವನ್ನು ಬಾಡಿ ಕ್ರೀಮ್ ಆಗಿ ಬಳಸುವುದು ಹೇಗೆ

ತುಪ್ಪವನ್ನು ಬಾಡಿ ಕ್ರೀಮ್ ಆಗಿ ಬಳಸುವುದು ಹೇಗೆ

ತ್ವಚೆಯನ್ನು ಮಾಯಿಶ್ಚರೈಸರ್ ಆಗಿ ಇಡುವಲ್ಲಿ ತುಪ್ಪ ಪರಿಣಾಮಕಾರಿ. ಸ್ನಾನಕ್ಕೆ ಮುಂಚೆ ಸ್ವಲ್ಪ ತುಪ್ಪ ತೆಗೆದು ಮೈಗೆ ಹಚ್ಚಿ ನಂತರ ಸ್ನಾನ ಮಾಡಿ, ಹೀಗೆ ಮಾಡಿದರೆ ನಿಮ್ಮ ತ್ವಚೆ ತುಂಬಾ ಮೃದುವಾಗಿರುತ್ತದೆ. ಚಳಿಗಾಲದಲ್ಲಿ ಒಣ ತ್ವಚೆಯವರಿಗೆ ಅತ್ಯುತ್ತಮವಾದ ಬಾಡಿ ಕ್ರೀಮ್ ಇದಾಗಿದೆ. ತುಪ್ಪವನ್ನು ಬಾಡಿ ಕ್ರೀಮ್ ರೀತಿ ಎಲ್ಲಾ ಕಾಲದಲ್ಲಿ ಬಳಸಬಹುದು.

ಮಂಡಿ, ಮೊಣಕೈ ಭಾಗದ ಕಪ್ಪು ಹೋಗಲಾಡಿಸಲು

ಮಂಡಿ, ಮೊಣಕೈ ಭಾಗದ ಕಪ್ಪು ಹೋಗಲಾಡಿಸಲು

ಕೆಲವರ ಮಂಡಿ ಹಾಗೂ ಮೊಣಕೈ, ಕಾಲಿನ ಮಣಿಕಟ್ಟು ತುಂಬಾ ಕಪ್ಪಾಗಿರುತ್ತದೆ. ತುಪ್ಪ ಹಾಗೂ ಟೀ ಟ್ರೀ ಎಣ್ಣೆಯನ್ನು ಮಿಶ್ರ ಮಾಡಿ ಹಚ್ಚುತ್ತಿದ್ದರೆ ಈ ಕಪ್ಪು ಬಣ್ಣ ಕ್ರಮೇಣ ಮಾಯವಾಗುವುದು.

 ಮೇಕಪ್ ರಿಮೂವರ್‌

ಮೇಕಪ್ ರಿಮೂವರ್‌

ಮೇಕಪ್ ಹಾಗೇ ಇಟ್ಟರೆ ತ್ವಚೆ ಹಾಳಾಗುವುದು, ಆದ್ದರಿಂದ ಮನೆಗೆ ಹಿಂತಿರುಗಿದ ತಕ್ಷಣ ಮೇಕಪ್ ರಿಮೂವರ್ ಬಳಸಿ ತೆಗೆಯಬೇಕು. ಮೇಕಪ್ ರಿಮೂವರ್‌ ಆಗಿ ತುಪ್ಪ ಬಳಸಬಹುದು. ತುಪ್ಪಕ್ಕೆ ಸ್ವಲ್ಪ ವಿಟಮಿನ್ ಇ ಸೇರಿಸಿ ಮಿಶ್ರ ಮಾಡಿ ಅದನ್ನು ಮೇಕಪ್ ರಿಮೂವರ್ ಆಗಿ ಬಳಸಬಹುದು.

ಪಾದಗಳು ಒಡೆದಿದ್ದರೆ

ಪಾದಗಳು ಒಡೆದಿದ್ದರೆ

ನಿಮ್ಮ ಪಾದಗಳಲ್ಲಿ ಬಿರುಕು ಉಂಟಾಗಿದ್ದರೆ ಅದನ್ನು ಹೋಗಲಾಡಿಸಲು ತುಪ್ಪ ಬಳಸಬಹುದು. ಮಲಗುವ ಮುನ್ನ ಕಾಲುಗಳನ್ನು ಸ್ವಚ್ಛ ಮಾಡಿ ಒರೆಸಿ, ತುಪ್ಪ ಹಚ್ಚಿ ಸಾಕ್ಸ್ ಹಾಕಿ ಮಲಗಿ(ಸಾಕ್ಸ್ ಸಡಿಲವಾಗಿರಲಿ, ಇಲ್ಲದಿದ್ದರೆ ರಕ್ತಸಂಚಾರಕ್ಕೆ ಅಡಚಣೆ ಉಂಟಾಗುವುದು). ಈ ಟಿಪ್ಸ್ ಪಾಲಿಸಿದರೆ ಸುಂದರ ಪಾದಗಳು ನಿಮ್ಮದಾಗುವುದು.

ಕೂದಲಿನ ಆರೈಕೆಯಲ್ಲಿ ತುಪ್ಪ

ಕೂದಲಿನ ಆರೈಕೆಯಲ್ಲಿ ತುಪ್ಪ

ತುಪ್ಪವನ್ನು ಕೂದಲಿನ ಬುಡ ಬಲವಾಗಲು, ಒರಟು ಕೂದಲನ್ನು ಹೋಗಲಾಡಿಸಿ ಮೃದುವಾದ, ಸೊಂಪಾದ ಕೂದಲು ಪಡೆಯಲು ಬಳಸಬಹುದು.

ಆಲೀವ್ ಎಣ್ಣೆ ಅಥವಾ ತೆಂಗಿನ ಎಣ್ಣೆ 2 ಚಮಚ ತೆಗೆದರೆ ಅದಕ್ಕೆ 2 ಚಮಚ ತುಪ್ಪ ಹಾಕಿ ಮಿಶ್ರ ಮಾಡಿ ಅದನ್ನು ತಲೆಗೆ ಹಚ್ಚಿ, 20 ನಿಮಿಷ ಬಿಟ್ಟು ತಲೆ ತೊಳೆಯಬೇಕು. ಹೀಗೆ ವಾರದಲ್ಲಿ ಎರಡು ಬಾರಿ ಮಾಡಿದರೆ ಸಾಕು ಆಕರ್ಷಕ ಕೂದಲನ್ನು ಪಡೆಯಬಹುದು.

English summary

How to Use Ghee for Healthy Skin and Hair in Kannada

Ghee not only add the taste for food, it also enhance your beauty, here tips to use ghee for enhance your beauty, read on.
X
Desktop Bottom Promotion