For Quick Alerts
ALLOW NOTIFICATIONS  
For Daily Alerts

ಜಿಮ್‌ಗೆ ಹೋಗುವ ಮಹಿಳೆಯರು,ತ್ವಚೆ-ಕೂದಲಿನ ಆರೈಕೆಯ ವಿಷಯದಲ್ಲಿ ಮಾಡುವ ತಪ್ಪುಗಳು

|
ಜಿಮ್ ನಲ್ಲಿ ವರ್ಕ್ಔಟ್ ಮಾಡುವಾಗ ಮಹಿಳೆಯರು ಮಾಡುವ ತಪ್ಪುಗಳೇನು? | BoldSky Kannada

ಪ್ರತಿಯೊಬ್ಬ ಮಹಿಳೆಯು ಇಂದಿನ ದಿನಗಳಲ್ಲಿ ತನ್ನ ದೇಹವನ್ನು ಫಿಟ್ ಆಗಿ ಇಡಬೇಕೆಂದು ಹಲವಾರು ರೀತಿಯಿಂದ ಪ್ರಯತ್ನ ಮಾಡುವರು. ಇದಕ್ಕಾಗಿ ಆಕೆ ಜಿಮ್ ಗೆ ಕೂಡ ಹೋಗಿ ವ್ಯಾಯಾಮ ಮಾಡುವರು. ಆದರೆ ಈ ವೇಳೆ ಕೆಲವೊಂದು ಎಚ್ಚರಿಕೆ ವಹಿಸುವುದು ಅತೀ ಅಗತ್ಯವಾಗಿದೆ. ಯಾಕೆಂದರೆ ಜಿಮ್ ಗೆ ಹೋಗುವ ವೇಳೆ ಚರ್ಮ ಮತ್ತು ಕೂದಲಿನ ಕೆಲವು ತಪ್ಪುಗಳನ್ನು ಮಾಡುವರು. ಇಂತಹ ತಪ್ಪುಗಳನ್ನು ಮಾಡದೆ ಇರದಂತೆ ಕೆಲವೊಂದು ಮುನ್ನೆಚ್ಚರಿಕೆ ತೆಗೆದುಕೊಂಡರೆ ಆಗ ಎಲ್ಲವೂ ಸುಸೂತ್ರವಾಗಿ ಇರುವುದು. ಇದರಿಂದ ನೀವು ಜಿಮ್ ಗೆ ಹೋಗುವ ವೇಳೆ ಯಾವ ರೀತಿ ಚರ್ಮ ಮತ್ತು ಕೂದಲನ್ನು ಕಾಪಾಡಿಕೊಳ್ಳಬಹುದು ಎಂದು ತಿಳಿಯಿರಿ.

gym

*1ನೇ ತಪ್ಪು: ಫೌಂಡೇಶನ್ ಬಳಸುವುದು

ವ್ಯಾಯಮಕ್ಕೆ ಮೊದಲು ದಪ್ಪಗಿನ ಫೌಂಡೇಶನ್ ಬಳಸಿಕೊಳ್ಳುವುದು ನೀವು ಮಾಡುವಂತಹ ದೊಡ್ಡ ತಪ್ಪಾಗಿದೆ. ಇದು ಮೇಧೋಗ್ರಂಥಿ ಸ್ರಾವ ಮತ್ತು ಬೆವರನ್ನು ತಡೆಯುವುದು. ಇದರಿಂದಾಗಿ ಮೊಡವೆ ಹಾಗೂ ಬೊಕ್ಕೆಗಳು ಮೂಡುತ್ತದೆ ಎಂದು ಚರ್ಮಶಾಸ್ತ್ರಜ್ಞೆ ನಂದಿತಾ ದಾಸ್ ಹೇಳುತ್ತಾರೆ. ಜಿಮ್ ಗೆ ಹೋಗುವ ಮೊದಲು ಲಘು ಮೊಶ್ಚಿರೈಸರ್ ಅಥವಾ ಎಣ್ಣೆ ಮುಕ್ತವಾಗಿರುವಂತಹ ಜೆಲ್ ಬಳಸಿಕೊಂಡು ನೀವು ವ್ಯಾಯಾಮ ಮಾಡಲು ತೆರಳಬಹುದು.

*2ನೇ ತಪ್ಪು: ಆಂಟಿಪೆರ್ಸ್ಪಿಂಟ್ ರೋಲ್ ಆನ್ ಬಳಸುವುದು

ವ್ಯಾಯಾಮಕ್ಕೆ ಹೋಗುವ ವೇಳೆ ಆಂಟಿಪೆರ್ಸ್ಪಿಂಟ್ ಅಥವಾ ಡಿಯೋಡ್ರೆಂಟ್ ಬಳಸಬೇಡಿ. ಇದರಿಂದ ಚರ್ಮದ ರಂಧ್ರಗಳು ತುಂಬಿ ಕೊಳ್ಳುವುದು ಮತ್ತು ಇದರಿಂದ ಬೆವರಿನ ವೇಳೆ ವಿಷದ ಅಂಶವು ಹೊರಗೆ ಬರುವುದನ್ನು ತಡೆಯುತ್ತದೆ. ಆಂಟಿಪೆರ್ಸ್ಪಿಂಟ್ ನಲ್ಲಿ ಹೆಚ್ಚಾಗಿ ಅಲ್ಯೂಮಿನಿಯಂತ ಅಂಶವು ಇರುತ್ತದೆ ಮತ್ತು ಇದು ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

Most Read: ಮೆಂತೆಕಾಳುಗಳನ್ನು ಬಳಸಿಕೊಂಡು ಕೂದಲು ಉದುರುವಿಕೆ ಸಮಸ್ಯೆ ನಿವಾರಿಸಿ

*3ನೇ ತಪ್ಪು: ಬನ್ ಕಟ್ಟುವುದು

ಕೂದಲನ್ನು ತುಂಬಾ ಎತ್ತರಕ್ಕೆ ಅಥವಾ ಬನ್ ರೂಪದಲ್ಲಿ ಕಟ್ಟಿದರೆ ಆಗ ನಿಮಗೆ ಮಲಗಿಕೊಂಡು ಮಾಡುವಂತಹ ವ್ಯಾಯಾಮದ ವೇಳೆ ತುಂಬಾ ತೊಂದರೆ ಆಗುವುದು. ಕೂದಲನ್ನು ನೀವು ಪೊನ್ನಿ ಮಾಡಿ.

*4ನೇ ತಪ್ಪು: ಕೂದಲನ್ನು ಹಾಗೆ ಬಿಡುವುದು

ವ್ಯಾಯಾಮಕ್ಕೆ ಹೋಗುವವರಿಗೆ ಮೊಡವೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ ವಿಚಾರ. ವ್ಯಾಯಾಮ ಮಾಡುವ ವೇಳೆ ಕೂದಲು ಮುಖಕ್ಕೆ ಬೀಳದಂತೆ ನೀವು ಅದನ್ನು ಹಿಂದಕ್ಕೆ ಎಳೆದುಕೊಳ್ಳಬೇಕು. ಯಾಕೆಂದರೆ ಇದು ಬ್ಯಾಕ್ಟೀರಿಯಾವನ್ನು ಹರಡುತ್ತದೆ ಎಂದು ನಂದಿತಾ ಅವರು ಹೇಳುತ್ತಾರೆ. ಹೆಡ್ ಬ್ಯಾಂಡ್ ಅಥವಾ ಬಂದನ ಬಳಸಿಕೊಂಡು ಕೂದಲನ್ನು ಮುಖದಿಂದ ದೂರವಿಡಿ ಎಂದು ಅವರು ಹೇಳುತ್ತಾರೆ. ವ್ಯಾಯಾಮಕ್ಕೆ ತೆರಳುವ ಮೊದಲು ಕೂದಲಿಗೆ ಯಾವುದೇ ರೀತಿಯ ಲಿವ್ ಇನ್ ಉತ್ಪನ್ನ ಬಳಸಬೇಡಿ. ಇದು ಮುಖಕ್ಕೆ ತಾಗಿ ಅದರಿಂದ ಮೊಡವೆ ಮೂಡುವಂತಹ ಸಾಧ್ಯತೆಯು ಹೆಚ್ಚಾಗಿ ಇರುತ್ತದೆ. ಮೊಡವೆ ಉಂಟು ಮಾಡುವಂತಹ ಚರ್ಮಕ್ಕೆ ಮೇಕಪ್ ಟಿಪ್ಸ್ ಪಾಲಿಸಿಕೊಂಡು ಹೋಗಿ.

Most Read: ಕೂದಲು ಬಿಳಿಯಾಗುವುದನ್ನು ತಡೆಯಲು ಏಳು ಪರಿಣಾಮಕಾರಿ ಮನೆಮದ್ದುಗಳು

*5ನೇ ತಪ್ಪು: ವ್ಯಾಯಾಮದ ವೇಳೆ ಮುಖ ಮುಟ್ಟುವುದು

ವ್ಯಾಯಾಮದ ವೇಳೆ ನೀವು ಮುಖವನ್ನು ಮುಟ್ಟಲು ಹೋಗಬೇಡಿ. ಅದರಲ್ಲೂ ನೀವು ಕಾರ್ಡಿಯೋ ಮೆಷಿನ್ ಬಳಸುತ್ತಿರುವ ವೇಳೆ ಹೀಗೆ ಮಾಡಲೇಬೇಡಿ. ಜಿಮ್ ನ ಪರಿಕರಗಳಲ್ಲಿ ಹೆಚ್ಚಾಗಿ ಬ್ಯಾಕ್ಟೀರಿಯಾಗಳು ಇರುತ್ತದೆ. ಇದರಿಂದಾಗಿ ಕೈಯನ್ನು ಚರ್ಮದಿಂದ ದೂರವಿಡುವುದು ತುಂಬಾ ಒಳ್ಳೆಯದು.

English summary

skin and hair mistakes women commit when exercising at a gym!

There is no doubt that exercise increases your blood flow and makes you glow, but you may be making some skin and hair mistakes while you are at it. So ensure that do not make these mistakes to walk out fresh from the gym.
X
Desktop Bottom Promotion