For Quick Alerts
ALLOW NOTIFICATIONS  
For Daily Alerts

ಹಸಿರು ಚಿನ್ನ ವೀಳ್ಯದೆಲೆಯಲ್ಲಿದೆ ಯಾರಿಗೂ ತಿಳಿಯದ ಸೌಂದರ್ಯ ಸ್ನೇಹಿ ಗುಣಗಳು

|

ನಮ್ಮ ಹಳ್ಳಿ ಕಡೆಗಳಲ್ಲಿ ಊಟವಾದ ಬಳಿಕ ವೀಲ್ಯದೆಲೆ ತಿನ್ನುವ ಅಭ್ಯಾಸ ಇದೆ. ಹಳ್ಳಿ ಮಾತ್ರವಲ್ಲದೇ ನಗರಗಳಲ್ಲಿ ಪಾನ್ ಬೀಡಾದ ರೂಪದಲ್ಲೂ ಸೇವಿಸುವವರಿದ್ದಾರೆ. ಕೆಲವರಿಗೆ ಇದು ಅಸಹ್ಯಕರ ಅಭ್ಯಾಸದಂತೆ ಕಾಣಿಸಬಹುದು, ಆದರೆ ವೀಳ್ಯದೆಲೆಗೆ ತಂಬಾಕು ಸೇರಿಸದಿದ್ದರೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ.

ಹಸಿರು ಬಂಗಾರ ಎಂದೇ ಪ್ರಸಿದ್ಧಿಯಾದ ಈ ವೀಳ್ಯದೆಲೆಯಲ್ಲಿ ಎಂತಹ ಸೌಂದರ್ಯ ಪ್ರಯೋಜನಗಳಿದೆ ಗೊತ್ತಾ?. ಹೌದು, ಈ ಎಲೆಗಳು ನಿಮ್ಮನ್ನು ಹೆಚ್ಚು ಸುಂದರವಾಗಿ ಕಾಣುವಂತೆ ಮಾಡುವ ಕೆಲವು ವಿಧಾನಗಳನ್ನು ಇಲ್ಲಿ ನೀಡಲಾಗಿದೆ.

ವೀಳ್ಯದೆಲೆಯ ಸೌಂದರ್ಯ ಲಾಭಗಳನ್ನು ಈ ಕೆಳಗೆ ನೀಡಲಾಗಿದೆ:

ಮೊಡವೆಗಳ ನಿವಾರಣೆ:

ಮೊಡವೆಗಳ ನಿವಾರಣೆ:

ಮೊಡವೆಗಳಿಗೆ ಚಿಕಿತ್ಸೆ ನೀಡಲು ವೀಳ್ಯದೆಲೆಗಳಲ್ಲಿನ ಉರಿಯೂತ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಅದ್ಭುತವಾಗಿ ಕೆಲಸಮಾಡುತ್ತವೆ. ನಿಮ್ಮ ಮುಖವನ್ನು ಈ ಎಲೆಯ ಕಷಾಯದಿಂದ ತೊಳೆಯಿರಿ ಅಥವಾ ನಿಮ್ಮ ಮುಖಕ್ಕೆ ವೀಳ್ಯದೆಲೆ ಮತ್ತು ಅರಿಶಿನ ಪೇಸ್ಟ್ ಮಾಡಿ, ಮೊಡವೆ ಇರುವ ಜಾಗದಲ್ಲಿ ಹಚ್ಚಿ ಮತ್ತು ತೊಳೆಯಿರಿ. ದಿನಕ್ಕೆ ಎರಡು ಬಾರಿ ಇದನ್ನು ಮಾಡಿ, ವಿಶೇಷವಾಗಿ ನೀವು ಮನೆಗೆ ಹಿಂದಿರುಗಿದ ನಂತರ ಮಾಡುವುದು ಉತ್ತಮ.

ಕಜ್ಜಿ ನಿವಾರಕ:

ಕಜ್ಜಿ ನಿವಾರಕ:

ನೀವು ದದ್ದು ಮತ್ತು ಅಲರ್ಜಿಗೆ ಗುರಿಯಾಗಿದ್ದರೆ ಈ ಎಲೆಗಳ ಹಿತವಾದ ಗುಣವು ಉತ್ತಮ ಪರಿಹಾರವನ್ನು ನೀಡುತ್ತದೆ. 10 ಎಲೆಗಳನ್ನು ಕುದಿಸಿ ಮತ್ತು ಎಲೆಗಳನ್ನು ತೆಗೆದುಹಾಕಿ. ಈ ನೀರನ್ನು ನಿಮ್ಮ ಸ್ನಾನದ ನೀರಿನಲ್ಲಿ ಬೆರೆಸಿ ಅಥವಾ ತುರಿಕೆ ಇರುವ ಜಾಗಗಳನ್ನು ಅದ್ದಿ ಇಡಿ. ಈ ಎಲೆಯ ಉರಿಯೂತದ ಗುಣಲಕ್ಷಣಗಳು ತುರಿಕೆ ಮತ್ತು ಊತವನ್ನು ಕಡಿಮೆ ಮಾಡುತ್ತದೆ.

ಕೇಶ ಸ್ನೇಹಿ:

ಕೇಶ ಸ್ನೇಹಿ:

ಆಯುರ್ವೇದವು ಕೂದಲು ಉದುರುವಿಕೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ವೀಳ್ಯದೆಲೆಗಳನ್ನು ಬಳಸಲು ಶಿಫಾರಸು ಮಾಡುತ್ತದೆ. ಇದನ್ನು ಲೋಷನ್ ರೀತಿಯಲ್ಲಿ ನಿಮ್ಮ ನೆತ್ತಿಗೆ ಹಚ್ಚಿಕೊಳ್ಳಬಹುದು. ಎಳ್ಳೆಣ್ಣೆ ಅಥವಾ ತೆಂಗಿನ ಎಣ್ಣೆಯಿಂದ ಜೊತೆಗೆ ಈ ಎಲೆಗಳನ್ನು ಪುಡಿಮಾಡಿ, ಪೇಸ್ಟ್ ನೆತ್ತಿಯ ಎಲ್ಲಾ ವಿಭಾಗಗಳಿಗೆ ಹಚ್ಚಿ. ನೀವು ಅದನ್ನು ತೊಳೆಯುವ ಮಾಡುವ ಮೊದಲು ಕನಿಷ್ಠ ಒಂದು ಗಂಟೆಯಾದರೂ ಬಿಡಿ.

ಬಾಯಿಯ ನೈರ್ಮಲ್ಯ:

ಬಾಯಿಯ ನೈರ್ಮಲ್ಯ:

ಬಾಯಿಯ ದುರ್ವಾಸನೆಯಿಂದ ಬಳಲುತ್ತಿದ್ದೀರಾ? ಹಾಗಾದರೆ ಊಟದ ನಂತರ ವೀಳ್ಯದೆಲೆಯನ್ನು ಅಗಿಯಲು ಪ್ರಾರಂಭಿಸಿ. ಇದು ನಿಮ್ಮ ಉಸಿರನ್ನು ರಿಫ್ರೆಶ್ ಮಾಡುತ್ತದೆ ಮತ್ತು ರೋಗಾಣುಗಳನ್ನು ಕೊಲ್ಲುತ್ತದೆ. ಹಲ್ಲು ಹುಳ ತಿನ್ನುವುದನ್ನು ತಡೆಯಲು ಮತ್ತು ಒಸಡುಗಳನ್ನು ಬಲಪಡಿಸಲು ಈ ಎಲೆಯನ್ನು ಪ್ರಾಚೀನ ಕಾಲದಿಂದಲೂ ಬಳಸಲಾಗುತ್ತದೆ. ವೀಳ್ಯದೆಲೆಯನ್ನು ನೀರಿನಲ್ಲಿ ಕುದಿಸಿ ಮತ್ತು ಅದರ ಕಷಾಯವನ್ನು ಬಳಸಿ ನಿಮ್ಮ ಬಾಯಿಯನ್ನು ತೊಳೆಯಿರಿ.

ದೇಹದ ದುರ್ನಾತ:

ದೇಹದ ದುರ್ನಾತ:

ನೀವು ಮಾಡುವ ಸ್ನಾನದ ನೀರಿಗೆ ವೀಳ್ಯದೆಲೆಗಳನ್ನು ಸೇರಿಸಿದರೆ ನಿಮಗೆ ತಾಜಾ ಭಾವನೆಯನ್ನು ನೀಡುತ್ತದೆ ಮತ್ತು ನಿಮ್ಮ ದೇಹದಲ್ಲಿ ವಾಸನೆಯನ್ನು ಉಂಟುಮಾಡುವ ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತದೆ. ಅಷ್ಟೇಅಲ್ಲ, ವೀಳ್ಯದೆಲೆ ಕುದಿಸಿ ತಯಾರಿಸಿದ ನೀರಿನ್ನು ಸೇವಿಸುವುದರಿಂದ, ದೇಹವನ್ನು ನಿರ್ವಿಷಗೊಳ್ಳುವುದು ಮತ್ತು ಎಲ್ಲಾ ರೀತಿಯ ಅಹಿತಕರ ದೇಹದ ವಾಸನೆಯನ್ನು ಕೊಲ್ಲುತ್ತದೆ.

English summary

Beauty Benefits of Betel Leaves for Skin and Hair in Kannada

Here we talking about Beauty Benefits of Betel Leaves for Skin and Hair in Kannada, read on
Story first published: Thursday, July 8, 2021, 12:41 [IST]
X
Desktop Bottom Promotion