For Quick Alerts
ALLOW NOTIFICATIONS  
For Daily Alerts

ಮುಜುಗರ ತರಿಸುವ ಪಾದಗಳ ದುರ್ವಾಸನೆ ಹೋಗಲಾಡಿಸಲು ಸರಳ ಮನೆಮದ್ದುಗಳು

|

ಒಂದು ಸಂದರ್ಭವನ್ನು ಊಹಿಸಿಕೊಳ್ಳಿ, ಯಾವುದೋ ಗಹನವಾದ ಚರ್ಚೆಯಲ್ಲಿ ಪಾಲ್ಗೊಂಡಿದ್ದವರಿಗೆ ಅನೂಚಾನವಾಗಿ ಸಹಿಸಲಸಾಧ್ಯವಾದ ವಾಸನೆ ಎದುರಾಗುತ್ತದೆ. ಆದರೆ ಈ ವಾಸನೆ ನಿಮ್ಮ ಪಾದಗಳಿಂದಲೂ ಸೂಸುತ್ತಿದೆ ಎಂದು ಇತರರಿಗೆ ಅರಿವಾಗುವ ಮುನ್ನ ನಿಮಗೆ ಅರಿವಾದರೆ ಆಗ ನಿಮಗೆ ಎದುರಾಗುವ ಮುಜುಗರ ಹಾಗೂ ಆತಂಕ ಎಷ್ಟೆಂದು ವಿವರಿಸಬೇಕಾಗಿಲ್ಲ. ಇತರರಿಗೆ ತಿಳಿಯುವ ಮುನ್ನವೇ ಅಲ್ಲಿಂದ ಪಲಾಯನ ಮಾಡುವುದು ಜಾಣತನದ ಕ್ರಮ. ಆದರೆ ಈ ಪರಿ ನಿತ್ಯವೂ ಎದುರಾದರೆ ಪರಿಸ್ಥಿತಿಯಿಂದ ಓಡಿಹೋಗುವುದು ಹೇಗೆ? ಪಾದಗಳ ವಾಸನೆ ಸರಿಸುಮಾರಾಗಿ ನಮ್ಮೆಲ್ಲರಿಗೂ ಎದುರಾಗುವ ತೊಂದರೆಯಾಗಿದ್ದು ಇದರಿಂದ ಯಾವುದೊಂದು ಪರಿಸ್ಥಿತಿಯಲ್ಲಾದರೂ ಮುಜುಗರ ಎದುರಿಸಿಯೇ ಇದ್ದೇವೆ.

embarrassing foot odour

ಪಾದಗಳ ವಾಸನೆಗೆ ಬೆವರು ಮತ್ತು ಬ್ಯಾಕ್ಟೀರಿಯಾ ಪ್ರಮುಖ ಕಾರಣವಾಗಿವೆ. ಬೆವರುವುದರಿಂದ ವಾಸನೆ ಎದುರಾಗುವುದಿಲ್ಲ, ಬದಲಿಗೆ ಈ ತೇವಭಾಗದಲ್ಲಿ ಅತಿಕ್ಷಿಪ್ರ ಗತಿಯಲ್ಲಿ ಬೆಳವಣಿಗೆ ಪಡೆಯುವ ಬ್ಯಾಕ್ಟೀರಿಯಾಗಳು ವಾಸನೆಗೆ ಕಾರಣ. ನಮ್ಮ ಬೆವರು ಚರ್ಮದಿಂದ ಹೊರಸೂಸಲ್ಪಟ್ಟಾಗ ಸಾಮಾನ್ಯವಾಗಿ ವಾಸನೆರಹಿತವಾಗಿರುತ್ತದೆ. ಆದರೆ ಕಂಕುಳು ಮತ್ತು ಜನನಾಂಗಗಳ ಭಾಗದಲ್ಲಿ ಒಸರುವ ಬೆವರು ವಾಸನೆಯಿಂದ ಕೂಡಿರುತ್ತದೆ. ಪಾದಗಳ ವಾಸನೆಯನ್ನು ಹೋಗಲಾಡಿಸಲು ನೆರವಾಗುವ ಕೆಲವು ಸುಲಭ ಮನೆಮದ್ದುಗಳನ್ನು ಈಗ ನೋಡೋಣ:

ಕಪ್ಪು ಟೀ

ಕಪ್ಪು ಟೀ

ಕಪ್ಪು ಟೀಯಲ್ಲಿ ಟ್ಯಾನಿಕ್ ಆಮ್ಲವಿದ್ದು ಇವು ವಾಸನೆ ಸೂಸುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಕ್ಷಮತೆ ಪಡೆದಿವೆ. ಹಾಗೂ ತೆರೆದಿದ್ದ ಪಾದದ ಚರ್ಮದ ಸೂಕ್ಷ್ಮರಂಧ್ರಗಳನ್ನು ಮುಚ್ಚುತ್ತವೆ. ಈ ಮೂಲಕ ಪಾದದಲ್ಲಿ ಬೆವರುವುದು ಸಹಾ ಕಡಿಮೆಯಾಗುತ್ತದೆ.

ಬಳಕೆಯ ವಿಧಾನ: ಒಂದು ಲೋಟ ನೀರಿನಲ್ಲಿ ಎರಡು ಟೀ ಬ್ಯಾಗ್ ಗಳನ್ನು ಹಾಕಿ ಹದಿನೈದು ನಿಮಿಷ ಕುದಿಸಿ. ಬಳಿಕ ಉರಿ ಆರಿಸಿ ಟೀ ಬ್ಯಾಗ್ ಗಳನ್ನು ನಿವಾರಿಸಿ ಈ ನೀರಿಗೆ ಇನ್ನಷ್ಟು ನೀರನ್ನು ಬೆರೆಸಿ. ಈ ನೀರು ಉಗುರುಬೆಚ್ಚಗಾಗುವಷ್ಟು ತಣಿದ ಬಳಿಕ ಈ ನೀರಿನಲ್ಲಿ ಎರಡೂ ಪಾದಗಳನ್ನು ಸುಮಾರು ಹದಿನೈದರಿಂದ ಮೂವತ್ತು ನಿಮಿಷ ಮುಳುಗಿಸಿಡಿ.

ಲ್ಯಾವೆಂಡರ್ ಎಣ್ಣೆ

ಲ್ಯಾವೆಂಡರ್ ಎಣ್ಣೆ

ಈ ಎಣ್ಣೆಯ ಸುವಾಸನೆ ಕೇವಲ ಆಹ್ಲಾದಕರ ಮಾತ್ರವಲ್ಲ, ಪಾದಗಳಲ್ಲಿ ವಾಸನೆ ಮೂಡಿಸುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಕ್ಷಮತೆಯನ್ನೂ ಹೊಂದಿದೆ. ಬಳಕೆಯ ವಿಧಾನ: ರಾತ್ರಿ ಮಲಗುವ ಮುನ್ನ ಕೆಲವು ತೊಟ್ಟು ಲ್ಯಾವೆಂಡರ್ ಎಣ್ಣೆಯನ್ನು ಪಾದಗಳಿಗೆ ಹಚ್ಚಿ ನಯವಾಗಿ ಮಸಾಜ್ ಮಾಡಿ ಮಲಗಿ.

ಶಿರ್ಕಾ

ಶಿರ್ಕಾ

ಪಾದಗಳ ವಾಸನೆಯನ್ನು ತೊಲಗಿಸಲು ಈ ಹುಳಿಸಿದ ದ್ರವವೂ ಉತ್ತಮ ಆಯ್ಕೆಯಾಗಿದೆ. ಶಿರ್ಕಾದಲ್ಲಿರುವ ಆಮ್ಲ ವಾಸನೆ ಬರಿಸುವ ಬ್ಯಾಕ್ಟೀರಿಯಾಗಳನ್ನು ಕೊಂದು ವಾಸನೆಯನ್ನು ಇಲ್ಲವಾಗಿಸುತ್ತದೆ.

ಬಳಕೆಯ ವಿಧಾನ: ಒಂದು ಬಕೆಟ್ ಉಗುರುಬೆಚ್ಚನೆಯ ನೀರಿನಲ್ಲಿ ಅರ್ಧ ಅಪ್ ಸೇಬಿನ ಶಿರ್ಕಾ ಬೆರೆಸಿ ಈ ನೀರಿನಲ್ಲಿ ಎರಡೂ ಪಾದಗಳನ್ನು ಸುಮಾರು ಹತ್ತರಿಂದ ಹದಿನೈದು ನಿಮಿಷ ಮುಳುಗಿಸಿಡಿ.

ಮೆಕ್ಕೆಜೋಳದ ಹಿಟ್ಟು (Corn starch)

ಮೆಕ್ಕೆಜೋಳದ ಹಿಟ್ಟು (Corn starch)

ಪಾದಗಳ ವಾಸನೆಯನ್ನು ನಿವಾರಿಸಲು ಮೆಕ್ಕೆಜೋಳದ ಹಿಟ್ಟು ಸಹಾ ಉತ್ತಮ್ ಆಯ್ಕೆಯಾಗಿದೆ. ಈ ಹಿಟ್ಟು ಬೆವರನ್ನು ಹೀರಿಕೊಂದು ಪಾದಗಳನ್ನು ತಾಜಾರೂಪದಲ್ಲಿಡಲು ಸಹಕರಿಸುತ್ತವೆ.

ಬಳಕೆಯ ವಿಧಾನ:

ಕಾಲುಚೀಲಗಳನ್ನು ತೊಡುವ ಮುನ್ನ ಕೊಂಚ ಮೆಕ್ಕೆಜೋಳದ ಹಿಟ್ಟನ್ನು ಪಾದಗಳಿಗೆ ಸಿಂಪಡಿಸಿಕೊಂಡು ನಯವಗಿ ಹರಡಿ ಬಳಿಕ ತೊಟ್ಟುಕೊಳ್ಳಿ. ಅಲ್ಲದೇ ನಿತ್ಯವೂ ನಿಮ್ಮ ಪಾದರಕ್ಷೆ ಹಾಗೂ ಪಾದಗಳಿಗೆ ಕೊಂಚ ಅಡುಗೆ ಸೋಡಾವನ್ನು ಸಿಂಪಡಿಸಿಕೊಳ್ಳುವ ಮೂಲಕವೂ ವಾಸನೆಗೆ ಕಾರಣವಾಗುವ ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತವೆ.

ಪುದಿನಾ ಲೇಪ

ಪುದಿನಾ ಲೇಪ

ಕೆಲವು ಪುದಿನಾ ಎಲೆಗಳು ಮತ್ತು ಸಕ್ಕರೆಯನ್ನು ಬೆರೆಸಿ ನುಣ್ಣಗೆ ಅರೆಯಿರಿ. ಈ ಲೇಪವನ್ನು ಹಚ್ಚಿಕೊಳ್ಳುವ ಮೂಲಕವೂ ಪಾದದ ವಾಸನೆಗೆ ಕಾರಣವಾದ ಬ್ಯಾಕ್ಟೀರಿಯಾಗಳು ಕೊಲ್ಲಲ್ಪಡುತ್ತವೆ. ಹಾಗೂ ಪಾದಗಳ ವಾಸನೆ ಈಗ ಸುವಾಸನೆಯಿಂದ ಕೂಡಿರುವಂತೆ ಮಾಡುತ್ತವೆ. ಪಾದದ ಚರ್ಮವನ್ನು ಪುದಿನಾ ತಣಿಸಿ ಆದ್ರತೆಯನ್ನು ಒದಗಿಸಿದರೆ ಸಕ್ಕರೆ ಪಾದದ ಚರ್ಮದ ಸತ್ತ ಜೀವಕೋಶಗಳನ್ನು ನಿವಾರಿಸುತ್ತದೆ

ಬಳಕೆಯ ವಿಧಾನ: ಒಂದು ದೊಡ್ಡ ಚಮಚ ಸಕ್ಕರೆ ಮತ್ತು ಎರಡು ದೊಡ್ಡ ಚಮಚದಷ್ಟು ಪುದಿನಾ ಎಲೆಗಳನ್ನು ಒಂದು ಬೋಗುಣಿಗೆ ಹಾಕಿ ನುಣ್ಣಗೆ ಅರೆಯಿರಿ. ಇದಕ್ಕೆ ಕೊಂಚವೇ ನೀರು ಹಾಕಿ ಪಾದಗಳಿಗೆ ನಿತ್ಯವೂ ಹಚ್ಚಿಕೊಂಡು ಮಸಾಜ್ ಮಾಡಿ.

ಎಪ್ಸಂ ಉಪ್ಪು

ಎಪ್ಸಂ ಉಪ್ಪು

ಈ ಉಪ್ಪಿನಲ್ಲಿ ಹಲವಾರು ಆರೋಗ್ಯಕರ ಗುಣಗಳಿವೆ ಹಾಗೂ ಬೆವರುವುದನ್ನು ಕಡಿಮೆಗೊಳಿಸುವ ಹಾಗೂ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಗುಣವನ್ನೂ ಹೊಂದಿದೆ.

ಬಳಕೆಯ ವಿಧಾನ: ಒಂದು ಬಕೆಟ್ ಉಗುರುಬೆಚ್ಚನೆಯ ನೀರಿನಲ್ಲಿ ಎರಡು ಕಪ್ ಎಪ್ಸಂ ಉಪ್ಪನ್ನು ಬೆರೆಸಿ ಈ ನೀರಿನಲ್ಲಿ ಪಾದಗಳನ್ನು ಸುಮಾರು ಹದಿನೈದು ನಿಮಿಷ ಮುಳುಗಿಸಿಡಿ. ಈ ವಿಧಾನವನ್ನು ದಿನಕ್ಕೆರಡು ಬಾರಿ ಅನುಸರಿಸಿ.

ಅಕ್ಕಿ ನೆನೆಸಿದ ನೀರು

ಅಕ್ಕಿ ನೆನೆಸಿದ ನೀರು

ಪಾದಗಳ ವಾಸನೆಯನ್ನು ಶಾಶ್ವತವಾಗಿ ತೊಲಗಿಸಲು ಉತ್ತಮ ವಿಧಾನವೆಂದರೆ ಅಕ್ಕಿ ನೆನೆಸಿದ ನೀರಿನಲ್ಲಿ ಪಾದಗಳನ್ನು ಮುಳುಗಿಸುವುದು.

ಬಳಕೆಯ ವಿಧಾನ: ಒಂದು ಬಕೆಟ್ ನೀರಿಗೆ ಕೊಂಚ ಬೆಳ್ತಿಗೆ ಅಕ್ಕಿಯನ್ನು ಹಾಕಿ ಸುಮಾರು ಅರ್ಧ ಗಂಟೆ ಕಾಲ ಬಿಡಿ. ಬಳಿಕ ಈ ನೀರನ್ನು ಸೋಸಿ ಅಕ್ಕಿಯನ್ನು ನಿವಾರಿಸಿ. ಸೋಸಿದ ನೀರನ್ನು ಒಂದು ಬಕೆಟ್ ನಲ್ಲಿ ತುಂಬಿಸಿ ಈ ನೀರಿನಲ್ಲಿ ಪಾದಗಳನ್ನು ಸುಮಾರು ಹತ್ತರಿಂದ ಹದಿನೈದು ನಿಮಿಷದಷ್ಟು ಹೊತ್ತು ಮುಳುಗಿಸಿಡಿ. ಈ ವಿಧಾನವನ್ನು ವಾರಕ್ಕೆರಡು ಬಾರಿ ಪುನರಾವರ್ತಿಸಿ.

ಸೆಡಾರ್ ವುಡ್ ಎಣ್ಣೆ ಮತ್ತು ಕೊಬ್ಬರಿ ಎಣ್ಣೆ

ಸೆಡಾರ್ ವುಡ್ ಎಣ್ಣೆ ಮತ್ತು ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆಯಲ್ಲಿರುವ ಲಾರಿಕ್ ಆಮ್ಲಕ್ಕೆ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಕ್ಷಮತೆಯಿದೆ ಹಾಗೂ ತನ್ಮೂಲಕ ಪಾದಗಳ ವಾಸನೆಯನ್ನು ಇಲ್ಲವಾಗಿಸುತ್ತವೆ.

ಬಳಕೆಯ ವಿಧಾನ: ಸಮಪ್ರಮಾಣದಲ್ಲಿ ಕೊಬ್ಬರಿ ಎಣ್ಣೆ ಮತ್ತು ಸೆಡಾರ್ ವುಡ್ ಅವಶ್ಯಕ ತೈಲವನ್ನು ಬೆರೆಸಿ ಈ ತೈಲವನ್ನು ಪಾದಗಳಿಗೆ ಹಚ್ಚಿ ಮಸಾಜ್ ಮಾಡಿ. ಈ ಮೂಲಕ ಪಾದಗಳ ವಾಸನೆ ಇಲ್ಲವಾಗುತ್ತವೆ.

Read more about: beauty body care
English summary

Get rid of embarrassing foot odour with these simple home remedies!

In this Article we sharing with you simple home remedies to rid of embarrassing foot odour, have a look...
X
Desktop Bottom Promotion