Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ಹರಳೆಣ್ಣೆ ಬಳಸಿಕೊಂಡು ತ್ವಚೆಯ ಮೇಲಿನ ಮಚ್ಚೆ ನಿವಾರಿಸಲು, ಸ್ಟೆಪ್ ಬೈ ಸ್ಟೆಪ್ ಟಿಪ್ಸ್...
ದೇಹಕ್ಕೆ ಯಾವುದೇ ರೀತಿಯ ಹಾನಿಯುಂಟು ಮಾಡದೆ ನಿಮ್ಮ ಚರ್ಮದ ಮೇಲೆ ಮಚ್ಚೆಗಳು ಮೂಡುವುದು. ಇದು ಮುಖದ ಮೇಲಿದ್ದರೆ ಕೆಲವರಿಗೆ ಕಿರಿಕಿರಿಯಾಗುವುದು. ಇದನ್ನು ಹೇಗಪ್ಪಾ ತೆಗೆಯುವುದು ಎಂದು ಅವರು ಚಿಂತಿಸುತ್ತಿರುವರು. ಮಚ್ಚೆಗಳೆಂದರೆ ಚರ್ಮವು ಸಣ್ಣ ಮಟ್ಟದಲ್ಲಿ ಬೆಳೆಯುವುದು. ಇದು ಕಂದು ಅಥವಾ ಕಪ್ಪು ಬಣ್ಣದಲ್ಲಿರಬಹುದು.
ದೇಹದಲ್ಲಿ ವರ್ಣದ್ರವ್ಯ ಉತ್ಪತ್ತಿ ಮಾಡುವ ಕೋಶಗಳ ಕಾಯಿಲೆಯಿಂದ ಇದು ಬರಬಹುದು. ಆದರೆ ಅಡುಗೆ ಮನೆಯಲ್ಲೇ ಇರುವಂತಹ ಕೆಲವೊಂದು ಸಾಮಗ್ರಿಗಳನ್ನು ಬಳಸಿಕೊಂಡು ಮಚ್ಚೆಗಳನ್ನು ನಿವಾರಣೆ ಮಾಡಬಹುದು ಎಂದು ನಿಮಗೆ ತಿಳಿದಿದೆಯಾ? ಕೆಲವೊಂದು ಮನೆಮದ್ದುಗಳಿಂದ ಮಚ್ಚೆಗಳನ್ನು ತೆಗೆಯಬಹುದು. ಇಂತಹ ಮನೆಮದ್ದುಗಳು ಯಾವುದು ಎಂದು ನೀವು ಈ ಲೇಖನದ ಮೂಲಕ ಓದಿಕೊಳ್ಳಿ.

ಮಚ್ಚೆ ನಿವಾರಣೆಗೆ ಹರಳೆಣ್ಣೆ ಯಾಕೆ ಬೇಕು?
ಹರಳೆಣ್ಣೆ ಬೀಜದಿಂದ ಮಾಡಿರುವಂತಹ ಹರಳೆಣ್ಣೆಯು ತಿಳಿಹಳದಿ ಬಣ್ಣದ ತರಕಾರಿ ಎಣ್ಣೆ. ಇದು ಶಿಲೀಂಧ್ರ ವಿರೋಧಿ, ವೈರಲ್ ವಿರೋಧಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಜಿಡ್ಡುತನವನ್ನು ಹೊಂದಿದೆ. ಹರಳೆಣ್ಣೆಯು ಚರ್ಮದ ಆಳದವರೆಗೆ ಸಾಗಿ ಮಚ್ಚೆಗಳ ನಿವಾರಣೆ ಮಾಡಲು ನೆರವಾಗುವುದು. ಹರಳೆಣ್ಣೆಯು ಚರ್ಮಕ್ಕೆ ಪೋಷಣೆ, ಮೊಶ್ಚಿರೈಸ್ ಮತ್ತು ತೇವಾಂಶ ನೀಡಿ ಕಾಂತಿಯುತ ಹಾಗೂ ಸುಂದರವಾಗಿಸುವುದು. ಒಣ ಹಾಗೂ ನಿಸ್ತೇಜ ಚರ್ಮವನ್ನು ಪರಿಣಾಮಕಾರಿಯಾಗಿ ನಿವಾರಣೆ ಮಾಡುವುದು. ಮೊಡವೆ, ಮೊಡವೆ ಕಲೆಗಳು, ಬೊಕ್ಕೆ, ಕಪ್ಪು ಕಲೆಗಳು ಮತ್ತು ಗಾಯದ ಕಲೆಗಳನ್ನು ಇದು ತೆಗೆಯುವುದು. ಇದು ಮಹಿಳೆಯರ ಮೊದಲ ಆಯ್ಕೆ ಮತ್ತು ಸೌಂದರ್ಯವರ್ಧಕದಲ್ಲಿ ಇದು ಖಂಡಿತವಾಗಿಯೂ ಸ್ಥಾನ ಪಡೆಯುತ್ತದೆ. ಮಚ್ಚೆ ನಿವಾರಣೆಗೆ ಹರಳೆಣ್ಣೆ ಬಳಸುವುದು ಹೇಗೆ?

ಹರಳೆಣ್ಣೆ ಮತ್ತು ಅಡುಗೆ ಸೋಡಾ
ಬೇಕಾಗುವ ಸಾಮಗ್ರಿಗಳು
1 ಚಮಚ ಹರಳೆಣ್ಣೆ
1/2 ಚಮಚ ಅಡುಗೆ ಎಣ್ಣೆ
Most Read: ಹರಳೆಣ್ಣೆಯಿಂದ ಸಾಕಷ್ಟು ಲಾಭಗಳಿವೆ, ಇದನ್ನು ನಿರ್ಲಕ್ಷಿಸಬೇಡಿ

ತಯಾರಿಸುವ ವಿಧಾನ
* ಒಂದು ಪಿಂಗಾಣಿಗೆ ಹರಳೆಣ್ಣೆ ಮತ್ತು ಅಡುಗೆ ಸೋಡಾ ಹಾಕಿ ಮಿಶ್ರಣ ಮಾಡಿಕೊಳ್ಳಿ. ಇದು ದಪ್ಪಗಿನ ಪೇಸ್ಟ್ ಆಗುವ ತನಕ ಮಿಶ್ರಣ ಮಾಡಿ.
* ಇದನ್ನು ಮಚ್ಚೆಗೆ ಹಚ್ಚಿಕೊಂಡು ಬ್ಯಾಂಡೇಜ್ ಸುತ್ತಿಕೊಳ್ಳಿ.
* ಮರುದಿನ ಬೆಳಗ್ಗೆ ಬ್ಯಾಂಡೇಜ್ ತೆಗೆದು ನೀರಿನಿಂದ ತೊಳೆಯಿರಿ.
* ಎರಡು ದಿನಕ್ಕೊಮ್ಮೆ ಇದನ್ನು ಮಾಡಿದರೆ ಮಚ್ಚೆ ನಿವಾರಣೆಯಾಗುವುದು.

ಹರಳೆಣ್ಣೆ ಮತ್ತು ಜೇನುತುಪ್ಪ
ಬೇಕಾಗುವ ಸಾಮಗ್ರಿಗಳು
ಒಂದು ಚಮಚ ಜೇನುತುಪ್ಪ
1 ಚಮಚ ಹರಳೆಣ್ಣೆ
1/2 ಚಮಚ ಅಗಸೆ ಬೀಜದ ಹುಡಿ

ತಯಾರಿಸುವ ವಿಧಾನ
* ಒಂದು ಪಿಂಗಾಣಿಗೆ ಜೇನುತುಪ್ಪ ಮತ್ತು ಹರಳೆಣ್ಣೆ ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
* ಇದಕ್ಕೆ ಅಗಸೆ ಬೀಜದ ಹುಡಿ ಹಾಕಿ ಮತ್ತು ಎಲ್ಲವನ್ನು ಮತ್ತೆ ಸರಿಯಾಗಿ ರುಬ್ಬಿಕೊಳ್ಳಿ.
* ಮುಖವನ್ನು ಸೋಪ್ ನಿಂದ ತೊಳೆದುಕೊಂಡು ಒರೆಸಿಕೊಳ್ಳಿ.
* ಮಿಶ್ರಣವನ್ನು ಮಚ್ಚೆ ಇರುವ ಜಾಗಕ್ಕೆ ಹಚ್ಚಿ ಮತ್ತು 2-3 ಗಂಟೆಗಳ ಕಾಲ ಬ್ಯಾಂಡೇಡ್ ಹಚ್ಚಿಕೊಳ್ಳಿ.
* ಬ್ಯಾಂಡೇಡ್ ತೆಗೆದ ಬಳಿಕ ನೀರಿನಿಂದ ತೊಳೆಯಿರಿ.
* ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಸಲ ಇದನ್ನು ಉಪಯೋಗಿಸಿ.

ಹರಳೆಣ್ಣೆ ಮತ್ತು ಬೆಳ್ಳುಳ್ಳಿ
ಬೇಕಾಗುವ ಸಾಮಗ್ರಿಗಳು
* 5-6 ಹನಿ ಹರಳೆಣ್ಣೆ
* 1/2 ಚಮಚ ಬೆಳ್ಳುಳ್ಳಿ ಹುಡಿ/ಬೆಳ್ಳುಳ್ಳಿ ಪೇಸ್ಟ್

ವಿಧಾನ
* ಪಿಂಗಾಣಿಯಲ್ಲಿ ಕೆಲವು ಹನಿ ಹರಳೆಣ್ಣೆ ಹಾಕಿ ಮತ್ತು ಇದಕ್ಕೆ ಬೆಳ್ಳುಳ್ಳಿ ಹುಡಿ ಅಥವಾ ಪೇಸ್ಟ್ ಹಾಕಿ
* ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಪೇಸ್ಟ್ ಮಾಡಿ.
* ಇದನ್ನು ಮಚ್ಚೆ ಮೇಲೆ ಹಚ್ಚಿಕೊಂಡು ಕೆಲವು ಗಂಟೆಗಳ(3-4) ಕಾಲ ಹಾಗೆ ಬಿಡಿ.
* ತಣ್ಣೀರಿನಿಂದ ತೊಳೆದುಕೊಂಡು ಒರೆಸಿಕೊಳ್ಳಿ.
* ದಿನದಲ್ಲಿ ಎರಡು ಸಲ ಬಳಸಿಕೊಂಡರೆ ಉತ್ತಮ ಫಲಿತಾಂಶ ಸಿಗುವುದು.

ಹರಳೆಣ್ಣೆ ಮತ್ತು ಟ್ರೀ ಟ್ರಿ ಮರದ ಎಣ್ಣೆ
ಬೇಕಾಗುವ ಸಾಮಗ್ರಿಗಳು
* ಒಂದು ಚಮಚ ಹರಳೆಣ್ಣೆ
* ಒಂದು ಚಮಚ ಚಾ ಮರದ ಎಣ್ಣೆ



Click it and Unblock the Notifications











