Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಅರಿಶಿನ ಕಾರ್ಯಕ್ರಮದ ಮೊದಲು ವಧುವರರು ಈ ಎಲ್ಲಾ ಸಲಹೆಗಳನ್ನು ತಪ್ಪದೇ ಅನುಸರಿಸಿ
ಆಧುನಿಕ ಯುಗದಲ್ಲಿ ಹಿಂದಿನವರು ಆಚರಿಸಿಕೊಂಡು ಬಂದಿರುವಂತಹ ಪ್ರತಿಯೊಂದು ಸಂಪ್ರದಾಯ ಹಾಗೂ ಆಚರಣೆಗಳನ್ನು ಮೂಢನಂಬಿಕೆ ಎಂದು ಪಟ್ಟಿ ಮಾಡಿ ಬಿಡುತ್ತಾರೆ. ಆದರೆ ಹಿಂದಿನವರು ಆಚರಿಸಿಕೊಂಡು ಬಂದಿರುವಂತಹ ಪ್ರತಿಯೊಂದು ಸಂಪ್ರದಾಯಗಳ ಹಿಂದೆ ಅದರದ್ದೇ ಆಗಿರುವಂತಹ ಕೆಲವೊಂದು ಕಾರಣಗಳು ಇವೆ. ಇದರಲ್ಲಿ ಕೆಲವೊಂದು ಆಚರಣೆಗಳು ವೈಜ್ಞಾನಿಕವಾಗಿಯೂ ಸಾಬೀತು ಆಗಿದೆ. ಮುಖ್ಯವಾಗಿ ಮದುವೆ ಸಮಾರಂಭದ ವೇಳೆ ಆಚರಿಸುವಂತಹ ಅರಿಶಿನ ಕಾರ್ಯಕ್ರಮ ಕೂಡ ಇಂತಹ ಆಚರಣೆಯಲ್ಲಿ ಒಂದಾಗಿದೆ.
ಅರಿಶಿನ ಕಾರ್ಯಕ್ರಮವು ಇಲ್ಲದೆ ಭಾರತೀಯರಲ್ಲಿ ಯಾವುದೇ ಮದುವೆ ಕಾರ್ಯಕ್ರಮಗಳು ನಡೆಯುವುದೇ ಇಲ್ಲ. ವರ ಹಾಗೂ ವಧು, ಹೀಗೆ ಇಬ್ಬರ ಮನೆಯಲ್ಲೂ ಈ ಆಚರಣೆ ಮಾಡಲಾಗುತ್ತದೆ. ಅರಿಶಿನ ಕಾರ್ಯಕ್ರಮವನ್ನು ಮದುವೆಗೆ ಮುನ್ನಾ ದಿನ ಅಥವಾ ಎರಡು ದಿನ ಮೊದಲು ಆಚರಣೆ ಮಾಡಲಾಗುತ್ತದೆ. ಮನೆಯ ಸಂಪ್ರದಾಯಕ್ಕೆ ಅನುಗುಣವಾಗಿ ಇದನ್ನು ಮಾಡಲಾಗುತ್ತದೆ. ಅರಿಶಿನ ಕಾರ್ಯಕ್ರಮದ ವೇಳೆ ಜೋಡಿಯನ್ನು ಶುದ್ಧೀಕರಿಸಲು ಬಳಸುವಂತಹ ಸಾಮಗ್ರಿಯೆಂದರೆ ಅರಿಶಿನ ಮತ್ತು ಶ್ರೀಗಂಧ.

ಅರಿಶಿನ
ಈ ಎರಡು ಪ್ರಬಲ ಸಾಮಗ್ರಿಗಳು ನವಜೀವನಕ್ಕೆ ಕಾಲಿಟ್ಟಂತಹ ವಧುವರರಿಗೆ ನೆರವಾಗುವುದು ಎಂದು ಹೇಳಲಾಗಿದೆ. ಇದು ವೈಜ್ಞಾನಿಕವಾಗಿ ದೇಹವನ್ನು ಶುದ್ಧೀಕರಿಸುವುದು ಮಾತ್ರವಲ್ಲದೆ ಚರ್ಮವನ್ನು ಸರಿಯಾದ ರೀತಿಯಲ್ಲಿ ಚಿಕಿತ್ಸಕವಾಗಿ ಶಮನ ನೀಡುವುದು. ಅರಶಿನದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಮತ್ತು ಇತರ ಕೆಲವು ಚಿಕಿತ್ಸಕ ಗುಣಗಳು ಇದೆ ಎಂದು ಹೇಳಲಾಗಿದೆ. ಇದರಿಂದಾಗಿಯೇ ಅರಿಶಿನವು ಇಂದಿನ ದಿನಗಳಲ್ಲಿ ಔಷಧಿಯಾಗಿ ತುಂಬಾ ಜನಪ್ರಿಯವಾಗಿದೆ.

ಮುಖ, ಕೈಗಳು ಮತ್ತು ಕಾಲುಗಳಿಗೆ ಅರಿಶಿನ ಹಚ್ಚಲಾಗುವುದು
ಮದುವೆಗೆ ಮೊದಲು ದೇಹದ ಚರ್ಮಕ್ಕೆ ಬೇಕಾಗುವಂತಹ ಆರೈಕೆಯನ್ನು ಅರಿಶಿನ ಮೂಲಕ ನೀಡಲಾಗುತ್ತದೆ. ಇದರಿಂದ ಮುಖ, ಕೈಗಳು ಮತ್ತು ಕಾಲುಗಳಿಗೆ ಅರಿಶಿನ ಹಚ್ಚಲಾಗುವುದು. ಅದಾಗ್ಯೂ, ಅರಿಶಿನ ಕಾರ್ಯಕ್ರಮಕ್ಕೆ ಒಳಪಡುವಂತಹ ಜೋಡಿಗೆ ಕೆಲವೊಂದು ಸೌಂಧರ್ಯದ ಸಲಹೆಗಳನ್ನು ನೀಡಲಾಗಿದೆ. ಅರಿಶಿನವು ಚರ್ಮದಲ್ಲಿರುವಂತಹ ಕಲೆಗಳನ್ನು ನಿವಾರಣೆ ಮಾಡುವುದು. ಆದರೆ ಅರಿಶಿನ ಕಾರ್ಯಕ್ರಮಕ್ಕೆ ಮೊದಲು ನೀವು ಕೆಲವೊಂದು ಸಲಹೆಗಳನ್ನು ಪಾಲಿಸಿಕೊಂಡು ಹೋಗಬೇಕು.

ಅರಿಶಿನ ಕಾರ್ಯಕ್ರಮಕ್ಕೆ ಯಾವ ರೀತಿಯ ಸಾಮಗ್ರಿಗಳನ್ನು ಬಳಸಿಕೊಳ್ಳಬೇಕು?
ಇದನ್ನು ಪಿಥಿ ಎಂದು ಕರೆಯುವರು. ಈ ಪೇಸ್ಟ್ ನ್ನು ಕಡಲೆಹಿಟ್ಟು, ಅರಿಶಿನ, ರೋಸ್ ವಾಟರ್ ಮತ್ತು ಇತರ ಕೆಲವು ಸಾಮಗ್ರಿಗಳನ್ನು ಬಳಸಿಕೊಂಡು ತಯಾರಿಸಲಾಗುವುದು.

ಮೊದಲ ಹಂತ
ಕಾರ್ಯಕ್ರಮ ಆರಂಭಕ್ಕೆ ಮೊದಲು ಸ್ನಾನ ಮಾಡಿಕೊಳ್ಳುವುದು ಅತೀ ಅಗತ್ಯವಾಗಿರುವುದು. ಇದರಿಂದ ದೇಹದಲ್ಲಿ ಇರುವಂತಹ ಬೆವರು ಮತ್ತು ಧೂಳನ್ನು ನಿವಾರಣೆ ಮಾಡಲು ನೆರವಾಗುವುದು. ಇದರ ಬಳಿಕ ಚರ್ಮಕ್ಕೆ ಅರಿಶಿನ ಹಚ್ಚಿಕೊಂಡರೆ ಅದರಿಂದ ಲಾಭವು ಅಧಿಕವಾಗುವುದು.

ಎರಡನೇ ಹಂತ
ಸ್ವಲ್ಪ ಆಲಿವ್ ತೈಲ ಅಥವಾ ತೆಂಗಿನೆಣ್ಣೆ ಬಿಸಿ ಮಾಡಿ ಮತ್ತು ಸ್ವಲ್ಪ ಬಿಸಿ ಇರುವಾಗಲೇ ಇದನ್ನು ತಲೆಬುರುಡೆ ಮತ್ತು ಕೂದಲಿಗೆ ಹಚ್ಚಿಕೊಳ್ಳಿ. ಈ ಎಣ್ಣೆಯಿಂದ ಅರಶಿನವು ತಲೆಬುರುಡೆ ಹಾಗೂ ಕೂದಲಿನಲ್ಲಿ ಅಂಟಿಕೊಳ್ಳುವುದು ತಪ್ಪುವುದು. ಇದರಿಂದ ಸ್ನಾನ ಮಾಡುವ ವೇಳೆ ಇದನ್ನು ತೆಗೆಯಬಹುದು.

ಮೂರನೇ ಹಂತ
ಉಗುರುಬೆಚ್ಚಗಿನ ಎಣ್ಣೆಯನ್ನು ಮುಖ, ಪಾದಗಳು ಮತ್ತು ಕೈಗಳಿಗೆ ಹಚ್ಚಿಕೊಳ್ಳಿ. ಇದರಿಂದ ಚರ್ಮದಲ್ಲಿ ಅರಶಿನವು ಅಂಟಿ ಕೊಳ್ಳುವುದಿಲ್ಲ. ಚರ್ಮವು ಸೂಕ್ಷ್ಮವಾಗಿದ್ದರೆ ಆಗ ನೀವು ಸ್ವಲ್ಪ ಪೌಡರ್ ಕೂಡ ಹಚ್ಚಿಕೊಳ್ಳಬಹುದು.

ನಾಲ್ಕನೇ ಹಂತ
ಅರಿಶಿನ ಕಾರ್ಯಕ್ರಮ ಮತ್ತು ಆಚರಣೆ ಬಳಿಕ ನೀವು ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿಕೊಳ್ಳಿ. ನೀರಿಗೆ ರೋಸ್ ವಾಟರ್ ಹಾಕಿಕೊಳ್ಳಬಹುದು. ಇದರಿಂದ ದೇಹಕ್ಕೆ ನೈಸರ್ಗಿಕ ಹೊಳಪು ಮತ್ತು ಸುವಾಸನೆ ಬರುವುದು.

ಐದನೇ ಹಂತ
ಸ್ನಾನ ಮಾಡಿಕೊಂಡು ಬಂದ ಬಳಿಕ ನೀವು ಯಾವುದೇ ರೀತಿಯ ಮೊಶ್ಚಿರೈಸರ್ ಅಥವಾ ಕ್ರೀಮ್ ಬಳಸಬೇಡಿ. ಯಾಕೆಂದರೆ ಅದಾಗಲೇ ಅರಿಶಿನ ಹಚ್ಚಲಾಗಿರುತ್ತದೆ. ಈ ನೈಸರ್ಗಿಕದತ್ತ ಗಿಡಮೂಲಿಕೆಯು ನಿಮ್ಮ ಚರ್ಮಕ್ಕೆ ಬೇಕಾಗಿರುವಂತಹ ಆರೈಕೆ ಮತ್ತು ಕಾಂತಿ ನೀಡುವಂತಹ ಎಲ್ಲಾ ಗುಣಗಳನ್ನು ಹೊಂದಿದೆ.



Click it and Unblock the Notifications











