For Quick Alerts
ALLOW NOTIFICATIONS  
For Daily Alerts

ಸ್ಟ್ರೆಚ್ ಮಾರ್ಕ್ಸ್ ನಿವಾರಣೆಗೆ ತೆಂಗಿನ ಎಣ್ಣೆ ಎಂಬ ವರ

|

ಸ್ಟ್ರೆಚ್ ಮಾರ್ಕ್ಸ್ ಎಂಬುದು ವೈದ್ಯಕೀಯ ತೊಂದರೆಯಲ್ಲ. ಆದರೆ ಹೆಂಗಸರನ್ನು ಅತಿ ಹೆಚ್ಚು ಕಾಡುವ ಸಮಸ್ಯೆಯಂತೂ ಹೌದು. ತಾಯ್ತನ ಎಂಬ ಸಂತಸ ಹಾಗೂ ಹೆಮ್ಮೆ ಅನುಭವಿಸುತ್ತಲೇ ಈ ಸ್ಟ್ರೆಚ್ ಮಾರ್ಕ್ಸ್ ಭೂತ ಕೂಡ ಪಕ್ಕದಲ್ಲೇ ಆವರಿಸುತ್ತದೆ. ಇದೊಂದೇ ಅಲ್ಲದೆ ತೂಕ ಕಡಿಮೆ ಆದಾಗ, ಋತುಮತಿ ಆದಾಗ ಕೂಡ ಹೊಟ್ಟೆಯ ಮೇಲೆ, ತೊಡೆಗಳ ಮೇಲೆ ಹಾಗೆಯೇ ಕೆಲವೊಮ್ಮೆ ತೋಳುಗಳ ಮೇಲೆ ಮೂಡಿಬಿಡುತ್ತದೆ ಈ ಸ್ಟ್ರೆಚ್ ಮಾರ್ಕ್ಸ್. ಇದು ಮಹಿಳೆಯರಲ್ಲಿ ಮಾತ್ರವಲ್ಲದೆ ಗಂಡಸರಲ್ಲಿಯೂ ಸಹ ತೋರುತ್ತದೆ. ನಮ್ಮ ಚರ್ಮವು ತನ್ನ ಸಾಮರ್ಥ್ಯಕ್ಕೂ ಮೀರಿ ಎಳೆದಾಗ ಅಥವಾ ಹಾಗೆಯೇ ಚರ್ಮವು ತುಂಬಾ ಕಡಿಮೆ ಸಮಯದಲ್ಲಿ ಹೆಚ್ಚು ಬೆಳೆದಾಗ ಈ ರೀತಿಯ ಗುರುತು ಮೂಡಿಬಿಡುತ್ತದೆ. ಅದರಲ್ಲಿಯೂ ಜಿಮ್ ಗೆ ಹೋಗುವ ಗಂಡಸರು ಅತಿ ಕಡಿಮೆ ಸಮಯದಲ್ಲಿ ಮಾಂಸಖಂಡಗಳನ್ನು ಬೆಳೆಸುವುದು ಹಾಗೂ ಕುಗ್ಗಿಸುವುದು ಮಾಡುವಾಗ ಈ ಸ್ಟ್ರೆಚ್ ಮಾರ್ಕ್ಸ್ ತಪ್ಪಿದ್ದಲ್ಲ.

ಈ ಸ್ಟ್ರೆಚ್ ಮಾರ್ಕ್ಸ್ ಅನ್ನು ಕಾಣದಂತೆ ಮಾಡಲು ಅಥವಾ ಕಡಿಮೆ ಮಾಡಲು ಅನೇಕರು ಹರಸಾಹಸ ಮಾಡುತ್ತಾ ಇರುತ್ತಾರೆ. ಇನ್ನೂ ಕೆಲವರಂತೂ ಮುಂಜಾಗರೂಕತೆ ವಹಿಸಿ ಸ್ಟ್ರೆಚ್ ಮಾರ್ಕ್ಸ್ ಬಾರದೆ ನೋಡಿಕೊಳ್ಳಬೇಕೆಂದು ಕೂಡ ಪ್ರಯತ್ನಿಸುತ್ತಾರೆ. ಇದರಲ್ಲಿ ಒಂದು ಮುಖ್ಯ ಕೆಲಸ ಎಂದರೆ ತೆಂಗಿನ ಎಣ್ಣೆಯನ್ನು ನಿಯಮಿತವಾಗಿ ಹಚ್ಚಿಕೊಳ್ಳುವುದು. ತೆಂಗಿನ ಎಣ್ಣೆಯೇ? ಏಕೆ ಈ ತೆಂಗಿನ ಎಣ್ಣೆ ಎಂಬುದು ನಿಮ್ಮ ಅನುಮಾನವಾದರೆ ಈ ಎಣ್ಣೆಯಲ್ಲಿನ ಪೋಷಕಾಂಶಗಳು ನಿಮಗೆ ತಿಳಿದಿಲ್ಲ ಎಂದೇ ಅರ್ಥ.

ತೆಂಗಿನ ಎಣ್ಣೆ ಎಂಬುದು ಮಾಧ್ಯಮ ಗಾತ್ರದ ಫ್ಯಾಟಿ ಆಸಿಡ್ ಇದರಲ್ಲಿ ಫ್ರೀ ಫ್ಯಾಟಿ ಆಸಿಡ್ ಮಾತ್ರವಲ್ಲದೆ ಲಾರಿಕ್ ಆಸಿಡ್ ಹಾಗೂ ಕಾಪ್ರಿಕ್ ಆಸಿಡ್ ಕೂಡ ಇವೆ. ಇದು ಆಂಟಿ ಬಾಕ್ಟೇರಿಯಲ್, ಆಂಟಿ ಫನ್ಗಲ್ ಹಾಗೂ ಆಂಟಿ ವೈರಲ್ ಗುಣಗಳನ್ನು ಹೊಂದಿದೆ. ತೆಂಗಿನ ಎಣ್ಣೆಯನ್ನು ನಮ್ಮ ಚರ್ಮ ಸುಲಭವಾಗಿ ಹೀರಿಕೊಳ್ಳುತ್ತದೆ. ಇದು ಫ್ರೀ ರಾಡಿಕಲ್ಸ್ ಡ್ಯಾಮೇಜ್ ಅನ್ನು ಕಡಿಮೆ ಮಾಡುವುದೇ ಅಲ್ಲದೆ ಒಟ್ಟಾರೆಯಾಗಿ ಚರ್ಮದ ಗುಣಮಟ್ಟವನ್ನು ಉತ್ತಮಗೊಳಿಸುತ್ತದೆ. ಹಾಗೂ ಒಣ ಚರ್ಮ ಹಾಗೂ ಸುಕ್ಕು ಚರ್ಮವನ್ನು ಕಡಿಮೆ ಮಾಡುತ್ತದೆ.

ತೆಂಗಿನ ಎಣ್ಣೆ ಸ್ಟ್ರೆಚ್ ಮಾರ್ಕ್ಸ್ ಅನ್ನು ಕಡಿಮೆ ಮಾಡುತ್ತದೆಯೇ?

ತೆಂಗಿನ ಎಣ್ಣೆ ಸ್ಟ್ರೆಚ್ ಮಾರ್ಕ್ಸ್ ಅನ್ನು ಕಡಿಮೆ ಮಾಡುತ್ತದೆಯೇ?

ಮಾರುಕಟ್ಟೆಯಲ್ಲಿ ಸಿಗುವ ಅನೇಕ ರೀತಿಯ ತೆಂಗಿನ ಎಣ್ಣೆಗಳು ಗುಣಮಟ್ಟದಲ್ಲಿ ಬಹಳ ವೆತ್ಯಾಸವಾಗಿರುತ್ತವೆ. ವರ್ಜಿನ್ ಕೋಕನಟ್ ಆಯಿಲ್ ಎಲ್ಲಕ್ಕಿಂತಲೂ ಹೆಚ್ಚು ಉತ್ತಮ. ಅದು ತೆಂಗಿನ ಎಣ್ಣೆಯ ಶುದ್ದ ರೂಪ ಮತ್ತು ಚರ್ಮಕ್ಕೆ ಬಹಳ ಉತ್ತಮವಾದುದು. ಇದು ನಿಜವಾಗಿಯೂ ಸ್ಟ್ರೆಚ್ ಮಾರ್ಕ್ಸ್ ಕಡಿಮೆ ಮಾಡುವಲ್ಲಿ ಸಹಾಯಕವೇ? ಮೊದಲೇ ಹೇಳಿದಂತೆ ಸ್ಟ್ರೆಚ್ ಮಾರ್ಕ್ಸ್ ಅನ್ನುವುದು ನಮ್ಮ ಚರ್ಮದ ಕೆಳಗಿನ ಪದರಗಳು ತಮ್ಮ ಸಾಮರ್ಥ್ಯಕ್ಕೆ ಮೀರಿ ಹಿಗ್ಗಿದಾಗ ಚರ್ಮ ಹರಿದಂತೆ ಆಗಿ ಮೂಡುತ್ತವೆ. ಚರ್ಮವು ತುಂಬಾ ಹಿಗ್ಗಿದಾಗ ಅದು ತನ್ನಲ್ಲಿನ ಕೊಲ್ಲಜಿನ್ ಅಂಶವನ್ನು ಒಡೆಯುತ್ತದೆ. ಈ ಪ್ರಕ್ರಿಯೆಯಲ್ಲಿ ಚರ್ಮದ ಒಳಗಿನ ರಕ್ತನಾಳಗಳು ಹೊರಗೆ ಕಾಣುತ್ತವೆ. ಇದರಿಂದಲೇ ಸ್ಟ್ರೆಚ್ ಮಾರ್ಕ್ಸ್ ಕೆಂಪು ಅಥವಾ ನೇರಳೆ ಬಣ್ಣದಲ್ಲಿ ಕಾಣುತ್ತದೆ ಹಾಗೂ ಚರ್ಮದಿಂದ ಸ್ವಲ್ಪ ಹಿಗ್ಗಿದಂತೆಯೂ ಕಾಣುತ್ತದೆ.

ತೆಂಗಿನ ಎಣ್ಣೆಯಿಂದ ಕೂಡ ಸ್ಟ್ರೆಚ್ ಮಾರ್ಕ್ಸ್ ತಡೆಯಬಹುದು

ತೆಂಗಿನ ಎಣ್ಣೆಯಿಂದ ಕೂಡ ಸ್ಟ್ರೆಚ್ ಮಾರ್ಕ್ಸ್ ತಡೆಯಬಹುದು

ಒಣ ಚರ್ಮವು ತೇವಾಂಶದಿಂದ ಕೂಡಿದ ಚರ್ಮಕ್ಕಿಂತ ಹೆಚ್ಚು ತೊಂದರೆಗೆ ಒಳಗಾಗುತ್ತದೆ. ಒಣ ಚರ್ಮಕ್ಕೆ ಹಿಗ್ಗುವ ಸಾಮರ್ಥ್ಯ ಕಡಿಮೆ ಹಾಗೂ ಬೇಗನೆ ಹರಿಯುವ ಅವಕಾಶವೂ ಹೆಚ್ಚು. ಚರ್ಮದ ತೇವಾಂಶ ಕಾಪಾಡಿಕೊಳ್ಳುವುದರಿಂದ ಸ್ಟ್ರೆಚ್ ಮಾರ್ಕ್ಸ್ ಅನ್ನು ಬಾರದೆ ಅಥವಾ ಕಡಿಮೆ ಆಗುವಂತೆ ನೋಡಿಕೊಳ್ಳಬಹುದು. ತೆಂಗಿನ ಎಣ್ಣೆಯು ಚರ್ಮದ ತೇವ ಕಾಪಾಡುವುದೇ ಅಲ್ಲದೆ ಚರ್ಮವನ್ನು ಮೆತ್ತಗೆ ಹಾಗೂ ನುಣುಪಾಗಿ ಇಡುತ್ತದೆ. ಇತರೆ ಮುಂಜಾಗರೂಕ ಕ್ರಮಗಳಾದ ಹೆಚ್ಚಿಗೆ ನೀರು ಕುಡಿಯುವುದರ ಜೊತೆಗೆ ಈ ತೆಂಗಿನ ಎಣ್ಣೆ ಕೂಡ ಬಳಸುವುದರಿಂದ ಸ್ಟ್ರೆಚ್ ಮಾರ್ಕ್ಸ್ ಬಾರದೆ ತಡೆಯಬಹುದು.

Most Read:ರಾತ್ರಿ ಮಲಗುವ ಮುನ್ನ, ಹೀಗೆ ಮಾಡಿದರೆ, ಮುಂಜಾನೆ ಎದ್ದಾಗ ಮುಖ ಕಾಂತಿಯುತವಾಗಿರುತ್ತದೆ

ನಮ್ಮ ದೇಹದಲ್ಲಿ ಅನೇಕ ಕಡೆ ಸ್ಟ್ರೆಚ್ ಮಾರ್ಕ್ಸ್ ಬರುವ ಸಾಧ್ಯತೆಗಳು ಇವೆ. ಇವುಗಳಲ್ಲಿ ಮುಖ್ಯವಾದುವು

ನಮ್ಮ ದೇಹದಲ್ಲಿ ಅನೇಕ ಕಡೆ ಸ್ಟ್ರೆಚ್ ಮಾರ್ಕ್ಸ್ ಬರುವ ಸಾಧ್ಯತೆಗಳು ಇವೆ. ಇವುಗಳಲ್ಲಿ ಮುಖ್ಯವಾದುವು

*ಹೊಟ್ಟೆಯ ಭಾಗ

*ಸ್ತನಗಳು

*ತೊಡೆಯ ಭಾಗ

*ಭುಜ ಹಾಗೂ ತೋಳು

ಸ್ಟ್ರೆಚ್ ಮಾರ್ಕ್ಸ್ ಬರುವ ಕಾರಣಗಳು

ಸ್ಟ್ರೆಚ್ ಮಾರ್ಕ್ಸ್ ಬರುವ ಕಾರಣಗಳು

*ತಾಯ್ತನ (ಗರ್ಭಧಾರಣೆ)

*ಮಾಂಸಖಂಡ ಬೆಳವಣಿಗೆ

*ಸ್ತನ ಬೆಳವಣಿಗೆ

*ತೂಕ ಹೆಚ್ಚಾಗುವುದು.

ಸ್ಟ್ರೆಚ್ ಮಾರ್ಕ್ಸ್‌ಗೆ ತೆಂಗಿನ ಎಣ್ಣೆ ಬಳಸುವ ವಿಧಾನ

ಸ್ಟ್ರೆಚ್ ಮಾರ್ಕ್ಸ್‌ಗೆ ತೆಂಗಿನ ಎಣ್ಣೆ ಬಳಸುವ ವಿಧಾನ

ಸ್ಟ್ರೆಚ್ ಮಾರ್ಕ್ಸ್ ನಮಗೆ ದೊಡ್ಡ ತೊಂದರೆಯೇನೂ ಕೊಡುವುದಿಲ್ಲ. ಇದು ವೈದ್ಯಕೀಯ ತೊಂದರೆಯೂ ಅಲ್ಲ. ಆದರೆ ಕೆಲವೊಮ್ಮೆ ಸ್ವಲ್ಪ ಉರಿ ಅಥವಾ ನಾವೇ ಆಗಬಹುದು. ಒಂದು ಬಾರಿ ಸ್ಟ್ರೆಚ್ ಮಾರ್ಕ್ಸ್ ಬಂದರೆ ಅದನ್ನು ಸರ್ಜರಿ ಮಾಡಿ ಮಾತ್ರವೇ ಸಂಪೂರ್ಣವಾಗಿ ಹೋಗಲಾಡಿಸಬಹುದು. ಆದರೆ ಇದನ್ನು ಕಾಲಕ್ರಮೇಣ ಚರ್ಮದ ತೇವಾಂಶ ಕಾಪಾಡುವುದರ ಮೂಲಕ ಹಾಗೂ ತೆಂಗಿನ ಎಣ್ಣೆ ಬಳಸುವುದರ ಮೂಲಕ ಕಡಿಮೆ ಖಂಡಿತ ಮಾಡಿಕೊಳ್ಳಬಹುದು. ಆ ಕಲೆಗಳನ್ನು ಸ್ವಲ್ಪ ಸ್ವಲ್ಪವಾಗಿ ಮಾಯವಾಗುವಂತೆ ಮಾಡಬಹುದು. ತೆಂಗಿನ ಎಣ್ಣೆ ಅಥವಾ ಯಾವುದೇ ಬೇರೆ ಕ್ರೀಮ್ ಅಥವಾ ಲೋಶನ್ ಹಚ್ಚುವುದರಿಂದ ಸಂಪೂರ್ಣವಾಗಿ ತೊಲಗಿಸದೆ ಹೋದರು ಸಹ ಕಡಿಮೆ ಮಾಡುವುದು ಸಾಧ್ಯ. ವೈಜ್ಞಾನಿಕವಾಗಿ ಸಹ ತೆಂಗಿನ ಎಣ್ಣೆ ಸ್ಟ್ರೆಚ್ ಮಾರ್ಕ್ಸ್ ಅನ್ನು ನಿವಾರಿಸುತ್ತದೆ ಎಂದು ಹೇಳಲಾಗಿಲ್ಲ. ಆದರೆ ಚರ್ಮದ ಒಟ್ಟಾರೆ ಅರ್ರೋಗ್ಯ ಹಾಗೂ ತೇವಾಂಶವನ್ನು ಅಭಿವೃದ್ದಿ ಮಾಡುತ್ತದೆ ಆದ್ದರಿಂದ ಖಂಡಿತವಾಗಿಯೂ ಸ್ಟ್ರೆಚ್ ಮಾರ್ಕ್ಸ್ ಕಾಣುವುದನ್ನು ಕಡಿಮೆ ಮಾಡುತ್ತದೆ. ಸ್ಟ್ರೆಚ್ ಮಾರ್ಕ್ಸ್ಗೆ ತೆಂಗಿನ ಎಣ್ಣೆಯನ್ನು ಹೇಗೆ ಬಳಸಬಹುದು ಇದರ ಉಪಯೋಗಗಳು ಹೇಗೆ ಎಂಬುದನ್ನು ಈ ಕೆಳಗೆ ನೋಡೋಣ...

ತಡೆಗಟ್ಟುವುದು

ತಡೆಗಟ್ಟುವುದು

ತೆಂಗಿನ ಎಣ್ಣೆಯಲ್ಲಿನ ಕೆಲವು ಅಂಶಗಳು ಚರ್ಮದ ತೇವಾಂಶವನ್ನು ಕಾಪಾಡುತ್ತದೆ. ಇದರಿಂದ ಚರ್ಮವು ತನ್ನ ಹಿಗ್ಗುವಿಕೆಯನ್ನು ಸುಲಭವಾಗಿ ಮಾಡುತ್ತದೆ. ಹಾಗೆಯೇ ಇದರಲ್ಲಿ ಇರುವ ಲಾರಿಕ್ ಆಸಿಡ್ ಇದನ್ನು ಚರ್ಮದ ಒಳ ಪದರಗಳಲ್ಲಿ ಬೇಗನೆ ಹೀರಿಕೊಳ್ಳುವಂತೆ ಮಾಡುತ್ತದೆ. ಇದರಿಂದ ನೀವು ತೆಂಗಿನ ಎಣ್ಣೆಯನ್ನು ಚರ್ಮದ ಮೇಲೆ ಹಚ್ಚಿ ಸ್ವಲ್ಪ ಮಸ್ಸಾಜ್ ಮಾಡಿ ನಂತರ ಸ್ನಾನ ಮಾಡಿದರೆ ಒಳ್ಳೆಯದು.

Most Read:ಒಡೆದ ಹಿಮ್ಮಡಿಗಳ ಸಮಸ್ಯೆಗೆ 'ತೆಂಗಿನೆಣ್ಣೆ' ಪರ್ಫೆಕ್ಟ್ ಮನೆಮದ್ದು

ವಾಸಿ ಮಾಡುವ ಗುಣ

ವಾಸಿ ಮಾಡುವ ಗುಣ

ತೆಂಗಿನ ಎಣ್ಣೆಯು ಚರ್ಮದ ಉರಿಯೂತ ಹಾಗೂ ಗಾಯಗಳನ್ನು ವಾಸಿ ಮಾಡುವಲ್ಲಿ ಬಹಳ ಸಹಾಯಕ. ಇದರಲ್ಲಿರುವ ಪೋಷಕಾಂಶಗಳು ಗಾಯ ಮಾಸುವ ಸಮಯವನ್ನು ಕಡಿಮೆ ಮಾಡುತ್ತವೆ. ಸ್ಟ್ರೆಚ್ ಮಾರ್ಕ್ಸ್ ತರುವ ನವೆಯನ್ನು ಖಂಡಿತವಾಗಿ ಕಮ್ಮಿ ಮಾಡುವ ಗುಣ ಹೊಂದಿದೆ.

ಚರ್ಮದ ಒಟ್ಟಾರೆ ಅಂದ ಉತ್ತಮಪಡಿಸುತ್ತದೆ

ಚರ್ಮದ ಒಟ್ಟಾರೆ ಅಂದ ಉತ್ತಮಪಡಿಸುತ್ತದೆ

ತೆಂಗಿನ ಎಣ್ಣೆಯಲ್ಲಿ ಚರ್ಮವನ್ನು ಹೊಳೆಯುವಂತೆ ಮಾಡುವ ಗುಣ ಇದೆ. ಇದನ್ನು ಸ್ಟ್ರೆಚ್ ಮಾರ್ಕ್ಸ್ ಮೇಲೆ ಹಚ್ಚುತ್ತಾ ಬಂದರೆ ಅದರ ಕಲೆಗಳು ಕಮ್ಮಿಯಾಗಿ ಚರ್ಮಕ್ಕೆ ಹೊಳಪು ಬರುತ್ತದೆ. ನಾವು ತೆಂಗಿನ ಎಣ್ಣೆಯನ್ನು ಮಾತ್ರ ಅಲ್ಲದೆ ಅದರಲ್ಲಿ ನಿಂಬೆ ರಸವನ್ನು ಕೂಡ ಸೇರಿಸಿ ಬಳಸಬಹುದು.

ತೆಂಗಿನ ಎಣ್ಣೆಯ ಅಡ್ಡ ಪರಿಣಾಮಗಳು

ತೆಂಗಿನ ಎಣ್ಣೆಯ ಅಡ್ಡ ಪರಿಣಾಮಗಳು

ಸಾಮಾನ್ಯವಾಗಿ ಎಲ್ಲೆಡೆ ತೆಂಗಿನ ಎಣ್ಣೆಯನ್ನು ಉಪಯೋಗಿಸುವುದು ಬಹಳ ಸುರಕ್ಷಿತ ಎಂದು ಪರಿಗಣಿಸಲಾಗಿದೆ. ಎಷ್ಟೋ ಕಡೆ ತೆಂಗಿನ ಎಣ್ಣೆಯನ್ನು ಅಡುಗೆಯಲ್ಲಿಯೂ ಬಳಸುವುದನ್ನು ನೋಡಬಹುದು. ಆದರೂ ನಿಮಗೇನಾದರೂ ತೆಂಗಿನಕಾಯಿಗಾಗಲಿ ಅಥವಾ ಹೆಜ಼ಲ್ ನಟ್ ಅಥವಾ ವಾಲ್ ನಟ್ ಗೆ ಅಲ್ಲರ್ಜಿ ಇದ್ದರೆ ತೆಂಗಿನ ಎಣ್ಣೆಯನ್ನು ಬಳಸದೆ ಇರುವುದು ಉತ್ತಮ. ಸ್ಟ್ರೆಚ್ ಮಾರ್ಕ್ಸ್ ನಮ್ಮ ದೇಹದ ಮೇಲೆ ಇರುವುದು ಸಾಮಾನ್ಯ. ಕೆಲವರು ಅದನ್ನು ಖುಷಿಯಿಂದ ಸ್ವೀಕರಿಸುತ್ತಾರೆ. ಅದರಲ್ಲೂ ಈ ಸ್ಟ್ರೆಚ್ ಮಾರ್ಕ್ಸ್ ತಾಯ್ತಾನದಿಂದ ಬಂದಾಗ ಅವನ್ನು ಎಷ್ಟೋ ಸಂಭ್ರಮದಿಂದ ಧರಿಸುತ್ತಾರೆ. ಆದರೂ ನಿಮಗೆ ಬೇಕಾದಲ್ಲಿ ಸ್ಟ್ರೆಚ್ ಮಾರ್ಕ್ಸ್ ಅನ್ನು ಕಡಿಮೆ ಮಾಡಲು ಕೆಲವು ಉಪಾಯಗಳನ್ನು ಪ್ರಯತ್ನಿಸುವುದರಲ್ಲಿ ತಪ್ಪಿಲ್ಲ. ತೆಂಗಿನ ಎಣ್ಣೆಯಿಂದ ಸ್ಟ್ರೆಚ್ ಮಾರ್ಕ್ಸ್ ಸಂಪೂರ್ಣವಾಗಿ ತೊಲಗದೆ ಇದ್ದರೂ ಸಹ ಕಡಿಮೆ ಮಾಡುವುದರಲ್ಲಿ ಸಂದೇಹವಿಲ್ಲ. ನೀವು ಪ್ರಯತ್ನಿಸಿ ನೋಡಿ.

English summary

Coconut Oil for Stretch Marks

Coconut oil is a medium chain fatty acid comprised of free fatty acids, including lauric acid and capric acid. It has antimicrobial, antifungal, and antiviral properties. Coconut oil absorbs easily into skin, where it may prevent free radical damage. It may also improve the quality and overall appearance of dry, damaged skin.
Story first published: Tuesday, January 15, 2019, 11:54 [IST]
X
Desktop Bottom Promotion