For Quick Alerts
ALLOW NOTIFICATIONS  
For Daily Alerts

ಮಚ್ಚೆಗಳ ನಿವಾರಣೆಗೆ ಆಯುರ್ವೇದ ಚಿಕಿತ್ಸೆ- ಪ್ರಯತ್ನಿಸಿ ನೋಡಿ

|

ಪ್ರತಿಯೊಬ್ಬರ ದೇಹದ ಯಾವುದಾದರೂ ಒಂದು ಭಾಗದಲ್ಲಿ ಮಚ್ಚೆಗಳು ಇದ್ದೇ ಇರುತ್ತದೆ. ಆದರೆ ಈ ಮಚ್ಚೆಗಳು ಯಾವುದೇ ಹಾನಿ ಉಂಟು ಮಾಡದು. ಆದರೆ ಸೌಂದರ್ಯದ ದೃಷ್ಟಿಯಿಂದ ಕಾಣುವಂತಹ ಮುಖ ಹಾಗೂ ಇನ್ನಿತರ ಭಾಗದಲ್ಲಿ ಇದು ಇದ್ದರೆ ಆಗ ಸ್ವಲ್ಪ ಸಮಸ್ಯೆ ಆಗುವುದು. ಕೆಲವೊಂದು ಸಲ ಚರ್ಮವು ದಪ್ಪವಾಗಿ ಇದರಲ್ಲಿ ಕೂದಲು ಕಾಣಿಸಿಕೊಳ್ಳುವುದು. ದೇಹದಲ್ಲಿ ಕಾಣಿಸುವ ಮಚ್ಚೆಗಳು ಯಾವುದೇ ರೀತಿಯ ಹಾನಿ ಉಂಟು ಮಾಡುವುದಿಲ್ಲ. ಆದರೆ ಇದು ಕೆಲವೊಂದು ಸಲ ಕ್ಯಾನ್ಸರ್ ನ್ನು ಉಂಟು ಮಾಡಬಹುದು.

ಮಚ್ಚೆಗಳನ್ನು ನಿವಾರಣೆ ಮಾಡಲು ಕೆಲವು ಆಯುರ್ವೇದ ಔಷಧಿಗಳು

ಆಯುರ್ವೇದದಲ್ಲಿ ಮಚ್ಚೆ ನಿವಾರಣೆ ಮಾಡಲು ಅನಾನಸು ತುಂಬಾ ಪರಿಣಾಮಕಾರಿ ಆಗಿದೆ. ಅನಾನಸಿನ ಸ್ವಲ್ಪ ರಸವನ್ನು ಮಚ್ಚೆ ಮೇಲೆ ನೇರವಾಗಿ ಹಾಕಿಕೊಳ್ಳಿ. ಮಚ್ಚೆಗಳ ಮೇಲೆ ಇದನ್ನು ಹಾಕಿಕೊಂಡರೆ ಅದು ಮಚ್ಚೆ ಮುಸುಕಾಗುವಂತೆ ಮಾಡುವುದು ಅಥವಾ ಸಂಪೂರ್ಣವಾಗಿ ಹೋಗುವುದು. ದಿನದಲ್ಲಿ ಕೆಲವೊಂದು ಸಲ ನೀವು ಇದನ್ನು ಹಚ್ಚಿಕೊಂಡರೆ ಆಗ ಉತ್ತಮ ಫಲಿತಾಂಶ ಸಿಗುವುದು.

Ayurvedic

ಗ್ರೀನ್ ಟೀ ತೈಲವನ್ನು ಎಂಟರಿಂದ ಹತ್ತು ದಿನಗಳ ಕಾಲ ಹಾಕಿ.

ಸ್ವಲ್ಪ ದ್ರಾಕ್ಷಿ ಹಣ್ಣಿನ ತಿರುಳನ್ನು ಬಟ್ಟೆ ಅಥವಾ ಬ್ಯಾಂಡೇಜ್ ನಲ್ಲಿ ಕಟ್ಟಿಕೊಂಡು ಮಚ್ಚೆ ಮೇಲೆ ಕಟ್ಟಿಕೊಳ್ಳಿ. ಇದನ್ನು ನೀವು ಐದು ಅಥವಾ ಆರು ಗಂಟೆಗಳ ಕಾಲ ಬ್ಯಾಂಡೇಜ್ ಬದಲಾಯಿಸಿಕೊಳ್ಳಿ.

ಮಚ್ಚೆಗಳಿಗೆ ಅಗಸೆ ಬೀಜವು ತುಂಬಾ ಪರಿಣಾಮಕಾರಿ. ಕೆಲವು ಹನಿ ಫ್ಲ್ಯಾಕ್ಸ್ ಸೀಡ್ ಎಣ್ಣೆಯನ್ನು ಜೇನುತುಪ್ಪದ ಜತೆ ಹಾಕಿ ಮತ್ತು ಅದನ್ನು ಮಚ್ಚೆಗೆ ಹಾಕಿ.

Most Read: ದೇಹದ ಈ 8 ಸ್ಥಳಗಳಲ್ಲಿ ಮಚ್ಚೆ ಇದ್ದವರಿಗೆ, ಜೀವನದಲ್ಲಿ ಕಷ್ಟ, ಹಣದ ಸಮಸ್ಯೆ ಬರಬಹುದು!

ಬೆಳ್ಳುಳ್ಳಿ ಎಸಲನ್ನು ಜಜ್ಜಿಕೊಳ್ಳಿ ಮತ್ತು ಇದನ್ನು ಮಚ್ಚೆ ಮೇಲಿಡಿ. ಇದನ್ನು ಬ್ಯಾಂಡೇಜ್ ಹಾಕಿ ಕಟ್ಟಿಕೊಳ್ಳಿ.
ಮಚ್ಚೆಯಲ್ಲಿ ತುರಿಕೆ ಕಾಣಿಸಿಕೊಳ್ಳುತ್ತಿದ್ದರೆ ಆಗ ದಿನಕ್ಕೆ ಎರಡು ಸಲ ಹರಳೆಣ್ಣೆ ಹಚ್ಚಿಕೊಳ್ಳಿ.
ಹೂಕೋಸು ರಸವನ್ನು ನೀವು ದಿನದ ಕೆಲವು ಸಲ ಮಚ್ಚೆಗೆ ಹಚ್ಚಿಕೊಳ್ಳಿ. ಇದನ್ನು ಎರಡರಿಂದ ಮೂರು ದಿನಗಳ ಕಾಳ ಹಾಗೆ ಮುಂದುವರಿಸಿ. ದಪ್ಪವಾಗಿ ಇರುವಂತಹ ಮಚ್ಚೆಗಳಿಗೆ ಇದು ಅದ್ಭುತವಾಗಿ ಕೆಲಸ ಮಾಡುವುದು.
ಒಂದು ಚಮಚ ಸಮುದ್ರ ಉಪ್ಪು, 3 ಚಮಚ ಹರಳೆಣ್ಣೆ ಮತ್ತು ಒಂದು ಚಮಚ ಲಿಂಬೆರಸ ಹಾಕಿ.
ಈ ಮಿಶ್ರಣವನ್ನು ಮಚ್ಚೆಗೆ ಹಚ್ಚಿಕೊಂಡು ಅದನ್ನು ನಿಧಾನವಾಗಿ ಮಸಾಜ್ ಮಾಡಿ. 20-25 ನಿಮಿಷ ಕಾಲ ಹಾಗೆ ಬಿಡಿ ಮತ್ತು ಬಳಿಕ ತಣ್ಣೀರಿನಿಂದ ತೊಳೆಯಿರಿ.

ಮಚ್ಚೆಗೆ ಕೆಲವು ಆಯುರ್ವೇದ ಗಿಡಮೂಲಿಕೆಗಳು

*ಕಾಡು ಸೇವಂತಿ
*ಮಚ್ಚೆ ನಿವಾರಣೆ ಮಾಡಲು ಇದು ತುಂಬಾ ಪರಿಣಾಮಕಾರಿ ಆಯುರ್ವೇದ ಗಿಡ. ಈ ಗಿಡದ ಬೇರನ್ನು ತೆಗೆದು ಅದನ್ನು ದಿನದಲ್ಲಿ ಎರಡು ಅಥವಾ ಮೂರು ಸಲ ಮಚ್ಚೆಗಳ ಮೇಲೆ ಉಜ್ಜಿಕೊಳ್ಳಬೇಕು.
*ಅಗಸೆಬೀಜ
*ಇದನ್ನು ನೇರವಾಗಿ ಮಚ್ಚೆಗಳ ಮೇಲೆ ಉಜ್ಜಿಕೊಳ್ಳಬಹುದು ಅಥವಾ ಎಣ್ಣೆಯನ್ನು ಬಳಸಿಕೊಳ್ಳಬಹುದು. ಹತ್ತಿ ಉಂಡೆ ಬಳಸಿಕೊಂಡು ಮಚ್ಚೆಗಳ ಮೇಲೆ ಬಳಸಿರಿ.

ಬೆಳ್ಳುಳ್ಳಿ ಮತ್ತು ಈರುಳ್ಳಿ

ಮಚ್ಚೆಗಳಿಗೆ ಬೆಳ್ಳುಳ್ಳಿ ತುಂಬಾ ಪರಿಣಾಮಕಾರಿ. ಕೆಲವು ದಿನಗಳ ಕಾಳ ಬೆಳ್ಳುಳ್ಳಿ ಜಜ್ಜಿಕೊಂಡು ಅದನ್ನು ಮಚ್ಚೆಗಳ ಮೇಲಿಡಿ. ಸಣ್ಣ ಮಚ್ಚೆಗಳ ನಿವಾರಣೆ ಮಾಡಲು ಈರುಳ್ಳಿ ರಸ ಬಳಸಿಕೊಳ್ಳಿ.

Most Read: ನೋಡಿ, ಇಂತಹ ಮನೆಮದ್ದು ಪ್ರಯತ್ನಿಸಿದರೆ ಮಚ್ಚೆ ಶೀಘ್ರ ಮಾಯವಾಗುವುದು

ಮಚ್ಚೆಗಳಿಗೆ ಆಯುರ್ವೇದದ ಪಥ್ಯ

ಪೊಟಾಶಿಯಂ ಕೊರತೆಯಿಂದಾಗಿ ಮಚ್ಚೆಗಳು ಮೂಡುವುದು. ಪೊಟಾಶಿಯಂ ಅಧಿಕವಾಗಿರುವಂತಹ ಆಹಾರವನ್ನು ಸೇವಿಸಿರಿ. ಇಲ್ಲಿ ಕೆಲವೊಂದು ಸಲಹೆಗಳು ಇವೆ.
ಆ್ಯಪಲ್ ಸೀಡರ್ ವಿನೇಗರ್, ಬಸಳೆ, ಬಟಾಟೆ ಮತ್ತು ಟೊಮೆಟೊ
ಇದರ ಹೊರತಾಗಿ ಪ್ರತಿರೋಧಕ ಶಕ್ತಿ ಅಧಿಕವಾಗಿದ್ದರೆ ಆಗ ಮಚ್ಚೆಗಳನ್ನು ನಿವಾರಣೆ ಮಾಡಬಹುದು ಅಥವಾ ಬರದಂತೆ ತಡೆಯಬಹುದು. ಇದರಿಂದ ವಿಟಮಿನ್ ಎ, ಸಿ ಮತ್ತು ಇಯನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ.

English summary

Ayurvedic Treatment for Moles

With Moles numerous, one or more of the following doshas and qualities may be aggravated. If you have an imbalance of one of these doshas or qualities, Ayurveda recommends avoiding foods and lifestyle habits that aggravate that quality and/or dosha. These imbalanced doshas and qualities may need to be brought back into balance before this condition can be healed. Click on the quality to learn what foods and lifestyle habits should be avoided.
X
Desktop Bottom Promotion