For Quick Alerts
ALLOW NOTIFICATIONS  
For Daily Alerts

ಯೋನಿ ಸುತ್ತಲು ಇರುವಂತಹ ಕಪ್ಪು ಚರ್ಮ ನಿವಾರಣೆಗೆ ನೈಸರ್ಗಿಕ ಮನೆಮದ್ದುಗಳು

By Staff
|

ಹೆಚ್ಚಿನ ಚರ್ಮಶಾಸ್ತ್ರಜ್ಞರ ಪ್ರಕಾರ ಯೋನಿ ಸುತ್ತಲು ಕಪ್ಪು ಚರ್ಮವು ಇರುವುದು ಸಾಮಾನ್ಯ ಮತ್ತು ನೈಸರ್ಗಿಕವೆಂದು ಹೇಳಿದ್ದಾರೆ. ಈ ಭಾಗದಲ್ಲಿ ಕಪ್ಪು ಚರ್ಮವು ಕಂಡು ಬರಲು ಪ್ರಮುಖ ಕಾರಣವೆಂದರೆ ಅದು ಉಜ್ಜುವಿಕೆ. ಇದೇ ರೀತಿಯ ಕಪ್ಪು ಚರ್ಮವು ನಮ್ಮ ಕಂಕುಳಿನ ಭಾಗದಲ್ಲೂ ಕಂಡುಬರುವುದು. ಮೇಲ್ಬಾಗದ ಚರ್ಮವು ತೆಗೆಯಲ್ಪಟ್ಟಾಗ ನಮಗೆ ಬಿಳಿ ಚರ್ಮವು ಕಾಣಲು ಸಿಗುವುದು. ಇದರ ಹೊರತಾಗಿ ಚರ್ಮ ಬರಲು ಪ್ರಮುಖ ಕಾರಣವೆಂದರೆ ಅದು ಸರಿಯಾಗಿ ಸ್ವಚ್ಛತೆ ಮಾಡಿಕೊಳ್ಳದೆ ಇರುವುದು. ಸ್ವಚ್ಛತೆ ಸರಿಯಾಗಿ ಇಲ್ಲದೆ ಇದ್ದರೆ ಆಗ ಸೋಂಕು ಉಂಟಾಗುವುದು. ಯೋನಿಯ ಡಿಸ್ಚಾರ್ಜ್ ಮತ್ತು ಬೆವರಿನಿಂದಾಗಿ ಹೀಗೆ ಆಗುವುದು.

ಯೋನಿಯ ಸರಿಯಾದ ಸ್ವಚ್ಛತೆಯು ಅತೀ ಅಗತ್ಯವಾಗಿ ಇರುವುದು. ಆದರೆ ಯೋನಿಯ ಮೇಲ್ಬಾಗದಲ್ಲಿ ಅತಿಯಾಗಿ ಉಜ್ಜುವಿಕೆ ಮಾಡದೆ ಇರುವ ಬಗ್ಗೆ ಗಮನಹರಿಸಬೇಕಾಗಿದೆ. ಸೋಪ್ ಅಥವಾ ಲಿಕ್ವಿಡ್ ನಿಂದ ಅತಿಯಾಗಿ ಉಜ್ಜುವ ಪರಿಣಾಮದಿಂದಾಗಿ ಇದು ಚರ್ಮದ ಪಿಎಚ್ ಮಟ್ಟದ ಮೇಲೆ ಪರಿಣಾಮ ಬೀರುವುದು ಮತ್ತು ಅದರಿಂದ ಕಿರಿಕಿರಿ ಉಂಟಾಗುವುದು. ಕೆಲವೊಂದು ರೀತಿಯ ಕಾಸ್ಮೆಟಿಕ್ ಗಳು ಮತ್ತು ಚರ್ಮದ ಬಣ್ಣ ಬಿಳಿಯಾಗಿಸುವ ಕ್ರೀಮ್ ಗಳು ಸ್ವಲ್ಪ ಮಟ್ಟಿಗೆ ಪರಿಹಾರ ನೀಡಬಹುದು.

ಆದರೆ ಇದನ್ನು ಆಯ್ಕೆ ಮಾಡುವ ವೇಳೆ ತುಂಬಾ ಎಚ್ಚರಿಕೆ ವಹಿಸಬೇಕು. ಯಾಕೆಂದರೆ ಈ ಕ್ರೀಮ್ ನಲ್ಲಿ ಹೈಡ್ರೊಕ್ವಿನೋನ್ ಎನ್ನುವ ರಾಸಾಯನಿಕವು ಇರುವುದು. ಇದು ವರ್ಣದ್ರವ್ಯವನ್ನು ಉಂಟು ಮಾಡುವಂತಹ ಮೆಲನಿನ್ ನ ಉತ್ಪತ್ತಿಯನ್ನು ತಗ್ಗಿಸುವುದು. ಇದು ಆ ಭಾಗದಲ್ಲಿ ಚರ್ಮವು ಕಪ್ಪಾಗುವುದನ್ನು ತಡೆಯುವುದು. ಆದರೆ ಇದರಿಂದ ಇನ್ನು ಹಲವಾರು ರೀತಿಯ ಅಡ್ಡಪರಿಣಾಮಗಳು ಇವೆ. ಜನನೇಂದ್ರೀಯ ಭಾಗದ ಸುತ್ತಲಿನ ಕಪ್ಪು ಚರ್ಮ ನಿವಾರಣೆ ಮಾಡಲು ನಾವು ನಿಮಗೆ ಕೆಲವೊಂದು ಮನೆಮದ್ದುಗಳನ್ನು ಹೇಳಿಕೊಡಲಿದ್ದೇವೆ. ಇದನ್ನು ನೀವು ಬಳಸಿಕೊಂಡು ಕಪ್ಪು ಚರ್ಮ ನಿವಾರಣೆ ಮಾಡಬಹುದು.

ಲಿಂಬೆ ಅಥವಾ ಕಿತ್ತಳೆ

ಲಿಂಬೆ ಅಥವಾ ಕಿತ್ತಳೆ

ಲಿಂಬೆ ರಸ ಅಥವಾ ಕಿತ್ತಳೆ ರಸವು ಈ ಚಿಕಿತ್ಸೆಯ ಉದ್ದೇಶವನ್ನು ಈಡೇರಿಸುವುದು. ಇವುಗಳಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಕಪ್ಪು ಚರ್ಮವನ್ನು ತುಂಬಾ ಪರಿಣಾಮಕಾರಿಯಾಗಿ ನಿವಾರಣೆ ಮಾಡುವುದು. ಇದರ ಸಿಪ್ಪೆಯನ್ನು ಕೂಡ ಬಳಸಿಕೊಳ್ಳಬಹುದು.

ಬಳಸುವ ವಿಧಾನ

ಬಳಸುವ ವಿಧಾನ

2-3 ಚಮಚ ಲಿಂಬೆ ರಸ ಅಥವಾ ಕಿತ್ತಳೆ ರಸವನ್ನು ತೆಗೆದುಕೊಳ್ಳಿ ಮತ್ತು ಇದನ್ನು ದಪ್ಪಗಿನ ಹಾಲಿನ ಕೆನೆ ಅಥವಾ ಮೊಸರಿನ ಜತೆಗೆ ಮಿಶ್ರಣ ಮಾಡಿ. ಇದಕ್ಕೆ ಸ್ವಲ್ಪ ಸಕ್ಕರೆ ಕೂಡ ಹಾಕಿಕೊಳ್ಳಿ. ಮೊದಲಿಗೆ ನೀವು ಯೋನಿಯ ಭಾಗವನ್ನು ಸ್ವಚ್ಛವಾಗಿಸಿ, ಒಣಗಿಸಿ. ಈ ಮಿಶ್ರಣವನ್ನು ಯೋನಿಯ ಭಾಗಕ್ಕೆ ಹಚ್ಚಿಕೊಳ್ಳಿ, ನಿಧಾನವಾಗಿ ಉಜ್ಜಿಕೊಳ್ಳಿ ಮತ್ತು 15-20 ನಿಮಿಷ ಕಾಲ ಹಾಗೆ ಬಿಟ್ಟುಬಿಡಿ. ಇದರ ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದು ಚರ್ಮದ ಬ್ಲೀಚಿಂಗ್ ಆಗಿ ಕೆಲಸ ಮಾಡುವುದು. ಸಿಟ್ರಸ್ ಹಣ್ಣುಗಳು ಯೋನಿಯ ಭಾಗದ ದುರ್ವಾಸನೆಯನ್ನು ಕೂಡ ತಡೆಯುವುದು.

Most Read: ತ್ವಚೆಯ ಕಾಳಜಿಗೆ ಸಲಹೆಗಳು: ಮುಂಜಾನೆ ಮತ್ತು ರಾತ್ರಿ ಈ ಟಿಪ್ಸ್ ಅನುಸರಿಸಿ ಸಾಕು!

ಪಪ್ಪಾಯಿ

ಪಪ್ಪಾಯಿ

ಪಪ್ಪಾಯಿಯು ನಿಮ್ಮ ಚರ್ಮಕ್ಕೆ ಅದ್ಭುತವಾಗಿ ಕೆಲಸ ಮಾಡುವುದು. ಇದರಲ್ಲಿ ಅತ್ಯಧಿಕ ಮಟ್ಟದ ವಿಟಮಿನ್ ಎ ಮತ್ತು ಸಿ ಇದೆ.

ಬಳಸುವ ವಿಧಾನ

ಬಳಸುವ ವಿಧಾನ

ಪಪ್ಪಾಯಿ ಸಿಪ್ಪೆ ತೆಗೆಯಿರಿ ಮತ್ತು ಅದನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಕೊಳ್ಳಿ. ಯೋನಿಯ ಸುತ್ತಲಿನ ಭಾಗವು ಸ್ವಚ್ಛ ಹಾಗೂ ಒಣಗಿದೆ ಎಂದು ದೃಢಪಡಿಸಿಕೊಂಡ ಬಳಿಕ ಈ ತುಂಡುಗಳನ್ನು ನೀವು ನಿಧಾನವಾಗಿ ಆ ಭಾಗಕ್ಕೆ ಹಚ್ಚಿಕೊಂಡು ಬಳಿಕ 5-10 ನಿಮಿಷ ಕಾಲ ಉಜ್ಜಿಕೊಳ್ಳಿ. 15 ನಿಮಿಷ ಹಾಲ ಹಾಗೆ ಬಿಡಿ ಮತ್ತು ಬಳಿಕ ತಣ್ಣೀರಿನಿಂದ ತೊಳೆಯಿರಿ. ಪಪ್ಪಾಯಿಯು ಕೇವಲ ಕಪ್ಪು ಕಲೆ ನಿವಾರಣೆ ಮಾಡುವುದು ಮಾತ್ರವಲ್ಲದೆ ಚರ್ಮವನ್ನು ನಯವಾಗಿಸಿ, ಒಳ್ಳೆಯ ಸುವಾಸನೆ ಕೂಡ ನೀಡುವುದು.

ಅಲೋವೆರಾ ಮತ್ತು ಸೌತೆಕಾಯಿ ಜೆಲ್

ಅಲೋವೆರಾ ಮತ್ತು ಸೌತೆಕಾಯಿ ಜೆಲ್

ಮುಖದಲ್ಲಿನ ಕಾಂತಿ ಪಡೆಯುವ ಸಲುವಾಗಿ ಇದನ್ನು ಫೇಸ್ ಪ್ಯಾಕ್ ಆಗಿ ಹೆಚ್ಚು ಬಳಸಲಾಗುತ್ತದೆ. ಈ ಜೆಲ್ ಹೆಚ್ಚಿನ ಎಲ್ಲಾ ಮೆಡಿಕಲ್ ಗಳಲ್ಲಿ ಲಭ್ಯವಿದೆ.

ಬಳಸುವ ವಿಧಾನ

ಯೋನಿ ಭಾಗವನ್ನು ಸ್ವಚ್ಛಗೊಳಿಸಿ ಮತ್ತು ಇದರ ಬಳಿಕ ಸರಿಯಾಗಿ ಒಣಗಿಸಿಕೊಳ್ಳಿ. ಬಳಿಕ ನೀವು ಈ ಜೆಲ್ ನ್ನು ಹಚ್ಚಿಕೊಂಡು ನಿಧಾನವಾಗಿ ಉಜ್ಜಿಕೊಳ್ಳಿ. 2 ಗಂಟೆಗಳ ಕಾಲ ಹಾಗೆ ಬಿಟ್ಟುಬಿಡಿ. ಇದರ ಬಳಿಕ ತಣ್ಣೀರಿನಿಂದ ತೊಳೆಯಿರಿ. ಸ್ವಚ್ಛಗೊಳಿಸಿದ ಬಳಿಕ ಈ ಭಾಗವು ಒಣಗಿರುವಂತೆ ನೋಡಿಕೊಳ್ಳಿ. ಈ ಮಿಶ್ರಣವು ಕಲೆ ಮತ್ತು ಕಪ್ಪಾಗಾವುದನ್ನು ಹೋಗಲಾಡಿಸುವಂತಹ ಗುಣವನ್ನು ಹೊಂದಿದೆ. ಇದು ಯೋನಿ ಭಾಗದಲ್ಲಿ ಪಿಎಚ್ ಮಟ್ಟವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಇದು ಯೋನಿಗೆ ಮೃಧುತ್ವ ಮತ್ತು ಕೆಟ್ಟ ವಾಸನೆ ನಿವಾರಣೆ ಮಾಡುವುದು.

Most Read: 2019ರ ವರ್ಷವು ಯಾವ್ಯಾವ ರಾಶಿಯವರಿಗೆ ಕಂಕಣ ಭಾಗ್ಯ ತಂದುಕೊಡಲಿದೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಟೊಮೆಟೊ

ಟೊಮೆಟೊ

ಟೊಮೆಟೊದಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಇದನ್ನು ಹೆಚ್ಚಾಗಿ ಚರ್ಮದ ಆರೈಕೆಯಲ್ಲಿ ಬಳಸಿಕೊಳ್ಳಲಾಗುತ್ತದೆ.

ಬಳಸುವ ವಿಧಾನ

ಬಳಸುವ ವಿಧಾನ

ಟೊಮೆಟೊದ ಹೊರಗಿನ ಭಾಗದ ಸಿಪ್ಪೆ ತೆಗೆಯಿರಿ ಮತ್ತು ಇದನ್ನು ಸರಿಯಾಗಿ ಜಜ್ಜಿಕೊಳ್ಳಿ. ಈ ಜ್ಯೂಸ್ ಗೆ ಈಗ ನೀವು ಸ್ವಲ್ಪ ಅರಶಿನ ಹಾಕಿ ಮಿಶ್ರಣ ಮಾಡಿ. ಇದನ್ನು ಸ್ವಚ್ಛಗೊಳಿಸಿ, ಒಣಗಿಸಿರುವಂತಹ ಯೋನಿ ಭಾಗಕ್ಕೆ ಹಚ್ಚಿಕೊಳ್ಳಿ ಮತ್ತು ಸುಮಾರು 5-10 ನಿಮಿಷ ಕಾಲ ನಿಧಾನವಾಗಿ ಉಜ್ಜಿಕೊಳ್ಳಿ. 20 ನಿಮಿಷ ಕಾಲ ಹಾಗೆ ಬಿಡಿ ಮತ್ತು ಇದರ ಬಳಿಕ ತಣ್ಣೀರಿನಿಂದ ತೊಳೆಯಿರಿ. ಇನ್ನು ನೀವು ವಾರದಲ್ಲಿ ಒಂದು ಸಲ ಬಳಸಿಕೊಂಡು ಉತ್ತಮ ಫಲಿತಾಂಶವನ್ನು ಪಡೆಯಬಹುದಾಗಿದೆ.

ಇದರ ಹೊರತಾಗಿ ಯೋನಿಯ ಸುತ್ತಲಿನ ಭಾಗವು ಕಪ್ಪಾಗಲು ಕೆಲವೊಂದು ಅಂಶಗಳು ಪ್ರಮುಖ ಪಾತ್ರ ವಹಿಸುವುದು. ನೀವು ಪದೇ ಪದೇ ಕೂದಲು ತೆಗೆಯಲು ಕ್ರೀಮ್ ಬಳಸಿಕೊಳ್ಳುತ್ತಿದ್ದರೆ ಅದರಿಂದಲೂ ಯೋನಿಯ ಸುತ್ತಲಿನ ಭಾಗವು ಕಪ್ಪು ಆಗುವುದು.

ಹತ್ತಿಯ ಒಳ ಉಡುಪಿನ ಬದಲು ಸಿಂಥೆಟಿಕ್ ಒಳ ಉಡುಪನ್ನು ಬಳಸಿಕೊಳ್ಳುವ ಕಾರಣದಿಂದಾಗಿ ಯೋನಿಯ ಡಿಸಾರ್ಜ್ ಮತ್ತು ಅತಿಯಾದ ಬೆವರುವಿಕೆಯಿಂದ ಉಂಟಾಗಿರುವ ಮೊಶ್ಚಿರೈಸ್ ನ್ನು ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ ಮತ್ತು ಇದರಿಂದಾಗಿ ಚರ್ಮದಲ್ಲಿ ಸೋಂಕಿಗೆ ಸಂಬಂಧಿಸಿರುವ ಬ್ಯಾಕ್ಟೀರಿಯಾಗಳು ಸೇರಿಕೊಳ್ಳುವುದು.

ಅನಾರೋಗ್ಯಕರ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋಗುವ ಕಾರಣದಿಂದಾಗಿ ಯೋನಿಯ ಡಿಸ್ಚಾರ್ಜ್ ನಿಂದಾಗಿ ಕೆಟ್ಟ ವಾಸನೆಯು ಬರಬಹುದು. ಇದರಿಂದ ನಿಮ್ಮ ಆಹಾರ ಕ್ರಮವು ಆರೋಗ್ಯವಾಗಿ ಇರಬೇಕು.

English summary

Natural Remedies Remove Darkness Skin Around Vagina

There are some natural and homemade solutions to your quest of exploring how to make your vagina lighter. It should be noted that these remedies are applicable only when there is no serious condition affecting the color of your vaginal skin. If you are suffering from any of the aforementioned medical conditions, then the natural remedies may not be able to make your vagina lighter unless the infection or ailment is treated.
Story first published: Saturday, February 9, 2019, 17:01 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more