For Quick Alerts
ALLOW NOTIFICATIONS  
For Daily Alerts

ಬರೀ ಮೂರೇ ಸ್ಟೆಪ್‌ಗಳಲ್ಲಿ ಪಾದಗಳ ಅಂದ-ಚೆಂದ ಹೆಚ್ಚಿಸಿಕೊಳ್ಳಿ!

|

ಭೂಮಿ ಮೇಲೆ ಮನುಷ್ಯನು ಪ್ರಕೃತಿ ಮೇಲೆ ಮಾಡುತ್ತಿರುವಂತಹ ಕೆಲವೊಂದು ಕುಕೃತ್ಯಗಳಿಂದಾಗಿ ವಿಶ್ವದೆಲ್ಲೆಡೆಯಲ್ಲಿ ಈಗ ಹವಾಮಾನ ವೈಪರಿತ್ಯವು ಉಂಟಾಗಿದೆ. ಹವಾಮಾನ ವೈಪರಿತ್ಯದಿಂದಾಗಿ ಸಂಪೂರ್ಣ ವಾತಾವರಣವು ಏರುಪೇರಾಗಿದೆ. ಅತಿಯಾದ ಮಳೆ, ಚಳಿ ಹಾಗೂ ಸೆಕೆಯಿಂದಾಗಿ ಪ್ರತಿಯೊಬ್ಬರು ಕಂಗೆಟ್ಟಿದ್ದಾರೆ. ಅದರಲ್ಲೂ ಭಾರತದಲ್ಲಿ ಮುಂದಿನ ಎರಡು ತಿಂಗಳು ಉರಿ ಬಿಸಿಲಿನಲ್ಲಿ ಕಾಲ ಕಳೆಯಬೇಕು. ತೀವ್ರ ಬಿಸಿಲಿನಿಂದಾಗಿ ಈಗಾಗಲೇ ನದಿ, ಕೊಳ್ಳ, ಹೊಳೆಗಳು ಬತ್ತಿ ಹೋಗಿದೆ. ನೀರಿಗಾಗಿ ಹಾಹಾಕಾರ ಉಂಟಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬೇಸಿಗೆ ಸಮಯದಲ್ಲಿ ಹೊರಗಿನ ವಾತಾವರಣಕ್ಕೆ ಅನುಗುಣವಾಗಿ ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತೀ ಅಗತ್ಯವಾಗಿದೆ.

ಅದರಲ್ಲೂ ಬಿಸಿಲಿನಿಂದಾಗಿ ನಮ್ಮ ಪಾದಗಳ ಮೇಲೆ ಅತಿಯಾದ ಒತ್ತಡ ಬೀಳುವುದು ಮತ್ತು ಇದರ ಬಗ್ಗೆ ಹೆಚ್ಚು ಕಾಳಜಿ ವಹಿಸದೆ ಇರುವುದು ಕೂಡ ಇದಕ್ಕೆ ಕಾರಣವಗಿದೆ. ಬೇಸಿಗೆ ಸಮಯದಲ್ಲಿ ಹಸ್ತಾಲಂಕಾರ ಮತ್ತು ಪಾದೋಪಚಾರ ಮಾಡಿಕೊಳ್ಳಲು ನೀವು ನಿರ್ಧರಿಸಿರಬಹುದು. ಆದರೆ ಇದಕ್ಕೆ ತುಂಬಾ ಹಣ ವೆಚ್ಚ ಮಾಡಬೇಕಾಗುತ್ತದೆ ಮತ್ತು ಪಾದೋಪಚಾರದಿಂದ ಪಾದದ ಸಮಸ್ಯೆಗಳು ನಿವಾರಣೆ ಆಗುವುದು ತುಂಬಾ ಕಡಿಮೆ. ಯಾಕೆಂದರೆ ಪಾದಗಳು ಯಾವಾಗಲೂ ಬಿಸಿಲು, ಧೂಳು ಇತ್ಯಾದಿಗಳ ದಾಳಿಗೆ ಸಿಲುಕುವುದು. ಬೇಸಿಗೆಯಲ್ಲಿ ಬಿಸಿಲು, ಧೂಳು, ಬೆವರು ಮತ್ತು ಇತರ ಕೆಲವು ಕಾರಣಗಳಿಂದಾಗಿ ನೀವು ಪಾದೋಪಚಾರ ಮಾಡಿಕೊಳ್ಳುವುದು ವ್ಯರ್ಥ. ಬೇಸಿಗೆಯಲ್ಲಿ ನೀವು ಪಾದಗಳ ಬಗ್ಗೆ ಕಾಳಜಿ ವಹಿಸಲು ಬಯಸಿದ್ದಾರೆ ಆಗ ನೀವು ಈ ಲೇಖನವನ್ನು ಮುಂದೆ ಓದುತ್ತಾ ಸಾಗಿ.

ಸತ್ತ ಚರ್ಮ ಕಿತ್ತು ಹಾಕುವುದು(ಎಕ್ಸ್ಫಾಲಿಯೇಶನ್) ಅಗತ್ಯವಾಗಿರುವುದು

ಸತ್ತ ಚರ್ಮ ಕಿತ್ತು ಹಾಕುವುದು(ಎಕ್ಸ್ಫಾಲಿಯೇಶನ್) ಅಗತ್ಯವಾಗಿರುವುದು

ಸೌಂದರ್ಯದ ಆರೈಕೆಯಲ್ಲಿ ಕಿತ್ತುಹಾಕುವಂತಹ ವಿಧಾನವು ತುಂಬಾ ಅಗತ್ಯವಾಗಿರುವುದು. ಆದರೆ ನಮ್ಮಲ್ಲಿ ಹೆಚ್ಚಿನವರು ಈ ವಿಧಾನವನ್ನು ಕಡೆಗಣಿ ಸುವರು. ಅದರಲ್ಲೂ ಪಾದದ ವಿಚಾರದಲ್ಲಿ ಇದು ಸಿದ್ಧ. ಸ್ನಾನ ಮಾಡುವ ವೇಳೆ ಪಾದಗಳನ್ನು ಉಜ್ಜಿಕೊಳ್ಳುವ ಬಗ್ಗೆ ನಾವು ಇಲ್ಲಿ ಮಾತನಾಡುತ್ತಿಲ್ಲ. ಬದಲಿಗೆ ನೀವು ಡಿ ಟ್ಯಾನಿಂಗ್ ಎಕ್ಸ್ಫಾಲಿಯೇಶನ್, ಚರ್ಮಕ್ಕೆ ಪುನರ್ಶ್ಚೇತನ ನೀಡುವಂತಹ ಎಕ್ಸ್ಫಾಲಿಯೇಶನ್ ಬಗ್ಗೆ ಹೇಳುತ್ತಿದ್ದೇವೆ. ಡಿ ಟ್ಯಾನಿಂಗ್ ಮತ್ತು ಚರ್ಮಕ್ಕೆ ಪುನರ್ಶ್ಚೇತನ ನೀಡುವ ಪಾದಗಳ ಸ್ಕ್ರಬ್ ಗಳನ್ನು ನೀವು ತುಂಬಾ ಸುಲಭವಾಗಿ ಬಳಸಿಕೊಳ್ಳಬಹುದು.ಎರಡು ಚಮಚ ಸಕ್ಕರೆ ಹರಳು ತೆಗೆದುಕೊಳ್ಳಿ. ಇದನ್ನು ಎರಡು ಚಮಚ ಆಲಿವ್ ತೈಲದ ಜತೆಗೆ ಬೆರೆಸಿಕೊಳ್ಳಿ. ಈಗ ಪಾದಗಳಿಗೆ ಸ್ಕ್ರಬ್ ಮಾಡಿ. ವಾರದಲ್ಲಿ ಎರಡು ಸಲ ನೀವು ಹೀಗೆ ಮಾಡಿ.

Most Read: ನೈಸರ್ಗಿಕವಾಗಿ ಪಾದಗಳ ತುರಿಕೆಯನ್ನು ಗುಣಪಡಿಸುವ ಮನೆಔಷಧಿಗಳು

ದೀರ್ಘ ಕಾಲ ನೆನಸಿಡಬೇಡಿ

ದೀರ್ಘ ಕಾಲ ನೆನಸಿಡಬೇಡಿ

ದೀರ್ಘಕಾಲ ತನಕ ಪಾದಗಳನ್ನು ನೀರಿನಲ್ಲಿ ಅದ್ದಿಡಬಾರದು. ಯಾಕೆಂದರೆ ಇದರಿಂದ ಪಾದಗಳು ಮತ್ತಷ್ಟು ಒಣಗುವುದು. ಯಾಕೆಂದರೆ ದೀರ್ಘ ಕಾಲ ಅದ್ದಿಟ್ಟರೆ ಅದರಿಂದ ದೇಹದಲ್ಲಿರುವ ನೈಸರ್ಗಿಕ ಎಣ್ಣೆಯು ಕಡಿಮೆ ಆಗುವುದು.

ಒರಟಾದ ಕಲ್ಲನ್ನು ನಿಯಮಿತವಾಗಿ ಬಳಕೆ ಮಾಡಿ

ಒರಟಾದ ಕಲ್ಲನ್ನು ನಿಯಮಿತವಾಗಿ ಬಳಕೆ ಮಾಡಿ

ಪಾದಗಳಿಗೆ ಸ್ಕ್ರಬ್ ಮಾಡಿಕೊಳ್ಳಲು ನೀವು ಪ್ರತಿನಿತ್ಯವು ಒರಟಾದ ಕಲ್ಲು ಬಳಸಿಕೊಳ್ಳಬೇಕು ಅಥವಾ ಎರಡು ದಿನಕ್ಕೆ ಒಮ್ಮೆಯಾದರೂ ಇದನ್ನು ಬಳಕೆ ಮಾಡಿಕೊಳ್ಳಬೇಕು. ತುಂಬಾ ನಯವಾಗಿರುವ ಪಾದಗಳಿಗೆ ಸ್ವಲ್ಪ ಮೆತ್ತಗೆ ಸ್ಕ್ರಬ್ ಮಾಡಿಕೊಳ್ಳಿ. ಪಾದವು ತುಂಬಾ ಗಡುಸಾಗಿದ್ದರೆ ಆಗ ನೀವು ನಿಯಮಿತವಾಗಿ ಒರಟಾದ ಕಲ್ಲಿನಿಂದ ಸ್ಕ್ರಬ್ ಮಾಡಿಕೊಳ್ಳುವುದು ಅತೀ ಅಗತ್ಯವಾಗಿರುವುದು.

ಸಾಕ್ಸ್ ಇಲ್ಲದೆ ಶೂ ಧರಿಸಬೇಡಿ

ಸಾಕ್ಸ್ ಇಲ್ಲದೆ ಶೂ ಧರಿಸಬೇಡಿ

ಶೂ ಧರಿಸುವಾಗ ಅಥವಾ ಪಾದವನ್ನು ಮುಚ್ಚುವಂತಹ ಯಾವುದೇ ಚಪ್ಪಲಿ ಧರಿಸುವ ವೇಳೆ ಸಾಕ್ಸ್ ಧರಿಸದೆ ಇರಬೇಡಿ. ಸಾಕ್ಸ್ ಹಾಕಿಕೊಳ್ಳುವ ಮೊದಲು ಸ್ವಲ್ಪ ಪೌಡರ್ ಹಾಕಿಕೊಳ್ಳಿ.

Most Read: ಆಲೂಗಡ್ಡೆ ಕೂದಲನ್ನು ನೀಳ ಮತ್ತು ಸೊಂಪಾಗಿಸುತ್ತದೆ-ಒಂದಲ್ಲಾ, ಎರಡಲ್ಲಾ, ಮೂರು ವಿಧಗಳಲ್ಲಿ!

ಪಾದಗಳಿಗೆ ಮೊಶ್ಚಿರೈಸ್ ಮಾಡಿ

ಪಾದಗಳಿಗೆ ಮೊಶ್ಚಿರೈಸ್ ಮಾಡಿ

ಈ ವಿಧಾನವನ್ನು ನಾವು ಹೆಚ್ಚಾಗಿ ಕಡೆಗಣಿಸುತ್ತೇವೆ. ದೇಹಕ್ಕೆ ಮೊಶ್ಚಿರೈಸ್ ಮಾಡುವ ವೇಳೆ ನಾವು ಪಾದಗಳನ್ನು ಸಂಪೂರ್ಣವಾಗಿ ಕಡೆಗಣನೆ ಮಾಡುತ್ತೇವೆ. ಪಾದಗಳನ್ನು ತೊಳೆದುಕೊಂಡ ಬಳಿಕ ಮಲಗುವ ಮೊದಲು ಪಾದಗಳಿಗೆ ಸರಿಯಾಗಿ ಮೊಶ್ಚಿರೈಸ್ ಮಾಡಿಕೊಳ್ಳಿ. ನೀವು ಇದಕ್ಕಾಗಿ ಯಾವುದೇ ಮೊಶ್ಚಿರೈಸರ್‌ನ್ನು ಬಳಸಿಕೊಳ್ಳಬಹುದು. ಇದರಿಂದ ಪಾದಗಳು ತುಂಬಾ ನಯ ಹಾಗೂ ಸುಂದರವಾಗುವುದು.

ಸನ್ ಸ್ಕ್ರೀನ್ ಮರೆಯಬೇಡಿ

ಸನ್ ಸ್ಕ್ರೀನ್ ಮರೆಯಬೇಡಿ

ಬಿಸಿಲಿಗೆ ಮನೆಯಿಂದ ಹೊರಗಡೆ ಹೋಗುವ ವೇಳೆ ನೀವು ಸನ್ ಸ್ಕ್ರೀನ್ ಹಾಕಿಕೊಳ್ಳಲು ಮರೆಯಬೇಡಿ. ಸೂರ್ಯನ ಕಿರಣಗಳಿಂದಾಗಿ ಕಪ್ಪು ಕಲೆಗಳು ಮೂಡಬಹುದು. ನೀವು ಪಾದಗಳನ್ನು ಹೊರಗಡೆ ಹೋಗುವಾಗ ಮುಚ್ಚಿಕೊಳ್ಳಿ ಅಥವಾ ಸನ್ ಸ್ಕ್ರೀನ್ ಬಳಸಿಕೊಳ್ಳಿ.

English summary

Have beautiful feet in just three steps!

No one can escape the wrath of summers and the worst part is ‘suntan snafus’! Feet can be called as the most neglected body part because hardly we take care of them. Yes, many of us are regular salon forayer, and get our required manicure and pedicure sittings done time to time but the kind of weather this is, even pedicure sessions fail to cure the damage.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X