For Quick Alerts
ALLOW NOTIFICATIONS  
For Daily Alerts

ನೈಸರ್ಗಿಕ ಹಾಗೂ ಸುರಕ್ಷಿತವಾಗಿ ಹಲ್ಲುಗಳ ಹೊಳಪಿಗೆ ನಾಲ್ಕು ಪರಿಣಾಮಕಾರಿ ಮನೆಮದ್ದುಗಳು

|

ಜಗತ್ತಿನಲ್ಲಿ ನಾಲ್ಕು ಜನರ ಮಧ್ಯೆ ನಾವೂ ಸುಂದರವಾಗಿ ಕಾಣಬೇಕೆಂಬುದು ಮನುಷ್ಯ ಸಹಜವಾದ ಗುಣವೇ ಆಗಿದೆ. ಅದರಲ್ಲೂ ಶುಭ್ರ, ಕಾಂತಿಯುತ ದಂತಪಂಕ್ತಿ ಹಾಗೂ ನೀಳ, ದಟ್ಟ ಕೇಶರಾಶಿಯಿಂದ ಕಂಗೊಳಿಸುವುದು ಎಲ್ಲರ ಮನೋಭಿಲಾಷೆ ಆಗಿರುತ್ತದೆ. ಆದರೆ ಕೆಲವರ ಹಲ್ಲುಗಳು ಶುಭ್ರವಾಗಿರದೆ ಅವರ ಸೌಂದರ್ಯಕ್ಕೆ ಕಪ್ಪು ಚುಕ್ಕೆ ಮೂಡಿಸಿರುತ್ತವೆ. ಹೀಗಾಗಿ ಸುಂದರ, ಶುಭ್ರ ದಂತಪಂಕ್ತಿಗಳನ್ನು ನಮ್ಮದಾಗಿಸಿಕೊಳ್ಳುವುದು ಅತಿ ಅಗತ್ಯವಾಗಿದೆ.

ಹಲ್ಲುಜ್ಜಲು ನಾವು ದಿನನಿತ್ಯ ಉಪಯೋಗಿಸುವ ಪೇಸ್ಟ್ ಹಾಗೂ ಮೆಡಿಕಲ್ ಶಾಪ್‌ಗಳಲ್ಲಿ ವೈದ್ಯರ ಚೀಟಿ ಇಲ್ಲದೆಯೇ ಕೊಳ್ಳುವ ಹಲವಾರು ದಂತ ಆರೋಗ್ಯದ ಔಷಧಿಗಳ ಮಾರುಕಟ್ಟೆ ಪ್ರತಿವರ್ಷ ಎಷ್ಟೋ ಬಿಲಿಯನ್ ಡಾಲರ್ ವ್ಯಾಪಾರವಾಗಿದೆ ಎಂದರೆ ಆಶ್ಚರ್ಯವಾಗುತ್ತದೆ. ಜನ ತಮ್ಮ ಸೌಂದರ್ಯವರ್ಧನೆಗೆ ಬಳಸುವ ಇತರ ವಸ್ತುಗಳ ಮಾರುಕಟ್ಟೆಯ ಮೌಲ್ಯವನ್ನು ಹೊರತುಪಡಿಸಿ ಕೇವಲ ದಂತ ಆರೋಗ್ಯಕ್ಕಾಗಿಯೇ ಇಷ್ಟೊಂದು ದೊಡ್ಡ ಮೊತ್ತದ ವಹಿವಾಟು ಪ್ರತಿವರ್ಷ ನಡೆಯುತ್ತದೆ.

Whiten Your Teeth Naturally

ಹಲ್ಲುಗಳನ್ನು ಶುಭ್ರಗೊಳಿಸಲು ಮೆಡಿಕಲ್ ಶಾಪ್‌ಗಳಲ್ಲಿ ಜನ ಹಲವಾರು ಬಗೆಯ ದ್ರಾವಣ ಹಾಗೂ ಔಷಧಿಗಳನ್ನು ಖರೀದಿಸಿ ಬಳಸುತ್ತಾರೆ.

ಇವು ಬಹುತೇಕ ಪರಿಣಾಮಕಾರಿಯಾದರೂ ಬಹಳ ದುಬಾರಿಯಾಗಿರುತ್ತವೆ. ಅಲ್ಲದೆ ಕೆಲ ಬಾರಿ ಇವುಗಳ ಬಳಕೆಯಿಂದ ಹಲ್ಲುಗಳಲ್ಲಿ ಸಂವೇದನೆ (ಸೆನ್ಸಿಟಿವಿಟಿ) ಜಾಸ್ತಿಯಾಗುವಿಕೆ ಕಂಡು ಬರಬಹುದು ಅಥವಾ ಬಯಸಿದ ಪರಿಣಾಮ ಕಾಣದೇ ಇರಬಹುದು. ಆದರೆ ಮನೆಯಲ್ಲಿಯೇ ಕೆಲ ಸುಲಭ ವಿಧಾನಗಳ ಮೂಲಕ ನಿಮ್ಮ ದಂತಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂಬುದು ಖುಷಿಯ ವಿಚಾರವಾಗಿದೆ. ಇವು ನಿಮಗೆ ಸಮಯದ ಉಳಿತಾಯದ ಜೊತೆಗೆ ಹಣದ ಉಳಿತಾಯವನ್ನೂ ಮಾಡುತ್ತವೆ. ನೈಸರ್ಗಿಕ ಚಿಕಿತ್ಸಾ ವಿಧಾನಗಳಿಂದ ನಿಮ್ಮ ಹಲ್ಲುಗಳ ಮೇಲೆ ಯಾವುದೇ ಅಡ್ಡ ಪರಿಣಾಮಗಳು ಸಹ ಇರುವುದಿಲ್ಲ. ಮನೆಯಲ್ಲಿಯೇ ಸುಲಭ ಹಾಗೂ ನೈಸರ್ಗಿಕವಾಗಿ ಹಲ್ಲುಗಳನ್ನು ಶುಭ್ರಗೊಳಿಸುವ ಕೆಲ ಪರಿಣಾಮಕಾರಿ ವಿಧಾನಗಳನ್ನು ಇಲ್ಲಿ ತಿಳಿಸಲಾಗಿದ್ದು, ನೀವೂ ಇದರ ಪ್ರಯೋಜನ ಪಡೆಯಬಹುದು. ದಂತಕಾಂತಿಗಾಗಿ ಮನೆಯಲ್ಲಿಯೇ ಮಾಡಬಹುದಾದ 4 ಸುಲಭ ನೈಸರ್ಗಿಕ ಚಿಕಿತ್ಸಾ ವಿಧಾನಗಳು:

ಅಡುಗೆ ಸೋಡಾ ಮತ್ತು ನಿಂಬೆ ರಸದ ಪೇಸ್ಟ್ ವಿಧಾನ

ಅಡುಗೆ ಸೋಡಾ ಮತ್ತು ನಿಂಬೆ ರಸದ ಪೇಸ್ಟ್ ವಿಧಾನ

ಅಡುಗೆ ಸೋಡಾ (ಬೇಕಿಂಗ್ ಸೋಡಾ) ವನ್ನು ಹಲವಾರು ಚಿಕಿತ್ಸಾ ವಿಧಾನಗಳಲ್ಲಿ ನೈಸರ್ಗಿಕ ವಸ್ತುವಾಗಿ ಬಳಸಲಾಗುತ್ತದೆ. ಇದೊಂದು ರೀತಿಯ ಮ್ಯಾಜಿಕ್ ವಸ್ತುವಾಗಿದೆ. ಇದೇ ಮ್ಯಾಜಿಕ್ ವಸ್ತುವನ್ನು ಬಳಸಿ ನಿಮ್ಮ ಹಲ್ಲುಗಳಿಗೂ ಹೊಳಪು ನೀಡಲು ಸಾಧ್ಯ. ಇದರಿಂದ ನಿಮ್ಮ ಮುಗುಳುನಗೆ ಎಲ್ಲರನ್ನೂ ಆಕರ್ಷಿಸಬಲ್ಲದು. ಸೋಡಾದ ಕ್ಷಾರ ಹಾಗೂ ಒರಟು ಗುಣದಿಂದ ಹಲ್ಲುಗಳ ಮೇಲಿನ ಕಲೆಗಳು ಮಾಯವಾಗುತ್ತವೆ ಹಾಗೂ ಬಾಯಿಯ ಪಿಎಚ್ ಮಟ್ಟ ಸಾಮಾನ್ಯ ಮಟ್ಟಕ್ಕೆ ಹಿಂದಿರುಗುತ್ತದೆ. ಇದರ ಜೊತೆಗೆ ನಿಂಬೆಯ ಆಮ್ಲೀಯ ಗುಣದಿಂದ ಹಲ್ಲುಗಳು ಶುಭ್ರವಾಗುತ್ತವೆ.

 ಬೇಕಾಗುವ ಸಾಮಗ್ರಿಗಳು :

ಬೇಕಾಗುವ ಸಾಮಗ್ರಿಗಳು :

2 ರಿಂದ 4 ಟೇಬಲ್ ಸ್ಪೂನ್ ಅಡುಗೆ ಸೋಡಾ, ಒಂಚೂರು ನಿಂಬೆ ರಸ ಅಥವಾ ನೀರು, ಮೃದುವಾದ ಬ್ರಿಸಲ್‌ಗಳಿರುವ ಒಂದು ಟೂತ್ ಬ್ರಶ್

ತಯಾರಿಸುವ ವಿಧಾನ : ಒಂದು ಬಟ್ಟಲಿಗೆ ಅಡುಗೆ ಸೋಡಾ ಹಾಕಿಕೊಳ್ಳಿ. ಈಗ ಇದಕ್ಕೆ ನಿಂಬೆ ರಸ ಅಥವಾ ನೀರು ಸೇರಿಸಿ ನಿಧಾನವಾಗಿ ಕಲಕುತ್ತ ಇರಿ. ಸೋಡಾ ಪುಡಿಯ ಪ್ರಮಾಣ ಆಧರಿಸಿ ನಿಂಬೆ ರಸ ಅಥವಾ ನೀರು ಸೇರಿಸಿ. ಇದು ಮೃದುವಾದ ಪೇಸ್ಟ್ ರೂಪಕ್ಕೆ ಬರುವವರೆಗೆ ಕಲಕಿ. ಈಗ ಈ ಪೇಸ್ಟ್ ಅನ್ನು ಟೂತ್ ಬ್ರಶ್‌ಗೆ ಹಚ್ಚಿಕೊಂಡು 2 ರಿಂದ 3 ನಿಮಿಷಗಳವರೆಗೆ ಹಲ್ಲುಜ್ಜಿಕೊಳ್ಳಿ. ವಾರಕ್ಕೆ ಕೆಲ ಬಾರಿ ಅಥವಾ ನಿರೀಕ್ಷಿತ ಪರಿಣಾಮ ಬೀರುವವರೆಗೆ ಈ ವಿಧಾನವನ್ನು ಮುಂದುವರಿಸಬಹುದು.

ತೆಂಗಿನೆಣ್ಣೆಯಿಂದ ಮುಕ್ಕಳಿಸುವಿಕೆ!

ತೆಂಗಿನೆಣ್ಣೆಯಿಂದ ಮುಕ್ಕಳಿಸುವಿಕೆ!

ತೆಂಗಿನೆಣ್ಣೆಯ ಉತ್ತಮ ಗುಣಗಳು ಹಲವಾರಿವೆ. ಈಗ ಇದನ್ನು ನಿಮ್ಮ ಸ್ಮೈಲ್‌ನ ಹೊಳಪು ಹೆಚ್ಚಿಸಲೂ ಬಳಸಬಹುದು. 'ಆಯಿಲ್ ಪುಲ್ಲಿಂಗ್' ವಿಧಾನ ವಾಸ್ತವದಲ್ಲಿ ಬಹಳಷ್ಟು ಪರಿಣಾಮಕಾರಿಯಾಗಿದೆ ಎಂಬುದು ಅನೇಕರಿಗೆ ತಿಳಿದಿಲ್ಲ. ಈ ಚಮತ್ಕಾರಿ ಚಿಕಿತ್ಸಾ ವಿಧಾನವನ್ನು ನಿಯಮಿತವಾಗಿ ಅನುಸರಿಸಿದಲ್ಲಿ ಉತ್ತಮ ಪರಿಣಾಮಗಳನ್ನು ಕಾಣಬಹುದಾಗಿದೆ. ತೆಂಗಿನೆಣ್ಣೆಯಲ್ಲಿರುವ ಲಾರಿಕ್ ಆಸಿಡ್ ಹಲ್ಲುಗಳ ಪ್ಲಾಕ್‌ನಲ್ಲಿ ಹಳದಿ ಕಲೆ ಉಂಟು ಮಾಡುವ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ. ಜೊತೆಗೆ ತೆಂಗಿನೆಣ್ಣೆಯು ಒಸಡುಗಳನ್ನು ಗಟ್ಟಿಗೊಳಿಸಿ ಬಾಯಿಯ ದುರ್ವಾಸನೆಯನ್ನು ಸಹ ಹೋಗಲಾಡಿಸುತ್ತದೆ.

ತೆಂಗಿನೆಣ್ಣೆಯಿಂದ ಬಾಯಿ ಮುಕ್ಕಳಿಸಿದ ಮಾತ್ರಕ್ಕೆ ಹಲ್ಲುಗಳ ಆರೋಗ್ಯ ಸುಧಾರಿಸುತ್ತದೆ ಎಂಬುದು ಕೆಲವೊಮ್ಮೆ ನಿಮಗೆ ನಂಬಲು ಸಾಧ್ಯವಾಗದಿರಬಹುದು. ಆದರೆ ತೆಂಗಿನೆಣ್ಣೆಯ 'ಆಯಿಲ್ ಪುಲ್ಲಿಂಗ್' ವಿಧಾನ ಬಹು ಪುರಾತನವಾದದ್ದು ಎಂಬುದು ಮಾತ್ರ ಸತ್ಯ. ಹಲ್ಲುಗಳ ಹೊಳಪಿಗೆ ಹಳೆಯ ಕಾಲದಿಂದಲೂ ಜನ ಈ ವಿಧಾನವನ್ನು ಅನುಸರಿಸುತ್ತಿದ್ದಾರೆ. ತೆಂಗಿನ ಎಣ್ಣೆಯ ರುಚಿ ಮಾತ್ರ ಅಷ್ಟು ಚೆನ್ನಾಗಿರಲ್ಲ ಎಂಬುದು ನಿಜವಾದರೂ ಹಲ್ಲುಗಳ ಹೊಳಪಿಗೆ ಈ ವಿಧಾನ ಉಪಯುಕ್ತ ವಾಗಿರುವುದರಿಂದ ಅದರ ರುಚಿಯ ಬಗ್ಗೆ ತಲೆ ಕೆಡಿಸಿಕೊಳ್ಳದಿರುವುದೇ ಲೇಸು. ಒಟ್ಟಾರೆಯಾಗಿ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಸುಲಭವಾಗಿ ದಂತಕಾಂತಿ ಹೆಚ್ಚಿಸುವ ಈ ನೈಸರ್ಗಿಕ ವಿಧಾನವನ್ನು ನೀವೂ ಬಳಸಿ ನೋಡಿ.

ಬೇಕಾಗುವ ಸಾಮಗ್ರಿಗಳು :

ಬೇಕಾಗುವ ಸಾಮಗ್ರಿಗಳು :

ಅರ್ಧ ದಿಂದ ಒಂದೂವರೆ ಟೇಬಲ್ ಚಮಚೆ ತೆಂಗಿನ ಎಣ್ಣೆ

ತಯಾರಿಸುವ ವಿಧಾನ : ಬೆಳಗ್ಗೆ ಹಲ್ಲುಜ್ಜುವ ಮುಂಚೆ ಒಂದು ಟೇಬಲ್ ಚಮಚದಷ್ಟು ತೆಂಗಿನ ಎಣ್ಣೆಯನ್ನು ಬಾಯಿಗೆ ಹಾಕಿಕೊಳ್ಳಿ. ಇದು ಬಾಯಲ್ಲಿ ನಿಧಾನವಾಗಿ ಕರಗಲು ಬಿಡಿ. ಮೌತ್ ವಾಶ್ ನಿಂದ ಮುಕ್ಕಳಿಸುವ ರೀತಿಯಲ್ಲಿಯೆ ಇದನ್ನು 10 ರಿಂದ 15 ನಿಮಿಷ ಬಾಯಿಯೊಳಗೆ ಎಲ್ಲ ಕಡೆಗೂ ಹರಿದಾಡುವಂತೆ ಮುಕ್ಕಳಿಸಿ. ಈಗ ಎಣ್ಣೆಯನ್ನು ಉಗುಳಿ ಸಾಮಾನ್ಯ ರೀತಿಯಲ್ಲಿ ಹಲ್ಲುಗಳನ್ನು ಬ್ರಶ್ ಮಾಡಿ. ಪ್ರತಿದಿನ ಅಥವಾ ವಾರಕ್ಕೊಮ್ಮೆ ಈ ವಿಧಾನ ಅನುಸರಿಸಬಹುದು. ಇದರಿಂದ ಯಾವುದೇ ಅಡ್ಡಪರಿಣಾಮಗಳು ಇರದಿರುವುದರಿಂದ ನಿಮಗೆ ಪರಿಣಾಮ ಸಿಗುವವರೆಗೂ ಈ ವಿಧಾನ ಮುಂದುವರಿಸಬಹುದು.

ಆಪಲ್ ಸೈಡರ್ ವಿನೆಗರ್

ಆಪಲ್ ಸೈಡರ್ ವಿನೆಗರ್

ತನ್ನ ನೋವು ನಿವಾರಕ ಗುಣಗಳಿಗೆ ಆಪಲ್ ಸೈಡರ್ ವಿನೆಗರ್ ಹೆಸರುವಾಸಿಯಾಗಿದೆ. ನೈಸರ್ಗಿಕ ಆಂಟಿ ಬಯಾಟಿಕ್ ಆಗಿರುವ ಆಪಲ್ ಸೈಡರ್ ವಿನೆಗರ್ ನಿಮ್ಮ ಬಾಯಿ ಆರೋಗ್ಯಕ್ಕೂ ಉತ್ತಮವಾಗಿದೆ. ಹಲ್ಲುಗಳ ಮೇಲಿನ ಕಲೆಗಳನ್ನು ನಿವಾರಿಸಿ ಬ್ಯಾಕ್ಟೀರಿಯಾಗಳನ್ನು ತೊಡೆದು ಹಾಕುವ ಶಕ್ತಿಯನ್ನು ಇದು ಹೊಂದಿದೆ. ಆಪಲ್ ಸೈಡರ್ ವಿನೆಗರ್‌ನಲ್ಲಿರುವ ಅಸೆಟಿಕ್ ಆಸಿಡ್, ಪೊಟಾಶಿಯಂ, ಮ್ಯಾಗ್ನೇಶಿಯಂ, ಪ್ರೊಬಯಾಟಿಕ್ಸ್ ಮತ್ತು ಎಂಜೈಮ್‌ಗಳಿಂದ ಬಾಯಿಯಲ್ಲಿನ ಹಾನಿಕಾರಕ ಬ್ಯಾಕ್ಟೀರಿಯಾಗಳು ನಾಶವಾಗಿ ಉತ್ತಮ ಬ್ಯಾಕ್ಟೀರಿಯಾಗಳ ಬೆಳವಣಿಗೆ ವೃದ್ಧಿಸುತ್ತದೆ. ನೈಸರ್ಗಿಕವಾಗಿ ಆಮ್ಲೀಯವಾಗಿರುವ ಈ ವಿನೆಗರ್ ಪ್ಲಾಕ್ ಹಾಗೂ ಹಲ್ಲುಗಳ ಸಂದುಗಳಲ್ಲಿ ಸಿಕ್ಕಿ ಹಾಕಿಕೊಂಡಿರುವ ಆಹಾರ ಕಣಗಳನ್ನು ಹೊರ ತೆಗೆದು ಬಾಯಿ ಆರೋಗ್ಯವನ್ನು ವೃದ್ಧಿಸಲು ಸಹಕಾರಿಯಾಗಿದೆ. ಆಪಲ್ ಸೈಡರ್ ವಿನೆಗರ್‌ನ ಪಿಎಚ್ ಮಟ್ಟವು ಹಲ್ಲುಗಳ ಕಲೆಗಳನ್ನು ನಿವಾರಿಸಿ ನೈಸರ್ಗಿಕವಾಗಿ ಹಲ್ಲುಗಳಿಗೆ ಶುಭ್ರತೆಯನ್ನು ನೀಡುತ್ತದೆ.

 ಬೇಕಾಗುವ ಸಾಮಗ್ರಿಗಳು :

ಬೇಕಾಗುವ ಸಾಮಗ್ರಿಗಳು :

1 ರಿಂದ 2 ಚಮಚೆ ಆಪಲ್ ಸೈಡರ್ ವಿನೆಗರ್

ತಯಾರಿಸುವ ವಿಧಾನ : ಆಪಲ್ ಸೈಡರ್ ವಿನೆಗರ್ ವಿಧಾನ ಬಳಸುವಾಗ ನಿಮಗೆ ಕೊಂಚ ತಾಳ್ಮೆ ಇರುವುದು ಅಗತ್ಯ. ಇದನ್ನು ನಿಯಮಿತವಾಗಿ ಬಳಸಬೇಕಾಗುತ್ತದೆ. ಬೆರಳಿನಿಂದ ಆಪಲ್ ಸೈಡರ್ ವಿನೆಗರ್ ಅನ್ನು ಹಲ್ಲುಗಳ ಮೇಲೆ ಒಂದರಿಂದ ಎರಡು ನಿಮಿಷಗಳವರೆಗೆ ಉಜ್ಜಿಕೊಳ್ಳಿ. ನಂತರ ನೀರಿನಿಂದ ಸ್ವಚ್ಛವಾಗಿ ಬಾಯಿ ತೊಳೆದುಕೊಳ್ಳಿ. ಇದರಲ್ಲಿನ ಆಸಿಡಿಕ್ ಗುಣದಿಂದ ಹಲ್ಲುಗಳ ಮೇಲೆ ದುಷ್ಪರಿಣಾಮ ಆಗಬಹುದಾದ್ದರಿಂದ ಈ ವಿಧಾನ ಅನುಸರಿಸಿದ ತಕ್ಷಣ ಸ್ವಚ್ಛವಾಗಿ ಬಾಯಿ ತೊಳೆದುಕೊಂಡು ಹಲ್ಲುಜ್ಜಿಕೊಳ್ಳಲು ಮರೆಯಬೇಡಿ.

ಸ್ಟ್ರಾಬೆರಿ, ಉಪ್ಪು ಮತ್ತು ಅಡುಗೆ ಸೋಡಾ ವಿಧಾನ

ಸ್ಟ್ರಾಬೆರಿ, ಉಪ್ಪು ಮತ್ತು ಅಡುಗೆ ಸೋಡಾ ವಿಧಾನ

ವಿಟಮಿನ್ ಸಿ ಯಿಂದ ಸಮೃದ್ಧವಾಗಿರುವ ಸ್ಟ್ರಾಬೆರಿ ನೈಸರ್ಗಿಕವಾಗಿ ಹಲ್ಲುಗಳನ್ನು ಶುಭ್ರಗೊಳಿಸುತ್ತದೆ. ಸ್ಟ್ರಾಬೆರಿಯಲ್ಲಿರುವ ಮ್ಯಾಲಿಕ್ ಆಸಿಡ್ ಎಂಬ ಎಂಜೈಮ್ ಹಲ್ಲುಗಳ ಪ್ಲಾಕ್‌ನಲ್ಲಿನ ಹಳದಿ ಬಣ್ಣಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ನಾಶ ಪಡಿಸುತ್ತದೆ. ಇದರೊಂದಿಗೆ ಉಪ್ಪು ಹಾಗೂ ಅಡುಗೆ ಸೋಡಾ ಸೇರಿಸಿ ಬಳಸುವುದರಿಂದ ಶೀಘ್ರ ಪರಿಣಾಮ ಕಂಡು ಬರುತ್ತದೆ.

ಬೇಕಾಗುವ ಸಾಮಗ್ರಿಗಳು : 1 ರಿಂದ 3 ಸ್ಟ್ರಾಬೆರಿ, ಚಿಟಿಕೆ ಉಪ್ಪು, ಅರ್ಧ ಟೇಬಲ್ ಸ್ಪೂನ್ ಅಡುಗೆ ಸೋಡಾ

ತಯಾರಿಸುವ ವಿಧಾನ :

ತಯಾರಿಸುವ ವಿಧಾನ :

ಸ್ಟ್ರಾಬೆರಿ, ಉಪ್ಪು ಹಾಗೂ ಅಡುಗೆ ಸೋಡಾವನ್ನು ಒಂದು ಬಟ್ಟಲಿಗೆ ಹಾಕಿ ಎಲ್ಲವನ್ನೂ ಚೆನ್ನಾಗಿ ಅರೆಯಿರಿ. ಇದು ನುಣ್ಣಗಿನ ಪೇಸ್ಟ್ ರೂಪಕ್ಕೆ ಬರುವವರೆಗೆ ಅರೆದುಕೊಳ್ಳಿ. ಬಾಯಿಯಲ್ಲಿನ ಜೊಲ್ಲನ್ನು ಒಂದು ಪೇಪರ್ ಟಿಶ್ಯುನಿಂದ ಒರೆಸಿಕೊಂಡು ಈ ಪೇಸ್ಟ್ ಅನ್ನು ಹಲ್ಲುಗಳ ಮೇಲೆ ಬೆರಳುಗಳಿಂದ ಲೇಪಿಸಿಕೊಳ್ಳಿ. ಐದು ನಿಮಿಷ ಬಿಟ್ಟು ಬಾಯಿ ತೊಳೆದುಕೊಳ್ಳಿ. ಉತ್ತಮ ಪರಿಣಾಮಕ್ಕಾಗಿ ಆಗಾಗ ರಾತ್ರಿ ಈ ವಿಧಾನ ಬಳಸಬಹುದು.

English summary

Whiten Your Teeth Naturally & Safely-4 easy ways

In the visual world we live in, having white teeth and thick-illustrious hair is something we as humans try to obtain. In fact, appearance is so sought after, that over-the-counter teeth whitening products alone easily exceeds the billion dollar revenue mark each year. That is a massive amount of money doesn’t even include the other endless supply beauty products / offerings that are out there..
X
Desktop Bottom Promotion