ಚರ್ಮ ಹಾಗೂ ಕೂದಲಿಗೆ ಸ್ಟ್ರಾಬೆರಿ ಹಣ್ಣಿನ ಆರೈಕೆ

Posted By: Hemanth Amin
Subscribe to Boldsky

ಸ್ಟ್ರಾಬೆರಿ ಇಷ್ಟಪಡದವರು ಯಾರಿದ್ದಾರೆ ಹೇಳಿ? ಪ್ರತಿಯೊಬ್ಬರಿಗೂ ಸ್ಟ್ರಾಬೆರಿ ತುಂಬಾ ಇಷ್ಟವಾಗುವುದು. ಯಾಕೆಂದರೆ ಅದರಲ್ಲಿರುವ ಹುಳಿ ಹಾಗೂ ಸಿಹಿ ಗುಣವು ನಾಲಗೆಗೆ ರುಚಿ ನೀಡುವುದು ಮಾತ್ರವಲ್ಲದೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಸ್ಟ್ರಾಬೆರಿಯನ್ನು ಸೌಂದರ್ಯವರ್ಧಕವಾಗಿಯೂ ಹಲವಾರು ವರ್ಷಗಳಿಂದ ಬಳಸುತ್ತಾ ಬರುತ್ತಿದ್ದಾರೆ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ವಿಟಮಿನ್ ಸಿ ಮತ್ತು ಸ್ಯಾಲಿಸಿಲಿಕ ಆಮ್ಲವನ್ನು ಹೊಂದಿರುವ ಸ್ಟ್ರಾಬೆರಿಯಲ್ಲಿ ಪ್ರಮುಖ ಖನಿಜಾಂಶಗಳು ಹಾಗೂ ಪ್ರಬಲ ಆ್ಯಂಟಿಆಕ್ಸಿಡೆಂಟ್ ಇದೆ. ಇದರಿಂದ ಸ್ಟ್ರಾಬೆರಿಯು ಒಳ್ಳೆಯ ಚರ್ಮ ಮತ್ತು ಕೂದಲು ಪಡೆಯಲು ನಿಮಗೆ ನೆರವಾಗುವುದು.

ಇಂದಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ಈ ಕೆಂಪು ಹಣ್ಣನ್ನು ತಮ್ಮ ಸೌಂದರ್ಯ ವರ್ಧಕ ಸಾಧನವಾಗಿ ಬಳಸಿಕೊಳ್ಳುತ್ತಾ ಇದ್ದಾರೆ. ಸ್ಟ್ರಾಬೆರಿ ಯನ್ನು ಸೌಂದರ್ಯವರ್ಧಕವಾಗಿ ಬಳಸುವುದರಿಂದ ಚರ್ಮದ ಕಾಂತಿ ಹೆಚ್ಚುವುದು ಹಾಗೂ ಕೂದಲು ರೇಷ್ಮೆಯಂತೆ ಹೊಳೆಯುವುದು. ಬೋಲ್ಡ್ ಸ್ಕೈ ಇಂದು ನಿಮಗೆ ಈ ಹಣ್ಣನ್ನು ಸೌಂದರ್ಯವರ್ಧಕವಾಗಿ ಹೇಗೆ ಬಳಸಿಕೊಳ್ಳಬಹುದು ಎನ್ನುವ ಬಗ್ಗೆ ತಿಳಿಸಲಿದೆ. ಹೆಚ್ಚು ದುಬಾರಿಯೂ ಅಲ್ಲದೆ ಈ ವಿಧಾನವು ತುಂಬಾ ಪರಿಣಾಮಕಾರಿಯಾಗಿರಲಿದೆ.

ಮೃದುವಾದ ತ್ವಚೆಗಾಗಿ ಸ್ಟ್ರಾಬೆರಿ ಫೇಸ್ ಮಾಸ್ಕ್

ಸ್ಟ್ರಾಬೆರಿ ಬಳಸಿಕೊಂಡು ನೀವು ಹಲವಾರು ರೀತಿಯಿಂದ ಚರ್ಮ ಹಾಗೂ ಕೂದಲಿನ ಆರೈಕೆ ಮಾಡಬಹುದು. ಇದು ಹೆಚ್ಚಿನ ಎಲ್ಲಾ ರೀತಿಯ ಚರ್ಮಕ್ಕೂ ಹೊಂದಿಕೊಳ್ಳುವುದು. ಚರ್ಮ ಹಾಗೂ ಕೂದಲಿಗೆ ಆಗುವ ಅದ್ಭುತ ಲಾಭಗಳ ಬಗ್ಗೆ ನೀವಿಲ್ಲಿ ತಿಳಿದುಕೊಳ್ಳಿ.

ಚರ್ಮಕ್ಕೆ

ಚರ್ಮವನ್ನು ಸ್ವಚ್ಛಗೊಳಿಸುವುದು

ಚರ್ಮವನ್ನು ಸ್ವಚ್ಛಗೊಳಿಸುವುದು

ಸ್ಟ್ರಾಬೆರಿಯಲ್ಲಿ ಇರುವಂತಹ ಪ್ರಬಲ ಆ್ಯಂಟಿಆಕ್ಸಿಡೆಂಟ್ ಗಳು ಚರ್ಮದ ಆಳಕ್ಕೆ ಹೋಗಿ ಅಲ್ಲಿರುವ ವಿಷಕಾರಿ ಹಾಗೂ ಕಲ್ಮಶವನ್ನು ತೆಗೆದುಹಾಕುವುದು. ತುಂಬಾ ದುಬಾರಿಯಾಗಿರುವ ಕ್ಲೆನ್ಸರ್ ಬಳಸುವ ಬದಲು ಸ್ಟ್ರಾಬೆರಿ ನಿಮಗೆ ತುಂಬಾ ಸುಲಭವಾಗಿ ಚರ್ಮವನ್ನು ಸ್ವಚ್ಛಗೊಳಿಸಿಕೊಡಲಿದೆ.

ಸತ್ತ ಚರ್ಮದ ಕೋಶ ಕಿತ್ತುಹಾಕುವುದು

ಸತ್ತ ಚರ್ಮದ ಕೋಶ ಕಿತ್ತುಹಾಕುವುದು

ಸ್ಯಾಲಿಸಿಲಿಕ್ ಆಮ್ಲವನ್ನು ಹೊಂದಿರುವ ಸ್ಟ್ರಾಬೆರಿಯು ಚರ್ಮದ ರಂಧ್ರಗಳಲ್ಲಿ ತುಂಬಿರುವಂತಹ ಸತ್ತ ಕೋಶಗಳನ್ನು ತೆಗೆದುಹಾಕುವುದು. ಸತ್ತ ಚರ್ಮದ ಕೋಶಗಳು ಹೊರಹೋದರೆ ಕಪ್ಪು ಕಲೆಗಳು ಮೂಡುವುದಿಲ್ಲ.

ಅತಿಯಾದ ಮೇಧೋಗ್ರಂಥಿ ಸ್ರಾವ ಹೀರಿಕೊಳ್ಳುವುದು

ಅತಿಯಾದ ಮೇಧೋಗ್ರಂಥಿ ಸ್ರಾವ ಹೀರಿಕೊಳ್ಳುವುದು

ಸ್ಟ್ರಾಬೆರಿಯಲ್ಲಿರುವ ಮತ್ತೊಂದು ದೊಡ್ಡ ಲಾಭವೆಂದರೆ ಇದು ಚರ್ಮದಲ್ಲಿರುವ ಅತಿಯಾದ ಎಣ್ಣೆ ಅಥವಾ ಜಿಡ್ಡು ತೆಗೆದುಹಾಕುವುದು. ವಿಟಮಿನ್ ಸಿ ಹೊಂದಿರುವ ಸ್ಟ್ರಾಬೆರಿ ಚರ್ಮದಲ್ಲಿರುವ ಹೆಚ್ಚುವರಿ ಎಣ್ಣೆಯಂಶ ನಿವಾರಿಸುವುದು ಮತ್ತು ಮೊಡವೆ ಮೂಡದಂತೆ ತಡೆಯುವುದು. ಇದು ಎಣ್ಣೆಯುಕ್ತ ಚರ್ಮದವರಿಗೆ ತುಂಬಾ ಪರಿಣಾಮಕಾರಿ.

 ಚರ್ಮ ಹೊಳೆಯುವಂತೆ ಮಾಡುವುದು

ಚರ್ಮ ಹೊಳೆಯುವಂತೆ ಮಾಡುವುದು

ಸ್ಟ್ರಾಬೆರಿಯು ನಿಮ್ಮ ಚರ್ಮಕ್ಕೆ ತುಂಬಾ ಹೊಳಪು ನೀಡುವುದು. ವಿಟಮಿನ್ ಸಿ ಮತ್ತು ಚರ್ಮಕ್ಕೆ ಲಾಭ ತರುವ ಇತರ ಕೆಲವು ಅಂಶಗಳಾದ ಆ್ಯಂಟಿಆಕ್ಸಿಡೆಂಟ್ ಹೊಂದಿರುವ ಸ್ಟ್ರಾಬೆರಿಯು ಇತರ ಉತ್ಪನ್ನಗಳಿಗಿಂತ ಚೆನ್ನಾಗಿ ಚರ್ಮಕ್ಕೆ ಹೊಳಪು ನೀಡುವುದು.

ವಯಸ್ಸಾಗುವ ಲಕ್ಷಣಗಳನ್ನು ತಡೆಯುವುದು

ವಯಸ್ಸಾಗುವ ಲಕ್ಷಣಗಳನ್ನು ತಡೆಯುವುದು

ವಯಸ್ಸಾಗುವ ಕಾಣಿಸಿಕೊಳ್ಳುವ ಚರ್ಮದ ನೆರಿಗೆ, ಚರ್ಮ ಜೋತು ಬೀಳುವುದು, ಗೆರೆಗಳು ಇತ್ಯಾದಿಗಳನ್ನು ಸ್ಟ್ರಾಬೆರಿಯು ಬರದಂತೆ ತಡೆಯುವುದು. ಈ ಹಣ್ಣಿನಲ್ಲಿ ಇರುವಂತಹ ಸ್ಟ್ರಾಬೆರಿ ಚರ್ಮದಲ್ಲಿ ಕಾಲಜನ್ ಉತ್ಪತ್ತಿ ಹೆಚ್ಚು ಮಾಡಿ ಸ್ಥಿತಿಸ್ಥಾಪಕತ್ವ ಹೆಚ್ಚಿಸುವುದು.

ಕೂದಲಿಗೆ

ಕೂದಲಿಗೆ

ಪದರ ನಿರ್ಮಾಣ ತಡೆಯುವುದು

ಸ್ಟ್ರಾಬೆರಿಯು ಕಿತ್ತೊಗೆಯುವ ಗುಣವನ್ನು ಹೊಂದಿದೆ. ಇದರಿಂದ ಇದು ತಲೆಬುರುಡೆಯಲ್ಲಿ ಕಲ್ಮಷಗಳಿಂದ ನಿರ್ಮಾಣವಾಗುವ ಪದರ ತಡೆದು ಸೋಂಕನ್ನು ದೂರವಿಡುವುದು. ಇದು ತಲೆಬುರುಡೆಯಿಂದ ಸತ್ತಚರ್ಮ ಕೋಶಗಳನ್ನು ತೆಗೆದು ತಲೆಹೊಟ್ಟನ್ನು ದೂರವಿಡುವುದು.

ಸ್ಟ್ರಾಬೆರಿಯಿಂದ ಪಡೆಯಿರಿ ಸ್ಟ್ರಾಂಗ್ ಕೂದಲು

ಕೂದಲಿಗೆ ಕಾಂತಿ ತರುವುದು

ಕೂದಲಿಗೆ ಕಾಂತಿ ತರುವುದು

ಸ್ಟ್ರಾಬೆರಿಯಲ್ಲಿ ಕಾಂತಿಯುಂಟು ಮಾಡುವ ಗುಣಗಳು ಇವೆ. ಇದು ಕೂದಲಿಗೆ ಕಾಂತಿ ನೀಡುವುದು. ಎಣ್ಣೆ ಅಥವಾ ಶಾಂಪೂಗಳನ್ನು ಬಳಸುವ ಬದಲು ಈ ಹಣ್ಣನ್ನು ಬಳಸಿದರೆ ನಿಸ್ತೇಜ ಕೂದಲು ಫಲಫಲ ಹೊಳೆಯುವುದು.

ಕೂದಲನ್ನು ನಯಗೊಳಿಸುವುದು

ಕೂದಲನ್ನು ನಯಗೊಳಿಸುವುದು

ಕೂದಲು ಗಡುಸಾಗಿದ್ದರೆ ಅದು ತುಂಬಾ ಕೆಟ್ಟದಾಗಿ ಕಾಣುವುದು ಮತ್ತು ಅದರ ನಿರ್ವಹಣೆ ಕೂಡ ಕಷ್ಟ. ಸ್ಟ್ರಾಬೆರಿ ಬಳಸಿದರೆ ಅದರಿಂದ ಗಡಸು ಕೂದಲನ್ನು ನಯವಾಗಿಸಿಕೊಂಡು ನಿರ್ವಹಣೆಗೂ ಸುಲಭವಾಗುವುದು.

ಕೂದಲು ತೆಳುವಾಗದಂತೆ ತಡೆಯುವುದು

ಕೂದಲು ತೆಳುವಾಗದಂತೆ ತಡೆಯುವುದು

ವಿಟಮಿನ್ ಸಿ ಹೊಂದಿರುವ ಸ್ಟ್ರಾಬೆರಿಯು ಕೂದಲು ತೆಳುವಾಗದಂತೆ ತಡೆಯುವುದು. ಇದು ಪರಿಣಾಮಕಾರಿಯಾಗಿ ಕೂದಲಿನ ಬುಡಕ್ಕೆ ಪುನಶ್ಚೇತನ ನೀಡುವುದು ಮತ್ತು ಕೂದಲು ದಪ್ಪ ಹಾಗೂ ಆರೋಗ್ಯವಾಗಿರುವಂತೆ ಮಾಡುವುದು.

ಕೂದಲು ಉದುರುವಿಕೆ ತಡೆಯುವುದು

ಕೂದಲು ಉದುರುವಿಕೆ ತಡೆಯುವುದು

ಸ್ಟ್ರಾಬೆರಿಯು ಕೂದಲು ಉದುರುವಿಕೆ ತಡೆಯುವುದರಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು. ಈ ಹಣ್ಣಿನಲ್ಲಿ ಇರುವಂತಹ ಪ್ರಬಲ ಆ್ಯಂಟಿಆಕ್ಸಿಡೆಂಟ್ ತಲೆಬುರುಡೆಗೆ ಪೋಷಣೆ ನೀಡಿ ಕೂದಲಿನ ಬುಡವನ್ನು ಬಲಗೊಳಿಸುವುದು ಮತ್ತು ಇದರಿಂದ ಕೂದಲು ಉದುರುವುದ ತಪ್ಪುವುದು.

English summary

wonderful-beauty-benefits-of-strawberries-for-skin-and-hair

Strawberries have been a tried-and-true favourite beauty ingredient for years. Packed with vitamin C, salicylic acid, minerals and powerful antioxidants, these berries can help you achieve good skin and hair without breaking the bank. There are numerous women all over the world who have included these delicious berries in their beauty routine. Usage of strawberries for beauty purposes can leave your skin and hair feeling luxuriously nourished.