ಅಂದ ಕೆಡಿಸುವ ಕಪ್ಪು ವರ್ತುಲ ನಿವಾರಣೆಗೆ ಶೀಘ್ರ ಮನೆಮದ್ದುಗಳು

Posted By: jaya
Subscribe to Boldsky

ನಮ್ಮ ಮುಖದ ಭಾಗದಲ್ಲಿರುವ ಕಪ್ಪು ವರ್ತುಲಗಳು ಹೆಚ್ಚಿನ ಸಂದರ್ಭಗಳಲ್ಲಿ ನಮಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ನಮ್ಮ ನೋಟದಲ್ಲಿನ ಆತ್ಮವಿಶ್ವಾಸವನ್ನೇ ಇದು ಕುಂದಿಸಿಬಿಡುತ್ತದೆ. ಹೈಪರ್ ಪಿಗ್‌ಮೆಂಟೇಶನ್, ಹಾರ್ಮೋನುಗಳ ಸಮಸ್ಯೆ, ವ್ಯಾಕ್ಸಿಂಗ್, ಶೇವಿಂಗ್ ಮೊದಲಾದ ಕ್ರಿಯೆಗಳಿಂದ ಈ ಕಪ್ಪು ವರ್ತುಲಗಳು ನಮ್ಮ ಮುಖದಲ್ಲಿ ಕಾಣಿಸಿಕೊಳ್ಳುತ್ತದೆ. ನಾವು ನಕ್ಕಾಗ ಅದರಲ್ಲೂ ಹೆಂಗಳೆಯರು ಕಪ್ಪು ತುಟಿ ಬಣ್ಣವನ್ನು ತುಟಿಗೆ ಹಚ್ಚಿಕೊಂಡ ಸಮಯದಲ್ಲಿ ಈ ಕಪ್ಪು ವರ್ತುಲ ಇಲ್ಲವೇ ಡಾರ್ಕ್ ಸರ್ಕಲ್ಸ್ ತಮ್ಮ ಆಟವನ್ನು ತೋರಿಬಿಡುತ್ತವೆ.

ತುಟಿಯ ಭಾಗದಲ್ಲಿ ಒಣತ್ವ ಕೂಡ ಈ ಕಪ್ಪು ವರ್ತುಲ ಎದ್ದುಗಾಣುವಂತೆ ಮಾಡುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ಕಪ್ಪು ಕಂಕುಳ ಭಾಗ ಕೂಡ ವೈದ್ಯಕೀಯ ಪರಿಸ್ಥಿತಿಗಳಿಂದ ಉಂಟಾಗುತ್ತವೆ. ಇನ್ಸುಲಿನ್ ಶಕ್ತಿ, ದೇಹದಾರ್ಢ್ಯತೆ, ಹಾರ್ಮೋನಲ್ ಅಸಮತೋಲನ, ಕೆಲವೊಂದು ಮದ್ದುಗಳು ಮತ್ತು ಕ್ಯಾನ್ಸರ್‌ಗೆ ತೆಗೆದುಕೊಳ್ಳುವ ಔಷಧಗಳಿಂದ ಉಂಟಾಗುತ್ತದೆ.

ಮೊದಲಿಗೆ ಈ ಕಪ್ಪು ವರ್ತುಲಗಳಿಗೆ ಕಾರಣಗಳೇನು ಎಂಬುದನ್ನು ಅರಿತುಕೊಂಡು ತದನಂತರ ಅದನ್ನು ಮನೆಮದ್ದಿನ ಮೂಲಕ ಉಪಚರಿಸಿಕೊಳ್ಳಿ. ಅದಾಗ್ಯೂ ಕೆಲವೊಂದು ಮನೆಯಲ್ಲೇ ಮಾಡುವ ಪರಿಹಾರೋಪಾಯಗಳನ್ನು ಬಳಸಿಕೊಂಡು ಈ ಕಪ್ಪು ವರ್ತುಲಗಳನ್ನು ನಿವಾರಿಸಿಕೊಳ್ಳಬಹುದಾಗಿದೆ. ಬನ್ನಿ ಅದು ಹೇಗೆ ಎಂಬುದನ್ನು ಅರಿತುಕೊಳ್ಳೋಣ... 

 ಲಿಂಬೆ ಮತ್ತು ಜೇನು

ಲಿಂಬೆ ಮತ್ತು ಜೇನು

ನಿಮ್ಮ ತ್ವಚೆಯ ಕಪ್ಪು ವೃತ್ತಗಳನ್ನು ಹೋಗಲಾಡಿಸಿ ಅಲ್ಲಿ ಪ್ರಕಾಶಮಾನತೆಯನ್ನು ಉಂಟುಮಾಡುವಲ್ಲಿ ಲಿಂಬೆ, ಜೇನು ಎತ್ತಿದ ಕೈಯಾಗಿದೆ. ಒಂದು ಬೌಲ್‌ನಲ್ಲಿ ಲಿಂಬೆ ರಸವನ್ನು ಹಿಂಡಿಕೊಳ್ಳಿ ಮತ್ತು ಅದನ್ನು ಸಮಪ್ರಮಾಣದ ಜೇನಿನೊಂದಿಗೆ ಮಿಶ್ರ ಮಾಡಿಕೊಳ್ಳಿ. ನಿಮ್ಮ ಹಾನಿಗೊಂಡ ತ್ವಚೆಯ ಭಾಗಕ್ಕೆ ಇದನ್ನು ಹಚ್ಚಿರಿ 15-20 ನಿಮಿಷ ಹಾಗೆಯೇ ಬಿಡಿ ತದನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ನಿತ್ಯವೂ ಈ ಮನೆಮದ್ದನ್ನು ಬಳಸಿ ಪರಿಣಾಮಕಾರಿ ಫಲಿತಾಂಶ ಪಡೆದುಕೊಳ್ಳಿ.

ಶ್ರೀಗಂಧ ಮತ್ತು ಅರಿಶಿನ

ಶ್ರೀಗಂಧ ಮತ್ತು ಅರಿಶಿನ

ಅರಿಶಿನ ಮತ್ತು ಶ್ರೀಗಂಧವನ್ನು ಬಳಸಿಕೊಂಡು ತುಟಿಯ ಮೇಲ್ಭಾಗದಲ್ಲಿರುವ ಕಪ್ಪು ವರ್ತುಲವನ್ನು ಹೋಗಲಾಡಿಸಬಹುದಾಗಿದೆ. 1 ಚಮಚ ಶ್ರೀಗಂಧ ಹುಡಿಯನ್ನು ಚಿಟಿಕೆಯಷ್ಟು ಅರಶಿನದೊಂದಿಗೆ ಮಿಶ್ರ ಮಾಡಿ. ಇದಕ್ಕೆ ರೋಸ್ ವಾಟರ್ ಅನ್ನು ಅಷ್ಟೇ ಪ್ರಮಾಣದಲ್ಲಿ ಬೆರೆಸಿಕೊಳ್ಳಿ. ನಿಮ್ಮ ತುಟಿಯ ಮೇಲ್ಭಾಗದಲ್ಲಿರುವ ಕಪ್ಪು ವರ್ತುಲದ ಮೇಲೆ ಇದನ್ನು ಹಚ್ಚಿ. 30 ನಿಮಿಷ ಹಾಗೆಯೇ ಬಿಡಿ. ಒಣಗಿದ ನಂತರ ತಣ್ಣೀರಿನಿಂದ ಈ ಭಾಗವನ್ನು ತೊಳೆದುಕೊಳ್ಳಿ. ಇದು ಕೆನ್ನೆ ಮತ್ತು ತುಟಿಯಲ್ಲಿರುವ ಕಪ್ಪು ವರ್ತುಲವನ್ನು ಸುಲಭವಾಗಿ ನಿವಾರಿಸಿಬಿಡುತ್ತದೆ.

ಕಡಲೆ ಹಿಟ್ಟು

ಕಡಲೆ ಹಿಟ್ಟು

ಕಡಲೆ ಹಿಟ್ಟನ್ನು ಬಳಸಿಕೊಂಡು ಕಪ್ಪು ವೃತ್ತಗಳ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ. ಮೊಸರು ಮೊದಲಾದ ಇನ್ನಿತರ ಸಾಮಾಗ್ರಿಗಳನ್ನು ಹಿಟ್ಟಿಗೆ ಬೆರೆಸಿಕೊಂಡು ನೀವು ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದಾಗಿದೆ. 1 ಚಮಚ ಕಡಲೆ ಹಿಟ್ಟಿಗೆ 1/4 ಚಿಟಿಕೆ ಅರಿಶಿನ ಹುಡಿಯನ್ನು ಸೇರಿಸಿ ಮತ್ತು ಹಾಲಿನ ಕ್ರೀಮ್ ಅನ್ನು ಬೆರೆಸಿಕೊಳ್ಳಿ. ದಪ್ಪನೆಯ ಪೇಸ್ಟ್ ಅನ್ನು ಮಾಡಿಕೊಂಡು ಹಾನಿಗೊಂಡಿರುವ ಸ್ಥಳಕ್ಕೆ ಹಚ್ಚಿ.

ರೋಸ್ ವಾಟರ್ ಮತ್ತು ಗ್ಲಿಸರಿನ್

ರೋಸ್ ವಾಟರ್ ಮತ್ತು ಗ್ಲಿಸರಿನ್

ನಿಮ್ಮ ಬಾಯಿಯ ಸುತ್ತ ಕಪ್ಪು ವರ್ತುಲ ಉಂಟಾಗಿದೆ ಎಂದಾದಲ್ಲಿ ರೋಸ್ ವಾಟರ್ ಮತ್ತು ಗ್ಲಿಸರಿನ್ ಬಳಸಿಕೊಂಡು ಅದನ್ನು ಹೋಗಲಾಡಿಸಬಹುದಾಗಿದೆ. ಸಮಪ್ರಮಾಣದಲ್ಲಿ ರೋಸ್ ವಾಟರ್ ಮತ್ತು ಗ್ಲಿಸರಿನ್ ಅನ್ನು ತೆಗೆದುಕೊಳ್ಳಿ ನಂತರ ಅದನ್ನು ಪೇಸ್ಟ್‌ನಂತೆ ತಯಾರಿಸಿಕೊಂಡು ಹಾನಿಗೊಂಡಿರುವ ಸ್ಥಳಕ್ಕೆ ಹಚ್ಚಿ ರಾತ್ರಿ ಇದನ್ನು ಹಚ್ಚಿಕೊಂಡು ಮರುದಿನ ಬೆಳಗ್ಗೆ ಮುಖವನ್ನು ತೊಳೆದುಕೊಳ್ಳಿ. ಒಣ ತ್ವಚೆಯೊಂದಿಗೆ ಕಪ್ಪು ವರ್ತುಲ ಕೂಡ ಮಾಯವಾಗುತ್ತದೆ.

ಅಲೊವೆರಾ ಜೆಲ್

ಅಲೊವೆರಾ ಜೆಲ್

ತ್ವಚೆಯನ್ನು ಮೃದುಗೊಳಿಸುವ ಅಂಶವನ್ನು ಅಲೊವೆರಾ ಹೊಂದಿದೆ. ಟ್ಯಾನ್ ಹಾಗೂ ಬಿಸಿಲಿನ ತೀಕ್ಷ್ಣ ಝಳಕ್ಕೆ ಉಂಟಾಗಿರುವ ಹಾನಿಗೂ ಇದು ಉತ್ತಮ ಮದ್ದಾಗಿದೆ. ನಿಮ್ಮ ಕಪ್ಪಾಗಿರುವ ಕುತ್ತಿಗೆ ಮತ್ತು ಮುಖದ ಭಾಗಕ್ಕೆ ಈ ಜೆಲ್ ಅನ್ನು ಹಚ್ಚಿಕೊಳ್ಳಿ ರಾತ್ರಿ ಪೂರ್ತಿ ಹಾಗೆಯೇ ಬಿಡಿ. ಕಾಲಕ್ರಮೇಣ ಕಪ್ಪಗಿನ ವರ್ತುಲ ಮಾಯವಾಗುವುದನ್ನು ನೀವು ಕಾಣಬಹುದು.

ಸಕ್ಕರೆ ಮತ್ತು ಲಿಂಬೆ ರಸ

ಸಕ್ಕರೆ ಮತ್ತು ಲಿಂಬೆ ರಸ

ಬಾಯಿಯ ಬಳಿ ಇರುವ ಕಪ್ಪಗಿನ ಕಲೆಯನ್ನು ನಿವಾರಿಸಲು ಸಕ್ಕರೆ ಮತ್ತು ಲಿಂಬೆ ರಸದ ಪೇಸ್ಟ್ ತಯಾರಿಸಿಕೊಳ್ಳಿ. ಸಕ್ಕರೆಯಲ್ಲಿರುವ ಗ್ಲಿಕೊಲಿಕ್ ಆಸಿಡ್ ಬಾಯಿಯ ಸಮೀಪವಿರುವ ಕಪ್ಪು ಕಲೆಯನ್ನು ನಿವಾರಿಸುತ್ತದೆ. ಇನ್ನು ಲಿಂಬೆ ಕೂಡ ನೈಸರ್ಗಿಕ ಸ್ವಚ್ಛಕ ಎಂದೆನಿಸಿದೆ.

ಓಟ್‌ಮೀಲ್

ಓಟ್‌ಮೀಲ್

1 ಚಮಚದಷ್ಟು ಓಟ್‌ಮೀಲ್ ಅನ್ನು ಬಳಸಿಕೊಂಡು ನೀರಿನೊಂದಿಗೆ ಮಿಶ್ರ ಮಾಡಿ. ನಿಮ್ಮ ಕಪ್ಪು ವರ್ತುಲದಲ್ಲಿರುವ ಸ್ಥಳಕ್ಕೆ ಇದನ್ನು ಹಚ್ಚಿಕೊಂಡು 15 ನಿಮಿಷ ಹಾಗೆಯೇ ಬಿಡಿ. ಇದು ಬಾಯಿಯ ಕುತ್ತಿಗೆಯಲ್ಲಿರುವ ಕಪ್ಪು ವರ್ತುಲವನ್ನು ಹೋಗಲಾಡಿಸುತ್ತದೆ. ವಾರಕ್ಕೆ ಮೂರು ಬಾರಿ ಇದನ್ನು ಬಳಸಿ ಉತ್ತಮ ಫಲಿತಾಂಶ ಪಡೆದುಕೊಳ್ಳಿ.

ಮೊಟ್ಟೆಯ ಬಿಳಿ ಭಾಗ, ಜೇನು ಮತ್ತು ಲಿಂಬೆ ರಸ

ಮೊಟ್ಟೆಯ ಬಿಳಿ ಭಾಗ, ಜೇನು ಮತ್ತು ಲಿಂಬೆ ರಸ

ಮೊಟ್ಟೆಯ ಬಿಳಿ ಭಾಗ, ಜೇನು ಮತ್ತು ಲಿಂಬೆ ರಸವನ್ನು ಒಂದು ಬೌಲ್‌ನಲ್ಲಿ ತೆಗೆದುಕೊಳ್ಳಿ. ಚೆನ್ನಾಗಿ ಈ ಮೂರು ಅನ್ನು ಮಿಶ್ರ ಮಾಡಿಕೊಳ್ಳಿ. ಗಂಟಾಗದಂತೆ ನೋಡಿಕೊಳ್ಳಿ. ನಿಮ್ಮ ವರ್ತುಲವಿರುವ ಸ್ಥಳಕ್ಕೆ ಇದನ್ನು ಹಚ್ಚಿ. 15-20 ನಿಮಿಷ ಒಣಗಲು ಬಿಡಿ. ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.

ಕಿತ್ತಳೆ ಸಿಪ್ಪೆ ಮತ್ತು ಮೊಸರು

ಕಿತ್ತಳೆ ಸಿಪ್ಪೆ ಮತ್ತು ಮೊಸರು

ನೈಸರ್ಗಿಕ ಸ್ಕ್ರಬ್ಬರ್‌ನಂತೆ ಕಿತ್ತಳೆ ಸಿಪ್ಪೆ ಮತ್ತು ಮೊಸರನ್ನು ಬಳಸಿಕೊಳ್ಳಬಹುದಾಗಿದ್ದು ನಿಮ್ಮ ಮುಖ ಮತ್ತು ಕುಂಕುಳು, ಕುತ್ತಿಗೆಯ ಬಳಿ ಇರುವ ಕಪ್ಪು ವರ್ತುಲವನ್ನು ಹೋಗಲಾಡಿಸಬಹುದಾಗಿದೆ. ಕಿತ್ತಳೆ ಸಿಪ್ಪೆಯ ಪುಡಿಯನ್ನು 2 ಚಮಚದಷ್ಟು ತೆಗೆದುಕೊಳ್ಳಿ ಮತ್ತು ಮೊಸರು ಸೇರಿಸಿ ಪೇಸ್ಟ್ ತಯಾರಿಸಿ. ನಿಮ್ಮ ಮುಖ ಮತ್ತು ತುಟಿಯ ಸುತ್ತಲು ಇದನ್ನು ಹಚ್ಚಿಕೊಳ್ಳಿ. ಒರಟಾಗಿ ತಿಕ್ಕಬೇಡಿ. 5 ನಿಮಿಷ ಹಾಗೆಯೇ ಬಿಡಿ. ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಇದು ತುಟಿ ಮತ್ತು ಕೆನ್ನೆಯಲ್ಲಿರುವ ಕಪ್ಪು ವರ್ತುಲವನ್ನು ನಿವಾರಿಸಲು ಸಹಕಾರಿಯಾಗಿದೆ.

English summary

Worried Of Dark Patches Around Your Mouth?

Dark patches around the mouth are often embarrassing for many among us, especially when it affects our confidence in the way we look. Here are some natural remedies to brighten your skin in less than 10 days.
Story first published: Wednesday, April 11, 2018, 23:31 [IST]