For Quick Alerts
ALLOW NOTIFICATIONS  
For Daily Alerts

ಒಡೆದ ಹಿಮ್ಮಡಿಗಳ ಸಮಸ್ಯೆಗೆ 'ತೆಂಗಿನೆಣ್ಣೆ' ಪರ್ಫೆಕ್ಟ್ ಮನೆಮದ್ದು

|

ಚಳಿಗಾಲ ಬಂದಾಗ ಇಡೀ ದೇಹವೇ ತುಂಬಾ ಕಷ್ಟಪಡಬೇಕಾಗುತ್ತದೆ. ತುಟಿಗಳು, ಹಿಮ್ಮಡಿಗಳು, ಚರ್ಮ ಹೀಗೆ ದೇಹದ ಹೊರಗಿನ ಪ್ರತಿಯೊಂದು ಭಾಗವು ತುಂಬಾ ಸಮಸ್ಯೆಗೆ ಗುರಿಯಾಗುವುದು. ಯಾಕೆಂದರೆ ಈ ಸಮಯದಲ್ಲಿ ಹಿಮ್ಮಡಿಗಳು ಒಡೆಯುವುದು ಸಾಮಾನ್ಯ. ಹಿಮ್ಮಡಿಗಳು ಮಾತ್ರವಲ್ಲದೆ ತುಟಿಗಳು ಕೂಡ ಒಡೆದು ಹೋಗಿ ಚರ್ಮವು ಕಿತ್ತು ಬರುವುದು. ಹಿಮ್ಮಡಿ ಒಡೆಯುವುದರಿಂದ ಅದರ ಬಿರುಕುಗಳಿಂದ ರಕ್ತವು ಸ್ರಾವವಾಗಿ, ನೋವು ಅತಿಯಾಗಿ ಕಾಣಿಸಿಕೊಂಡು ನಡೆದಾಡಲು ಕಷ್ಟಪಡಬೇಕಾಗುತ್ತದೆ.

Coconut Oil for Cracked Heels

ಒಣ ಚರ್ಮಕ್ಕೆ ಸರಿಯಾಗಿ ಚಿಕಿತ್ಸೆ ಮಾಡದೆ ಇದ್ದರೆ ಆಗ ಹಿಮ್ಮಡಿ ಒಡೆಯುವುದು. ಒಮ್ಮೆ ಹಿಮ್ಮಡಿಯು ಒಡೆದರೆ ಅದಕ್ಕೆ ಚಿಕಿತ್ಸೆ ನೀಡುವುದು ತುಂಬಾ ಕಠಿಣವಾಗುವುದು. ತೆಂಗಿನೆಣ್ಣೆಯಿಂದ ಒಡೆದ ಹಿಮ್ಮಡಿಯನ್ನು ನಿವಾರಣೆ ಮಾಡಬಹುದು. ಇದು ಹೇಗೆ ಎಂದು ನೀವು ಈ ಲೇಖನ ಮೂಲಕ ತಿಳಿಯಿರಿ.

ಉಪಯೋಗಗಳು

ಉಪಯೋಗಗಳು

ತೆಂಗಿನೆಣ್ಣೆಯನ್ನು ಚರ್ಮದ ಆರೈಕೆಯಲ್ಲಿ ಅದ್ಭುತವಾಗಿರುವ ನೈಸರ್ಗಿಕ ಸಾಮಗ್ರಿ ಎಂದು ಪರಿಗಣಿಸಲಾಗಿದೆ. ಅದಾಗ್ಯೂ, ಇದು ಒಣ ಚರ್ಮಕ್ಕೆ ನೇರವಾಗಿ ಲಾಭ ನೀಡುವುದು. ಇದು ಚರ್ಮಕ್ಕೆ ತೇವಾಂಶ ನೀಡುವುದು ಮಾತ್ರವಲ್ಲದೆ ಚರ್ಮದಲ್ಲಿರುವಂತಹ ಸತ್ತ ಕೋಶಗಳನ್ನು ಕಿತ್ತು ಹಾಕುವುದು. ಚರ್ಮದ ಕೆಳಭಾಗದಲ್ಲಿ ಇರುವಂತಹ ಕೆಲವೊಂದು ಅಂಗಾಂಶಗಳನ್ನು ಬಲಪಡಿಸಲು ತೆಂಗಿನೆಣ್ಣೆಯು ತುಂಬಾ ನೆರವಾಗುವುದು ಎಂದು ಪೋಷಕಾಂಶ ತಜ್ಞ ಕಿಂಬರ್ಲಿ ಸ್ನೈಡರ್ ಹಪ್ಪಿಂಗ್ಟನ್ ಪೋಸ್ಟ್ ನಲ್ಲಿ ಹೇಳಿದ್ದಾರೆ. ತೆಂಗಿನೆಣ್ಣೆಯು ಪಾದಗಳಿಗೆ ಬೇಕಾಗಿರುವ ಆಳವಾದ ಮೊಶ್ಚಿರೈಸ್ ನೀಡುವುದು. ತೆಂಗಿನೆಣ್ಣೆಯ ಸುವಾಸನೆಯಿಂದಲೂ ಕೆಲವರು ಇದನ್ನು ಆಯ್ಕೆ ಮಾಡಿಕೊಳ್ಳುವರು. ಬೇಸಿಗೆ ಕಾಲದಲ್ಲಿ ತೆಂಗಿನೆಣ್ಣೆಯ ಸುವಾಸನೆಯು ತುಂಬಾ ಒಳ್ಳೆಯದಾಗಿರುವುದು.

ಬಳಕೆ

ಬಳಕೆ

ತೆಂಗಿನೆಣ್ಣೆಯನ್ನು ನೀವು ನೇರವಾಗಿ ಪಾದಗಳಿಗೆ ಹಚ್ಚಿಕೊಳ್ಳಬಹುದು. ತೆಂಗಿನೆಣ್ಣೆಯ ಮತ್ತೊಂದು ಲಾಭವೆಂದರೆ ಇದು ಸಾಮಾನ್ಯ ಲೋಷನ್ ಗಳಿಗಿಂತ ಚೆನ್ನಾಗಿ ಕೆಲಸ ಮಾಡುವುದು. ಒಂದು ಚಮಚ ತೆಂಗಿನೆಣ್ಣೆಯು ನಿಮ್ಮ ಸಂಪೂರ್ಣ ದೇಹಕ್ಕೆ ಸಾಕಾಗುವುದು. ತೆಂಗಿನೆಣ್ಣೆಯು ಜಿಡ್ಡು ಗುಣ ಹೊಂದಿರುವ ಕಾರಣದಿಂದ ಪಾದಗಳು ಇದನ್ನು ಸರಿಯಾಗಿ ಹೀರಿಕೊಳ್ಳುವ ತನಕ ನೀವು ಬರಿಗಾಲಿನಲ್ಲಿ ನಡೆಯಲು ಹೋಗಬೇಡಿ. ಇದನ್ನು ಹಚ್ಚಿಕೊಳ್ಳುವ ಸುಲಭ ವಿಧಾನವೆಂದರೆ ನೀವು ಮಲಗುವ ಮೊದಲು ಹಚ್ಚಿಕೊಳ್ಳಬೇಕು ಮತ್ತು ಬಳಿಕ ಸಾಕ್ಸ್ ಹಾಕಿಕೊಂಡರೆ ಮೊಶ್ಚಿರೈಸರ್ ಉಳಿದುಕೊಳ್ಳುವುದು.

Most Read: ಎಣ್ಣೆಯುಕ್ತ ತ್ವಚೆಯವರಿಗೆ ಮೊಡವೆಗಳಾಗದಂತೆ ತಡೆಯಲು ಸರಳ ಮನೆಮದ್ದುಗಳು

ಇತರ ಸಾಮಗ್ರಿಗಳು

ಇತರ ಸಾಮಗ್ರಿಗಳು

ಒಡೆದ ಹಿಮ್ಮಡಿಗಳಿಗೆ ನೀವು ತೆಂಗಿನೆಣ್ಣೆ ಉತ್ಪನ್ನಗಳನ್ನು ಖರೀದಿಸುವ ಮೊದಲು ಇದರ ಬಗ್ಗೆ ಸ್ವಲ್ಪ ಮಟ್ಟಿಗೆ ನೀವು ಅಧ್ಯಯನ ಮಾಡಿಕೊಂಡರೆ ತುಂಬಾ ಒಳ್ಳೆಯದು. ನೈಸರ್ಗಿಕ ಆರೋಗ್ಯ ಅಂಗಡಿಗಳಲ್ಲಿ ಪರಿಶುದ್ಧವಾಗಿರುವಂತಹ ತೆಂಗಿನೆಣ್ಣೆಯು ಸಿಗುವುದು. ಅದೇ ರೀತಿಯಲ್ಲಿ ನೀವು ಬೇರೆ ಕಡೆಯಲ್ಲಿ ತೆಗೆದುಕೊಂಡರೆ ಅಲ್ಲಿ ಸ್ವಲ್ಪ ಎಣ್ಣೆಗೆ ಬೇರೆ ಸಾಮಗ್ರಿಗಳನ್ನು ಹಾಕಿರುವರು. ಶಿಯಾ ಬೆಣ್ಣೆ, ದ್ರಾಕ್ಷಿ ಬೀಜದ ಸಾರ ಅಥವಾ ಆಡಿನ ಹಾಲು ಇದಕ್ಕೆ ಕೆಲವೊಂದು ಉದಾಹರಣೆಗಳು. ಈ ಸಾಮಗ್ರಿಗಳನ್ನು ಹಾಕುವುದರಿಂದ ಒಣ ಚರ್ಮವು ನಿವಾರಣೆ ಆಗುವುದು. ಆದರೆ ನಿಮಗೆ ತೆಂಗಿನೆಣ್ಣೆ ಬೇಕಿದ್ದರೆ ಆಗ ಉತ್ಪನ್ನದ ಲೇಬಲ್ ನ್ನು ನೀವು ಓದಬೇಕು. ಕೆಲವೊಂದು ಉತ್ಪನ್ನಗಳಲ್ಲಿ ಆಲ್ಕೋಹಾಲ್ ಅಥವಾ ಒಣಗುವ ಅಂಶಗಳು ಇರಬಹುದು. ಇದರಿಂದ ಒಡೆದ ಹಿಮ್ಮಡಿ ಸಮಸ್ಯೆಯಿಂದ ಮತ್ತಷ್ಟು ಹಾನಿಯಾಗಬಹುದು.

Most Read: ಬಡತನ ನಿವಾರಣೆ ಮಾಡಲು ಕೃಷ್ಣನ ಈ ಐದು ಸಂದೇಶಗಳನ್ನು ಪಾಲಿಸಿ

ಪಾದಗಳ ಉತ್ತಮ ಆರೋಗ್ಯಕ್ಕೆ ಕೆಲವೊಂದು ಸಲಹೆಗಳು

ಪಾದಗಳ ಉತ್ತಮ ಆರೋಗ್ಯಕ್ಕೆ ಕೆಲವೊಂದು ಸಲಹೆಗಳು

ಚರ್ಮವು ಒಣಗುವುದರಿಂದ ಹಿಮ್ಮಡಿ ಒಡೆಯುವ ಸಮಸ್ಯೆಯು ಕಾಣಿಸುವುದು. ಇದರಿಂದಾಗಿ ಮೊದಲಿಗೆ ನೀವು ಚರ್ಮವು ಒಣಗುವ ಸಮಸ್ಯೆ ನಿವಾರಣೆ ಮಾಡಲು ಪ್ರಯತ್ನಿಸಬೇಕು. ಒಡೆದ ಹಿಮ್ಮಡಿ ಸಮಸ್ಯೆ ನಿವಾರಣೆ ಮಾಡಲು ನೀವು ನಿಯಮಿತವಾಗಿ ಬಳಸುವ ಕಾಲಿನ ಲೋಷನ್ ಬದಲಿಗೆ ತೆಂಗಿನೆಣ್ಣೆ ಬಳಸಿಕೊಳ್ಳಿ. ಇದನ್ನು ನೀವು ದಿನನಿತ್ಯವು ಬಳಸಿ. ಬರಿಗಾಲಿನಲ್ಲಿ ನಡೆಯುವ ವೇಳೆ ಇದರ ಅಪಾಯವು ಹೆಚ್ಚಾಗುವುದು. ಇದರಿಂದಾಗಿ ನೀವು ಚಳಿಗಾಲದಲ್ಲಿ ಕಾಲುಗಳಿಗೆ ಮೊಶ್ಚಿರೈಸ್ ಮಾಡಲು ಪ್ರಯತ್ನಿಸಿ. ಒಡೆದ ಹಿಮ್ಮಡಿಗಳು ತುಂಬಾ ಊತ ಅಥವಾ ಸೋಂಕಿನಿಂದ ಕೂಡಿದ್ದರೆ ಆಗ ನೀವು ವೈದ್ಯರನ್ನು ಭೇಟಿಯಾಗಿ ಅವರಿಂದ ಚಿಕಿತ್ಸೆ ಪಡೆಯುವುದು ಒಳ್ಳೆಯದು.

English summary

Coconut Oil for Cracked Heels

Cracked heels are especially prevalent when feet are exposed through open-back shoes. The condition stems from untreated dry skin. Once feet are cracked, it is difficult to undo the damage with a simple foot lotion. Coconut oil is one of the treatment measures you can use to relieve cracks in your feet.
X
Desktop Bottom Promotion