For Quick Alerts
ALLOW NOTIFICATIONS  
For Daily Alerts

ಆರೋಗ್ಯದ ಜೊತೆಗೆ, ಸೌಂದರ್ಯ ವೃದ್ಧಿ ಮಾಡುವ ಶಕ್ತಿ ತೆಂಗಿನಕಾಯಿ ನೀರಿನಲ್ಲಿದೆ!

|

ತೆಂಗಿನ ನೀರು ರುಚಿಕರ ಮತ್ತು ದೇಹಕ್ಕೆ ಹೆಚ್ಚು ಉಲ್ಲಾಸದಾಯಕ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಈ ನೈಸರ್ಗಿಕ ಪಾನೀಯವು ನಿಮ್ಮ ಚರ್ಮ ಮತ್ತು ಕೂದಲಿಗೆ ಪ್ರಯೋಜನಕಾರಿಯಾಗಬಹುದು ಎಂದು ಎಂದಾದರೂ ಯೋಚಿಸಿದ್ದೀರಾ?.

ಪ್ರತಿನಿತ್ಯ ತೆಂಗಿನ ನೀರನ್ನು ಕುಡಿಯುವುದರಿಂದ ಹಲವಾರು ಆರೋಗ್ಯ ಲಾಭಗಳು ಸಿಗುತ್ತವೆ ಜೊತೆಗೆ ಒಳಗಿನಿಂದ ನಿಮ್ಮ ಚರ್ಮ ಮತ್ತು ಕೂದಲಿಗೆ ಆರೋಗ್ಯ ಕಾಪಾಡುತ್ತವೆ ನಿಜ. ಆದರೆ, ಇದನ್ನು ಬಾಹ್ಯವಾಗಿ ಬಳಸುವುದರ ಮೂಲಕವೂ ತ್ವಚೆ ಹಾಗೂ ಕೂದಲ ಪ್ರಯೋಜನ ಪಡೆಯಬಹುದು. ಅದು ಹೇಗೆ ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ:

ಒಣ ಚರ್ಮಕ್ಕಾಗಿ ಮುಖದ ಸ್ಪ್ರೇ:

ಒಣ ಚರ್ಮಕ್ಕಾಗಿ ಮುಖದ ಸ್ಪ್ರೇ:

ನೀವು ಶುಷ್ಕ ಮತ್ತು ಸೂಕ್ಷ್ಮ ಚರ್ಮವನ್ನು ಹೊಂದಿದ್ದರೆ, ತೆಂಗಿನ ನೀರು ನಿಮಗೆ ಸಹಾಯ ಮಾಡುತ್ತದೆ. ಇದು ನೈಸರ್ಗಿಕ ಮಾಯಿಶ್ಚರೈಸರ್ ಆಗಿ ತ್ವಚೆಯನ್ನು ಪೋಷಿಸಲು ಸಹಾಯ ಮಾಡುವುದು. ಇದನ್ನು ಒಣ ಚರ್ಮದ ಮೇಲೆ ನೈಸರ್ಗಿಕವಾಗಿ ಹಚ್ಚಬಹುದು ಅಥವಾ ನೀವೇ ಫೇಸ್ ಸ್ಪ್ರೇ ತಯಾರಿಸಬಹುದು. ಇದಕ್ಕಾಗಿ ಸಮಾನ ಪ್ರಮಾಣ ತೆಂಗಿನ ನೀರು ಮತ್ತು ರೋಸ್ ವಾಟರ್ ತೆಗೆದುಕೊಂಡು ಎರಡನ್ನೂ ಸ್ಪ್ರೇ ಬಾಟಲಿಯಲ್ಲಿ ಹಾಕಿ, ಮುಖಕ್ಕೆ ಸ್ಪ್ರೇ ಮಾಡಬಹುದು.

ಬ್ರೇಕೌಟ್ ಗಳಿಗಾಗಿ ಫೇಸ್ ಪ್ಯಾಕ್ :

ಬ್ರೇಕೌಟ್ ಗಳಿಗಾಗಿ ಫೇಸ್ ಪ್ಯಾಕ್ :

ತೆಂಗಿನಕಾಯಿ ನೀರಿನಲ್ಲಿ ತ್ವಚೆಗೆ ಹೊಳಪು ನೀಡುವ ಅಂಶಗಳಾದ ವಿಟಮಿನ್ ಸಿ, ಅಮೈನೋ ಆಮ್ಲಗಳಿದ್ದು, ವಿವಿಧ ಚಿಕಿತ್ಸಕ ಗುಣಗಳನ್ನು ಹೊಂದಿದೆ. ಜೊತೆಗೆ ಇದು ಆಂಟಿಮೈಕ್ರೊಬೈಯಲ್ ಗುಣ ಹೊಂದಿದ್ದು, ಮೊಡವೆಗಳನ್ನು ನಿವಾರಿಸಲು ಸಹಾಯ ಮಾಡುತ್ತವೆ. ಬ್ರೇಕೌಟ್ ತಡೆಯಲು ಅರಿಶಿನ ಹಾಗೂ ಶ್ರೀಗಂಧದೊಂದಿಗೆ ತೆಂಗಿನ ನೀರನ್ನು ಬೆರೆಸಿ, ಪೇಸ್ಟ್ ತಯಾರಿಸಿ, ಪೀಡಿತ ಪ್ರದೇಶಕ್ಕೆ ಹಚ್ಚಿ. ಇದು ಮೊಡವೆಗಳನ್ನು ನಿವಾರಿಸಲು ಮತ್ತು ಅದರ ನೋಟವನ್ನು ಕಡಿಮೆ ಮಾಡಲು ಸಹಾಯ ಮಾಡುವುದು.

ಕೂದಲು ಉದುರುವಿಕೆಗೆ ಹೇರ್ ಮಸಾಜ್:

ಕೂದಲು ಉದುರುವಿಕೆಗೆ ಹೇರ್ ಮಸಾಜ್:

ತೆಂಗಿನ ನೀರು ನೆತ್ತಿಯಲ್ಲಿ ರಕ್ತ ಪರಿಚಲನೆ ಸುಧಾರಿಸುವ ಮೂಲಕ ಮತ್ತು ನೆತ್ತಿಗೆ ಸರಿಯಾದ ಪೋಷಣೆಯನ್ನು ನೀಡುವ ಮೂಲಕ ಕೂದಲು ಉದುರುವಿಕೆಯನ್ನು ತಡೆಯುತ್ತದೆ. ಕೂದಲು ತೊಳೆಯುವ ಮೊದಲು ತೆಂಗಿನ ನೀರಿನಿಂದ ಮಸಾಜ್ ಮಾಡುವುದುರಿಂದ, ರಕ್ತಸಂಚಾರ ಉತ್ತಮವಾಗಿ, ಕೂದಲುದುರುವಿಕೆ ಕಡಿಮೆಯಾಗುವುದು. ಇದು ಗೋಜಾಲಾದ ಅಥವಾ ಪ್ರೀಜಿ ಕೂದಲಿನ ವಿರುದ್ಧವೂ ಹೋರಾಡುತ್ತದೆ. ಕೂದಲು ಮೃದುವಾಗಿ, ಹೊಳೆಯಬೇಕಾದರೆ ತೆಂಗಿನ ನೀರನ್ನು ಕುಡಿಯುವುದು ಒಳ್ಳೆಯದು. ಇದು ಬೇರಿನಿಂದ ತುದಿಯವರೆಗೆ ನೈಸರ್ಗಿಕ ಕಂಡೀಷನಿಂಗ್ ಏಜೆಂಟ್ ಆಗಿ ಕೆಲಸ ಮಾಡುತ್ತದೆ. ಅದಕ್ಕಿಂತ ಹೆಚ್ಚಾಗಿ, ತೆಂಗಿನ ಎಣ್ಣೆ ಜಿಡ್ಡಿನಿಂದ ತಪ್ಪಿಕೊಳ್ಳಲು, ತೆಂಗಿನ ನೀರಿನ ಮಸಾಜ್ ಮಾಡಿ. ಒಂದೇ ಸುತ್ತಿನ ಶಾಂಪೂ ಸಾಕು.

ತಲೆಹೊಟ್ಟು ನಿವಾರಣೆಗೆ ತೆಂಗಿನ ನೀರು:

ತಲೆಹೊಟ್ಟು ನಿವಾರಣೆಗೆ ತೆಂಗಿನ ನೀರು:

ತೆಂಗಿನ ನೀರು ನೈಸರ್ಗಿಕ ಶಿಲೀಂಧ್ರ-ವಿರೋಧಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು,ಇದು ನೆತ್ತಿಯ ತುರಿಕೆ, ತಲೆಹೊಟ್ಟು, ಮತ್ತು ಕೂದಲು ಉದುರುವಿಕೆ ಅಥವಾ ಕೂದಲು ಬೆಳವಣಿಗೆಯನ್ನು ತಡೆಯುವ ಇತರ ನೆತ್ತಿಯ ಸೋಂಕುಗಳಿಗೆ ಚಿಕಿತ್ಸೆ ನೀಡಲು ಉತ್ತಮವಾಗಿದೆ. ಒಂದು ಬಟ್ಟಲಿನಲ್ಲಿ ತೆಂಗಿನ ನೀರು ಮತ್ತು ಆಪಲ್ ಸೈಡರ್ ವಿನೆಗರ್ ಮಿಶ್ರಣ ಮಾಡಿ. ಶಾಂಪೂ ಮತ್ತು ಕಂಡೀಷನರ್‌ನಿಂದ ತೊಳೆದ, ಈ ಮಿಶ್ರಣದಿಂದ ಕೂದಲನ್ನು ಮುಳುಗಿಸಿಡಿ. ನಿಮ್ಮ ನೆತ್ತಿ ಮತ್ತು ಕೂದಲಿನ ಉದ್ದಕ್ಕೆ ಸುರಿಯಿರಿ. ಇದನ್ನು ಒಂದು ನಿಮಿಷ ಹಾಗೆಯೇ ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ. ಈಗ ಹೊಳೆಯುವ, ಫ್ರಿಜ್-ಮುಕ್ತ ಕೂದಲನ್ನು ಆನಂದಿಸಿ.

English summary

Beauty Benefits of Coconut Water for Skin and Hair in Kannada

Here we talking about Beauty Benefits of Coconut Water for Skin and Hair in Kannada, read on
Story first published: Monday, August 9, 2021, 10:43 [IST]
X
Desktop Bottom Promotion