For Quick Alerts
ALLOW NOTIFICATIONS  
For Daily Alerts

ನೆಲ್ಲಿಕಾಯಿ ನಿಮ್ಮ ತ್ವಚೆ ಮತ್ತು ಕೂದಲಿಗೆ ನೀಡುವ ಒಂಭತ್ತು ಬಗೆಯ ಆರೈಕೆಗಳು

|

ನೆಲ್ಲಿಕಾಯಿ ಅಥವಾ ಆಮ್ಲ ಎಂದೂ ಕರೆಯಲ್ಪಡುವ ಈ ಪುಟ್ಟ ಫಲ ನೈಸರ್ಗಿಕ ಔಷಧೀಯ ಗುಣಗಳಿಂದಾಗಿಯೇ ಗುರುತಿಸಲ್ಪಡುತ್ತದೆ. ಒಟ್ಟಾರೆ ಆರೋಗ್ಯಕ್ಕೆ ನೆಲ್ಲಿಕಾಯಿಯ ಸೇವನೆಯಿಂದ ಹಲವಾರು ಪ್ರಯೋಜನಗಳಿದ್ದರೂ ಇವುಗಳಲ್ಲಿ ಬಹುತೇಕ ಪ್ರಯೋಜನಗಳು ಕೂದಲು ಮತ್ತು ತ್ವಚೆಗೆ ಮೀಸಲಾಗಿವೆ. ದುರಾದೃಷ್ಟವಶಾತ್, ಇದುವರೆಗೂ ಈ ಪ್ರಬಲ ಔಷಧೀಯ ಗುಣಗಳನ್ನು ಪರಿಪೂರ್ಣರೂಪದಲ್ಲಿ ಪಡೆದುಕೊಳ್ಳಲು ನಮಗೆ ಸಾಧ್ಯವಾಗಿಲ್ಲ.

ಈ ಪುಟ್ಟ ಫಲ ತ್ವಚೆ ಮತ್ತು ಕೂದಲಿಗೆ ಅದ್ಭುತವಾದ ಪೋಷಣೆಯನ್ನು ನೀಡುತ್ತದೆ. ವಿಶೇಷವಾಗಿ ನೆಲ್ಲಿಕಾಯಿಯ ರಸವನ್ನು ಹಚ್ಚಿಕೊಳ್ಳುವ ಮೂಲಕ ತ್ವಚೆ ಮತ್ತು ಕೂದಲಿಗೆ ಹೆಚ್ಚಿನ ಪೋಷಣೆ ನೀಡಬಹುದು. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿದೆ. ಇದೊಂದು ಪ್ರಬಲ ಆಂಟಿ ಆಕ್ಸಿಡೆಂಟ್ ಗುಣ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವ ಜೊತೆಗೇ ಕೊಲ್ಯಾಜೆನ್ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಕೂದಲು ಮತ್ತು ತ್ವಚೆಗೆ ಹೆಚ್ಚಿನ ಪೋಷಣೆಯನ್ನು ಒದಗಿಸುತ್ತದೆ.

Amla Juice

ನೆಲ್ಲಿಕಾಯಿಯ ರಸ

ನೆಲ್ಲಿಕಾಯಿಯ ರಸವನ್ನು ಹಚ್ಚಿಕೊಳ್ಳುವ ಮೂಲಕ ವೃದ್ಧಾಪ್ಯದ ಚಿಹ್ನೆಗಳಾದ ನೆರಿಗೆಗಳು ಮತ್ತು ಸೂಕ್ಷ್ಮಗೆರೆಗಳು ಮೂಡುವುದನ್ನು ಆದಷ್ಟೂ ತಡವಾಗಿಸಬಹುದು. ಇದರ ಪ್ರಬಲ ಆಂಟಿ ಆಕ್ಸಿಡೆಂಟು ಗುಣ ನೆತ್ತಿಯ ಚರ್ಮದಲ್ಲಿ ಫ್ರೀ ರ್‍ಯಾಡಿಕಲ್ ಎಂಬ ಕಣಗಳು ಎಸಗುವ ಹಾನಿಯಿಂದ ರಕ್ಷಿಸುತ್ತದೆ ಹಾಗೂ ತನ್ಮೂಲಕ ನೆತ್ತಿಯ ಚರ್ಮ ಸ್ವಚ್ಛ ಹಾಗೂ ಆರೊಗ್ಯಕರವಾಗಿದ್ದು ಸೊಂಪಾದ ಕೂದಲ ಬೆಳವಣಿಗೆ ಮತ್ತು ಹಲವಾರು ಕೂದಲ ತೊಂದರೆಗಳನ್ನು ಇಲ್ಲವಾಗಿಸಲು ನೆರವಾಗುತ್ತದೆ. ಅಷ್ಟೇ ಅಲ್ಲ, ನೆಲ್ಲಿಕಾಯಿಯ ರಸದಲ್ಲಿರುವ ಗುಣಪಡಿಸುವ ಗುಣ ತ್ವಚೆ ಸಹಜವರ್ಣವನ್ನು ಪಡೆಯಲು ಹಾಗೂ ಸತ್ತ ಜೀವಕೋಶಗಳನ್ನು ಮತ್ತು ಕೊಳೆಯನ್ನು ನಿವಾರಿಸಲು ನೆರವಾಗುತ್ತದೆ. ಕೂದಲ ಬುಡಗಳಿಗೆ ಹೆಚ್ಚಿನ ಪೋಷಣೆ ಒದಗಿಸುವ ಮೂಲಕ ಕೂದಲನ್ನು ಇನ್ನಷ್ಟು ಬಲಪಡಿಸುತ್ತದೆ ಹಾಗೂ ಹಾನಿಗೊಳಗಾಗುವುದನ್ನು ತಪ್ಪಿಸುತ್ತದೆ.

ಇಷ್ಟೆಲ್ಲಾ ಅದ್ಭುತ ಗುಣಗಳಿರುವ ನೆಲ್ಲಿಕಾಯಿಯನ್ನು ಒಮ್ಮೆಯೂ ಪ್ರಯತ್ನಿಸದೇ ಹೋದಲ್ಲಿ ನಾವು ಈ ಅಮೂಲ್ಯ ಕೊಡುಗೆಯನ್ನು ಕಳೆದುಕೊಂಡಂತಾಗುತ್ತದೆ. ಇಂದಿನ ಲೇಖನದಲ್ಲಿ ನೆಲ್ಲಿಕಾಯಿಯ ರಸವನ್ನು ತ್ವಚೆ ಮತ್ತು ಕೂದಲ ಪೋಷಣೆಗೆ ಬಳಸುವ ಹಲವು ವಿಧಾನಗಳನ್ನು ವಿವರಿಸಲಾಗಿದೆ. ಅದಕ್ಕೂ ಮುನ್ನ, ತ್ವಚೆ ಮತ್ತು ಕೂದಲಿಗೆ ನೆಲ್ಲಿಕಾಯಿಯ ರಸ ಏನೆಲ್ಲಾ ಪ್ರಯೋಜನ ನೀಡುತ್ತದೆ ಎಂಬುದನ್ನ ನೋಡೋಣ:

Most Read: ನೆಲ್ಲಿಕಾಯಿ ಜ್ಯೂಸ್‌ನ್ನು ಖಾಲಿ ಹೊಟ್ಟೆಗೆ ಸೇವಿಸಿದರೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು

ತ್ವಚೆ ಮತ್ತು ಕೂದಲಿಗೆ ನೆಲ್ಲಿಕಾಯಿಯ ರಸದ ಪ್ರಯೋಜನಗಳು

*ಮೊಡವೆಗಳನ್ನು ಗುಣಪಡಿಸಲು ನೆರವಾಗುತ್ತದೆ
*ಮೊಡವೆ ಮಾಗಿದ ಬಳಿಕ ಉಳಿದ ಕಲೆಯನ್ನು ನಿವಾರಿಸಲು ನೆರವಾಗುತ್ತದೆ.
*ತ್ವಚೆಯನ್ನು ಬೆಳಗಿಸುತ್ತದೆ
*ತ್ವಚೆ ಸಹಜವರ್ಣ ಪಡೆಯಲು ನೆರವಾಗುತ್ತದೆ ಹಾಗೂ ಸೆಳೆತವನ್ನು ಹೆಚ್ಚಿಸುತ್ತದೆ
*ವೃದ್ಧಾಪ್ಯದ ಚಿಹ್ನೆಗಳನ್ನು ತಡವಾಗಿಸುತ್ತದೆ.
*ಸತ್ತ ಜೀವಕೋಶಗಳನ್ನು ನಿವಾರಿಸಿ ಕಳೆಯನ್ನು ನೀಡುತ್ತದೆ
*ನೆತ್ತಿಯ ಚರ್ಮವನ್ನು ಸ್ವಚ್ಛಗೊಳಿಸುತ್ತದೆ.
*ಕೂದಲನ್ನು ಬಲಪಡಿಸುತ್ತದೆ
*ಕೂದಲ ಬೆಳವಣಿಗೆಗೆ ನೆರವಾಗುತ್ತದೆ
*ಕೂದಲಿಗೆ ಮೆರುಗನ್ನು ನೀಡುತ್ತದೆ
*ತಲೆಹೊಟ್ಟು ನಿವಾರಿಸಲು ನೆರವಾಗುತ್ತದೆ.
ಅಕಾಲಿಕ ಕೂದಲ ನೆರೆಯುವಿಕೆ ತಡೆಯುತ್ತದೆ.
ತ್ವಚೆಯ ಆರೈಕೆಗೆ ನೆಲ್ಲಿಕಾಯಿಯ ರಸವನ್ನು ಬಳಸುವ ವಿಧಾನ:

ಮೊಡವೆಗಳನ್ನು ಗುಣಪಡಿಸಲು

ನೆಲ್ಲಿಕಾಯಿಯಲ್ಲಿರುವ ಆಂಟಿ ಆಕ್ಸಿಡೆಂಟ್, ಬ್ಯಾಕ್ಟೀರಿಯಾ ನಿವಾರಕ ಮತ್ತು ಅತಿಸೂಕ್ಷ್ಮ ಜೀವಿ ನಿವಾರಕ ಗುಣ ಮೊಡವೆಗಳು ಮೂಡಲು ಕಾರಣವಾಗುವ ಬ್ಯಾಕ್ಟೀರಿಯಾಗಳ ವೃದ್ದಿಯನ್ನು ತಡೆಯುತ್ತದೆ. ಅಲ್ಲದೇ ಇದರಲ್ಲಿರುವ ವಿಟಮಿನ್ ಸಿ ಮೊಡವೆಗಳನ್ನು ಶೀಘ್ರವೇ ಮಾಗಿಸಲು ನೆರವಾಗುತ್ತದೆ. ಇದರ ಜೊತೆಗೆ ಲೋಳೆಸರವನ್ನು ಬಳಸಿದಾದ ಇದರಲ್ಲಿರುವ ಹಲವು ಅವಶ್ಯಕ ಪೋಷಕಾಂಶಗಳು ಮತ್ತು ಖನಿಜಗಳು ತ್ವಚೆಯಲ್ಲಿ ಮೊಡವೆಗಳಾಗದಂತೆ ಕಾಪಾಡುತ್ತದೆ.

ಅವಶ್ಯವಿರುವ ಸಾಮಾಗ್ರಿಗಳು:

*2 ದೊಡ್ಡ ಚಮಚ ನೆಲ್ಲಿಕಾಯಿಯ ರಸ
*2 ದೊಡ್ಡ ಚಮಚ ಲೋಳೆಸರದ ತಿರುಳು

ಉಪಯೋಗಿಸುವ ವಿಧಾನ:

*ನೆಲ್ಲಿಕಾಯಿಯ ರಸವನ್ನು ಒಂದು ಚಿಕ್ಕ ಬೋಗುಣಿಯಲ್ಲಿ ಸಂಗ್ರಹಿಸಿ
*ಇದಕ್ಕೆ ಲೋಳೆಸರದ ತಿರುಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ
*ಈ ಮಿಶ್ರಣವನ್ನು ಈಗತಾನೇ ತೊಳೆದುಕೊಂಡು ಒತ್ತಿ ಒರೆಸಿಕೊಂಡ ಮುಖಕ್ಕೆ ಹಚ್ಚಿಕೊಳ್ಳಿ
ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಒಣಗಲು ಬಿಡಿ
*ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ
*ಉತ್ತಮ ಪರಿಣಾಮಕ್ಕಾಗಿ ವಾರಕ್ಕೆರಡು ಬಾರಿ ಈ ವಿಧಾನವನ್ನು ಅನುಸರಿಸಿ

Most Read: ನೆಲ್ಲಿಕಾಯಿ ಜ್ಯೂಸ್‌+ಮೆಂತೆ ಹುಡಿ-ಬರೋಬ್ಬರಿ 7 ಕಾಯಿಲೆಗೆ ರಾಮಬಾಣ!

ಮೊಡವೆಗಳು ಮಾಗಿದ ಬಳಿಕ ಉಳಿದ ಕಲೆಯನ್ನು ನಿವಾರಿಸಲು

ನೆಲ್ಲಿಕಾಯಿಯ ರಸದಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣ ತ್ವಚೆಯ ವರ್ಣವನ್ನು ಏಕರೂಪದಲ್ಲಿರಲು ನೆರವಾಗುತ್ತದೆ. ತನ್ಮೂಲಕ ಕಲೆಗಳು ಹಾಗೂ ಮೊಡವೆಗಳ ಗುರುತುಗಳನ್ನು ಕಾಲಕ್ರಮೇಣ ಇಲ್ಲವಾಗಿಸುತ್ತದೆ. ಅಲ್ಲದೇ ವಿಟಮಿನ್ ಸಿ ತ್ವಚೆಯಲ್ಲಿ ಮೆಲನಿನ್ ಎಂಬ ವರ್ಣದ್ರವ್ಯವನ್ನು ಉತ್ಪಾಧಿಸಲು ನೆರವಾಗುವ ಮೂಲಕ ತ್ವಚೆ ಸಹಜವರ್ಣವನ್ನು ಪಡೆಯುತ್ತ ಕಲೆಯನ್ನು ಇಲ್ಲವಾಗಿಸುತ್ತಾ ಸಾಗುತ್ತದೆ.

ಅವಶ್ಯವಿರುವ ಸಾಮಾಗ್ರಿಗಳು:

*1 ದೊಡ್ಡ ಚಮಚ ನೆಲ್ಲಿಕಾಯಿಯ ರಸ

ಉಪಯೋಗಿಸುವ ವಿಧಾನ:

*ಒಂದು ಬೋಗುಣಿಯಲ್ಲಿ ರಸವನ್ನು ಸಂಗ್ರಹಿಸಿ
*ಚಿಕ್ಕ ಹತ್ತಿಯುಂಡೆಯನ್ನು ಈ ರಸದಲ್ಲಿ ಅದ್ದಿ
*ಈ ಉಂಡೆಯಿಂದ ಕಲೆಯಿರುವ ಭಾಗವನ್ನೆಲ್ಲಾ ಕೊಂಚವೇ ಒತ್ತಿ ಒರೆಸಿಕೊಳ್ಳಿ.
*ಪೂರ್ಣವಾಗಿ ರಸ ಒಣಗುವವರೆಗೆ ಹಾಗೇ ಬಿಡಿ
*ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.
*ಉತ್ತಮ ಪರಿಣಾಮಕ್ಕಾಗಿ ವಾರಕ್ಕೆರಡು ಅಥವಾ ಮೂರು ಬಾರಿ ಈ ವಿಧಾನವನ್ನು ಪುನರಾವರ್ತಿಸಿ

ತ್ವಚೆಯನ್ನು ಬೆಳಗಿಸಲು

ಪಪ್ಪಾಯಿಯಲ್ಲಿ ನೈಸರ್ಗಿಕ ಬಿಳಿಚುಕಾರಕ ಗುಣವಿದೆ. ಹೊರಚರ್ಮಕ್ಕೆ ಅಂಟಿಕೊಂಡಿದ್ದ ಸತ್ತ ಜೀವಕೋಶಗಳನ್ನು ನಿವಾರಿಸುವ ಮೂಲಕ ಹಾಗೂ ಕೊಳೆಗಳನ್ನು ನಿವಾರಿಸುವ ಮೂಲಕ ತ್ವಚೆ ನೈಸರ್ಗಿಕ ಕಳೆಯನ್ನು ಪಡೆಯಲು ನೆರವಾಗುತ್ತದೆ. ಜೀನಿನಲ್ಲಿರುವ ಆಂಟಿ ಆಕ್ಸಿಡೆಂಟ್ ಮತ್ತು ಬ್ಯಾಕ್ಟೀರಿಯಾನಿವಾರಕ ಗುಣ ತ್ವಚೆಯನ್ನು ಬೆಳಗಿಸಲು ನೆರಾಗುವ ಜೊತೆಗೇ ತ್ವಚೆಯಲ್ಲಿ ವೃದ್ದಾಪ್ಯದ ಚಿಹ್ನೆಗಳು ಮೂಡದಿರಲು ನೆರವಾಗುತ್ತದೆ.

ಅವಶ್ಯವಿರುವ ಸಾಮಾಗ್ರಿಗಳು:

*2 ದೊಡ್ಡ ಚಮಚ ನೆಲ್ಲಿಕಾಯಿಯ ರಸ
*2 ದೊಡ್ಡ ಚಮಚ ಪೊಪ್ಪಾಯಿ ಹಣ್ಣಿನ ತಿರುಳು
*1 ದೊಡ್ಡ ಚಮಚ ಜೇನು

ಉಪಯೋಗಿಸುವ ವಿಧಾನ:

*ಒಂದು ಬೋಗುಣಿಯಲ್ಲಿ ನೆಲ್ಲಿಕಾಯಿಯ ರಸವನ್ನು ಸಂಗ್ರಹಿಸಿ
*ಉಳಿದೆರಡನ್ನೂ ಇದಕ್ಕೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ
*ಈ ಮಿಶ್ರಣವನ್ನು ಈಗತಾನೇ ತೊಳೆದುಕೊಂಡು ಒತ್ತಿ ಒರೆಸಿಕೊಂಡ ಮುಖ ಮತ್ತು ಕುತ್ತಿಗೆಗೆ ತೆಳುವಾಗಿ ಹಚ್ಚಿ
ಇಪ್ಪತ್ತು ನಿಮಿಷ ಹಾಗೇ ಬಿಡಿ
*ಬಳಿಕ ತಣ್ಣೀರಿನಿಂದ ತೊಳೆದುಕೊಂಡು ಒತ್ತಿ ಒರೆಸಿಕೊಳ್ಳಿ.
*ಉತ್ತಮ ಪರಿಣಾಮಕ್ಕಾಗಿ ವಾರಕ್ಕೆರಡು ಬಾರಿ ಪುನರಾವರ್ತಿಸಿ.

MOst Read: ಸೊಂಪಾದ ಕೂದಲಿಗಾಗಿ ಬೆಟ್ಟದ ನೆಲ್ಲಿಕಾಯಿಯ ಜ್ಯೂಸ್!

ಚರ್ಮಕ್ಕೆ ಅಂಟಿಕೊಂಡಿದ್ದ ಸತ್ತ ಜೀವಕೋಶಗಳನ್ನು ನಿವಾರಿಸಲು

ಈ ಕಾರ್ಯವನ್ನು ಸಕ್ಕರೆ ಅತಿ ಸುಲಭವಾಗಿ ನಿರ್ವಹಿಸುತ್ತದೆ. ಅಷ್ಟು ಮಾತ್ರವಲ್ಲ, ಕೊಳೆ ಹಾಗೂ ಇತರ ಕಲ್ಮಶಗಳನ್ನೂ ನಿವಾರಿಸಿ ಹೊಸತನವನ್ನು ನೀಡುತ್ತದೆ. ಇನ್ನೊಂದು ಪ್ರಬಲ ಸಾಮಾಗ್ರಿಯಾದ ಲಿಂಬೆಯಲ್ಲಿರುವ ಸಿಟ್ರಸ್ ಆಮ್ಲ ಆಂಟಿ ಆಕ್ಸಿಡೆಂಟ್ ಹಾಗೂ ವೃದ್ಧಾಪ್ಯವನ್ನು ತಡವಾಗಿಸುವ ಗುಣವನ್ನು ಹೊಂದಿದ್ದು ತ್ವಚೆಯ ಕಾಂತಿಯನ್ನು ಬೆಳಗಿಸುತ್ತದೆ ಹಾಗೂ ನೆರಿಗೆಗಳಾದಂತೆ ತಡೆಯುತ್ತದೆ.

ಅವಶ್ಯವಿರುವ ಸಾಮಾಗ್ರಿಗಳು

*1 ದೊಡ್ಡ ಚಮಚ ನೆಲ್ಲಿಕಾಯಿಯ ರಸ
*2 ದೊಡ್ಡ ಚಮಚ ಸಕ್ಕರೆ
*1 ಚಿಕ್ಕಚಮಚ ಲಿಂಬೆರಸ

ಉಪಯೋಗಿಸುವ ವಿಧಾನ

*ಒಂದು ಬೋಗುಣಿಯಲ್ಲಿ ನೆಲ್ಲಿಕಾಯಿಯ ರಸವನ್ನು ಸಂಗ್ರಹಿಸಿ
*ಇದಕ್ಕೆ ಸಕ್ಕರೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ
*ಸಕ್ಕರೆ ಕರಗಿದ ಬಳಿಕವೇ ಲಿಂಬೆರಸ ಬೆರೆಸಿ ಮತ್ತೊಮ್ಮೆ ಮಿಶ್ರಣ ಮಾಡಿ
*ಮುಖವನ್ನು ತೊಳೆದುಕೊಂಡ ಬಳಿಕ ತಣ್ಣೀರನ್ನು ಸಿಂಪಡಿಸಿಕೊಳ್ಳಿ
*ಈ ಮಿಶ್ರಣವನ್ನು ಈಗ ಬೆರಳುಗಳಿಗೆ ಅದ್ದಿಕೊಂಡು ಮುಖ ಮತ್ತು ಕುತ್ತಿಗೆಯ ತ್ವಚೆಯನ್ನು ಕೊಂಚವೇ ಒತ್ತಡದಲ್ಲಿ ಉಜ್ಜುತ್ತಾ ಹೋಗಿ. *ಸುಮಾರು ಐದು ನಿಮಿಷ ಈ ಕ್ರಿಯೆ ಮುಂದುವರೆಸಿ
*ಬಳಿಕ ತಣ್ಣೀರಿನಿಂದ ತೊಳೆದುಕೊಂಡು ಒತ್ತಿ ಒರೆಸಿಕೊಳ್ಳಿ.
*ಉತ್ತಮ ಪರಿಣಾಮಕ್ಕಾಗಿ ವಾರಕ್ಕೆರಡು ಬಾರಿ ಈ ವಿಧಾನವನ್ನು ಅನುಸರಿಸಿ.

ನೆಲ್ಲಿಕಾಯಿಯ ರಸವನ್ನು ಕೂದಲಿಗೆ ಬಳಸಿಕೊಳ್ಳುವ ವಿಧಾನ

*ಕೂದಲಿಗೆ ಕಂಡೀಶನ್ ಮೆರುಗನ್ನು ನೀಡಲು:
ಮದರಂಗಿ ಕೂದಲನ್ನು ಪೋಷಿಸುತ್ತದೆ ಹಾಗೂ ನಯವಾಗಿಸಿ ನೈಸರ್ಗಿಕ ಕಾಂತಿ ಮತ್ತು ಬಣ್ಣವನ್ನು ನೀಡುತ್ತದೆ. ಅಲ್ಲದೇ ಇದರ ಬ್ಯಾಕ್ಟೀರಿಯಾ ನಿವಾರಕ ಗುಣ ತ್ವಚೆಯಲ್ಲಿ ಉಂಟಾಗಿದ್ದ ತುರಿಕೆ ಮತ್ತು ಉರಿಯನ್ನು ನಿವಾರಿಸುತ್ತದೆ. ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲ ಕೂದಲ ಬುಡಗಳಿಗೆ ಅಗತ್ಯ ಪೋಷಣೆ ನೀಡುತ್ತದೆ ಹಾಗೂ ಆರೋಗ್ಯಕರ ಕೂದಲು ಬೆಳೆಯಲು ನೆರವಾಗುತ್ತದೆ.

ಅವಶ್ಯವಿರುವ ಸಾಮಾಗ್ರಿಗಳು:

*2 ದೊಡ್ಡ ಚಮಚ ಉತ್ತಮ ಗುಣಮಟ್ಟದ ಮದರಂಗಿ ಪುಡಿ.
*2 ದೊಡ್ಡ ಚಮಚ ನೆಲ್ಲಿಕಾಯಿಯ ರಸ
*1 ದೊಡ್ಡ ಚಮಚ ಮೊಸರು.

ಉಪಯೋಗಿಸುವ ವಿಧಾನ:

*ಒಂದು ಬೋಗುಣಿಯಲ್ಲಿ ಮದರಂಗಿ ಪುಡಿ ಸಂಗ್ರಹಿಸಿ
*ಇದಕ್ಕೆ ನೆಲ್ಲಿಕಾಯಿ ರಸ, ಮೊಸರನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ದಪ್ಪನೆಯ ಲೇಪವಾಗಿಸಿ
*ಈ ಲೇಪವನ್ನು ದಪ್ಪನಾಗಿ ಕೂದಲ ಬುಡಗಳಷ್ಟೂ ಆವರಿಸುವಂತೆ ತಲೆಗೆ ಹಚ್ಚಿಕೊಳ್ಳಿ ಹಾಗೂ ಕೂದಲ ತುದಿಯವರೆಗೂ ಬರುವಂತೆ ನೇವರಿಸಿ.
ಸುಮಾರು ಇಪ್ಪತ್ತು ನಿಮಿಷ ಹಾಗೇ ಬಿಡಿ
*ಬಳಿಕ ತಣ್ಣೀರಿನಿಂದ ತೊಳೆದುಕೊಂಡು ಕೂದಲನ್ನು ಬಿಡಿಯಾಗಿಯೇ ಹರಡಿ ಇರಿಸಿ ಗಾಳಿಗೆ ತಾನಾಗಿಯೇ ಒಣಗುವಂತೆ ಮಾಡಿ.
*ಉತ್ತಮ ಪರಿಣಾಮಕ್ಕಾಗಿ ತಿಂಗಳಿಗೊಂದು ಬಾರಿ ನಿರ್ವಹಿಸಿದರೆ ಸಾಕು

ಕೂದಲ ಬೆಳವಣಿಗೆಗೆ

*ಲಿಂಬೆಯಲ್ಲಿರುವ ವಿಟಮಿನ್ ಸಿ ಕೊಲ್ಯಾಜೆನ್ ಉತ್ಪಾದನೆಗೆ ನೆರವಾಗುವ ಮೂಲಕ ಕೂದಲ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಲಿಂಬೆರಸ ಶಿಥಿಲಗೊಂಡಿದ್ದ ಕೂದಲ ಬುಡಗಳನ್ನು ಮತ್ತೆ ದೃಢಗೊಳಿಸಿ ಕೂದಲು ಉದರದಂತೆ ತಡೆದು ಕೂದಲ ಬೆಳವಣಿಗೆಗೆ ನೆರವಾಗುತ್ತದೆ. ಜೊತೆಗೇ ಇದರ ಶಿಲೀಂದ್ರ ನಿವಾರಕ ಗುಣ ಆರೋಗ್ಯಕರ ನೆತ್ತಿಯ ತ್ವಚೆಯನ್ನು ಪಡೆಯಲು ನೆರವಾಗುತ್ತದೆ.

ಅವಶ್ಯವಿರುವ ಸಾಮಾಗ್ರಿಗಳು:

*2 ದೊಡ್ಡ ಚಮಚ ನೆಲ್ಲಿಕಾಯಿಯ ರಸ
*2 ದೊಡ್ಡ ಚಮಚ ಲಿಂಬೆ ರಸ

ಉಪಯೋಗಿಸುವ ವಿಧಾನ:

*ಒಂದು ಬೋಗುಣಿಯಲ್ಲಿ ಎರಡೂ ಸಾಮಾಗ್ರಿಗಳನ್ನು ಮಿಶ್ರಣ ಮಾದಿ
*ಈ ಮಿಶ್ರಣವನ್ನು ನೆತ್ತಿಯ ಚರ್ಮಕ್ಕೆ, ವಿಶೇಷವಾಗಿ ಕೂದಲ ಬುಡಗಳಿಗೆ ತಗಲುವಂತೆ ಹಚ್ಚಿಕೊಂಡು ಐದು ನಿಮಿಷವಾದರೂ ಬೆರಳುಗಳ ತುದಿಯಿಂದ ಮಸಾಜ್ ಮಾಡಿ
*ಬಳಿಕ ಹತ್ತು ನಿಮಿಷ ಹಾಗೇ ಬಿಡಿ
*ನಂತರ ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ.
ಉತ್ತಮ ಪರಿಣಾಮಕ್ಕಾಗಿ ವಾರ ಬಿಟ್ಟು ವಾರ, ವಾರಕ್ಕೆರಡು ಬಾರಿ ಅನುಸರಿಸಿ.

ಕೂದಲನ್ನು ಸ್ವಚ್ಛಗೊಳಿಸಲು

ಮೊಟ್ಟೆಯ ಬಿಳಿಭಾಗದಲ್ಲಿ ಪ್ರೋಟೀನ್ ಸಮೃದ್ದವಗಿದ್ದು ಘಾಸಿಗೊಂಡಿದ್ದ, ತುದಿ ಸೀಳಿದ್ದ ಕೂದಲನ್ನು ಸರಿಪಡಿಸಲು ನೆರವಾಗುತ್ತದೆ. ಅಲ್ಲದೇ ಕೂದಲ ಬೆಳವಣಿಗೆಗೂ ನೆರವಾಗುತ್ತದೆ.

ಅವಶ್ಯವಿರುವ ಸಾಮಾಗ್ರಿಗಳು:

*ಒಂದರಿಂದ ಎರಡು ದೊಡ್ಡ ಮೊಟ್ಟೆಗಳು
*2 ದೊಡ್ಡ ಚಮಚ ನೆಲ್ಲಿಕಾಯಿಯ ರಸ

ಉಪಯೋಗಿಸುವ ವಿಧಾನ:

*ಒಂದು ಬೋಗುಣಿಯಲ್ಲಿ ಮೊಟ್ಟೆಗಳ ಬಿಳಿಭಾಗವನ್ನು ಪ್ರತ್ಯೇಕಿಸಿ ಚೆನ್ನಾಗಿ ಗೊಟಾಯಿಸಿ
*ಇದಕ್ಕೆ ನೆಲ್ಲಿಕಾಯಿಯ ರಸ ಬೆರೆಸಿ ಮಿಶ್ರಣ ಮಾಡಿ.
*ಮೊದಲು ನಿಮ್ಮ ನಿತ್ಯದ ಸೌಮ್ಯ ಶಾಂಪೂ ಬಳಸಿ ಕೂದಲನ್ನು ತೊಳೆದುಕೊಂಡ ಬಳಿಕ ಕೂದಲನ್ನು ಹಿಂಡಿ ನೀರೆಲ್ಲಾ ಇಳಿದು ಹೋಗುವಂತೆ ಮಾಡಿ.
*ಬಳಿಕ ಈ ಮಿಶ್ರಣವನ್ನು ತಲೆಯ ಚರ್ಮಕ್ಕೆ ಹಾಗೂ ಕೂದಲ ತುದಿಯವರೆಗೆ ಬರುವಂತೆ ಹಚ್ಚಿಕೊಳ್ಳಿ.
*ಹತ್ತು ನಿಮಿಷ ಹಾಗೇ ಬಿಡಿ
*ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.
*ವಾರಕ್ಕೊಂದು ಬಾರಿ ಈ ವಿಧಾನ ಅನುಸರಿಸಿ.

ಅಕಾಲಿಕ ಕೂದಲು ನೆರೆಯುವುದನ್ನು ತಡೆಯಲು

ನೆಲ್ಲಿಕಾಯಿಯ ರಸದಲ್ಲಿರುವ ವಿಟಮಿನ್ ಸಿ ಹಾಗೂ ಆಂಟಿ ಆಕ್ಸಿಡೆಂಟುಗಳು ನೆತ್ತಿಯ ಚರ್ಮವನ್ನು ರಕ್ಷಿಸುವ ಜೊತೆಗೇ ಕೂದಲ ಬುಡಗಳಿಗೆ ಪೋಷಣೆ ಒದಗಿಸುವ ಮೂಲಕ ಅಕಾಲಿಕ ನೆರೆತವನ್ನು ತಡೆಯುತ್ತವೆ.

ಅವಶ್ಯವಿರುವ ಸಾಮಾಗ್ರಿಗಳು:

*2 ದೊಡ್ಡ ಚಮಚ ನೆಲ್ಲಿಕಾಯಿಯ ರಸ

ಉಪಯೋಗಿಸುವ ವಿಧಾನ:

*ಈ ರಸವನ್ನು ನೇರವಾಗಿ ನೆತ್ತಿಯ ಚರ್ಮ ಮತ್ತು ಕೂದಲ ತುದಿಯವರೆಗೆ ಲೇಪಿಸಿಕೊಳ್ಳಿ
*ಹದಿನೈದರಿಂದ ಇಪ್ಪತ್ತು ನಿಮಿಷ ಹಾಗೇ ಬಿಡಿ
*ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ
*ವಾರಕ್ಕೆರಡು ಬಾರಿ ಈ ವಿಧಾನವನ್ನು ಪುನರಾವರ್ತಿಸಿ.

ತಲೆಹೊಟ್ಟು ನಿವಾರಿಸಲು

ಅವಶ್ಯವಿರುವ ಸಾಮಾಗ್ರಿಗಳು

*1 ದೊಡ್ಡ ಚಮಚ ನೆಲ್ಲಿಕಾಯಿಯ ರಸ
*2 ದೊಡ್ಡ ಚಮಚ ಕೊಬ್ಬರಿ ಎಣ್ಣೆ

ಉಪಯೋಗಿಸುವ ವಿಧಾನ:

*ಒಂದು ಬೋಗುಣಿಯಲ್ಲಿ ಎರಡೂ ಸಾಮಗ್ರಿಗಳನ್ನು ಸಂಗ್ರಹಿಸಿ ಚೆನ್ನಾಗಿ ಮಿಶ್ರಣ ಮಾಡಿ.
*ಈ ಮಿಶ್ರಣವನ್ನು ತಲೆಗೆ ಹಚ್ಚಿ ಕೆಲ ಸೆಕೆಂಡುಗಳ ಕಾಲ ನಯವಾಗಿ ಮಸಾಜ್ ಮಾಡಿಕೊಳ್ಳಿ.
*ಬಳಿಕ ಒಂದು ಘಂಟೆಯಾದರೂ ಹಾಗೇ ಬಿಡಿ
*ಬಳಿಕ ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ.
*ವಾರಕ್ಕೊಂದು ಬಾರಿ ಈ ವಿಧಾನವನ್ನು ಪುನರಾವರ್ತಿಸಿ.

English summary

Amla Juice: Beauty Benefits & How To Use

Amla, a natural ingredient well-known for its medicinal benefits, has a lot of benefits to offer for your skin and hair as well. It is a rich source of vitamin C and boosts the collagen production to benefit your skin and hair. Amla juice can be used with ingredients like honey, lemon, eggs etc. to treat issues like acne, dandruff & blemishes.
X
Desktop Bottom Promotion