For Quick Alerts
ALLOW NOTIFICATIONS  
For Daily Alerts

ಮೇಕಪ್ ಹೆಚ್ಚು ಹೊತ್ತು ಉಳಿಯಲು ಲೂಸ್ ಪೌಡರ್ ಹೀಗೆ ಬಳಸಿ

|

ಸೌಂದರ್ಯ ಎನ್ನುವುದು ಒಬ್ಬ ಮಹಿಳೆಯ ಹಕ್ಕು. ಮುಖದ ಹಾವಭಾವ ಮನಸ್ಸಿನ ಪ್ರತಿಬಿಂಬ ಎಂದು ಹೇಳುತ್ತಾರೆ. ಒಬ್ಬ ಮಹಿಳೆಯ ಸೌಂದರ್ಯವನ್ನು ಸೂಚಿಸಲು ಇದೊಂದು ರೀತಿ ಕೆಲಸ ಮಾಡಿದರೆ ಇನ್ನೊಂದು ಬಗೆಯಲ್ಲಿ ಮುಖಕ್ಕೆ ಹಾಕಿಕೊಳ್ಳುವ ಮೇಕಪ್ ಕೆಲಸ ಮಾಡುತ್ತದೆ.

Amazing Uses Of Loose Powder

ಇತ್ತೀಚಿನ ದಿನಗಳಲ್ಲಿ ಬ್ಯೂಟಿ ಪಾರ್ಲರ್ ಗಳ ಸಹಯೋಗದೊಂದಿಗೆ ತಮಗೆ ಬೇಕಾದ ಮೇಕಪ್ ಮಾಡಿಸಿಕೊಳ್ಳಲು ಮಹಿಳೆಯರು ಮುಂದಾಗುತ್ತಿದ್ದಾರೆ. ಜೊತೆಗೆ ಮನೆಯಲ್ಲಿ ಮೇಕಪ್ ಕಿಟ್ ಇದ್ದರಂತೂ ಯಾರ ಸಹಾಯವೂ ಇಲ್ಲದೆ ನಮ್ಮ ಮೇಕಪ್ ನಾವೇ ಮಾಡಿಕೊಳ್ಳಬಹುದು. ಸಿನಿಮಾ ತಾರೆಯರ ಮುಖದ ಅಂದ ನಮ್ಮ ಮುಖದಲ್ಲೂ ಕಾಣುತ್ತದೆ.

ಹಲವಾರು ಬ್ರಾಂಡೆಡ್ ಕಂಪನಿಗಳು ತಮ್ಮ ಮೇಕಪ್ ಉತ್ಪನ್ನಗಳನ್ನು ಮಾರುಕಟ್ಟೆಗೆ ದಿನೇ ದಿನೇ ಪರಿಚಯಿಸುತ್ತಲೇ ಇವೆ. ಟಿವಿ ಜಾಹಿರಾತುಗಳಲ್ಲಿ ತಮ್ಮ ಉತ್ಪನ್ನಗಳ ಕುರಿತು ಸಾಕಷ್ಟು ಪ್ರಚಾರ ಕೂಡ ಕೊಡುತ್ತಿವೆ. ಆದರೆ ಇವುಗಳಲ್ಲಿ ಕೆಲವು ಮಾತ್ರ ತಮ್ಮ ಹೆಸರನ್ನು ಉಳಿಸಿಕೊಳ್ಳುತ್ತಾ ಬಂದಿವೆ ಎಂದು ತಿಳಿದು ಬಂದಿದೆ. ಅಂದರೆ ಕೆಲವೊಂದು ಮೇಕಪ್ ಉತ್ಪನ್ನಗಳು ಬಳಕೆಯಾದ ಕೆಲವೇ ಕ್ಷಣಗಳಲ್ಲಿ ಮುಖದ ಅಂದವನ್ನು ಕಳೆಗುಂದಿಸುತ್ತವೆ.

ಹಚ್ಚಿದ ಮೇಕಪ್ ಪಾರ್ಟಿಗೋ, ಮದುವೆಗೋ ಅಥವಾ ಇನ್ನಾವುದೋ ಶುಭ ಕಾರ್ಯಕ್ರಮಗಳಿಗೆ ಹೋಗುವ ಮುಂಚೆಯೇ ಮಾಯವಾಗಿರುತ್ತದೆ. ಆದರೆ ಇಂತಹ ಸಮಯದಲ್ಲಿ ಸಹಾಯಕ್ಕೆ ಬರುವುದು ಲೂಸ್ ಪೌಡರ್. ಲೂಸ್ ಪೌಡರ್ ಬಳಸಿ ನಿಮ್ಮ ಮುಖದ ಅಂದವನ್ನು ಹೆಚ್ಚಿಸಿಕೊಳ್ಳುವಲ್ಲಿ ಮಾಡುವ ಜಾದೂ ಈ ಕೆಳಗಿನ ಹಲವಾರು ಅಂಶಗಳಲ್ಲಿ ತಿಳಿಯುತ್ತದೆ.

ಕಣ್ಣು ಹುಬ್ಬುಗಳ ಅಂದವನ್ನು ಹೆಚ್ಚಿಸಿಕೊಳ್ಳಿ

ಕಣ್ಣು ಹುಬ್ಬುಗಳ ಅಂದವನ್ನು ಹೆಚ್ಚಿಸಿಕೊಳ್ಳಿ

ಮೇಕಪ್ ಪ್ರಕ್ರಿಯೆಯಲ್ಲಿ ಕಣ್ಣು ಹುಬ್ಬುಗಳ ಸೌಂದರ್ಯ ಕಾಪಾಡುವುದು ಅತಿ ಮುಖ್ಯ. ಸಣ್ಣಗೆ ಮತ್ತು ಉದ್ದವಾಗಿರುವ ಕಣ್ಣು ಹುಬ್ಬುಗಳು ನಮ್ಮ ಅಂದವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಬ್ಯೂಟಿ ಪಾರ್ಲರ್ ಅಥವಾ ಮನೆಯಲ್ಲಿ ನಾವೇ ಮಾಡಿಕೊಳ್ಳುವ ಮೇಕಪ್ ಸಮಯದಲ್ಲಿ ನಾವು ಹಲವು ಬಾರಿ ಮಸ್ಕರಾ ಕೋಟಿಂಗ್ ಹಚ್ಚಿರುತ್ತೇವೆ. ಆದರೂ ಕೆಲವೊಮ್ಮೆ ಬಿಸಿಲಿಗೆ ಅಥವಾ ಬೆವರಿಗೆ ಕೆಲವೇ ಕ್ಷಣಗಳಲ್ಲಿ ಎಲ್ಲವೂ ಮಾಯವಾಗುತ್ತದೆ.

ಇಂತಹ ಸಮಯದಲ್ಲಿ ನಿಮಗೆ ಉಪಯೋಗಕ್ಕೆ ಬರುವುದೇ ಲೂಸ್ ಪೌಡರ್. ನೀವು ಬಳಸುವ ಒಂದೊಂದು ಮಸ್ಕರಾ ಕೋಟಿಂಗ್ ಮಧ್ಯದಲ್ಲಿ ಲೂಸ್ ಪೌಡರ್ ಸ್ಪ್ರಿನ್ಕಲ್ ಮಾಡಿ ನಂತರ ಮತ್ತೊಮ್ಮೆ ಮಸ್ಕರಾ ಕೋಟಿಂಗ್ ಮಾಡುವುದರಿಂದ ನಿಮ್ಮ ಕಣ್ಣು ಹುಬ್ಬುಗಳ ಅಂದ ಸಾಕಷ್ಟು ಹೆಚ್ಚುತ್ತದೆ. ಸಾಧ್ಯವಾದಷ್ಟು ಸ್ವಲ್ಪ ತೇವಾಂಶವಿರುವ ಕಣ್ಣು ಹುಬ್ಬುಗಳ ಮೇಲೆ ಮಸ್ಕರಾ ಕೋಟಿಂಗ್ ಹಚ್ಚಿ. ಇದರಿಂದ ನೀವು ಅಂದುಕೊಂಡ ಸೌಂದರ್ಯದ ಬಗೆ ನಿಮಗೆ ಸಿಗುತ್ತದೆ.

ಐ ಶಾಡೋ ಜೊತೆ ಬ್ಲೈಂಡ್ ಮಾಡಿ

ಐ ಶಾಡೋ ಜೊತೆ ಬ್ಲೈಂಡ್ ಮಾಡಿ

ಕೆಲವೊಂದು ಬಾರಿ ಆತುರವಾಗಿ ಮೇಕಪ್ ಮಾಡಿಕೊಳ್ಳುವ ಸಂದರ್ಭಗಳಲ್ಲಿ ನಮ್ಮ ಐ ಶಾಡೋ ಸರಿಯಾದ ರೀತಿಯಲ್ಲಿ ಬ್ಲೆಂಡ್ ಮಾಡಿಕೊಳ್ಳುವುದನ್ನು ಮರೆತು ಬಿಟ್ಟಿರುತ್ತೇವೆ. ಆನಂತರ ಕೆಲ ಸಮಯ ಕಳೆದು ಬ್ಲೆಂಡಿಂಗ್ ಮಾಡಲು ಮುಂದಾದರೆ ಕೆಲವೊಂದು ದಟ್ಟವಾದ ಗೀರುಗಳು ಹಾಗೆ ಉಳಿದುಕೊಳ್ಳುತ್ತವೆ.

ಇವು ಮುಖದ ಅಂದವನ್ನು ಹಾಳು ಮಾಡುವುದರಲ್ಲಿ ಎದ್ದು ಕಾಣುತ್ತವೆ. ಆದ್ದರಿಂದ ಮೇಕಪ್ ಮಾಡಿಕೊಳ್ಳುವ ಸಮಯದಲ್ಲಿ ತಪ್ಪದೇ ನಿಮ್ಮ ಮೇಕಪ್ ಬ್ರಷ್ ಸಹಾಯದೊಂದಿಗೆ ಲೂಸ್ ಪೌಡರ್ ಹಚ್ಚಿ ಐ ಶಾಡೋವಿಂಗ್ ಮಾಡಿಕೊಳ್ಳಿ.

ಲಿಪ್ಸ್ಟಿಕ್ - ಗ್ಲಾಸಿ ಲುಕ್ ನಿಂದ matte ಲುಕ್ ಗೆ ಬದಲಾಯಿಸಿ

ಲಿಪ್ಸ್ಟಿಕ್ - ಗ್ಲಾಸಿ ಲುಕ್ ನಿಂದ matte ಲುಕ್ ಗೆ ಬದಲಾಯಿಸಿ

ತುಂಬಾ ಮಹಿಳೆಯರು ಲಿಪ್ಸ್ಟಿಕ್ ಹಚ್ಚಿಕೊಂಡ ಬಳಿಕ ತಮ್ಮ ತುಟಿಗಳು ಪಳಪಳನೆ ಹೊಳೆಯಬೇಕು ಎಂದು ಆಸೆ ಪಡುತ್ತಾರೆ. ಆದರೆ ಕೆಲವೊಂದು ಹೊರಗಿನ ವಾತಾವರಣದ ಸಂದರ್ಭಗಳು ಅವರ ಈ ಆಸೆಗೆ ತಣ್ಣೀರೆರಚುತ್ತವೆ. ಆದ್ದರಿಂದ ಗ್ಲಾಸಿ ಲುಕ್ ಗಿಂತ matte ಲುಕ್ ಸೂಕ್ತ ಎನಿಸುತ್ತದೆ. ಸಾಕಷ್ಟು ಹಣ ಖರ್ಚು ಮಾಡಿಕೊಂಡು ತಂದ ಗ್ಲಾಸಿ ಲಿಪ್ಸ್ಟಿಕ್ ಗಳು ವೇಸ್ಟ್ ಆಗುತ್ತವೆ ಎಂಬ ಭಯ ಬೇರೆ.

ಆದರೆ ನಿಮ್ಮ ಈ ಭಯವನ್ನು ಲೂಸ್ ಪೌಡರ್ ಹೋಗಲಾಡಿಸುತ್ತದೆ ಎಂದು ನಾವು ಹೇಳುತ್ತೇವೆ. ಹೌದು, ಮೇಕಪ್ ಮಾಡಿಕೊಳ್ಳುವ ಸಮಯದಲ್ಲಿ ನೀವು ಹಚ್ಚುವ ಗ್ಲಾಸಿ ಲಿಪ್ಸ್ಟಿಕ್ ನಿಮ್ಮ ಸೌಂದರ್ಯವನ್ನು ವೃದ್ಧಿಸಬೇಕಾದರೆ ನಿಮ್ಮ ಲಿಪ್ಸ್ಟಿಕ್ ಕೋಟಿಂಗ್ ಮೇಲೆ ಸ್ವಲ್ಪ ಲೂಸ್ ಪೌಡರ್ ಹಚ್ಚಿ ನೋಡಿ. ನಿಮ್ಮ ಎಲ್ಲಾ ಬಗೆಯ ಲಿಪ್ ಶೇಡ್ ಗಳ ಮೇಲೆ ನೀವು ಇದನ್ನು ಪ್ರಯತ್ನಿಸಬಹುದು.

ಐ ಶ್ಯಾಡೊ ಬಿದ್ದು ಹೋಗುತ್ತದೆ ಎಂಬ ಭಯ ಬೇಡ

ಐ ಶ್ಯಾಡೊ ಬಿದ್ದು ಹೋಗುತ್ತದೆ ಎಂಬ ಭಯ ಬೇಡ

ಸಾಮಾನ್ಯವಾಗಿ ನಾವು ನಮ್ಮ ಮುಖದ ಮೇಕಪ್ ಸಂಪೂರ್ಣವಾದ ಬಳಿಕ ಕಣ್ಣುಗಳ ಮೇಕಪ್ ಮಾಡಲು ಮುಂದಾಗುತ್ತೇವೆ. ಆದರೆ ಕೆಲವೊಮ್ಮೆ ಕೆಲವು ಕಾರಣಗಳಿಂದ ನಾವು ಹಚ್ಚಿಕೊಂಡ ಐ ಶಾಡೋ ಇಲ್ಲವಾಗುವ ಪ್ರಮೇಯ ಎದುರಾಗುತ್ತದೆ. ಇದು ಇತರರ ಮಧ್ಯೆ ಯಾವುದಾದರೂ ಸಂತೋಷಕರ ಅಥವಾ ಪಾರ್ಟಿ ಸಂದರ್ಭಗಳಲ್ಲಿ ಮುಜುಗರಕ್ಕೀಡು ಮಾಡುತ್ತದೆ. ಏಕೆಂದರೆ ಇದರಿಂದ ನಿಮ್ಮ ಸಂಪೂರ್ಣ ಅಂದವೇ ಹಾಳಾಗಿ ಹೋಗಿರುತ್ತದೆ.

ನಿಮ್ಮ ಕಣ್ಣುಗಳ ಸುತ್ತಮುತ್ತ ಇರುವ ಕಪ್ಪು ಕಲೆಗಳನ್ನು ಎದ್ದು ಕಾಣುವಂತೆ ಮಾಡುತ್ತದೆ. ಆದ್ದರಿಂದ ಈ ಸಮಸ್ಯೆಯಿಂದ ಸುಲಭವಾಗಿ ಪಾರಾಗಬೇಕಾದರೆ ಮೇಕಪ್ ಸಮಯದಲ್ಲಿ ನಿಮ್ಮ ಕಣ್ಣುಗಳ ಕೆಳಗೆ ಲೂಸ್ ಪೌಡರ್ ಅಪ್ಲೈ ಮಾಡಿ. ಬೇಕೆಂದರೆ ನೀವು ಪಾರ್ಟಿ ಮುಗಿದ ಮೇಲೆ ಇದನ್ನು ಬಟ್ಟೆಯಲ್ಲಿ ಒರೆಸಿಕೊಳ್ಳಬಹುದು, ಅದೂ ಕೂಡ ನಿಮ್ಮ ಮುಖದ ಸೌಂದರ್ಯ ಹಾಳಾಗದಂತೆ.

ಲಿಪ್ಸ್ಟಿಕ್ ದೀರ್ಘ ಕಾಲ ಉಳಿಯಲು

ಲಿಪ್ಸ್ಟಿಕ್ ದೀರ್ಘ ಕಾಲ ಉಳಿಯಲು

ಹಲವಾರು ಸಂದರ್ಭಗಳಲ್ಲಿ ಲಿಪ್ಸ್ಟಿಕ್ ಬ್ರಾಂಡ್ ಗಳು ಮಾಡಿದ ಪ್ರತಿಜ್ಞೆ ಇಲ್ಲವಾಗುತ್ತದೆ. ಅಂದರೆ ನೀವು ಹಚ್ಚಿಕೊಂಡ ಲಿಪ್ಸ್ಟಿಕ್ ಇಡೀ ದಿನ ಉಳಿದು ನಿಮ್ಮ ಸೌಂದರ್ಯವನ್ನು ಕಾಪಾಡುವಲ್ಲಿ ವಿಫಲವಾಗುತ್ತವೆ. ನೀವು ಹಚ್ಚಿದ ಕೆಲವೊಂದು ಕಂಪನಿಗಳ ಲಿಪ್ಸ್ಟಿಕ್ ಕೇವಲ ಅರ್ಧ ದಿನ ಬಂದರೆ ಹೆಚ್ಚು.

ಆದರೆ ನಿಮ್ಮ ಲಿಪ್ಸ್ಟಿಕ್ ಇಡೀ ದಿನ ಉಳಿಯಬೇಕಾದರೆ ಕೆಲವು ಸೌಂದರ್ಯ ತಜ್ಞರು ಲೂಸ್ ಪೌಡರ್ ಶಿಫಾರಸು ಮಾಡುತ್ತಾರೆ. ನಿಮ್ಮ ತುಟಿಗಳಿಗೆ ಲಿಪ್ಸ್ಟಿಕ್ ಹಚ್ಚಿದ ಮೇಲೆ ಒಂದು ಪದರ ಲೂಸ್ ಪೌಡರ್ ಸವರಿ. ಇದು ನಿಮ್ಮ ಲಿಪ್ಸ್ಟಿಕ್ ಅನ್ನು ಮಾಸದಂತೆ ಇಡೀ ದಿನ ಬಣ್ಣ ಉಳಿಯುವಂತೆ ಕಾಪಾಡುತ್ತದೆ

ಶಾಂಪೂವಿನ ರೀತಿ ಉಪಯೋಗಿಸಿ

ಶಾಂಪೂವಿನ ರೀತಿ ಉಪಯೋಗಿಸಿ

ನಮ್ಮ ಕೂದಲಿನ ಹೊಳಪು ಮತ್ತು ಸೌಂದರ್ಯ ಶಾಂಪು ಹಚ್ಚಿದ ದಿನ ಮಾತ್ರ ಸುಂದರವಾಗಿರುತ್ತದೆ. ಆದರೆ ಮರು ದಿನ ನಮ್ಮ ತಲೆಯ ಭಾಗದ ಎಣ್ಣೆ ಚರ್ಮದಿಂದ ಕೂದಲು ಅಂಟಂಟಾಗುತ್ತದೆ ಮತ್ತು ಇದನ್ನು ನಿವಾರಿಸಲು ಇನ್ನೊಮ್ಮೆ ಶಾಂಪು ಹಾಕಿ ಸ್ನಾನ ಮಾಡಬೇಕು. ಆದರೆ ಪ್ರತಿ ಬಾರಿಯೂ ಇದು ಸಾಧ್ಯವಾಗುವುದಿಲ್ಲ. ಇದರಿಂದ ಕೂದಲಿನ ಬೇರುಗಳು ಸಾಕಷ್ಟು ಹಾನಿಗೊಳಗಾಗಿ ಕೂದಲು ಉದುರುವಿಕೆ, ತಲೆ ಹೊಟ್ಟು, ಕೂದಲು ಬೆಳ್ಳಗಾಗುವುದು ಇತ್ಯಾದಿ ಸಮಸ್ಯೆಗಳು ಎದುರಾಗುತ್ತದೆ.

ಆದರೆ ಲೂಸ್ ಪೌಡರ್ ಬಳಸುವುದರಿಂದ ಈ ಎಲ್ಲಾ ಸಮಸ್ಯೆಗಳು ಒಂದೇ ಬಾರಿ ಮುಕ್ತಿ ಕಾಣುತ್ತವೆ. ಲೂಸ್ ಪೌಡರನ್ನು ನಿಮ್ಮ ತಲೆಯ ಕೂದಲನ್ನು ಭಾಗ ಮಾಡಿ ಸಿಂಪಡಿಸಿ. ಇದರಿಂದ ನಿಮ್ಮ ಕೂದಲಿನ ಸಮಸ್ಯೆ ನಿವಾರಣೆಯಾಗುತ್ತದೆ.

ಮೇಕಪ್ ತೆಗೆಯಲು ಬಳಸಿ

ಮೇಕಪ್ ತೆಗೆಯಲು ಬಳಸಿ

ಇಡೀ ದಿನ ಹೊರಗಡೆ ಮೇಕಪ್ ನಿಂದ ಮಿಂಚಿ ಮನೆಗೆ ಬಂದು ರಾತ್ರಿ ಮಲಗುವ ಸಮಯದಲ್ಲಿ ಮುಖದ ಮೇಕಪ್ ತೆಗೆದರೆ ಒಳ್ಳೆಯದು ಎಂದು ಸೌಂದರ್ಯ ತಜ್ಞರು ಸಲಹೆ ನೀಡುತ್ತಾರೆ. ಒಂದು ವೇಳೆ ತೆಗೆಯದಿದ್ದರೆ ಅದು ಮುಖದ ಅಂದವನ್ನು ಇನ್ನಷ್ಟು ಹಾಳು ಮಾಡುತ್ತದೆ ಎಂಬ ಎಚ್ಚರಿಕೆ ಸಹ ಕೊಡುತ್ತಾರೆ.

ಆದರೆ ಈ ಸಮಯದಲ್ಲಿ ಮೇಕಪ್ ನಿವಾರಣೆ ಮಾಡಲು ಸೋಪು ಅಥವಾ ಇನ್ನಿತರ ಪದಾರ್ಥಗಳನ್ನು ಬಳಸಿ ತೆಗೆಯುವ ಬದಲು ಲೂಸ್ ಪೌಡರ್ ಉಪಯೋಗಿಸಬಹುದು. ಇದರಿಂದ ಮೇಕಪ್ ತೀವ್ರತೆ ಕಡಿಮೆಯಾಗುವುದರ ಜೊತೆಗೆ ಮುಖದ ಸೌಂದರ್ಯ ಹಾಳಾಗದಂತೆ ಹಾಗೆ ಉಳಿಯುತ್ತದೆ.

English summary

Amazing Uses Of Loose Powder

Here we are discussing about Amazing Uses Of Loose Powder. lot of women who use make-up regularly do not own a loose powder. How we wish they knew what they are missing. Read more.
Story first published: Tuesday, June 9, 2020, 11:49 [IST]
X
Desktop Bottom Promotion