For Quick Alerts
ALLOW NOTIFICATIONS  
For Daily Alerts

  ಉಪ್ಪು ನೀರು ಬಳಸಿ ನಿಮ್ಮ ಸೌಂದರ್ಯ ವರ್ಧಿಸಿ!

  By Hemanth
  |

  ಉಪ್ಪು ಹಾಕದೆ ನಿಮಗೆ ಯಾವುದೇ ಆಹಾರ ಕೊಟ್ಟರೂ ಅದನ್ನು ನೀವು ಖಂಡಿತವಾಗಿಯೂ ಸೇವಿಸಲಾರಿರಿ. ಯಾಕೆಂದರೆ ಯಾವುದೇ ಖಾದ್ಯ ಕೂಡ ಉಪ್ಪು ಇಲ್ಲದೆ ಪೂರ್ಣವಾಗಲ್ಲ. ಉಪ್ಪು ಆಹಾರಕ್ಕೆ ರುಚಿ ನೀಡುವುದು. ಇದರಿಂದ ಪ್ರತಿಯೊಂದು ಮನೆಯ ಅಡುಗೆ ಕೋಣೆಯಲ್ಲಿ ಉಪ್ಪು ಇದ್ದೇ ಇರುವುದು. ನೈಸರ್ಗಿಕ ಖನಿಜಾಂಶವಾಗಿರುವಂತಹ ಉಪ್ಪು ಹಲವಾರು ರೀತಿಯಿಂದ ಆರೋಗ್ಯಕ್ಕೆ ನೆರವಾಗುವುದು. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡುವುದು, ತೂಕ ಕಳೆದುಕೊಳ್ಳಲು ನೆರವಾಗುವುದು. ಆದರೆ ಇದನ್ನು ಸೌಂದರ್ಯವರ್ಧಕ ವಾಗಿಯೂ ಬಳಸಿಕೊಳ್ಳಬಹುದು ಎಂದು ನಿಮಗೆ ತಿಳಿದಿದೆಯಾ?

  ಸಮುದ್ರದ ಉಪ್ಪು ನೀರನ್ನು ನೀವು ಇದಕ್ಕೆ ಬಳಸಿಕೊಳ್ಳಬಹುದು ಅಥವಾ ಮನೆಯಲ್ಲೇ ನೀರು ಮತ್ತು ಉಪ್ಪನ್ನು ಬೆರೆಸಿಕೊಂಡು ನೀವು ಇದನ್ನು ತಯಾರಿಸಿಕೊಳ್ಳಬಹುದು. ಇದನ್ನು ನೀವು ಬಾಹ್ಯವಾಗಿ ಕೂದಲು ಹಾಗೂ ಚರ್ಮಕ್ಕೆ ಬಳಸಿಕೊಂಡರೆ ಅದರಿಂದ ತುಂಬಾ ಲಾಭವಾಗಲಿದೆ. ಉಪ್ಪುನೀರಿನಲ್ಲಿ ಕೆಲವೊಂದು ಪ್ರಮುಖ ಖನಿಜಾಂಶಗಳಾದ ಕ್ಯಾಲ್ಸಿಯಂ, ಪೊಟಾಶಿಯಂ, ಸಿಲಿಕಾನ್, ಸೋಡಿಯಂ ಇತ್ಯಾದಿ ಇದೆ. ಇದು ಕೂದಲು ಹಾಗೂ ಚರ್ಮಕ್ಕೆ ತುಂಬಾ ಲಾಭಕಾರಿ. ಉಪ್ಪು ನೀರನ್ನು ಸೌಂದರ್ಯವರ್ಧಕದಲ್ಲಿ ಬಳಸಿಕೊಳ್ಳುವುದು ಹೇಗೆ?

  Salt Water

  ಮೊಡವೆ ನಿವಾರಣೆಗೆ

  ಉಪ್ಪಿನಲ್ಲಿರುವಂತಹ ಶಮನಕಾರಿ ಗುಣವು ಮುಖದಲ್ಲಿನ ಮೊಡವೆ ಹಾಗೂ ಬೊಕ್ಕೆಗಳ ನಿವಾರಣೆ ಮಾಡಲು ನೆರವಾಗುವುದು. ಇದು ತುಂಬಾ ಪರಿಣಾಮಕಾರಿ ಮತ್ತು ಶೀಘ್ರ ಪರಿಹಾರ ನೀಡುವುದು. ಸಮುದ್ರ ಬದಿಯಲ್ಲಿ ವಾಸಿಸುವವರು ತುಂಬಾ ಅದೃಷ್ಟವಂತರೆಂದು ಪರಿಗಣಿಸಲಾಗಿದೆ. ಬೇರೆಯವರು ಕೂಡ ಇದನ್ನು ಬಳಸಿಕೊಳ್ಳಬಹುದು.

  ಇದಕ್ಕೆ ನೀವು ಒಂದು ಕಪ್ ನೀರು ಮತ್ತು ಒಂದು ಚಮಚ ಕಲ್ಲುಉಪ್ಪು ಬಳಸಿಕೊಳ್ಳಬೇಕು. ಉಪ್ಪನ್ನು ನೀರಿಗೆ ಹಾಕಿಕೊಂಡು ಅದನ್ನು ಕರಗಿಸಿ. ಇದರಲ್ಲಿ ಒಂದು ಹತ್ತಿ ಉಂಡೆ ಅದ್ದಿಕೊಂಡು ಬಾಧಿತ ಜಾಗಕ್ಕೆ ಇದನ್ನು ಹಚ್ಚಿಕೊಳ್ಳಿ. ಇದು ಒಣಗಲಿ ಮತ್ತು ಸಾಮಾನ್ಯ ನೀರಿನಿಂದ ತೊಳೆಯಿರಿ. ವೇಗವಾಗಿ ಫಲಿತಾಂಶ ನೀಡಲು ದಿನದಲ್ಲಿ ಒಂದು ಸಲ ಇದನ್ನು ಬಳಸಿ.

  ಗಾಯ ಮತ್ತು ಕಡಿತ ಗುಣಮುಖವಾಗಲು

  ಉಪ್ಪಿನಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣವು ಗಾಯ ಮತ್ತು ಕಡಿತದವನ್ನು ತುಂಬಾ ವೇಗ ಹಾಗೂ ಸುಲಭವಾಗಿ ಗುಣಮುಖವಾಗುವಂತೆ ಮಾಡುವುದು. ಉಪ್ಪು ನೀರಿನಲ್ಲಿ ಸ್ನಾನ ಮಾಡಿಕೊಂಡರೆ ಬ್ಯಾಕ್ಟೀರಿಯಾ ಕೊಲ್ಲುವುದು ಮತ್ತು ಚರ್ಮದ ಕಿರಿಕಿರಿ ತಪ್ಪಿಸುವುದು. ಇದು ಚರ್ಮದಲ್ಲಿ ತೇವಾಂಶವನ್ನು ಸುಧಾರಿಸುವುದು. ಇದರಿಂದ ಗಾಯ ಮತ್ತು ಕಡಿತ ಗುಣವಾಗುವುದು.

  ಸ್ನಾನ ಮಾಡುವ ಬಿಸಿನೀರಿಗೆ ಒಂದು ಕಪ್ ಸಮುದ್ರದ ಉಪ್ಪು ಹಾಕಿಕೊಳ್ಳಿ. ಲ್ಯಾವೆಂಡರ್ ತೈಲ ಅಥವಾ ಬೇರೆ ಸಾರಭೂತ ತೈಲದ ಕೆಲವು ಹನಿ ಹಾಕಿಕೊಂಡು ಸುವಾಸನೆ ತಂದುಕೊಳ್ಳಬಹುದು.

  ಮೌಥ್ ವಾಶ್

  ಬ್ಯಾಕ್ಟೀರಿಯಾದಿಂದಾಗಿ ಬಾಯಿಯಲ್ಲಿ ವಾಸನೆಯು ಬರುವುದು. ಉಪ್ಪು ನೀರಿನಿಂದ ಬಾಯಿ ತೊಳೆದುಕೊಂಡರೆ ಅದರಿಂದ ದುರ್ವಾಸನೆ ಬರುವುದು ತಡೆಯುವುದು. ಇದನ್ನು ಹೊರತುಪಡಿಸಿ ಯಾವುದೇ ರೀತಿಯ ನೋವು ಅಥವಾ ಕಿರಿಕಿರಿ ತಪ್ಪಿಸುವುದು.

  ಈ ಮೌಥ್ ವಾಶ್ ನ್ನು ನೀವು ತುಂಬಾ ಸುಲಭವಾಗಿ ತಯಾರಿಸಿಕೊಳ್ಳಬಹುದು. ಬಿಸಿ ನೀರಿಗೆ ಉಪ್ಪನ್ನು ಹಾಕಿಕೊಳ್ಳಿ ಮತ್ತು ಸರಿಯಾಗಿ ಮಿಶ್ರಣ ಮಾಡಿ. ಇದರ ಬಳಿಕ ಬಾಯಿ ತೊಳೆಯಿರಿ. ಕೆಲವು ನಿಮಿಷ ಕಾಲ ಬಾಯಿಯಲ್ಲಿ ನೀರು ಹಾಗೆ ಇರಲಿ. ರುಚಿ ಬೇಕಿದ್ದರೆ ಆಗ ನೀವು ಪುದೀನಾ ಎಣ್ಣೆಯ ಕೆಲವು ಹನಿ ಇದಕ್ಕೆ ಹಾಕಿಕೊಳ್ಳಿ.

  ಚರ್ಮದ ರಂಧ್ರಗಳನ್ನು ಶುದ್ಧೀಕರಿಸುವುದು

  ಚರ್ಮದಲ್ಲಿನ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಉಪ್ಪು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ಇದರ ಗಡುಸು ವಿನ್ಯಾಸವು ಸ್ಕ್ರಬ್ ಮಾಡಲು ಒಳ್ಳೆಯದು. ಇದು ಚರ್ಮದಲ್ಲಿನ ಸತ್ತ ಕೋಶಗಳ ನಿವಾರಣೆ ಮಾಡಿಕೊಂಡು ಚರ್ಮದ ರಂಧ್ರಗಳನ್ನು ಶುದ್ಧೀಕರಿಸುವುದು. ಇದು ರಕ್ತ ಸಂಚಾರ ಸುಗಮಗೊಳಿಸಿ ಚರ್ಮಕ್ಕೆ ಬಣ್ಣ ನೀಡುವುದು. ಸ್ವಲ್ಪ ನೀರು ಮತ್ತು ಉಪ್ಪು ಹಾಕಿಕೊಂಡು ದಪ್ಪಗಿನ ಪೇಸ್ಟ್ ಮಾಡಿ. ಇದನ್ನು ಮುಖ ಹಾಗೂ ಕುತ್ತಿಗೆ ಭಾಗದಲ್ಲಿ ವೃತ್ತಾಕಾರದಲ್ಲಿ ಸ್ಕ್ರಬ್ ಮಾಡಿಕೊಳ್ಳಿ. ಇದರ ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ. ದೇಹದ ಬೇರೆ ಭಾಗಗಳಿಗೂ ಈ ಸ್ಕ್ರಬ್ ಬಳಸಬಹುದು. ಇದರ ಬಳಿಕ ಚರ್ಮ ಒಣಗದಂತೆ ಮೊಶ್ಚಿರೈಸರ್ ಹಚ್ಚಿಕೊಳ್ಳಿ.

  ಸಮುದ್ರಸ್ನಾನ

  ಹಿಂದಿನವರು ವರ್ಷದ ಕೆಲವು ದಿನಗಳಲ್ಲಿ ಸಮುದ್ರಸ್ನಾನ ಮಾಡಿಕೊಳ್ಳುತ್ತಿದ್ದರು. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸಮುದ್ರ ಸ್ನಾನ ಮಾಡಿದರೆ ಅದು ಚರ್ಮಕ್ಕೆ ತುಂಬಾ ಪರಿಣಾಮಕಾರಿ. ಯಾಕೆಂದರೆ ಸಮುದ್ರದ ನೀರಿನಲ್ಲಿ ಮೆಗ್ನಿಶಿಯಂ ಸಲ್ಫೇಟ್ ಇದೆ. ಮೆಗ್ನಿಶಿಯಂ ಸಲ್ಫೇಟ್ ಅನ್ನು ಎಪ್ಸೊಮ್ ಉಪ್ಪು ಎಂದು ಕರೆಯಲಾಗುತ್ತದೆ. ಇದನ್ನು ವಾರದಲ್ಲಿ ಒಂದು ಸಲ ಕೂದಲು ತೊಳೆಯಲು ಬಳಸಿಕೊಳ್ಳಿ.

  English summary

  Surprising Beauty Benefits Of Salt Water

  Salt, which is the most common ingredient found in every kitchen, is considered to be the key taste enhancer in any type of dishes or cuisines. This natural mineral also has several health benefits which are: promoting weight loss, controlling blood sugar levels, etc. But did you know that salt helps in enhancing your beauty as well? Yes. Salt water, in particular, has several beauty benefits for both skin and hair.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more